Bharati Singh: ಕಾಮಿಡಿಯನ್​ ಭಾರತಿ ಸಿಂಗ್​ ವಿರುದ್ಧ ಎಫ್​ಐಆರ್​ - ಸಿಖ್​ ಸಮುದಾಯದ ಭಾವನೆಗೆ ಧಕ್ಕೆ ತಂದ ಆರೋಪ

FIR Against Bharti Singh: ಯಾವುದೇ ಧರ್ಮ ಅಥವಾ ಜಾತಿಯ ಜನರಿಗೆ ನನ್ನ ಕಾಮೆಂಟ್‌ಗಳಿಂದ ನೋವಾಗಿದ್ದರೆ, ನಾನು ಅವರಲ್ಲಿ ಕೈಮುಗಿದು ಕ್ಷಮೆಯಾಚಿಸುತ್ತೇನೆ. ನಾನು ಸ್ವತಃ ಪಂಜಾಬಿ, ಅಮೃತಸರದಲ್ಲಿ ಹುಟ್ಟಿದ್ದೇನೆ. ನಾನು ಪಂಜಾಬಿ ಎಂಬುದಕ್ಕೆ ಹೆಮ್ಮೆಪಡುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.

ನಟಿ ಭಾರ್ತಿ ಸಿಂಗ್

ನಟಿ ಭಾರ್ತಿ ಸಿಂಗ್

  • Share this:
ಕಾಮಿಡಿಯನ್​ಗಳು (Comedian) ಜನರನ್ನು ನಗಿಸುವ ಭರದಲ್ಲಿ ಎಡವಟ್ಟು ಮಾಡಿಕೊಳ್ಳುವುದು ಹೊಸದೇನಲ್ಲ. ಅದರಲ್ಲೂ ಸ್ಟ್ಯಾಂಡಪ್ ಕಾಮಿಡಿಯನ್​ಗಳು ಹೆಚ್ಚು. ಉದಾಹರಣೆಗೆ ಮುನಾವರ್ ಫಾರೂಕಿ, ಕಪಿಲ್ ಶರ್ಮಾ (Kapil Sharma)  ಹೀಗೆ. ಇದೀಗ ಈ ಸಾಲಿಗೆ ಸೇರ್ಪಡೆ ಕಾಮಿಡಿನ್ ಭಾರತಿ ಸಿಂಗ್ (Bharti Singh) . ತನ್ನ ವಿಭಿನ್ನ ಕಾಮಿಡಿ ಹಾಗೂ ಮ್ಯಾನರಿಸಂ ಮೂಲಕ ಹೆಸರುಗಳಿಸಿರುವ ಭಾರತಿ, ಒಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೀಸೆ ಮತ್ತು ಗಡ್ಡದ ಬಗ್ಗೆ ಹಾಸ್ಯ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಕಾರಣ, ಹಾಸ್ಯನಟ ಭಾರತಿ ಸಿಂಗ್ ಸೋಮವಾರ ಎಲ್ಲರ ಬಳಿ ಕ್ಷಮೆಯಾಚಿಸಿದ್ದಾರೆ. ಇದೀಗ ಆಕೆಯ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಭಾರತಿ ಪ್ರಸ್ತುತ ತನ್ನ ಪತಿ ಹರ್ಷ್ ಲಿಂಬಾಚಿಯಾ ಅವರೊಂದಿಗೆ ದಿ ಖತ್ರಾ ಖತ್ರಾ ಶೋನ ಸಹ-ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರು ಭಾಗವಹಿಸಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ ನೀಡಿದ ಒಂದು ಹೇಳಿಕೆ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕಳೆದ ವಾರ ಒಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಭಾರತಿ ಅವರು ನಟ ಜಾಸ್ಮಿನ್ ಭಾಸಿನ್ ಅವರೊಂದಿಗೆ ಭಾರತಿ ಕಾ ಶೋ ಶೆಮರೂ ಎಂಬ ಕಾಮಿಡಿ ಹಾಸ್ಯ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ದಾಡಿ, ಮೂಚ್ ಕ್ಯೂ ನಹೀ ಚಾಹಿಯೇ. ಸೆ ಜು ನಿಕಾಲ್ತಿ ರೆಹತಿ ಹೈ (ಗಡ್ಡ ಮತ್ತು ಮೀಸೆ) ಏಕೆ ಬೇಡ, ಅವುಗಳಿಂದ ಅನೇಕ ಪ್ರಯೋಜನಗಳಿವೆ. ಹಾಲು ಕುಡಿಯಿರಿ, ನಂತರ ಗಡ್ಡವನ್ನು ನಿಮ್ಮ ಬಾಯಿಗೆ ಹಾಕಿಕೊಳ್ಳಿ, ನೀವು ಅದರರುಚಿ ನೋಡಬಹುದು. ನನ್ನ ಅನೇಕ ಸ್ನೇಹಿತರು ಉದ್ದನೆಯ ಗಡ್ಡವಿರುವ ಪುರುಷರನ್ನು ಮದುವೆಯಾಗಿದ್ದು,ಇಡೀ ದಿನದ ಹೇನು ತೆಗೆದುಹಾಕುತ್ತಾರೆ" ಎಂದು ವೀಡಿಯೊದಲ್ಲಿ ಹೇಳಿದ್ದು ಇದು ಬಹಳಷ್ಟು ಜನರನ್ನು ಕೆರಳಿಸಿದೆ.

ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪ

ಇಂಡಿಯಾ ಟುಡೇ ವರದಿಯ ಪ್ರಕಾರ, ರವಿದಾಸ್ ಟೈಗರ್ ಫೋರ್ಸ್ ಮುಖ್ಯಸ್ಥ ಜಸ್ಸಿ ತಲ್ಲನ್ ಅವರು ಜಲಂಧರ್‌ನ ಪೊಲೀಸ್ ಠಾಣೆಯಲ್ಲಿ ಈಗ ಭಾರತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನ ಪ್ರಕಾರ, ಸಿಖ್ ಸಮುದಾಯವನ್ನು ಅಪಹಾಸ್ಯ ಮಾಡಿದ ಮತ್ತು ಅವರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 - ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಇದನ್ನೂ ಓದಿ: ಕ್ಯಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಕನ್ನಡದ ಕಂಪು - ಗಾಯಕ ರಘು ದೀಕ್ಷಿತ್​ ವಿಶೇಷ ಪ್ರದರ್ಶನ

ಸೋಮವಾರ ಮಧ್ಯಾಹ್ನ, ಭಾರತಿ ಅವರು ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ತಮ್ಮ ಮಾತುಗಳ ಹಿಮದಿನ ಉದ್ದೇಶ ಶುದ್ಧವಾಗಿದೆ, ಆದರೆ ಜನರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ಕ್ಷಮೆಯಾಚಿಸಿದ ಭಾರತಿ ಸಿಂಗ್ 

"ಕಳೆದ 3 ರಿಂದ 4 ದಿನಗಳಿಂದ ನಾನು 'ದಾಡಿ ಮೂಚ್' ಅನ್ನು ಗೇಲಿ ಮಾಡಿದ್ದೇನೆ ಎಂದು ಹೇಳುವ ವೀಡಿಯೊವೊಂದು ವೈರಲ್ ಆಗುತ್ತಿದೆ. ನಾನು ವೀಡಿಯೊವನ್ನು ಪದೇ ಪದೇ ನೋಡಿದ್ದೇನೆ ಮತ್ತು ನಾನು ಯಾವುದೇ ಧರ್ಮ ಅಥವಾ ಧರ್ಮದ ವಿರುದ್ಧ ಏನನ್ನೂ ಹೇಳಿಲ್ಲವಾದ್ದರಿಂದ ಅದನ್ನು ಮತ್ತೆ ವೀಕ್ಷಿಸುವಂತೆ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ನಾನು ಯಾವುದೇ ಜಾತಿ ಮತ್ತು ಪಂಗಡದ ಬಗ್ಗೆ ಮಾತನಾಡಿಲ್ಲ. ಅಲ್ಲದೇ, ಪಂಜಾಬಿಯನ್ನು ಅಪಹಾಸ್ಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಸಿಂಪಲ್ ಸುಂದರಿ - ಫ್ಯಾಮಿಲಿ ಜೊತೆ ಶ್ವೇತಾ ಫುಲ್ ಎಂಜಾಯ್​

"ನಾನು ಆ ವಿಡಿಯೋದಲ್ಲಿ ಯಾವುದೇ ಧರ್ಮ ಅಥವಾ ಯಾವುದೇ ಜಾತಿಯನ್ನು ಉಲ್ಲೇಖಿಸಿಲ್ಲ. ನಾನು ನನ್ನ ಸ್ನೇಹಿತನೊಂದಿಗೆ ಕಾಮಿಡಿ ಮಾಡುತ್ತಿದ್ದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಗಡ್ಡ ಮತ್ತು ಮೀಸೆಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಯಾವುದೇ ಧರ್ಮ ಅಥವಾ ಜಾತಿಯ ಜನರಿಗೆ ನನ್ನ ಕಾಮೆಂಟ್‌ಗಳಿಂದ ನೋವಾಗಿದ್ದರೆ, ನಾನು ಅವರಲ್ಲಿ ಕೈಮುಗಿದು ಕ್ಷಮೆಯಾಚಿಸುತ್ತೇನೆ. ನಾನು ಸ್ವತಃ ಪಂಜಾಬಿ, ಅಮೃತಸರದಲ್ಲಿ ಹುಟ್ಟಿದ್ದೇನೆ. ನಾನು ಪಂಜಾಬಿ ಎಂಬುದಕ್ಕೆ ಹೆಮ್ಮೆಪಡುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.
Published by:Sandhya M
First published: