ಕುಡುಕನಿಗೆ ಗುದ್ದಿದ ನಟ! ದಾಖಲಾಯ್ತು FIR​!

Actor Rajat Bedi: ವ್ಯಕ್ತಿ ಸಂಜೆ ಕೆಲಸ ಮುಗಿಸಿ ಮನೆಯ ಕಡೆಗೆ ಬರುತ್ತಿದ್ದರು. ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ರಸ್ತೆ ದಾಟುವಾಗ ಎದುರಿನಿಂದ ಬಂದ ರಜತ್​ ಬೇಡಿ ಕಾರು ಆತನಿಗೆ ಡಿಸ್ಕಿ ಹೊಡೆದಿದೆ. ಪರಿಣಾಮ ತಲೆಯ ಹಿಂಭಾಗಕ್ಕೆ ಗಾಯವಾಗಿದೆ.

ಪ್ರಾತಿನಿಧಿಕ ಚಿತ್ರ (Photo: Goggle)

ಪ್ರಾತಿನಿಧಿಕ ಚಿತ್ರ (Photo: Goggle)

 • Share this:
  Actor Rajat Bedi:  ‘ಕೋಯಿ ಮಿಲ್ ಗಯಾ’​ ಸಿನಿಮಾ ನಟ, ನಿರ್ಮಾಪಕ ರಜತ್​ ಬೇಡಿ ಅವರ ಕಾರಿಗೆ ವ್ಯಕ್ತಿಯೋರ್ವ ಡಿಕ್ಕಿ ಹೊಡೆದಿರುವ ಘಟನೆ ಮುಂಬೈನಲ್ಲಿ ಡಿ ಎನ್​ ನಗರದಲ್ಲಿ ನಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಗೆ ಗಂಭೀರವಾಗಿ ಗಾಯವಾಗಿದ್ದು ಸ್ವತಃ ನಟನೇ ಅವರನ್ನು ಕೂಪರ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

  39 ವರ್ಷ ವಯಸ್ಸಿನ ವ್ಯಕ್ತಿ ಚಲಿಸುತ್ತಿದ್ದ ನಟ ರಜತ್​ ಬೇಡಿ (Rajath bedi) ಅವರ ಕಾರಿಗೆ ಅಡ್ಡಲಾಗಿ ಬಂದಿದ್ದಾನೆ. ಈ ವೇಳೆ ಅಪಘಾತ ನಡೆದಿದೆ. ಇನ್ನು ಸಂತ್ರಸ್ತ ವ್ಯಕ್ತಿ ಕುಟುಂಬಕ್ಕೆ ಸಹಾಯ ಮಾಡುತ್ತೇನೆಂದು ನಟ ರಜತ್​ ಭರವಸೆ ನೀಡಿದ್ದು, ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೊರಟು ಹೋಗಿದ್ದಾರೆ. ನಂತರ ವಾಪಾಸ್ಸು ಹಿಂತಿಗಿಲ್ಲ ಎಂದು ವ್ಯಕ್ತಿಯ ಕುಟುಂಬ ಆರೋಪಿಸಿದೆ.

  Read Also- Upcoming SUV Cars: ಕಾರು ಖರೀದಿಸುವ ಯೋಚನೆ ಇದೆಯಾ? ಹಬ್ಬದ ಸೀಸನ್​ನಲ್ಲಿ ಬಿಡುಗಡೆಯಾಗಲಿರುವ 5 SUV ಕಾರುಗಳು

  ಮಾಹಿತಿ ಪ್ರಕಾರ, ವ್ಯಕ್ತಿ ಸಂಜೆ ಕೆಲಸ ಮುಗಿಸಿ ಮನೆಯ ಕಡೆಗೆ ಬರುತ್ತಿದ್ದರು. ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ರಸ್ತೆ ದಾಟುವಾಗ ಎದುರಿನಿಂದ ಬಂದ ರಜತ್​ ಬೇಡಿ ಕಾರು ಆತನಿಗೆ ಡಿಸ್ಕಿ ಹೊಡೆದಿದೆ. ಪರಿಣಾಮ ತಲೆಯ ಹಿಂಭಾಗಕ್ಕೆ ಗಾಯವಾಗಿದೆ.

  ವ್ಯಕ್ತಿಯ ತಲೆಯಿಂದ ಗಾಯ ಸೋರುತ್ತಿದ್ದಂತೆ ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದಾರೆ ನಟ ರಜತ್​ ಬೇಡಿ. ನಂತರ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಆದರೆ ನೀಡಿರುವ ಭರವಸೆಯನ್ನು ರಜತ್ ಈಡೇರಿಸಿಲ್ಲ ಮತ್ತು ಆಸ್ಪತ್ರೆಗೆ ಹಿಂತಿರುಗಿಲ್ಲ. ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಪತ್ನಿ ಸೇರಿದಂತೆ 13 ಮತ್ತು 7 ವರ್ಷದ ಎರಡು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

  Rajat-Bedi


  Read Also-Memory card guide: ಸ್ಮಾರ್ಟ್‌ಫೋನ್, ಕ್ಯಾಮೆರಾ ಹಾಗೂ ಡ್ರೋನ್‌ಗೆ ಸೂಕ್ತವಾದ ಮೆಮೊರಿ ಕಾರ್ಡ್‌ ಯಾವುದು? ಇಲ್ಲಿದೆ ಮಾಹಿತಿ

  ಏತನ್ಮಧ್ಯೆ, ರಜತ್ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ವಿಭಾಗದ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇನ್ನೂ ಯಾರನ್ನೂ ಬಂಧಿಸಿಲ್ಲ.

  ಅಪಘಾತಕ್ಕೆ (Accident) ಒಳಗಾದ ವ್ಯಕ್ತಿ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿದ್ದಾರೆ. ಕೃತಕ ಉಸಿರಾಟದ ಬೆಂಬಲದಲ್ಲಿರುವ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
  Published by:Harshith AS
  First published: