Anushka Shetty: ಪಾತ್ರಕ್ಕಾಗಿ ಪಲ್ಲಂಗ ವಿಷಯವಾಗಿ ಮೌನ ಮುರಿದ ಅನುಷ್ಕಾ ಶೆಟ್ಟಿ..!

Casting Couch: ಇದೇ ಮೊದಲ ಬಾರಿಗೆ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಪಾತ್ರಕ್ಕಾಗಿ ಪಲ್ಲಂಗ ವಿಷಯವಾಗಿ ಮೌನ ಮುರಿದಿದ್ದಾರೆ. ಸಿನಿರಂಗದಲ್ಲಿ ಆಗಾಗ ನಟ-ನಟಿಯರು ತಮಗೆದುರಾದ ಕಾಸ್ಟಿಂಗ್​ ಕೌಚ್​ ಅನುಭವಗಳನ್ನು ಹಂಚಿಕೊಳ್ಳುವ ಕುರಿತು ಸ್ವೀಟಿ ಮಾತನಾಡಿದ್ದಾರೆ.

ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ

  • Share this:
ಹಾಲಿವುಡ್​ನಿಂದ ಹಿಡಿದು ಸ್ಯಾಂಡಲ್​ವುಡ್​ವರೆಗೂ ಈಗೇನಿದ್ದರೂ ಕಾಸ್ಟಿಂಗ್​ ಕೌಚ್​ (ಪಾತ್ರಕ್ಕಾಗಿ ಪಲ್ಲಂಗ) ಹಾಗೂ ಮೀಟೂನದ್ದೇ ಸದ್ದು. ಸಿನಿಮಾಗಳಲ್ಲಿ ಅವಕಾಶ ಕೇಳಿದಾಗ ತಮಗೆದುರಾದ ಪರಿಸ್ಥಿತಿಗಳನ್ನು ಆಗೊಮ್ಮೆ ಈಗೊಮ್ಮೆ ಸ್ಟಾರ್​ಗಳು ಲಿಂಗ ಬೇಧವಿಲ್ಲದೆ ಹೇಳಿಕೊಳ್ಳುತ್ತಿರುತ್ತಾರೆ. ಈ ವಿಷಯದಲ್ಲಿ ಈಗ ಕನ್ನಡತಿ ಅನುಷ್ಕಾ ಶೆಟ್ಟಿ ಸಹ ಮಾತನಾಡಿದ್ದಾರೆ. 

ಹೌದು, ಇದೇ ಮೊದಲ ಬಾರಿಗೆ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಪಾತ್ರಕ್ಕಾಗಿ ಪಲ್ಲಂಗ ವಿಷಯವಾಗಿ ಮೌನ ಮುರಿದಿದ್ದಾರೆ. ಸಿನಿರಂಗದಲ್ಲಿ ಆಗಾಗ ನಟ-ನಟಿಯರು ತಮಗೆದುರಾದ ಕಾಸ್ಟಿಂಗ್​ ಕೌಚ್​ ಅನುಭವಗಳನ್ನು ಹಂಚಿಕೊಳ್ಳುವ ಕುರಿತು ಸ್ವೀಟಿ ಮಾತನಾಡಿದ್ದಾರೆ.

ಅನುಷ್ಕಾ ಶೆಟ್ಟಿ


ಸಿನಿ ಗಜತ್ತು ಗ್ಲಾಮರಸ್​ ಪ್ರಪಂಚ. ಇದೇ ಕಾರಣಕ್ಕೆ ಕಾಸ್ಟಿಂಗ್​ ಕೌಚ್​ ವಿಷಯಗಳು ಬಂದಾಗ ಹೆಚ್ಚಾಗಿ ಹೈಲೈಟ್​ ಆಗುತ್ತದೆ. ಇದು ಈಗ ಯಾವ ರಂಗದಲ್ಲಿ ಇಲ್ಲ ಹೇಳಿ. ಎಲ್ಲಿ ಹೆಣ್ಣು ಮಕ್ಕಳಿಗೆ ಸಮಸ್ಯೆ ಎದುರಾಗುತ್ತಿಲ್ಲ ಹೇಳಿ ಎಂದಿರುವ ಅನುಷ್ಕಾ ಈ ಸಮಸ್ಯೆ ಟಾಲಿವುಡ್​ನಲ್ಲಿ ಇಲ್ಲ ಎಂದ ಹೇಳಲಿಲ್ಲ ಬದಲಾಗಿ ಅವರಿಗೆ ಎಂದೂ ಇದರ ಅನುಭವವಾಗಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸಾಕು ಪ್ರಾಣಿಗಳ ಪರನಿಂತ ನಟ ಜಾನ್ ಅಬ್ರಹಾಂ: ಕ್ಷಮೆ ಯಾಚಿಸಿದ ಬೃಹನ್​​​​ ಮುಂಬೈ ಮುನ್ಸಿಪಲ್​ ಕಾರ್ಪೊರೇಶನ್

ಯಾವುದೇ ಹುಡುಗಿಯ ಬಳಿ ಆಕೆಗೆ ಇಷ್ಟವಿಲ್ಲದ ವಿಷಯವನ್ನು ಬಲವಂತವಾಗಿ ಕೇಳುವುದು ತಪ್ಪು. ಹಾಗೆಯೇ ಯಾವುದೇ ರಂಗದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಸುಲಭವಾದ ದಾರಿಯೊಂದಿಗೆ ಕಷ್ಟವಾದ ಮಾರ್ಗವೂ ಇರುತ್ತದೆ. ನಾನು ಕಷ್ಟವಾದ ದಾರಿಯಲ್ಲೇ ಬೆಳೆದಿದ್ದೇನೆ ಎಂದಿದ್ದಾರೆ ಅನುಷ್ಕಾ ಶೆಟ್ಟಿ. 'ನಿಶ್ಯಬ್ಧಂ' ಸಿನಿಮಾದ ಪ್ರಚಾರದಲ್ಲಿ ಅನುಷ್ಕಾ ಮಾಧ್ಯಮದವರೊಂದಿಗೆ ಈ ವಿಷಯ ಹಂಚಿಕೊಂಡಿದ್ದಾರೆ.

Nysa: ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ಕಿಡ್​ ನ್ಯಾಸಾಳದ್ದೇ ಸದ್ದು: ಫೋಟೋಶೂಟ್​ನಲ್ಲಿ ಮಿಂಚಿದ ಕಾಜೋಲ್​ ಮಗಳು.! 
First published: