• Home
  • »
  • News
  • »
  • entertainment
  • »
  • Actor Chetan: ದೈವಾರಾಧನೆ ಬಗ್ಗೆ ವಿವಾದಾತ್ಮಕ ಹೇಳಿಕೆ ತಂದ ಸಂಕಷ್ಟ, ನಟ ಚೇತನ್ ವಿರುದ್ಧ ಎಫ್ಐಆರ್ ದಾಖಲು

Actor Chetan: ದೈವಾರಾಧನೆ ಬಗ್ಗೆ ವಿವಾದಾತ್ಮಕ ಹೇಳಿಕೆ ತಂದ ಸಂಕಷ್ಟ, ನಟ ಚೇತನ್ ವಿರುದ್ಧ ಎಫ್ಐಆರ್ ದಾಖಲು

ರಿಷಬ್ ಶೆಟ್ಟಿ ಮತ್ತು ಚೇತನ್

ರಿಷಬ್ ಶೆಟ್ಟಿ ಮತ್ತು ಚೇತನ್

ನಟ ಚೇತನ್​  ಜಾತಿ ಧರ್ಮಗಳ ಬಗ್ಗೆ ವಿಷಬೀಜ ಬಿತ್ತಿದ್ದಾರೆ ಎಂದು ದೂರು ನೀಡಲಾಗಿತ್ತು. ಶಿವಕುಮಾರ್ ಎಂಬುವರ ದೂರು ಆಧರಿಸಿ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. 

  • News18 Kannada
  • Last Updated :
  • Karnataka, India
  • Share this:

ಕಾಂತಾರ ಚಿತ್ರದಲ್ಲಿ ದೈವಾರಾಧನೆ ಕುರಿತಂತೆ ನಟ ಚೇತನ್ ಕುಮಾರ್ (Actor Chetan Kumar) ಆಡಿರುವ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ನಟ ಚೇತನ್ ಹೇಳಿಕೆ ಬಗ್ಗೆ ಅನೇಕರು ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಇದೀಗ ನಟ ಚೇತನ್ ವಿರುದ್ದ ಎಫ್ ಐ ಆರ್ (FIR) ದಾಖಲಾಗಿದೆ.  ನಟ ಚೇತನ್​  ಜಾತಿ ಧರ್ಮಗಳ ಬಗ್ಗೆ ವಿಷಬೀಜ ಬಿತ್ತಿದ್ದಾರೆ ಎಂದು ದೂರು (Complaint) ನೀಡಲಾಗಿತ್ತು.  ಶಿವಕುಮಾರ್ ಎಂಬುವರ ದೂರು ಆಧರಿಸಿ ಶೇಷಾದ್ರಿಪುರಂ ಪೊಲೀಸ್​ ಠಾಣೆಯಲ್ಲಿ (Police Station) ಎಫ್​ಐಆರ್ ದಾಖಲಾಗಿದೆ. 


ನಟ ಚೇತನ್ ಹೇಳಿದ್ದೇನು?

 ಕಾಂತಾರ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದ ನಟ ಚೇತನ್, ನಮ್ಮ ಕನ್ನಡದ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ ನಕಲಿ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ' ಎಂದು ಟ್ವೀಟ್ ಮಾಡಿದ್ದರು.


ಚೇತನ್ ಹೇಳಿಕೆಗೆ ಆಕ್ರೋಶ



ಚೇತನ್ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ರಿಷಬ್ ತಂದೆ ಭಾಸ್ಕರ್ ಶೆಟ್ಟಿ ಸೇರಿದಂತೆ ಕರಾವಳಿಯ ದೈವಾರಾಧಕರು, ದೈವ ನರ್ತಕರು, ರಿಷಬ್ ಶೆಟ್ಟಿ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳೂರಿಗೆ ಬಂದು ಈ ರೀತಿಯ ಹೇಳಿಕೆ ನೀಡಿ ಅಂತ ಸವಾಲು ಹಾಕಿದ್ದರು.


ಇದನ್ನೂ ಓದಿ: Vaishali Takkar: ಕಿರುತೆರೆ ನಟಿಯ ಡೆತ್‌ನೋಟ್‌ನಲ್ಲಿದೆ ಆತನ ಹೆಸರು! ಏನಾಗಿತ್ತು ಗೊತ್ತಾ ಆಕೆ ಕೊನೆ ಆಸೆ?


ಚೇತನ್ ಹೇಳಿಕೆಗೆ ಆಕ್ರೋಶ


ಚೇತನ್ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ರಿಷಬ್ ತಂದೆ ಭಾಸ್ಕರ್ ಶೆಟ್ಟಿ ಸೇರಿದಂತೆ ಕರಾವಳಿಯ ದೈವಾರಾಧಕರು, ದೈವ ನರ್ತಕರು, ರಿಷಬ್ ಶೆಟ್ಟಿ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳೂರಿಗೆ ಬಂದು ಈ ರೀತಿಯ ಹೇಳಿಕೆ ನೀಡಿ ಅಂತ ಸವಾಲು ಹಾಕಿದ್ದರು.


“ನಮಗೆ ನಟನೆ ಮಾಡಿ ಗೊತ್ತಿಲ್ಲ”


ನಟರಿಗೆ ನಟನೆ ಮಾಡಲು ಗೊತ್ತಿರಬಹುದು. ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ ಅಂತ ಕುಮಾರ ಪಂಬಂದ ಹೇಳಿದ್ದಾರೆ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು. ಕರಾವಳಿಯಾದ್ಯಂತ ಪರವ, ಪಂಬದ ನಲಿಕೆಯವರು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Puneetha Parva-Rishab Shetty: ಪುನೀತ ಪರ್ವಕ್ಕೆ ರಿಷಬ್ ಗೈರು! ಕಾಂತಾರ ಹೀರೋ ಯಾಕೆ ಬರಲಿಲ್ಲ?


ಏನ್ ಹೇಳ್ತಾರೆ ರಿಷಬ್ ಶೆಟ್ಟಿ? 



ಕಾಂತಾರ ಚಿತ್ರದಲ್ಲಿ ಭೂತಕೋಲ ಆಚರಣೆನೂ ಇದೆ. ಇದು ನಮ್ಮ ಹಿಂದೂ ಸಂಸ್ಕೃತಿಯ ಭಾಗವೇ ಆಗಿದೆ ಅಂತಲೇ ರಿಷಬ್ ಶೆಟ್ಟಿ ಹೇಳಿದ್ದಾರೆ. ಈ ಒಂದು ಹೇಳಿಕೆಯನ್ನೆ ಚೇತನ್ ಈಗ ಅಲ್ಲಗಳೆದಿದ್ದಾರೆ. ನಮ್ಮ ಮೂಲನಿವಾಸಿ ಸಂಸ್ಕೃತಿಗಳು ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ. ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮ ಬರೋಕು ಮುಂಚೇನೆ ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು ಇದ್ದವು ಅಂತಲೇ ತಮ್ಮ ಅಭಿಪ್ರಾಯವನ್ನ ಚೇತನ್ ಹೇಳಿಕೊಂಡಿದ್ದಾರೆ.




ಉಳಿದಂತೆ ಈ ಬಗ್ಗೆ ರಿಷಬ್ ಶೆಟ್ಟಿ  ರಿಯಾಕ್ಟ್ ಮಾಡಲು "NO" ಅಂತಲೇ ಹೇಳಿದ್ದಾರೆ.  ಚೇತನ್ ತಮ್ಮ ಅಭಿಪ್ರಾಯವನ್ನ ತಮ್ಮ ವಿರೋಧವನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡು ಇರೋ ಸತ್ಯದ ಮೇಲೆ ಬೆಳಕು ಚೆಲ್ಲೋ ಕೆಲಸ ಮಾಡಿದ್ದಾರೆ.





Published by:ಪಾವನ ಎಚ್ ಎಸ್
First published: