Film Theaters Open - ಆಗಸ್ಟ್​ನಲ್ಲಿ ತೆರೆಯಲಿವೆಯಾ ಚಿತ್ರಮಂದಿರಗಳು?: ಷರತ್ತುಗಳು ಅನ್ವಯ..!

ಲಾಕ್​ಡೌನ್​ನಿಂದಾಗಿ ಮಾಲ್​ಗಳು, ಮಲ್ಟಿಪ್ಲೆಕ್ಸ್​ಗಳು ಹಾಗೂ ಚಿತ್ರಮಂದಿರಗಳೂ ಸಹ ಮುಚಲ್ಪಟ್ಟಿವೆ. ಸದ್ಯಕ್ಕೆ ಬಸ್​ ಸಂಚಾರವನ್ನು ಆರಂಭಿಸುತ್ತಿರುವ ರಾಜ್ಯ ಸರ್ಕಾರಗಳು  ಈಗ ಸಿನಿಮಾ ಮಂದಿರಗಳನ್ನು ತೆರೆಯುವ ಕುರಿತು ಸಹ ಆಲೋಚಿಸುತ್ತಿವೆಯಂತೆ.

ಚಿತ್ರಮಂದಿರ

ಚಿತ್ರಮಂದಿರ

  • Share this:
ದೇಶದೆಲ್ಲೆಡೆ ಕೊರೋನಾದಿಂದಾಗಿ ಲಾಕ್​ಡೌನ್​ ಮಾಡಲಾಗಿದೆ. ಈಗ ಮೆಲ್ಲನೆ ಆಯಾ ರಾಜ್ಯ ಸರ್ಕಾರು ಅಲ್ಲಿನ ಪರಿಸ್ಥಿತಿಯ ಆಧಾರದ ಮೇಲೆ ಲಾಕ್​ಡೌನ್​ ಅನ್ನು ಸಡಿಲಗೊಳಿಸುತ್ತಿವೆ. ಈಗ ಜನರ ಜೀವನ ಮೆಲ್ಲನೆ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದೆ. 

ಲಾಕ್​ಡೌನ್​ನಿಂದಾಗಿ ಮಾಲ್​ಗಳು, ಮಲ್ಟಿಪ್ಲೆಕ್ಸ್​ಗಳು ಹಾಗೂ ಚಿತ್ರಮಂದಿರಗಳೂ ಸಹ ಮುಚಲ್ಪಟ್ಟಿವೆ. ಸದ್ಯಕ್ಕೆ ಬಸ್​ ಸಂಚಾರವನ್ನು ಆರಂಭಿಸುತ್ತಿರುವ ರಾಜ್ಯ ಸರ್ಕಾರಗಳು  ಈಗ ಸಿನಿಮಾ ಮಂದಿರಗಳನ್ನು ತೆರೆಯುವ ಕುರಿತು ಸಹ ಆಲೋಚಿಸುತ್ತಿವೆಯಂತೆ.

Film Theaters may reopen in AP and Telangana in august but conditions apply
ಚಿತ್ರಮಂದಿರ


ಆಂಧ್ರ ಹಾಗೂ ತೆಲಂಗಾಣ ಸರ್ಕಾರ ಆಗಸ್ಟ್​ನಲ್ಲಿ ಚಿತ್ರಮಂದಿರಗಳನ್ನು ತೆರೆಯುವ ಆಲೋಚನೆಯಲ್ಲಿವೆಯಂತೆ. ಆದರೆ ಅದಕ್ಕಾಗಿ ಕೆಲವು ಷರತ್ತುಗಳನ್ನಿಡಲು ನಿರ್ಧರಿಸಿದೆ ಎಂಬ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: Rana-Miheeka: ರಾಣಾ-ಮಿಹಿಕಾರ ರೊಕಾದಲ್ಲಿದ್ದರು ಈ ಇಬ್ಬರು ಸೆಲೆಬ್ರಿಟಿಗಳು..!

ನಿತ್ಯ 7 ಗಂಟೆಯೊಳಗೆ ಮೂರು ಶೋಗಳನ್ನು ಮುಗಿಸಬೇಕು. ಪ್ರತಿ ಆಸನದ ಮಧ್ಯೆ ಅಂತರವಿರಬೇಕು. ಪ್ರೇಕ್ಷಕರನ್ನು ತಪಾಸಣೆ ನಡೆಸಿದ ನಂತರವೇ ಒಳಗೆ ಬಿಡಬೇಕು. ಹೀಗೆ ಹಲವಾರು ಷರತ್ತುಗಳೊಂದಿಗೆ ಚಿತ್ರಮಂದುರ ತೆರೆಯಲು ಕೇಂದ್ರ ಅನುಮತಿ ನೀಡಲಿದೆ ಅನ್ನೋ ಸುದ್ದಿ ಸಹ ಹರಿದಾಡುತ್ತಿದೆ.

Film Theaters may reopen in AP and Telangana in august but conditions apply
ಚಿತ್ರಮಂದಿರ


ಚಿತ್ರಮಂದಿರಗಳಲ್ಲಿರುವ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಿದ್ದ ಎಂದು ಮಾಲೀಕರು ಆಂಧ್ರ ಹಾಗೂ ತೆಲಂಗಾಣ ಸರ್ಕಾರಕ್ಕೆ ಭರವಸೆ ನೀಡಲಿದ್ದಾರಂತೆ. ಒಂದುವೇಳೆ ಇವೆಲ್ಲ ತೆರೆದಲ್ಲಿ ಸಾಕಷ್ಟು ಜನರಿಗೆ ಜೀವನದ ಬಂಡಿ ಸಾಗಿಸೋಕೆ ಒಂದು ಆಸರೆ ಸಿಕ್ಕಂತಾಗುತ್ತದೆ.

Adah Sharma: ಹೊಸ ಚಾಲೆಂಜ್​ ಕೊಟ್ಟ ಅದಾ ಶರ್ಮಾ: ಹಾಟ್​ ಫೋಟೋಗಳು ವೈರಲ್​..!

First published: