ಸೆಕೆಂಡ್​​ ಟೈಂ ಗಾರ್ಡನ್​ ಸಿಟಿ ಬೆಂಗಳೂರಿನಲ್ಲಿ ‘ಫಿಲ್ಮ್​ಫೇರ್​ ಅವಾರ್ಡ್ಸ್​ ಸೌತ್​’ ಸಂಭ್ರಮ!

ಎರಡನೇ ಬಾರಿಗೆ ಗಾರ್ಡನ್​ ಸಿಟಿ ಬೆಂಗಳೂರಿನಲ್ಲಿ ‘ಫಿಲ್ಮ್​ಫೇರ್​ ಅವಾರ್ಡ್ಸ್​ ಸೌತ್​’ (Film fare Awards South) ಸಮಾರಂಭವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಜವಾಬ್ದಾರಿಯನ್ನು ಕಮರ್​ ಫಿಲ್ಮ್​ ಫ್ಯಾಕ್ಟರಿ (Kamar Film Factory) ಸಂಸ್ಥೆ ವಹಿಸಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಪೂಜಾ ಹೆಗ್ಡೆ, ತಾರಾ

ಸುದ್ದಿಗೋಷ್ಠಿಯಲ್ಲಿ ಪೂಜಾ ಹೆಗ್ಡೆ, ತಾರಾ

  • Share this:
ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಓದಿ ಮಾರ್ಕ್ಸ್​ ತೆಗೆದರೆ, ಶಿಕ್ಷಕರು, ಪೋಷಕರು ಅದನ್ನು ಗುರುತಿಸಿ ಪ್ರಶಂಸೆ ನೀಡಿತ್ತಾರೆ.  ಕೆಲಸದಲ್ಲಿ ನೀವು ಚೆನ್ನಾಗಿ ಮಾಡಿದರೆ ನಿಮ್ಮ ಬಾಸ್​ ಬೇಸ್​ ಅನ್ನುತ್ತಾರೆ. ಹಾಗೇ ಸಿನಿಮಾ ರಂಗದಲ್ಲೂ ಎಲ್ಲಾ ವರ್ಗಕ್ಕೂ ಪ್ರಶಸ್ತಿ ನೀಡಿ ಪ್ರಶಂಸೆ ಕೊಡುವ ಕೆಲಸವನ್ನು ಫಿಲ್ಮ್​ಫೇರ್​ ಹೆಸರಿನಲ್ಲಿ 66 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. 66 ವರ್ಷಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಆಗಿತ್ತು. ಮತ್ತೆ ನಮ್ಮ ಸಿಲಿಕಾನ್​ ಸಿಟಿಯಲ್ಲೂ ಈ ರೀತಿಯ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯಬೇಕೆಂಬ ಆಸೆ ಎಲ್ಲರಿಗೂ ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಎರಡನೇ ಮೊದಲ ಬಾರಿಗೆ ಗಾರ್ಡನ್​ ಸಿಟಿ ಬೆಂಗಳೂರಿನಲ್ಲಿ ‘ಫಿಲ್ಮ್​ಫೇರ್​ ಅವಾರ್ಡ್ಸ್​ ಸೌತ್​’ (Film fare Awards South) ಸಮಾರಂಭವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಜವಾಬ್ದಾರಿಯನ್ನು ಕಮರ್​ ಫಿಲ್ಮ್​ ಫ್ಯಾಕ್ಟರಿ (Kamar Film Factory) ಸಂಸ್ಥೆ ಹೊತ್ತುಕೊಂಡಿದೆ. ಆ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde) ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಕನ್ನಡದ ಹಿರಿಯ ನಟಿ ತಾರಾ ಅನುರಾಧ, ನಟಿ ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಅದ್ದೂರಿಯಾಗಿ ಮಾಡಿ ತೋರಿಸ್ತಿನಿ ಎಂದ ಕಮರ್​​!

‘ಕಳೆದ ಎಲ್ಲ ವರ್ಷಗಳಿಗಿಂತಲೂ ಚೆನ್ನಾಗಿ ನಾನು ಈ ಸಮಾರಂಭವನ್ನು ಈ ಬಾರಿ ಬೆಂಗಳೂರಿನಲ್ಲಿ ಮಾಡಿ ತೋರಿಸುತ್ತೇನೆ. ಬಾಲಿವುಡ್​ ಮಂದಿಗೆ ಇದು ನನ್ನ ಸವಾಲು. ಇದು ನಮಗೆ ಸಿಕ್ಕಿರುವ ದೊಡ್ಡ ಅವಕಾಶ’ ಎಂದು ಕಮರ್​ ಹೇಳಿದ್ದಾರೆ. ಫಿಲ್ಮ್​ಫೇರ್​ ಸಮಾರಂಭ ತುಂಬ ಅದ್ದೂರಿಯಾಗಿ ನಡೆಯುತ್ತದೆ. ಎಲ್ಲ ಭಾಷೆಯ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಎಲ್ಲ ಭಾಷೆಯ ಚಿತ್ರರಂಗದವರು ಬೆಂಗಳೂರಿಗೆ ಬರುತ್ತಾರೆ. ಅವರಿಗೆಲ್ಲ ಯಾವುದೇ ತೊಂದೆಯಾಗದಂತೆ ನೋಡಿಕೊಳ್ಳಬೇಕು. ಇದು ಸುಲಭದ ಮಾತಲ್ಲ. ಬೆಂಗಳೂರಿನಲ್ಲಿ ಎರಡನೇ ಬಾರಿಗೆ ಈ ಅವಾರ್ಡ್​ ಫಂಕ್ಷನ್​ ಮಾಡುತ್ತಿರುವುದಕ್ಕೆ ಕಮರ್​ ಅವರಿಗೆ ಹೆಮ್ಮೆ ಇದೆ. ಹಿಂದೆಂದಿಗಿಂತಲೂ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನು ಓದಿ : ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ರಿಸ್ಟಾರ್ಟ್​: ಕಣ್ಣೀರಿಡುತ್ತಲೇ ಕೆಲ್ಸ ಮಾಡ್ತಿರೋ ಚಿತ್ರತಂಡ!

ಶುಭ ಕೋರಿದ ನಟಿ ತಾರಾ!

ಫಿಲ್ಮ್​ಫೇರ್​ ಅವಾರ್ಡ್ಸ್ ಕಾರ್ಯಕ್ರಮ ಅಂದರೇ ಅದು ಹಬ್ಬ. ಎರಡನೇ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವುದು ಖುಷಿಯ ವಿಚಾರ. ಇದಕ್ಕಾಗಿ ಕಮರ್​ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮತ್ತೆ ಮತ್ತೆ ನಮ್ಮ ಬೆಂಗಳೂರಿನಲ್ಲೇ ಈ ಕಾರ್ಯಕ್ರಮ ನಡೆಯುವಂತೆ ಆಗಲಿ ಎಂದು ತಾರಾ ಅನುರಾಧ ಶುಭ ಕೋರಿದ್ದಾರೆ. ಬೆಂಗಳೂರಿಗರಿಗೂ ಈ ರೀತಿಯ ದೊಡ್ಡ ಕಾರ್ಯಕ್ರಮ ನೋಡುವ ಆಸೆ ಇದೆ. ಫಾರ್​ ದಿ ಸೆಕೆಂಡ್​​​ ಟೈಮ್​ ಇಲ್ಲಿ ನಡೀತಿದೆ. ಸಾಕಷ್ಟು ಖುಷಿಯಾಗಿದೆ. ದೊಡ್ಡ ದೊಡ್ಡ ಸ್ಟಾರ್​​ಗಳೆಲ್ಲ ಬೆಂಗಳೂರಿನಲ್ಲಿ ಒಟ್ಟಿಗೆ ನೋಡುವುದೇ ಖುಷಿ.

ಇದನ್ನು ಓದಿ : `ಅಖಂಡ’ ಸಿನಿಮಾ ನೋಡುತ್ತಲೇ ಚಿತ್ರಮಂದಿರದಲ್ಲಿ ಪ್ರಾಣ ಬಿಟ್ಟ ಬಾಲಯ್ಯ ಫ್ಯಾನ್​!

ಸಂತಸ ವ್ಯಕ್ತಪಡಿಸಿದ ನಟಿ ಪೂಜಾ ಹೆಗ್ಡೆ

‘ಚಿಕ್ಕವಳಿದ್ದಾಗ ನಾನು ಫಿಲ್ಮ್​ಫೇರ್​ ಕಾರ್ಯಕ್ರಮ ನೋಡಲು ಫ್ಯಾಮಿಲಿ ಜತೆ ಹೋಗಿದ್ದೆ. ಆದರೆ ನಮ್ಮ ಬಳಿ ಪಾಸ್​ ಇರಲಿಲ್ಲ. ನನ್ನ ಸ್ನೇಹಿತರ ಪೋಷಕರ ಜತೆ ನುಸುಳಿಕೊಂಡು ಹೋಗುತ್ತಿದೆ. ಇಂದು ನಾನು ಫಿಲ್ಮ್​ಫೇರ್​ ಕಾರ್ಯಕ್ರಮದ ಭಾಗವಾಗುತ್ತೇನೆ ಎಂದು ಕನಸಿನಲ್ಲಿಯೂ ಆಗ ಊಹಿಸಿರಲಿಲ್ಲ. ಇದರಲ್ಲಿ ಭಾಗಿ ಆಗುತ್ತಿರುವುದು ಖುಷಿ ನೀಡಿದೆ. ಎಂದು ನಟಿ ಪೂಜಾ ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದಾರೆ.
Published by:Vasudeva M
First published: