'ಮದಗಜ'ನ ಮದನಾರಿ ಯಾರಾಗಲಿದ್ದಾರೆ? ಚಿತ್ರತಂಡ ನೀಡಿದೆ ಸಣ್ಣ ಸುಳಿವು

Madagaja: ಮದಗಜ ಚಿತ್ರತಂಡ ನಾಯಕಿಯ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್​ನಲ್ಲಿ ನಾಯಕಿಯ ಮುಖವನ್ನು ತೋರಿಸದೆ ಪ್ರೇಕ್ಷರ ತಲೆಗೆ ಹುಳಬಿಟ್ಟಿದ್ದಾರೆ.  ಸೀರೆ ಉಟ್ಟುಕೊಂಡಿರುವ ಉದ್ದ ಜಡೆ ಹಾಕಿ ಹೂ ಮುಡಿದು ನಿಂತಿರು ಪೋಸ್ಟರ್​ ಇದಾಗಿದೆ. ಮಾತ್ರವಲ್ಲದೆ, ಹೆಸರಾಂತ ಸ್ಟಾರ್​ ನಟಿಯೊಬ್ಬರು ನಮ್ಮ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಯಾಗಿ ಆಯ್ಕೆಯಾಗಿದ್ದಾರೆ. ಆ ನಟಿ ಯಾರೆಂದು ಊಹಿಸಿ ಎಂದು ಚಿತ್ರತಂಡ ಹೇಳಿದೆ.

ಮದಗಜ

ಮದಗಜ

 • Share this:
  ಭರಾಟೆ ಸಿನಿಮಾದ ನಂತರ ರೋರಿಂಗ್​ ಸ್ಟಾರ್​ ಶ್ರೀಮುರಳಿ ಕೈಗೆತ್ತಿಕೊಂಡ ಸಿನಿಮಾ ಮದಗಜ. ಈಗಾಗಲೇ ಮದಗಜ ಟೈಟಲ್​ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಲು ಪ್ರಾರಂಭಿಸಿ ಆರು ತಿಂಗಳಾದರು ಚಿತ್ರೀಕರಣ ಮಾತ್ರ ಪ್ರಾರಂಭವಾಗಿಲ್ಲ. ಆದರೀಗ ಚಿತ್ರತಂಡ ಶೂಟಿಂಗ್​ ಪ್ರಾರಂಭಿಸಲು ಸಜ್ಜಾಗಿದೆ.

  ಇದೇ ತಿಂಗಳ 20 ರಿಂದ ಶೂಟಿಂಗ್​ ಪ್ರಾರಂಭಿಸುವದಾಗಿ ನಿರ್ದೇಶಕರು ತಿಳಿಸಿದ್ದಾರೆ. ಈ ನಡುವೆ ಮದಗಜ ಸಿನಿಮಾದಲ್ಲಿ ರೋರಿಂಗ್​ ಸ್ಟಾರ್​ಗೆ ನಾಯಕಿಯಾಗಿ ಸ್ಟಾರ್​ ನಟಿಯೊಬ್ಬರು ನಟಿಸುತ್ತಿದ್ದಾರೆ ಎಂಬ ಬಗ್ಗೆ ಚಿತ್ರತಂಡ ಸಣ್ಣ ಕ್ಲೂ ನೀಡಿದೆ. ಆದರೆ ಆಕೆ ಯಾರು? ಎಂಬುದನ್ನು ಕಂಡು ಹಿಡಿಯಲು ಪ್ರೇಕ್ಷಕರ ತಲೆಗೆ ಹುಳಬಿಟ್ಟಿದ್ದಾರೆ.

  ಸ್ಟಾರ್​ ನಟಿ ಯಾರೆಂದು ಊಹಿಸಿ!

  ಮದಗಜ ಚಿತ್ರತಂಡ ನಾಯಕಿಯ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್​ನಲ್ಲಿ ನಾಯಕಿಯ ಮುಖವನ್ನು ತೋರಿಸದೆ ಪ್ರೇಕ್ಷರ ತಲೆಗೆ ಹುಳಬಿಟ್ಟಿದ್ದಾರೆ.  ಸೀರೆ ಉಟ್ಟುಕೊಂಡಿರುವ ಉದ್ದ ಜಡೆ ಹಾಕಿ ಹೂ ಮುಡಿದು ನಿಂತಿರು ಪೋಸ್ಟರ್​ ಇದಾಗಿದೆ. ಮಾತ್ರವಲ್ಲದೆ, ಹೆಸರಾಂತ ಸ್ಟಾರ್​ ನಟಿಯೊಬ್ಬರು ನಮ್ಮ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಯಾಗಿ ಆಯ್ಕೆಯಾಗಿದ್ದಾರೆ. ಆ ನಟಿ ಯಾರೆಂದು ಊಹಿಸಿ ಎಂದು ಚಿತ್ರತಂಡ ಹೇಳಿದೆ.

  ಇದನ್ನೂಓದಿ: ವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ 200 ಕೋಟಿಗೆ ಏರಿಕೆ!     ಇವರಂತೆ ಆ ಸ್ಟಾರ್​ ನಾಯಕಿ!

  ಇನ್ನು ನಾಯಕಿ ಪೋಸ್ಟರ್​ ಹೊರಬಿದ್ದಿದೆ ತಡ ಅಭಿಮಾನಿಗಳಲ್ಲಿ ಆ ಸ್ಟಾರ್​ ನಟಿ ಯಾರು? ಮುರಳಿ ಜೊತೆ ತೆರೆ ಹಂಚಿಕೊಳ್ಳಲಿರುವ ನಾಯಕಿ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ಸಾಮಾಜಿಕ ತಾಣದಲ್ಲಂತೂ ಅಭಿಮಾನಿಗಳು ಕೆಲ ನಟಿಯ ಹೆಸರನ್ನು ಬರೆದುಕೊಂಡು ಕಾಮೆಂಟ್​ ಹಾಕುತ್ತಿದ್ದಾರೆ. ಅನೇಕರು ಆಶಿಕಾ ರಂಗನಾಥ್, ಅನುಪಮ ಪರಮೇಶ್ವರನ್​​ ಎಂದು ಕಾಮೆಂಟ್​ ಬರೆದರೆ, ಇನ್ನು ಕೆಲವರು ದೀಪಾ ಸನ್ನಿಧಿ, ಸಮಂತಾ, ಕೀರ್ತಿ ಸುರೇಶ್, ಶಾನ್ವಿ ಶ್ರೀವತ್ಸವ್​​ ಎಂದು ಹೇಳುತ್ತಿದ್ದಾರೆ.

  ಈ ಎಲ್ಲಾ ಚರ್ಚೆಗೆ ನಾಳೆ ತೆರೆ ಎಳೆಯುವುದಾಗಿ ಮದಗಜ ಚಿತ್ರತಂಡ ತಿಳಿಸಿದೆ. ಒಟ್ಟಿನಲ್ಲಿ 'ಅಯೋಗ್ಯ' ಮಹೇಶ್ ನಿರ್ದೇಶಿಸಲಿರುವ ಮದಗಜನ ಜೊತೆಗೂಡಲಿರುವ ಮದನಾರಿ ಯಾರೆಂಬುದನ್ನು ತಿಳಿಯಲು ನಾಳೆಯವರೆಗೂ ಕಾಯಬೇಕಿದೆ.

  ಇದನ್ನೂ ಓದಿ:‘ಏಕ್​ ಲವ್​ ಯಾ‘ ಟೀಸರ್​ನಲ್ಲಿ ರಾಣಾ-ರಚಿತಾ ಲಿಪ್​ ಕಿಸ್​?

   
  First published: