ಕೊರೊನಾ (Corona) ಸಮಯದಲ್ಲಿ ನೆಲ ಕಚ್ಚಿದ್ದ ಚಿತ್ರೋದ್ಯಮ (Film Induastry) ಸದ್ಯ ಚೇತರಿಸಿಕೊಳ್ಳುತ್ತಿದೆ. ಸರಿ ಸುಮಾರು 2 ವರ್ಷಗಳ ಕಾಲ ಬಿಕೋ ಎನ್ನುತ್ತಿದ್ದ ಚಿತ್ರಮಂದಿರಗಳು (Theater) ಸ್ವಲ್ಪ ಜನರಿಂದ ತುಂಬಿತ್ತಿವೆ. ಅದರಲ್ಲೂ ದಕ್ಷಿಣ ಭಾರತದ (South India) ಚಿತ್ರಗಳು ಭಾರತಿಯ ಚಿತ್ರರಂಗದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿವೆ ಎಂದರೆ ತಪ್ಪಾಗಲಾರದು. ಪುಷ್ಪಾ, ಆರ್ಆರ್ಆರ್ (RRR), ಕೆಜಿಎಫ್ 2 (KGF 2) ಚಿತ್ರರಂಗದ ದಿಕ್ಕನ್ನು ಬದಲಾಯಿಸಿದೆ ಎನ್ನಬಹುದು. ಸುಮಾರು 1 ದಿನಗಳಿಗೂ ಹೆಚ್ಚು ಕಾಲ ಚಿತ್ರಮಂದಿರ ಫುಲ್ ಇದೆ ಎನ್ನುವ ಬೋರ್ಡ್ ನೋಡದೇ, ಟಿಕೆಟ್ ಸಿಗುತ್ತಿಲ್ಲ ಎನ್ನುವ ಮಾತು ಕೇಳದೇ ಅದೆಷ್ಟೋ ಕಾಲವಾಗಿತ್ತು. ಆದರೆ ಕಳೆದ ತಿಂಗಳುಗಳಲ್ಲಿ ಅವೆಲ್ಲ ಬದಲಾಗಿ ಜನ ಚಿತ್ರಗಳನ್ನು ನೋಡಲು ಕಾತರದಿಂದ ಕಾದಿದ್ದರು. ಮತ್ತೆ ಚಿತ್ರರಂಗ ಚೇತರಿಸಿಕೊಂಡಿತು ಎಂದುಕೊಳ್ಳುತ್ತಿರುವಾಗಲೇ, ಅದೇ ರಾಗ, ಅದೇ ಹಾಡು ಎನ್ನುವ ಸ್ಥಿತಿ ಸ್ಯಾಂಡಲ್ವುಡ್ದಾಗಿದೆ.
ಕೆಲ ಚಿತ್ರಗಳನ್ನು ಸೂಪರ್ ಹಿಟ್ ಮಾಡಿದ ಪ್ರೇಕ್ಷಕ ಇದೀಗ ಮತ್ತೆ ಚಿತ್ರಮಂದಿರದ ಕಡೆ ಮುಖ ಹಾಕುತ್ತಿಲ್ಲ. ಇದು ನಿರ್ದೇಶಕರು ಹಾಗೂ ನಿರ್ಮಾಪಕರ ತಲೆನೋವಿಗೆ ಕಾರಣವಾಗಿದೆ. ಸಾಲು ಸಾಲು ಚಿತ್ರಗಳು ಬಿಡುಗಡೆಯಾಗಿದ್ದರೂ ಸಹ ಜನರೂ ಮಾತ್ರ ಚಿತ್ರಮಂದಿರದ ಕಡೆ ಸುಳಿಯುತ್ತಿಲ್ಲ.
ಹೌದು, ಕೆಲ ಮಾಹಿತಿಗಳ ಪ್ರಕಾರ ಕೆಜಿಎಫ್ 2 ನಂತರ ಸ್ಯಾಂಡಲ್ವುಡ್ನಲ್ಲಿ ಸರಿ ಸುಮಾರು 30 ಸಿನಿಮಾಗಳು ಬಿಡುಗಡೆಯಾಗಿದೆ. ಆದರೆ ಅವುಗಳಲ್ಲಿ ಯಾವುದು ಕಲೆಕ್ಷನ್ ಚೆನ್ನಾಗಿ ಮಾಡಿದೆ, ಯಾವ ಚಿತ್ರ ಪ್ರೇಕ್ಷಕನಿಗೆ ಇಷ್ಟವಾಗಿದೆ ಎಂದು ಕೇಳಿದರೆ ಯಾವುದೂ ಇಲ್ಲ. 30ರಲ್ಲಿ ಎಷ್ಟು ಚಿತ್ರ ಸಕ್ಸಸ್ ಎಂಬ ಪ್ರಶ್ನೆಗೆ ಉತ್ತರ ಸೊನ್ನೆ ಎಂದು ನಿಜಕ್ಕೂ ಬೇಸರದಿಂದ ಹೇಳಬೇಕಾಗಿದೆ.
ಇದನ್ನೂ ಓದಿ: ಕಿಚ್ಚನಿಗಾಗಿ ಹಿಂದೆ ಸರಿದ ಬಾಲಿವುಡ್ ಸಿಂಗಂ - ಜುಲೈ 28ಕ್ಕಿಲ್ಲ ಅಜಯ್ ದೇವಗನ್ ಸಿನಿಮಾ ರಿಲೀಸ್
ಇನ್ನು ಕಳೆದ ವಾರ ಸರಿ ಸುಮಾರು ಒಂದು ಡಜನ್ ಚಿತ್ರಗಳು ತೆರೆಕಂಡಿವೆ, ಆದರೆಅ ದರಲ್ಲಿ ಯಾವ ಚಿತ್ರವೂ ಯಶಸ್ಸು ಕಂಡಿಲ್ಲ. ಯಶಸ್ಸಿನ ಮಾತು ಬದಿಗಿರಲಿ, ಮೊದಲ ಶೋನಲ್ಲಿಯೆ ಜನರ ಬೆರಳೆಣಿಕೆಯಷ್ಟಿದ್ದರು. ಕೆಲವೊಂದು ಚಿತ್ರಗಳ ಎರಡನೆ ಶೋ ನಡೆದೆ ಇಲ್ಲ ಎನ್ನುತ್ತಿವೆ ಚಿತ್ರಮಂದಿರದ ಮೂಲಗಳು. ಹೌದು, ಒಳ್ಳೆಯ ಕತೆ ಇರುವ ಚಿತ್ರಗಳೇನೋ ಬಿಡಿಗಡೆಯಾಗುತ್ತಿದೆ ಆದರೆ ಅದಕ್ಕೆ ಯಶಸ್ಸು ಯಾಕೆ ಸಿಗುತ್ತಿಲ್ಲ ಪ್ರಶ್ನೆಗೆ ಉತ್ತರ ಹುಡುಕಿದರೆ ಅದು ಹಲವಾರು.
ಹಲವಾರು ಕಡೆ ಶೋ ಕ್ಯಾನ್ಸಲ್
ಸದ್ಯ ಕಳೆದ ಒಂದು ವಾರದಿಂದ ಹಲವಾರು ಚಿತ್ರಗಳ ಶೋ ಕ್ಯಾನ್ಸಲ್ ಆಗಿದೆ. ಕೇವಲ 5 ಮಂದಿಯೂ ಇಲ್ಲದೇ ಶೋ ಕ್ಯಾನ್ಸಲ್ ಮಾಡಿದ್ದೇವೆ ಎಂದು ಚಿತ್ರಮಂದಿರದ ಮಾಲೀಕರು ತಿಳಿಸಿದ್ದಾರೆ. ಇನ್ನು ಜನರು ಚಿತ್ರಮಂದಿರದತ್ತ ಬರದಿರಲು ಮತ್ತೊಂದು ಕಾರಣ ಬೆಲೆ ಹೆಚ್ಚಳ ಎನ್ನಲಾಗುತ್ತಿದೆ. ಕೊರೊನಾ ನಂತರ ನಷ್ಟದಲ್ಲಿದ್ದ ಚಿತ್ರಮಂದಿರಗಳು ಬೆಲೆ ಏರಿಕೆ ಮಾಡಿದೆ. ಇದು ಜನರಿಗೆ ಕಷ್ಟವಾಗುತ್ತಿದೆ. ಪ್ರತಿಯೊಬ್ಬ ಜನಸಾಮಾನ್ಯನೂ ಹೆಚ್ಚು ಹಣ ನೀಡಿ ಟಿಕೆಟ್ ಪಡೆದು ಸಿನಿಮಾ ನೊಡುವ ಶಕ್ತಿ ಹೊಂದಿರುವುದಿಲ್ಲ. ಹಾಗಾಗಿ ಜನರು ಚಿತ್ರಮಂದಿರಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಒಂದು ಚಿತ್ರಕ್ಕೆ ಒಮ್ಮೆ 500ರೂ ಕೊಟ್ಟು ನೋಡಬಹುದು. ಆದರೆ ವಾರ ವಾರ ಅದೇ ಬೆಲೆಯನ್ನು ನೀಡಲು ಯಾರಿಗೂ ಸಾಧ್ಯವಿಲ್ಲ ಎಂಬುದು ವಾದ.
ಇದನ್ನೂ ಓದಿ: ಸಿನಿಮಾದತ್ತ ಮುಖ ಮಾಡಿದ ಕರ್ನಾಟಕದ ಸಿಂಗಂ, ಒಂದೇ ಒಂದು ರೂಪಾಯಿ ಸಂಭಾವನೆ ಪಡೆದ ಅಣ್ಣಾಮಲೈ
ಕಳಪೆ ಚಿತ್ರಕಥೆಗಳು
ಇನ್ನೊಂದು ಮುಖ್ಯ ಕಾರಣ ಎಂದರೆ ಎಲ್ಲಾ ಚಿತ್ರಗಳೂ ನಿರೀಕ್ಷೆಯಂತೆ ಚೆನ್ನಾಗಿ ಇರುವುದಿಲ್ಲ. ಕೆಲವೊಂದು ಚಿತ್ರಗಳನ್ನು ಹತ್ತು ನಿಮಿಷ ಸಹ ನೋಡಲಾಗುವುದಿಲ್ಲ ಎಂಬ ಅಪವಾದವಿದೆ. ಹಾಗಾಗಿ ಸುಮ್ಮನೆ ದುಡ್ಡು ಏಕೆ ಹಾಳು ಮಾಡುವುದು ಎಂಬುದು ಜನರ ಅಭಿಪ್ರಾಯ. ಅಲ್ಲದೇ ಕೆಜಿಎಫ್ 2 ನಂತಹ ಅದ್ಬುತ ಹಾಗೂ ಸ್ಟಾರ್ ನಟರ ಚಿತ್ರ ನೋಡಿದ ಮೇಲೆ ಜನ ಅದೇ ಗುಂಗಲ್ಲಿ ಇರುತ್ತಾರೆ. ಅದರಿಂದ ಹೊರಬರಲು ಸಮಯಬೇಕು. ಹಾಗೆಯೇ ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕು ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ