13ನೇ ವಯಸ್ಸಿಗೆ ಬಾಯ್​ಫ್ರೆಂಡ್ ಸಿಕ್ಕಿದ, 14 ತುಂಬಿದಾಗ ಕಿಸ್ ಮಾಡಿದೆ ಎಂದ ಖ್ಯಾತ ನಿರ್ದೇಶಕನ ಮಗಳು!

Aaliyah Kashyap: ಆಲಿಯಾ ಕಶ್ಯಪ್​ 14ನೇ ವಯಸ್ಸಿನಲ್ಲಿರುವಾಗ ಮೊದಲ ಬಾರಿಗೆ ಕಿಸ್​ ಮಾಡಿದ್ದರಂತೆ. ಕಿಸ್​ ಮಾಡಿ ಅಲ್ಲಿಂದ ಓಡಿ ಹೋಗಿದ್ದೆ ಎಂದು ತಮ್ಮ ಮೊದಲ ಕಿಸ್​ ಅನುಭವನ್ನು ಹಂಚಿಕೊಂಡಿದ್ದಾರೆ.

Aaliyah Kashyap

Aaliyah Kashyap

 • Share this:
  ಸಿನಿಮಾ ತಾರೆಯರು, ನಿರ್ದೇಶಕರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗೋದು ಸಾಮಾನ್ಯ. ಕೆಲವೊಂದು ಬಾರಿ ತಾರೆಯ ಮಕ್ಕಳು ಕೂಡ ಸುದ್ದಿಯಲ್ಲಿರುತ್ತಾರೆ. ಆದರಂತೆ ಇದೀಗ ಬಾಲಿವುಡ್​  ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ ಮಗಳು ಆಲಿಯಾ ಕಶ್ಯಪ್​ ಸುದ್ದಿಯಲ್ಲಿದ್ದಾರೆ. ಚಿತ್ರರಂಗಕ್ಕೆ ಕಾಲಿಡದ ಆಲಿಯಾ ಇದೀಗ ಮೊದಲ ಚುಂಬನದ ಅನುಭವವನ್ನು ಹಂಚಿಕೊಂಡಿದ್ದಾರೆ. ಮೊದಲ ಡೇಟಿಂಗ್​ ವಿಚಾರವಾಗಿ ಮಾತನಾಡಿದ್ದಾರೆ.

  ಆಲಿಯಾ ಕಶ್ಯಪ್​ 14ನೇ ವಯಸ್ಸಿನಲ್ಲಿರುವಾಗ ಮೊದಲ ಬಾರಿಗೆ ಕಿಸ್​ ಮಾಡಿದ್ದರಂತೆ. ಕಿಸ್​ ಮಾಡಿ ಅಲ್ಲಿಂದ ಓಡಿ ಹೋಗಿದ್ದೆ ಎಂದು ತಮ್ಮ ಮೊದಲ ಕಿಸ್​ ಅನುಭವನ್ನು ಹಂಚಿಕೊಂಡಿದ್ದಾರೆ.

  ಯ್ಯೂಟೂಬ್​ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಆಲಿಯಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಬಾಯ್​ಫ್ರೆಂಡ್​ ಶೇನ್​ ಗ್ರೆಗೊಯಿರ್​ ಕೂಡ ಕಾಣಿಸಿಕೊಂಡಿದ್ದಾರೆ.

  ಮೊದಲ ಕಿಸ್ ಮಾಡಿದಾಗ ಆಲಿಯಾ ಕಶ್ಯಪ್​ಗೆ ನಾಚಿಕೆ ಆಗಿತ್ತಂತೆ. ಅದು ನನ್ನ ಕೆಟ್ಟ ಅನುಭವ. ಕಿಸ್​ ಮಾಡಿದ ಮೇಲೆ ಅಲ್ಲಿಂದ ನಾನು ಓಡಿ ಹೋದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

  13ನೇ ವಯಸ್ಸಿನಲ್ಲಿ ಬಾಯ್​ಫ್ರೆಂಡ್​ ಸಿಕ್ಕಿದ. 14 ನೇ ವಯಸ್ಸಿಗೆ ಮೊದಲ ಕಿಸ್​. ಅಂದಹಾಗೆಯೇ ನನ್ನ ಬೆಸ್ಟ್​ಫ್ರೆಂಡ್​​ ನನ್ನ ಬಾಯ್​ಫ್ರೆಂಡ್​​ನ ಬೆಸ್ಟ್​ಫ್ರೆಂಡ್​ ಜತೆಗೆ ಡೇಟಿಂಗ್​ ಮಾಡುತ್ತಿದ್ದ. ಹೀಗಾಗಿ ನಾವು ಮೊದಲ ಡಬಲ್​ ಡೇಟ್​ ಮಾಡಲು ನಿರ್ಧರಿಸಿದೆವು ಎಂದು ಅನುಭವ ಹಂಚಿಕೊಂಡಿದ್ದಾರೆ.

  Aaliyah Kashyap- anurag Kashyap


  ಸದ್ಯ ಆಲಿಯಾ ಕಶ್ಯಪ್​  ಮತ್ತು ಶೇನ್​ ಗೆಗ್ರೊಯಿರ್​ ರಿಲೇಶನ್​ಶಿಪ್​ನಲ್ಲಿದ್ದಾರೆ. ಇಬ್ಬರು ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಯ್ಯೂಟೂಬ್​ನಲ್ಲಿ ಅಪ್ಲೋಡ್​ ಮಾಡಿದ ಒಂದು ವಿಡಿಯೋದಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಹಂಚಿಕೊಂಡಿದ್ದಾರೆ.

  ಶೇನ್​ ಗೆಗ್ರೊಯಿರ್ ಅಮೆರಿಕದಲ್ಲಿ ಉದ್ಯಮ ಹೊಂದಿದ್ದಾರೆ, ಆಲಿಯಾ ಮೊದಲ ಬಾರಿಗೆ ಈತನೊಂದಿಗೆ ಕಿಸ್ ಮಾಡುವಾಗ ನರ್ವಸ್​ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ.

  ಸೆಲೆಬ್ರಿಟಿಗಳು ಎಂದ ಮೇಲೆ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ನಿರ್ದೇಶಕ ಅನುರಾಗ್​ ಕಶ್ಯಪ್​ ಮಗಳು ಮೊದಲ ಚುಂಬನದ ಅನುಭವ ಬಿಚ್ಚಿಟ್ಟು ಸುದ್ದಿಯಾಗಿದ್ದಾರೆ. ಈಕೆ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.
  First published: