Sonu Sood: ವಿಮಾನದ ಮೇಲೂ ಈಗ ಸೋನು ಚಿತ್ರ, ತನ್ನ ಫೋಟೋ ಇರೋ ಪ್ಲೇನ್​ನಲ್ಲೇ ರಿಯಲ್ ಹೀರೋ ಪ್ರಯಾಣ!

ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸೋನು ಸೂದ್ ಕೊನೆಗೂ ಇಂದು ಆಸೆ ನೆರವೇರಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ ವಿಮಾನದಲ್ಲಿ ರಕ್ಷಕ ಸೋನು ಸೂದ್‌ಗೆ ಸೆಲ್ಯೂಟ್ ಎಂದು ಬರೆಯಲಾಗಿದ್ದು ಪಕ್ಕದಲ್ಲಿ ಅವರ ಫೋಟೋವನ್ನು ಅಂಟಿಸಲಾಗಿದೆ

ನಟ ಸೋನು ಸೂದ್

ನಟ ಸೋನು ಸೂದ್

  • Share this:
ಚಿತ್ರ ನಟ ಸೋನು ಸೂದ್ (Sonu Sood) ಸಾಮಾಜಿಕ ಕಾರ್ಯಗಳಿಂದ (Social Work) ವಿಶಿಷ್ಟವಾಗಿ ಖ್ಯಾತಿ ಹೊಂದಿದವರಾಗಿದ್ದಾರೆ. ಸಾಂಕ್ರಾಮಿಕದ ಸಮಯದಲ್ಲಿ ಅದೆಷ್ಟೋ ವಲಸೆ ಕಾರ್ಮಿಕರನ್ನು, ಜನಸಾಮಾನ್ಯರನ್ನು ಅವರವರ ಸ್ವಂತ ಊರಿಗೆ ತಲುಪಿಸುವ ಮೇರುಮಟ್ಟದ ಕಾರ್ಯದಿಂದ ಹಿಡಿದು ಲಾಕ್‌ಡೌನ್ ಸಂಕಷ್ಟದಿಂದ ಆರ್ಥಿಕವಾಗಿ ಸಂಕಷ್ಟ(Financial Crisis) ಹೊಂದಿವರ ಜೊತೆ ಕೂಡ ಆಧಾರ ಸ್ತಂಭವಾಗಿ ನಿಂತಿದ್ದರು. ಇದೀಗ ಸ್ಪೈಸ್‌ ಜೆಟ್ ನಟದ ಸಾಮಾಜಿಕ ಕೆಲಸಗಳನ್ನು ಮೆಚ್ಚಿ ವಿಶೇಷ ಗೌರವ (Special Tribute) ಸಲ್ಲಿಸಿದ್ದು ತಮ್ಮದೇ ವಿಮಾನವೊಂದರ ಮೇಲೆ ನಟನ ಭಾವಚಿತ್ರ ಲಗತ್ತಿಸಿ ವಿಶೇಷ ಗೌರವ ಸಲ್ಲಿಸಿದೆ.

ಇದೇ ಸಮಯದಲ್ಲಿ ತನ್ನದೇ ಫೋಟೋ ಅಳವಡಿಸಿರುವ ಸ್ಪೈಸ್‌ಜೆಟ್‌ನ ವಿಮಾನವನ್ನೇರಿದ ಕ್ಷಣಗಳ ವಿಡಿಯೋವನ್ನು ನಟ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಈ ವಿಮಾನದಲ್ಲಿ ಪ್ರಯಾಣಿಸುವ ಉತ್ಸುಕತೆಯನ್ನು ತಾನು ಹೊಂದಿರುವುದಾಗಿ ಹೇಳಿಕೊಂಡಿರುವ ನಟ ಸಾಂಕ್ರಾಮಿಕದ ಸಮಯದಲ್ಲಿ ವಿಮಾನದ ಚಿತ್ರಗಳನ್ನು ನೋಡಿದ್ದೆ ಹಾಗೂ ಊರಿಗೆ ತೆರಳಲು ಅದೆಷ್ಟೋ ಜನರಿಗೆ ಪ್ರಯಾಣಕ್ಕೆ ಸಹಕಾರ ನೀಡಿದ ಸಂದರ್ಭದಲ್ಲಿ ಅವರು ಹಂಚಿಕೊಂಡ ದೃಶ್ಯಾವಳಿಗಳ ಮೂಲಕ ವಿಮಾನದ ಚಿತ್ರಣವನ್ನು ವೀಕ್ಷಿಸಿದ್ದೆ ಆದರೆ ಇಂದು ನಾನು ಸ್ವತಃ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಪಡೆದುಕೊಂಡಿದ್ದೇನೆ, ಪ್ರಯಾಣಿಸಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದು, ಸ್ಪೈಸ್‌ಜೆಟ್‌ಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ವಿಮಾನ ಪ್ರಯಾಣದ ಉತ್ಸುಕತೆಯನ್ನು ಹಂಚಿಕೊಂಡ ನಟ:
ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಸೋನು ಸೂದ್ ಕೊನೆಗೂ ಇಂದು ಆಸೆ ನೆರವೇರಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಮಾನದಲ್ಲಿ ರಕ್ಷಕ ಸೋನು ಸೂದ್‌ಗೆ ಸೆಲ್ಯೂಟ್ ಎಂದು ಬರೆಯಲಾಗಿದ್ದು ಪಕ್ಕದಲ್ಲಿ ಅವರ ಫೋಟೋವನ್ನು ಅಂಟಿಸಲಾಗಿದೆ. ಕೊರೋನಾದ ಮೊದಲ ಅಲೆಯ ಸಮಯದಲ್ಲಿ ಸೋನು ಸೂದ್ ಅವರು ಅದೆಷ್ಟೋ ವಲಸೆ ಕಾರ್ಮಿಕರನ್ನು ಸುರಕ್ಷಿತರಾಗಿ ಮನೆಗೆ ತಲುಪಿಸುವಲ್ಲಿ ತಮ್ಮ ಕೈಲಾದ ನೆರವನ್ನು ಮಾಡಿದ್ದರು.

ಇದನ್ನೂ ಓದಿ: Explained: Sonu Sood ಸಹೋದರಿ ಕಾಂಗ್ರೆಸ್​ ಪಕ್ಷಕ್ಕೇ ಸೇರಿದ್ದು ಯಾಕೆ? ಇಲ್ಲಿದೆ ನೋಡಿ ಡೀಟೈಲ್ಸ್

ನಟ ಹಂಚಿಕೊಂಡಿರುವ ವಿಡಿಯೋದಲ್ಲಿ ಸಿಬ್ಬಂದಿಗಳೊಂದಿಗೆ ಹಾಗೂ ಪ್ರಯಾಣಿಕರೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನನಗಾಗಿ ಪ್ರತಿಯೊಬ್ಬ ವಲಸಿಗ ಕಾರ್ಮಿಕನೂ ಪ್ರಾರ್ಥಿಸಿದ್ದು ಅವರ ಶುಭ ಹಾರೈಕೆಗಳಿಂದ ಮಾತ್ರವೇ ಈ ಅವಕಾಶ ನನ್ನದಾಗಿದೆ ಎಂದು ದಬಾಂಗ್ ನಟ ಬರೆದುಕೊಂಡಿದ್ದಾರೆ. ಜೊತೆಯಾಗಿ ನಾವು ಇನ್ನಷ್ಟು ಮುಖಗಳಲ್ಲಿ ನಗು ತರಲು ಪ್ರಯತ್ನಿಸೋಣ. ಅದೇ ರೀತಿ ಇನ್ನಷ್ಟು ಜೀವಗಳನ್ನು ಉಳಿಸಲು ನಮ್ಮಿಂದ ಕೈಲಾದ ನೆರವನ್ನು ಮಾಡೋಣ ಎಂಬುದಾಗಿ 48ರ ಹರೆಯದ ಸೋನು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಿ:

ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದ ಸೋನು ಸೂದ್:
ಸಿನಿ ರಂಗದ ಕಷ್ಟದ ದಿನಗಳನ್ನು ಈ ಸಮಯದಲ್ಲಿ ಸ್ಮರಿಸಿಕೊಂಡು ಭಾವುಕರಾದ ಸೋನು ಸೂದ್ ಈ ಹಿಂದೆ ಪಂಜಾಬ್‌ನ ಮೊಗಾದಿಂದ ಮುಂಬೈಗೆ ಬರಲು ಬಂದ ಕಷ್ಟಗಳನ್ನು ನೆನಪಿಸಿಕೊಂಡರು. ಟಿಕೆಟ್ ಕಾಯ್ದಿರಿಸಲೂ ಆಗದೆ ಆ ಸಮಯದಲ್ಲಿ ಅದೆಷ್ಟು ಬವಣೆ ಪಟ್ಟಿದ್ದರು ಎಂಬುದನ್ನು ನೆನಪಿಸಿಕೊಂಡರು. ಇದೀಗ ಸ್ಪೈಸ್‌ ಜೆಟ್ ನೀಡಿದ ಗೌರವಾರ್ಥಕ್ಕೆ ನಾನು ಚಿರಋಣಿಯಾಗಿರುವೆ ಎಂದು ಬರೆದುಕೊಂಡಿರುವ ಸೋನು ಸೂದ್ ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿ. ನನ್ನ ಪೋಷಕರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸ್ಪೈಸ್‌ ಜೆಟ್ ಕಡೆಯಿಂದ ನಟನಿಗೆ ವಿಶೇಷ ಸಮರ್ಪಣೆ:
ಸಾಂಕ್ರಾಮಿಕದ ಸಮಯದಲ್ಲಿ ವಿದೇಶದಲ್ಲಿದ್ದ ಅದೆಷ್ಟೋ ಭಾರತೀಯರನ್ನು ತಾಯ್ನಾಡಿಗೆ ಕರೆಸಿಕೊಳ್ಳುವಲ್ಲಿ ಸ್ಪೈಸ್‌ ಜೆಟ್ ಹಾಗೂ ಸೋನು ಸೂದ್ ಸೇನೆಯೊಂದಿಗೆ ಕೈ ಜೋಡಿಸಿದ್ದರು. ವಿದೇಶದಲ್ಲಿ ಸಿಲುಕಿದ್ದ ಅದೆಷ್ಟೋ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರುವಲ್ಲಿ ಕೈ ಜೋಡಿಸಿದ ಸೋನು ಸೂದ್ ಅವರ ಸಾಟಿಯಿಲ್ಲದ ಕೊಡುಗೆಯನ್ನು ಗೌರವಿಸುವ ಸಲುವಾಗಿ ವಿಮಾನದಲ್ಲಿ ನಟ ಸೂದ್ ಫೋಟೋವನ್ನು ಅಂಟಿಸುವ ಮೂಲಕ ವಿಶೇಷವಾಗಿ ವಿಮಾನವನ್ನು ಅಲಂಕರಿಸಲಾಗಿದೆ ಎಂಬುದಾಗಿ ಸ್ಪೈಸ್ ಜೆಟ್ ಸಂಸ್ಥೆ ಟ್ವಿಟ್ಟರ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: Sonu Sood: ಸಲಾಂ... ಸೋನು ಸೂದ್​: ಹೆಣ್ಣುಮಕ್ಕಳಿಗೆ ಸಾವಿರ ಸೈಕಲ್​ ನೀಡಿದ ರಿಯಲ್​ ಹೀರೋ!

ಅವರು ಮಾಡಿದ ಸಹಾಯ, ಸಹಕಾರ ಸರಿಸಾಟಿಯಲ್ಲದ್ದು, ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಅದು ಸಾಲದು. ಸ್ಪೈಸ್‌ ಜೆಟ್ ಪರವಾಗಿ ಸೋನು ಸೂದ್ ಅವರಿಗೆ ಇದೊಂದು ಸಣ್ಣ ನೆನಪಿನ ಕಾಣಿಕೆ ಎಂಬುದಾಗಿ ವಿಮಾನಯಾನ ಸಂಸ್ಥೆ ಟ್ವಿಟ್ಟರ್‌ನಲ್ಲಿ ಸೋನು ಸೂದ್ ಅವರಿಗೆ ಗೌರವ ಅರ್ಪಿಸಿದೆ. ಸೋನು ಹಾಗೂ ಸ್ಪೈಸ್‌ ಜೆಟ್ ಸಹಯೋಗದಿಂದಾಗಿ ಕಿರ್ಗಿಸ್ತಾನ್‌ನಲ್ಲಿ ಸಿಲುಕಿದ್ದ 1,500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲಾಯಿತು.
Published by:vanithasanjevani vanithasanjevani
First published: