Rashmika Mandanna: ಕಿರಿಕ್​ ಬೆಡಗಿಗೆ ಸಿಕ್ತು 22 ಗಂಟೆಗಳು: ಆ ಗೋಲ್ಡನ್​ ಟೈಮ್​ನಲ್ಲಿ ರಶ್ಮಿಕಾ ಮಾಡಿದ್ದೇನು ಗೊತ್ತಾ..?

Rashmika Mandanna: ರಶ್ಮಿಕಾ ಈಗ ಎಷ್ಟು ಬ್ಯುಸಿ ಎಂದರೆ ಅವರಿಗೆ ಅಪ್ಪ, ಅಮ್ಮ ಹಾಗೂ ತಂಗಿಯನ್ನು ನೋಡಲು ಮನೆಗೆ ಹೋಗೋಕೆ ಸಮಯ ಸಿಗುತ್ತಿಲ್ಲವಂತೆ. ಹೌದು ಹೀಗೆಂದು ಖುದ್ದು ರಶ್ಮಿಕಾ ಹೇಳಿಕೊಂಡಿದ್ದಾರೆ. 

Anitha E | news18-kannada
Updated:October 10, 2019, 3:43 PM IST
Rashmika Mandanna: ಕಿರಿಕ್​ ಬೆಡಗಿಗೆ ಸಿಕ್ತು 22 ಗಂಟೆಗಳು: ಆ ಗೋಲ್ಡನ್​ ಟೈಮ್​ನಲ್ಲಿ ರಶ್ಮಿಕಾ ಮಾಡಿದ್ದೇನು ಗೊತ್ತಾ..?
ರಶ್ಮಿಕಾ ಮಂದಣ್ಣ
Anitha E | news18-kannada
Updated: October 10, 2019, 3:43 PM IST
- ಅನಿತಾ ಈ, 

ಮುಟ್ಟಿದ್ದೆಲ್ಲ ಚಿನ್ನ ಆಗೋದು ಅಂದರೆ ಇದೇ ಇರಬೇಕು. ಈ ಮಾತು ಕೊಡಗಿನ ಕುವರಿ ರಶ್ಮಿಕಾಗೆ ಹೇಳಿ ಮಾಡಿಸಿದಂತೆಇದೆ. ಹೌದು, ಸಣ್ಣ-ಪುಟ್ಟ ವಿಷಯಗಳಿಗೂ ವಿವಾದಕ್ಕೀಡಾಗುವ ರಶ್ಮಿಕಾ ದಕ್ಷಿಣ ಭಾರತದ ಸಿನಿ ರಂಗವನ್ನೇ ಆಳುತ್ತಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ರಶ್ಮಿಕಾ ಈಗ ಎಷ್ಟು ಬ್ಯುಸಿ ಎಂದರೆ ಅವರಿಗೆ ಅಪ್ಪ, ಅಮ್ಮ ಹಾಗೂ ತಂಗಿಯನ್ನು ನೋಡಲು ಮನೆಗೆ ಹೋಗೋಕೆ ಸಮಯ ಸಿಗುತ್ತಿಲ್ಲವಂತೆ. ಹೌದು ಹೀಗೆಂದು ಖುದ್ದು ರಶ್ಮಿಕಾ ಹೇಳಿಕೊಂಡಿದ್ದಾರೆ. ಹೀಗಾಗಿಯೇ ಅವರಿಗೆ ದಸರಾ ಹಬ್ಬದ ಅಂಗವಾಗಿ 22 ಗಂಟೆ ಸಮಯ ಸಿಕ್ಕಿದೆ.

Finally Rashmika Mandanna got that 22 hours of golden time
ತಂಗಿಯೊಂದಿಗೆ ರಶ್ಮಿಕಾ ಮಂದಣ್ಣ


ಹೌದು, ಸಿಕ್ಕ ಆ 22 ಗಂಟೆ ಗೋಲ್ಡನ್ ಟೈಮ್​ ಅನ್ನು ರಶ್ಮಿಕಾ ಹೇಗೆಲ್ಲ... ಯಾರೊಂದಿಗೆ ಕಳೆದಿದ್ದಾರೆ ಗೊತ್ತಾ..? ಅವರು ಮಾಡಿರುವ ಟ್ವೀಟ್​ ನೋಡಿ ತಿಳಿಯುತ್ತದೆ.

 



ಹೌದು, ರಶ್ಮಿಕಾಗೆ ಊರಿಗೆ ಹೋಗುವುದು, ಹೆತ್ತವರೊಂದಿಗೆ ಕಾಲ ಕಳೆಯುವುದು ಎಂದರೆ ಒಂದು ರೀತಿ ಗೋಲ್ಡನ್​ ಟೈಮ್​ ಎಂದೇ ಹೇಳಬಹುದು. ಅಂತಹ ಗೋಲ್ಡನ್​ ಟೈಮ್​ ಈಗ ರಶ್ಮಿಕಾರದ್ದಾಗಿದೆ. ಅದೂ ಸಹ ದಸರಾ ಹಬ್ಬದ ಪ್ರಯುಕ್ತ.  ರಶ್ಮಿಕಾ ಬರೋಬ್ಬರಿ 22 ಗಂಟೆಗಳ ಕಾಲ ತಮ್ಮ ಕುಟುಂಬದವರೊಂದಿಗೆ ಕಳೆದಿದ್ದಾರೆ.  ಅದರಲ್ಲೂ ಪುಟ್ಟ ತಂಗಿಯೊಂದಿಗೆ ಕಳೆದಿರುವ ಅಮೂಲ್ಯವಾದ ಕ್ಷಣಗಳನ್ನು ಫ್ರೇಮ್​ನಲ್ಲಿ ಸೆರೆ ಮಾಡಿದ್ದು, ಅದನ್ನು ತಮ್ಮ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂನ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

Rashmika spending time with her sister
ತಂಗಿಯೊಂದಿಗೆ ರಶ್ಮಿಕಾ


ರಶ್ಮಿಕಾ ಕೇವಲ ತೆಲುಗು, ತಮಿಳು ಮಾತ್ರವಲ್ಲದೆ ಹಿಂದಿಯಲ್ಲೂ ಅಭಿನಯಿಸುತ್ತಿದ್ದಾರೆ. ಅದರಲ್ಲೂ ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲೇ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಕಾರಣಕ್ಕೆ ಅವರು ಹೈದರಾಬಾದಿನಲ್ಲೇ ಹೆಚ್ಚಾಗಿ ಇರುತ್ತಾರೆ. ಇದರಿಂದಾಗಿ ಅವರಿಗೆ ತಮ್ಮವರನ್ನು ನೋಡಲು, ಅವರೊಂದಿಗೆ ಕಾಲ ಕಳೆಯಲು ಸಮಯವೇ ಸಿಗುತ್ತಿಲ್ಲವಂತೆ.

ಇದನ್ನೂ ಓದಿ: Bipasha Basu: ಸಿಂಧೂರ್​ ಖೇಲ್​ನಲ್ಲಿ ಬಿಳಿ ಬಣ್ಣದ ಸೀರೆಯುಟ್ಟು ಮಿಂಚಿದ ಕೃಷ್ಣ ಸುಂದರಿ ಬಿಪಾಶಾ..!

ಅನಿಲ್​ ರವಿಪುಡಿ ನಿರ್ದೇಶನದಲ್ಲಿ ಮಹೇಶ್​ ಬಾಬು ಜತೆ ರಶ್ಮಿಕಾ ಅಭಿನಯಿಸುತ್ತಿರುವ 'ಸರಿಲೇರು ನೀಕೆವ್ವರು' ಚಿತ್ರದ ಚಿತ್ರೀಕರಣ ಈಗಷ್ಟೆ ಮುಗಿದಿದ್ದು, ಡಬ್ಬಿಂಗ್​ ಕೆಲಸ ಆರಂಭವಾಗಿದೆ.

Rashmika spending time with her sister
ತಂಗಿಯೊಂದಿಗೆ ರಶ್ಮಿಕಾ


ಟಾಲಿವುಡ್‍ನ 'ಭೀಷ್ಮ' ಕಾಲಿವುಡ್​ನಲ್ಲಿ 'ಸುಲ್ತಾನ್', ಕನ್ನಡದ 'ಪೊಗರು' ಹಾಗೂ ಅಲ್ಸೇಲು ಅರ್ಜುನ್​ ಜತೆಯೂ ಸಿನಿಮಾ ಮಾಡುತ್ತಿದ್ದಾರೆ ರಶ್ಮಿಕಾ. ಕನ್ನಡದಲ್ಲಿ ಮಾಡಿದ ಒಂದೇ ಒಂದು ಸಿನಿಮಾದ ನಂತರ ರಶ್ಮಿಕಾ ಈಗ ಬಾಲಿವುಡ್​ ಮೆಟ್ಟಿಲೇರುವ ಮಟ್ಟಕ್ಕೆ ಬೆಳೆದಿದ್ದಾರೆ

HBD Rekha: ಗ್ಲಾಮರ್​ನಲ್ಲಿ ಇಂದಿನ ನಟಿಯರನ್ನೂ ಮೀರಿಸುವ ರೇಖಾ..!



 
First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...