HOME » NEWS » Entertainment » FILM SHOOTING STARTED IN KANTEERAVA STUDIO IN BANGLORE AFTER LOCKDOWN HTV SESR

Unlock 2 ಬಳಿಕ ಶೂಟಿಂಗ್‌ಗೆ ಮರಳಿದ ಚಿತ್ರತಂಡಗಳು; ಕಂಠೀರವ ಸ್ಟುಡಿಯೋದಲ್ಲಿ ಕಲಾವಿದರ ಕಲರವ

. ಕಳೆದ ಎರಡು ತಿಂಗಳಿನಿಂದ ಸಿನಿಮಾ, ಸೀರಿಯಲ್ ಹೀಗೆ ಯಾವುದೇ ಚಿತ್ರೀಕರಣ ಇಲ್ಲದೇ ಬಿಕೋ ಎನ್ನುತ್ತಿದ್ದ ಕಂಠೀರವ ಸ್ಟುಡಿಯೋಗೆ ಈಗ ಮತ್ತೆ ಮರುಜೀವ ದೊರೆತಿದೆ.

news18-kannada
Updated:June 23, 2021, 6:32 PM IST
Unlock 2 ಬಳಿಕ ಶೂಟಿಂಗ್‌ಗೆ ಮರಳಿದ ಚಿತ್ರತಂಡಗಳು; ಕಂಠೀರವ ಸ್ಟುಡಿಯೋದಲ್ಲಿ ಕಲಾವಿದರ ಕಲರವ
. ಕಳೆದ ಎರಡು ತಿಂಗಳಿನಿಂದ ಸಿನಿಮಾ, ಸೀರಿಯಲ್ ಹೀಗೆ ಯಾವುದೇ ಚಿತ್ರೀಕರಣ ಇಲ್ಲದೇ ಬಿಕೋ ಎನ್ನುತ್ತಿದ್ದ ಕಂಠೀರವ ಸ್ಟುಡಿಯೋಗೆ ಈಗ ಮತ್ತೆ ಮರುಜೀವ ದೊರೆತಿದೆ.
  • Share this:
ಕಳೆದ ಎರಡು ತಿಂಗಳಿನಿಂದ ಎಲ್ಲ ಕ್ಷೇತ್ರಗಳಂತೆ ಚಿತ್ರರಂಗವೂ ಸಂಕಷ್ಟಕ್ಕೀಡಾಗಿತ್ತು. ಥಿಯೇಟರ್‌ಗಳು ಮಾತ್ರವಲ್ಲ ಸಿನಿಮಾ ಶೂಟಿಂಗ್ ಕೂಡ ಬಂದ್ ಆಗಿದ್ದ ಕಾರಣ, ಕಲಾವಿದರು, ತಂತ್ರಜ್ಞರು, ಕಾರ್ಮಿಕರು, ಥಿಯೇಟರ್ ಸಿಬ್ಬಂದಿ, ಸ್ಟುಡಿಯೋ ಸಿಬ್ಬಂದಿ ಹೀಗೆ ಚಿತ್ರರಂಗವನ್ನೇ ನಂಬಿಕೊಂಡಿದ್ದ ಸಾವಿರಾರು ಮಂದಿ ಸಮಸ್ಯೆಗೆ ಸಿಲುಕಿದ್ದರು. ಆದರೆ ಈಗ ಅನ್‌ಲಾಕ್ ೨ನಲ್ಲಿ ರಾಜ್ಯ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಅದಕ್ಕಾಗಿಯೇ ಕಾತರದಿಂದ ಕಾಯುತ್ತಿದ್ದ ಸಿನಿಮಾ ಹಾಗೂ ಸೀರಿಯಲ್ ತಂಡಗಳು ಕಂಠೀರವಾ ಸ್ಟುಡಿಯೋಗೆ ಲಗ್ಗೆ ಹಾಕಿವೆ.

ಹೌದು, ನಗರದ ಪ್ರತಿಷ್ಠಿತ ಕಂಠೀರವ ಸ್ಟುಡಿಯೋ ಮತ್ತೆ ಕಳೆಗಟ್ಟಿದೆ. ಕಳೆದ ಎರಡು ತಿಂಗಳಿನಿಂದ ಸಿನಿಮಾ, ಸೀರಿಯಲ್ ಹೀಗೆ ಯಾವುದೇ ಚಿತ್ರೀಕರಣ ಇಲ್ಲದೇ ಬಿಕೋ ಎನ್ನುತ್ತಿದ್ದ ಕಂಠೀರವ ಸ್ಟುಡಿಯೋಗೆ ಈಗ ಮತ್ತೆ ಮರುಜೀವ ದೊರೆತಿದೆ. ಅನ್‌ಲಾಕ್ ೨ನಲ್ಲಿ ರಾಜ್ಯ ಸರ್ಕಾರ ಚಿತ್ರೀಕರಣಕ್ಕೆ ಅವಕಾಶ ನೀಡುತ್ತಲೇ, ಒಂದಲ್ಲಾ ಎರಡಲ್ಲಾ ಮೂರು ಸೀರಿಯಲ್‌ಗಳು ಹಾಗೂ ಒಂದು ಸಿನಿಮಾ ಚಿತ್ರೀಕರಣ ಸದ್ಯ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಆ ಮೂಲಕ ಎರಡನೇ ಅಲೆಯ ಕೊರೊನಾ ಲಾಕ್‌ಡೌನ್ ಅನ್‌ಲಾಕ್ ಆದ ಬಳಿಕ ಶೂಟಿಂಗ್ ಸ್ಪಾಟ್‌ಗೆ ಮರಳಿದ ಹೆಗ್ಗಳಿಕೆಗೆ 'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರ ಪಾತ್ರವಾಗಿದೆ.'ರಾಮಾ ರಾಮಾ ರೇ', 'ಒಂದಲ್ಲಾ ಎರಡಲ್ಲಾ' ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ 'ಮ್ಯಾನ್ ಆಫ್ ದಿ ಮ್ಯಾಚ್'. ಕೇವಲ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದರೂ, ಅವರಿಗೆ ಎರಡು ರಾಜ್ಯ ಪ್ರಶಸ್ತಿ ಹಾಗೂ ಒಂದು ರಾಷ್ಟçಪ್ರಶಸ್ತಿ ಕೂಡ ದೊರೆತಿರುವುದು ವಿಶೇಷ. ಹೀಗಾಗಿಯೇ ಸತ್ಯಪ್ರಕಾಶ್ ಅವರ ಸಿನಿಮಾ ಅಂದರೆ ಚಿತ್ರರಂಗದಲ್ಲಿ ಒಂದು ಕುತೂಹಲ ಇದ್ದೇ ಇದೆ. ಆದರೆ 'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರದ ಮೂಲಕ ಅವರು ಇದೇ ಮೊದಲ ಬಾರಿಗೆ ಕಮರ್ಷಿಯಲ್ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಒಂದೇ ದಿನದಲ್ಲಿ ನಡೆಯುವ ಘಟನೆಗಳು, ಒಂದೊಂದು ಪಾತ್ರವೂ ಈಗಿನ ಸಮಾಜದ ಆಗು ಹೋಗುಗಳ ಬಗ್ಗೆ ತಿಳಿಸುತ್ತದೆ.

ಇದನ್ನು ಓದಿ: ಮುಖ ಮುಚ್ಕೊಳಿ, ಲಸಿಕೆ ಚುಚ್ಕೊಳಿ.. ಕೊರೊನಾ ಜಾಗೃತಿಯ ಱಪ್ ಸಾಂಗ್​ಗೆ ಕೇಳುಗರು ಫಿದಾ

'ಮ್ಯಾನ್ ಆಫ್ ದಿ ಮ್ಯಾಚ್'‌ನಲ್ಲಿ 'ರಾಮಾ ರಾಮಾ ರೇ' ಚಿತ್ರದಲ್ಲಿ ನಟಿಸಿದ್ದ ನಟರಾಜ್, ಧರ್ಮಣ್ಣ ಕಡೂರ್, ಶ್ರೀಧರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಮಯೂರಿ ನಾಯಕಿಯಾಗಿದ್ದಾರೆ. ಮಾರ್ಚ್ ಕೊನೆಯಲ್ಲಿ ಸೆಟ್ಟೇರಿದ್ದ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರ ಏಪ್ರಿಲ್ ೧ರಿಂದ ಚಿತ್ರೀಕರಣ ಪ್ರಾರಂಭಿಸಿತ್ತು. ಇನ್ನೇನು ನಾಲ್ಕು ದಿನಗಳಲ್ಲಿ ಕುಂಬಳಕಾಯಿ ಹೊಡೆಯಬೇಕು ಅನ್ನುವಷ್ಟರಲ್ಲಿ ಚಿತ್ರತಂಡಕ್ಕೆ ಕೊರೊನಾ ಲಾಕ್‌ಡೌನ್ ಬೆಂಬಿಡದೇ ಕಾಡಿತ್ತು. ಚಿತ್ರೀಕರಣದ ಕೊನೆಯ ಹಂತದಲ್ಲಿ ಹೀಗಾಯಿತಲ್ಲಾ ಅಂತ ನಿರ್ಮಾಪಕರೂ ತಲೆಬಿಸಿ ಮಾಡಿಕೊಂಡಿದ್ದರು. ಆದರೆ ಈಗ ಎಲ್ಲರು ಮತ್ತೆ ಶೂಟಿಂಗ್ ಸ್ಪಾಟ್‌ಗೆ ಮರಳಿದ ಸಂಭ್ರಮದಲ್ಲಿದ್ದಾರೆ.

ಒಟ್ಟಾರೆ ಸಿನಿಮಾ ಚಿತ್ರೀಕರಣಕ್ಕೆ ಮತ್ತೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ಮಂದಿಯೇನೋ ಖುಷಿಯಾಗಿದ್ದಾರೆ. ಆದರೆ ಆದಷ್ಟು ಬೇಗ ಕೊರೊನಾ ಪ್ರಕರಣಗಳು ಕಡಿಮೆಯಾಗಿ ಥಿಯೇಟರ್‌ಗಳೂ ಬಾಗಿಲು ತೆರೆಯಲು ಅವಕಾಶ ಸಿಕ್ಕು ಮತ್ತೆ ಹೌಸ್‌ಫುಲ್ ಬೋರ್ಡ್ ಬೀಳಲಿ ಅನ್ನೋ ನಿರೀಕ್ಷೆಯಲ್ಲಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 23, 2021, 6:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories