ಟಾಲಿವುಡ್ ಸಿನಿಪ್ರಿಯರಿಗೆ ಸಂಕ್ರಾಂತಿಗೆ ಸಿಗಲಿದೆ ಬಂಪರ್ ಉಡುಗೊರೆ: ರಿಲೀಸ್​ಗೆ ಸಜ್ಜಾಗುತ್ತಿವೆ ಸ್ಟಾರ್​ ನಟರ ಸಿನಿಮಾಗಳು..!

ಈ ಸಲದ ಸಂಕ್ರಾತಿ ಹಬ್ಬಕ್ಕೆ ಟಾಲಿವುಡ್​ ಪ್ರೇಕ್ಷಕರಿಗೆ ಸಿಗಲಿದೆ ಬರ್ಜರಿ ಉಡುಗೊರೆ. ದೊಡ್ಡ ದೊಡ್ಡ ಸ್ಟಾರ್​ಗಳ ಸಿನಿಮಾಗಳು ಹಬ್ಬಕ್ಕೆ ರಿಲೀಸ್​ ಆಗಲು ಸಜ್ಜಾಗಿವೆ.

ತೆಲುಗು ಸಿನಿಮಾಗಳು

ತೆಲುಗು ಸಿನಿಮಾಗಳು

  • Share this:
ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಂಲೋ ಮತ್ತು ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಚಿತ್ರದ ನಿರ್ಮಾಪಕರು ಒಂದೇ ದಿನ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ತೆಲುಗು ಚಿತ್ರರಂಗದ ಪಾಲುದಾರರು ಚಿಂತಿತರಾಗಿದ್ದರು. ಎರಡೂ ಚಿತ್ರಗಳು ಸಂಕ್ರಾಂತಿ ರಜಾದಿನಗಳಲ್ಲಿ ಲಾಭ ಪಡೆಯಲು 2020 ರ ಜನವರಿ 12 ರಂದು ಬಿಡುಗಡೆ ಮಾಡಲು ನಿರ್ಧರಿಸಿದರು, ಏಕೆಂದರೆ ಸಂಕ್ರಾಂತಿ ದಿನದಂದು ಹೆಚ್ಚಿನ ಜನರು ಥಿಯೇಟರ್ ಬರುತ್ತಾರೆ ಎಂಬ ನಂಬಿಕೆಯಿದೆ. ನಿರ್ಮಾಪಕರು ಮತ್ತು ವಿತರಕರು ಈ ಚಲನಚಿತ್ರಗಳು ಪರಸ್ಪರ ಆರಂಭಿಕ ದಿನದ ಸಂಗ್ರಹಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದು ತಿಳಿದು ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಚಿತ್ರವನ್ನು ಜನವರಿ 11 ರಂದು ಬಿಡುಗಡೆ ಮಾಡಿದರು ಹಾಗೂ ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಂಲೋ ಚಿತ್ರವನ್ನು ಜನವರಿ 12 ರಂದು ಬಿಡುಗಡೆ ಮಾಡಲಾಯಿತು. ಎರಡು ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಹಿಟ್ ಆದವು. ಜೊತೆಗೆ ಸಖತ್ ಕಲೆಕ್ಷನ್ ಸಹ ಮಾಡಿದವು.

ಮುಂದಿನ ಸಂಕ್ರಾಂತಿಗೆ ಪ್ರಭಾಸ್, ಪವನ್ ಕಲ್ಯಾಣ್ ಮತ್ತು ಮಹೇಶ್ ಬಾಬು ಅಭಿನಯದ ಸಿನಿಮಾಗಳು ಪೈಪೋಟಿ ನಡೆಸಲಿವೆ. ಇದರಿಂದಾಗಿ ವಿತರಕರು ಮತ್ತು ನಿರ್ಮಾಪಕರು  ಮತ್ತೆ ಹೆಚ್ಚಿನ ಒತ್ತಡಕ್ಕೆ ಸಿಲುಕಿದ್ದಾರೆ. ಏಕೆಂದರೆ ಪ್ರತಿಯೊಬ್ಬ ಸ್ಟಾರ್ ಹಬ್ಬಕ್ಕೆ ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡಬೇಕೆಂಬ ಆಸೆಯನ್ನು ಹೊಂದಿದ್ದಾರೆ.

View this post on Instagram


A post shared by Prabhas (@actorprabhas)


ಕೊರೋನಾ ವೈರಸ್‌ನ ಎರಡನೇ ಅಲೆಯಿಂದಾಗಿ ಪ್ರಭಾಸ್ ಅವರ ಹೊಸ ರೊಮ್ಯಾಂಟಿಕ್​ ಲವ್​ ಸ್ಟೋರಿ "ರಾಧೆ ಶ್ಯಾಮ್" ಚಿತ್ರವು ಜುಲೈ 30 ರಂದು ಚಿತ್ರಮಂದಿರಗಳಲ್ಲಿ ಪ್ರರ್ದಶನಗೊಳಬೇಕಿತ್ತು. ಆದರೆ,ಇದೀಗ ಚಿತ್ರವನ್ನು ಸಂಕ್ರಾಂತಿ ರಜಾದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶಿಸಲಾಗುವುದು ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ಇದನ್ನೂ ಓದಿ: Dvitva: ದ್ವಿತ್ವ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ಗೆ ನಾಯಕಿಯಾದ ತ್ರಿಷಾ..!

ರಾಧೆ ಶ್ಯಾಮ್ ಒಂದು ವಿಲಕ್ಷಣ ಪ್ರೇಮ ಕಥೆಯನ್ನು ಹೊಂದಿದ್ದು, ಐರೋಪ್ಯ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. ಇದು ಒಂದು ದಶಕಕ್ಕೂ ಹೆಚ್ಚು ಅವಧಿಯ ನಂತರ ಪ್ರಭಾಸ್ ಅವರ ಮೊದಲ ರೊಮ್ಯಾಂಟಿಕ್​ ಚಿತ್ರವಾಗಿದೆ. ಅಭಿಮಾನಿಗಳ ಉತ್ಸಾಹದಿಂದ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ರೋಚಕ ಸಂಗತಿಯೆಂದರೆ ರಾಧೆ ಶ್ಯಾಮ್ ದೇಶಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಏಕೆಂದರೆ ಪ್ರಭಾಸ್ "ಪ್ಯಾನ್-ಇಂಡಿಯನ್" ಸ್ಟಾರ್ ಮತ್ತು ಅವರ ಬಾಹುಬಲಿ ಫ್ರಾಂಚೈಸಿ ಅದ್ಭುತ ಯಶಸ್ಸನ್ನು ಸಾಧಿಸಿದೆ.

ಬಾಹುಬಲಿ: "ದಿ ಕನ್ಕ್ಲೂಶನ್" ಬಿಡುಗಡೆಯಾದ ಕೇವಲ 10 ದಿನಗಳಲ್ಲಿ 10 ಬಿಲಿಯನ್ ರೂಪಾಯಿಗಳನ್ನು ಸಂಗ್ರಹಿಸಿದೆ. ಪ್ರಭಾಸ್ ಅವರ ಪ್ರಸ್ತುತ ರಾಷ್ಟ್ರೀಯ ಸ್ಥಾನವು ಇತರ ಸ್ಟಾರ್ ಚಿತ್ರಗಳ ನಿರ್ಮಾಪಕರ ಮೇಲೆ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಪ್ರಭಾಸ್‌ಗಿಂತ ಮೊದಲು, ಮಹೇಶ್ ಬಾಬು ತಮ್ಮ ಮುಂಬರುವ ಚಿತ್ರ ಸರ್ಕಾರಿ ವಾರು ಪಾಟ ಅದೇ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಪ್ರಕಟಿಸಿದ್ದರು. ನಂತರ ಪವನ್ ಕಲ್ಯಾಣ್ ಅವರ ಮುಂಬರುವ ಹೆಸರಿಡದ ಚಲನಚಿತ್ರದೊಂದಿಗೆ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲು ರೆಡಿಯಾಗಿದೆ.

ಇದನ್ನೂ ಓದಿ: Bigg Boss Kannada Season 8: ಮಂಜುಗಾಗಿ ಬಿಗ್ ಬಾಸ್​ ಬಳಿ ಸ್ಪೆಷಲ್ ವಿಶ್​ ಮಾಡಿದ ದಿವ್ಯಾ ಸುರೇಶ್​..!

ಜೊತೆಗೆ, ನೆರೆಯ ರಾಜ್ಯ ತಮಿಳುನಾಡಿನ ನಟ ವಿಜಯ್ ಅವರ ಮೃಗ ಕೂಡ ಪೊಂಗಲ್‌ಗೆ ತೆರೆಗೆ ಬರಲು ಸಿದ್ಧವಾಗುತ್ತಿದೆ. ವಿಜಯ್ ಚಿತ್ರವು ತೆಲುಗು ರಾಜ್ಯಗಳಲ್ಲಿನ ತಾರೆಯರಿಗೆ ಹೆಚ್ಚು ಸವಾಲಾಗದಿದ್ದರೂ, ಇದು ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ವಿಜಯ್‌ಗೆ ಅಪಾರ ಅಭಿಮಾನಿಗಳಿದ್ದಾರೆ ಇದರಿಂದ ತೆಲಗು ಚಿತ್ರಗಳ ಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಹಲವಾರ ಜನರ ಅಭಿಪ್ರಾಯ.ಈ ಮೂರು ಬ್ಲಾಕ್‌ ಬಸ್ಟರ್‌ಗಳಲ್ಲಿ ಒಂದನ್ನು ರೇಸ್‌ನಿಂದ ಹೊರ ತೆಗೆಯಬೇಕು, ಇತರ ಎರಡು ಚಿತ್ರಗಳಿಗೆ ಅವಕಾಶವನ್ನು ಸೃಷ್ಟಿಸಿ ಕೂಡಬೇಕು ಎಂದು ತರ್ಕವು ಶುರವಾಗಿದೆ. ಮೊದಲು ಯಾರು ಬಾಕ್ಸ್ಆಫೀಸ್‌ನಲ್ಲಿ ಹೆಚ್ಚುಗಳಿಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
First published: