• Home
  • »
  • News
  • »
  • entertainment
  • »
  • Kantara Movie: ಕೊನೆಯ 25 ನಿಮಿಷ ಅದ್ಭುತ, ಕಣ್ಣಲ್ಲಿ ನೀರು ಬಂತು! ಕಾಂತಾರಕ್ಕೆ ಸುನೀಲ್ ಶೆಟ್ಟಿ ಮೆಚ್ಚುಗೆ

Kantara Movie: ಕೊನೆಯ 25 ನಿಮಿಷ ಅದ್ಭುತ, ಕಣ್ಣಲ್ಲಿ ನೀರು ಬಂತು! ಕಾಂತಾರಕ್ಕೆ ಸುನೀಲ್ ಶೆಟ್ಟಿ ಮೆಚ್ಚುಗೆ

ಕಾಂತಾರ ಮೆಚ್ಚಿದ ಸುನೀಲ್ ಶೆಟ್ಟಿ

ಕಾಂತಾರ ಮೆಚ್ಚಿದ ಸುನೀಲ್ ಶೆಟ್ಟಿ

ಬಾಲಿವುಡ್ ನಟ ಮತ್ತು ಸೆಲೆಬ್ರಿಟಿ ಸುನೀಲ್ ಶೆಟ್ಟಿ ಅವರು ಕಾಂತಾರ ಚಿತ್ರದ ಬಗ್ಗೆ ಹೇಳಿದ್ದಾರೆ. ಚಿತ್ರದ ಕೊನೆಯ 25 ನಿಮಿಷ ರೋಮಾಂಚನಗೊಳಿಸಿತು ಹಾಗೂ ಕಣ್ಣಲ್ಲಿ ನೀರು ಬಂತು. ಯಾಕಂದ್ರೆ ನಾನು ಅದೇ ಭಾಗದವನು. ಪ್ರತೀ ವರ್ಷ ಇದೇ ರೀತಿಯ ಕೋಲ ಹಾಗೂ ದೈವದ ಪೂಜೆಗೆ ತಪ್ಪದೇ ಹೋಗುತ್ತೇನೆ ಅಂತಾ ಹೇಳಿದ್ರು.

ಮುಂದೆ ಓದಿ ...
  • Share this:

    ನಟ ರಿಷಬ್ ಶೆಟ್ಟಿ (Rishabh Shetty), ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಚಿತ್ರವು (Kantara Movie) 2022 ರ ಅತ್ಯಂತ ಬಿಗ್ ಹಿಟ್ (Big Hit) ಸಿನಿಮಾಗಳಲ್ಲಿ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಪ್ತಮಿ ಗೌಡ ನಟಿಸಿರುವ ಸಿನಿಮಾ ಆರಂಭದಲ್ಲಿ ಕನ್ನಡದಲ್ಲಿ (Kannada) ಬಿಡುಗಡೆಯಾಯಿತು. ಪಾಸಿಟಿವ್ ರೆಸ್ಪಾನ್ಸ್ ಬಂದ ನಂತರ ಕಾಂತಾರ ನಿರ್ಮಾಪಕರು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕನ್ನಡದ ಕಾಂತಾರ ಸಿನಿಮಾ ಎಲ್ಲೆಡೆ ಹೊಸ ಅಲೆ ಸೃಷ್ಟಿ ಮಾಡಿದೆ. ಹಲವಾರು ಭಾಷೆಗಳ ಚಿತ್ರ ನಟರು ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


    ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಾಲಿವುಡ್‌ ನಟ ಸುನೀಲ್ ಶೆಟ್ಟಿ


    ಬಾಲಿವುಡ್ ನಟ ಮತ್ತು ಸೆಲೆಬ್ರಿಟಿ ಸುನೀಲ್ ಶೆಟ್ಟಿ, ತಮ್ಮ ಮುಂದಿನ ವೆಬ್ ಸರಣಿ ಧಾರಾವಿ ಬ್ಯಾಂಕ್ ಕುರಿತು ಡಿಎನ್‌ಎ ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಅವರು ಕಾಂತಾರ ಚಿತ್ರದ ಬಗ್ಗೆ ಹೇಳಿದ್ದಾರೆ. ಕಾಂತಾರ ಚಿತ್ರ ವೀಕ್ಷಣೆ ಈಗಲೂ ಹೌಸ್ ಫುಲ್ ಇದೆ. ಕಾಂತಾರ ಪ್ರದರ್ಶನ ಜನರಿಂದ ತುಂಬಿದೆ ಎಂದು ಹೇಳಿದ್ದಾರೆ.


    ವಿವೇಕ್  ಓಬೆರಾಯ್ ಹಾಗೂ ಸುನೀಲ್ ಶೆಟ್ಟಿ, ಧಾರಾವಿ ಬ್ಯಾಂಕ್ ವೆಬ್ ಸರಣಿ ಕುರಿತ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾಂತಾರ ಚಿತ್ರದ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಇದಕ್ಕೆ ಉತ್ತರಿಸಿದ ನಟ ಸುನೀಲ್ ಶೆಟ್ಟಿ ಕಳೆದ ರಾತ್ರಿಯಷ್ಟೇ ನಾನು ಕುಟುಂಬ ಸಮೇತ ಕಾಂತಾರ ಚಿತ್ರ ನೋಡಿದ್ದೇನೆ.




    ಕಾಂತಾರ ಚಿತ್ರ ನೋಡಲು ಶೇಕಡಾ 60ಕ್ಕೂ ಹೆಚ್ಚು ಪ್ರೇಕ್ಷಕರು ಬಂದಿದ್ದರು. ಅದೂ ಸಹ ಪಿವಿಆರ್ ಚಿತ್ರಮಂದಿರದಲ್ಲಿ ಎಂದು ಹೇಳಿದ್ರು. ಇದನ್ನು ಹೇಳುವಾಗ ಸುನೀಲ್ ಶೆಟ್ಟಿ ಗಂಭೀರವಾಗಿ ಪಿವಿಆರ್ ರೀತಿಯ ಮಲ್ಟಿಪ್ಲೆಕ್ಸ್‌ನಲ್ಲಿ ಕಾಂತಾರ ವೀಕ್ಷಿಸಲು ಜನ ಹರಿದು ಬರ್ತಿದ್ದಾರೆ ಎಂದು ಹೇಳಿದ್ರು.


    ಕೊನೆಯ ಇಪ್ಪತ್ತೈದು ನಿಮಿಷ ರೋಮಾಂಚನವಾಯ್ತು


    ಸುನೀಲ್ ಶೆಟ್ಟಿ, ಚಿತ್ರದ ಕೊನೆಯ 25 ನಿಮಿಷ ರೋಮಾಂಚನಗೊಳಿಸಿತು ಹಾಗೂ ಕಣ್ಣಲ್ಲಿ ನೀರು ಬಂತು. ಯಾಕಂದ್ರೆ ನಾನು ಅದೇ ಭಾಗದವನು. ಪ್ರತೀ ವರ್ಷ ಇದೇ ರೀತಿಯ ಕೋಲ ಹಾಗೂ ದೈವದ ಪೂಜೆಗೆ ತಪ್ಪದೇ ಹೋಗುತ್ತೇನೆ ಅಂತಾ ಹೇಳಿದ್ರು. ಜೊತೆಗೆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ರಿಷಬ್ ಶೆಟ್ಟಿಯನ್ನು ಹೊಗಳಿದರು.  ಕೊಂಡಾಡಿದರು.


    ಕಂಟೆಂಟ್ ಈಸ್ ದಿ ಕಿಂಗ್


    ಕಂಟೆಂಟ್ ಇದ್ದರೆ ಮಾತ್ರ ಈ ರೀತಿ ಚಿತ್ರ ಓಡಲು ಮತ್ತು ನಿರ್ಮಾಣ ಸಾಧ್ಯ, ಕಂಟೆಂಟ್ ಈಸ್ ದಿ ಕಿಂಗ್ ಎಂದು ಸುನೀಲ್ ಶೆಟ್ಟಿ ಹೇಳಿದ್ರು. ಜತೆಯಲ್ಲಿದ್ದ ವಿವೇಕ್ ಒಬಿರಾಯ್ ಕೂಡ ಸಿನಿಮಾ ಹೊಗಳಿದರು.


    ಕಾಂತಾರ ಅಲೆಗೆ ವಿವಿಧ ಭಾಷೆಗಳ ನಟರ ಮೆಚ್ಚುಗೆ


    ದೇಶಾದ್ಯಂತ ಬೇರೆ ಬೇರೆ ಸಿನಿ ಇಂಡಸ್ಟ್ರಿಯಲ್ಲಿ ಸಿನಿಮಾ ರಿಲೀಸ್ ಆಗಿದ್ದು ವಿಶೇಷವಾಗಿ ಹಿಂದಿ ಹಾಗೂ ತೆಲುಗಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಕ್ರೇಜ್ ಕಮ್ಮಿಯಾಗಿಲ್ಲ. ಕಾಂತಾರ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಪ್ರಶಂಸೆಗಳು ವ್ಯಕ್ತ ಆಗುತ್ತಿವೆ. ಇಂದಿಗೂ ಹಲವು ನಗರಗಲ್ಲಿ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ.


    ಇದನ್ನೂ ಓದಿ: ಫ್ರಂಟ್ಲೈನ್​​ ಮ್ಯಾಗಜಿನ್ ಮುಖಪುಟದಲ್ಲಿ ಕಾಂತಾರ!


    ಸಿನಿ ರಸಿಕರು ಮಾತ್ರವಲ್ಲದೇ ಸ್ಟಾರ್‌ ನಟರೂ ಸಹ ಕಾಂತಾರ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಚಿತ್ರವನ್ನು ತೆಲುಗು ನಟ ಪ್ರಭಾಸ್ ಕನ್ನಡದಲ್ಲಿ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ನೋಡಿದ್ದರು. ಇದು ಭಾರೀ ಸದ್ದು ಮಾಡಿತ್ತು. ಇತ್ತ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಸ್ವತಃ ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ಚಿತ್ರದ ಬಗ್ಗೆ ಗುಣಗಾನ ಮಾಡಿದ್ದರು. ಹಾಗೂ ರಿಷಬ್ ಶೆಟ್ಟಿ ಕೊರಳಿಗೆ ಚಿನ್ನದ ಸರ ಹಾಕಿದ್ದರು.

    Published by:renukadariyannavar
    First published: