• Home
  • »
  • News
  • »
  • entertainment
  • »
  • Santhosh Ananddram: ನಾನೂ ಅಪ್ಪು ಪ್ರತಿನಿಧಿ ಎಂದ ಡೈರೆಕ್ಟರ್ ಸಂತೋಷ್ ಆನಂದರಾಮ್

Santhosh Ananddram: ನಾನೂ ಅಪ್ಪು ಪ್ರತಿನಿಧಿ ಎಂದ ಡೈರೆಕ್ಟರ್ ಸಂತೋಷ್ ಆನಂದರಾಮ್

ನಾನೂ ಅಪ್ಪು ಪ್ರತಿನಿಧಿ ಎಂದ ಡೈರೆಕ್ಟರ್ ಸಂತೋಷ್

ನಾನೂ ಅಪ್ಪು ಪ್ರತಿನಿಧಿ ಎಂದ ಡೈರೆಕ್ಟರ್ ಸಂತೋಷ್

ಪುನೀತ್ ರಾಜಕುಮಾರ್ ಜೊತೆಗೆ ನಾನು ಮಾಡಿರೋದು ಕೇವಲ ಎರಡೇ ಸಿನಿಮಾಗಳು. ಆದರೆ 8 ವರ್ಷ ಇವರ ಜೊತೆಗಿದ್ದ ಖುಷಿ ಇದೆ. ಈ 8 ವರ್ಷದಲ್ಲಿ ಪುನೀತ್ ರಾಜಕುಮಾರ್ ಜೊತೆಗೆ ಸಾಕಷ್ಟು ಒಡನಾಟ ಬೆಳೆದಿತ್ತು ಎಂದು ಸಂತೋಷ್ ಆನಂದರಾಮ್ ಹೇಳಿಕೊಂಡಿದ್ದಾರೆ.

  • Share this:

ಡೈರೆಕ್ಟರ್ ಸಂತೋಷ್ (Santhosh Ananddram) ಆನಂದರಾಮ್ ತಮ್ಮ ಚಿತ್ರ ಜೀವನದಲ್ಲಿ ಬಿಗ್ (Big Hit) ಹಿಟ್ ಸಿನಿಮಾಗಳನ್ನೆ ಕೊಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ (Puneeth Rajkumar) ಅವರ ಜೊತೆಗಿನ ರಾಜಕುಮಾರ ಸೂಪರ್ ಡೂಪರ್ ಹಿಟ್ ಸಿನಿಮಾ ಅಂತ ಎಲ್ಲರಿಗೂ ಗೊತ್ತಿರೋ ವಿಚಾರವೇ ಆಗಿದೆ. ಯುವರತ್ನ ಸಿನಿಮಾ ಏನು ಕಡಿಮೆನೆ, ಈ ಚಿತ್ರದ ಮೂಲಕವೂ ಅಪ್ಪು-ಆನಂದರಾಮ್ ಜೋಡಿ ಮೋಡಿ ಮಾಡಿತ್ತು. ಕೇವಲ 8 ವರ್ಷದ ಒಡನಾಟದಲ್ಲಿ ಸಂತೋಷ್ ಆನಂದರಾಮ್ ಚಿತ್ರ ಜೀವನದಲ್ಲಿ ಸಾಕಷ್ಟು ನೆನಪುಗಳನ್ನ ಬಿಟ್ಟು ಹೋಗಿದ್ದಾರೆ. ಹೀಗಿರೋವಾಗ ಅಪ್ಪು ಕಟ್ಟಕಡೆಯ ಗಂಧದ ಗುಡಿ (Gandhad Gudi) ಸಿನಿಮಾದ ಬಗ್ಗೆನೂ ಸಂತೋಷ್ ಆನಂದರಾಮ್​ ಒಂದಷ್ಟು ಮಾತನಾಡಿದ್ದಾರೆ. ನಾವು ನೀವು ಸೇರಿ ಕನ್ನಡದ ಈ ವಿಶೇಷ ಗಂಧದ ಗುಡಿ ಸಿನಿಮಾ ನೋಡೋಣ ಅಂತಲೂ ಹೇಳಿದ್ದಾರೆ. 


ಡೈರೆಕ್ಟರ್ ಸಂತೋಷ್ ಆನಂದರಾಮ್ ಕನ್ನಡ ಚಿತ್ರರಂಗ ಕಂಡ ವಿಶೇಷ ನಿರ್ದೇಶಕರೇ ಆಗಿದ್ದಾರೆ. ತಮ್ಮ ಮಿಸ್ಟರ್ ಆ್ಯಂಡ್ ಮಿಸಸ್ ಸಿನಿಮಾ ಮೂಲಕ ಜನರಿಗೆ ಬೇರೆ ರೀತಿಯ ಎಂಟರಟೈನಮೆಂಟ್ ಕೊಟ್ಟಿರೋದು ಗೊತ್ತೆ ಇದೆ.


Rajkumara Film Director Santhosh Ananddram talks about Power Star Puneeth Rajkumar
ಗಂಧದ ಗುಡಿ ಸಿನಿಮಾ ನೋಡೋಣ ಬನ್ನಿ


ನಾನೂ ಅಪ್ಪು ಪ್ರತಿನಿಧಿ ಎಂದ ಸಂತೋಷ್ ಆನಂದರಾಮ್
ಇದೇ ನಿರ್ದೇಶಕ ರಾಜಕುಮಾರ ದಂತಹ ಹೆಸರು ಇಟ್ಟುಕೊಂಡು ಎಂತಹ ಸಿನಿಮಾ ಮಾಡ್ತಾರೆ ಅನ್ನೊ ಪ್ರಶ್ನೆ ಕೂಡ ಇತ್ತು. ಆದರೆ ಸಂತೋಷ್ ಆನಂದರಾಮ್ ಅದ್ಭುತ ಚಿತ್ರವನ್ನೇ ಕೊಟ್ಟರು.


ರಾಜಕುಮಾರ ಸಿನಿಮಾ ಬಂದ್ಮೇಲೆ ಅಪ್ಪು ಮತ್ತು ಸಂತೋಷ್ ಜೋಡಿ ಮೇಲೆ ಭಾರಿ ನಿರೀಕ್ಷೆ ಕೂಡ ಹುಟ್ಟಿಕೊಂಡಿತು. ಆಗಲೇ ತಯಾರಾಗಿರೋದೇ ಯುವರತ್ನ ಸಿನಿಮಾ, ಈ ಸಿನಿಮಾ ಕೂಡ ಯುವಕರ ಮನಸನ್ನ ಕದ್ದೇ ಬಿಡ್ತು ನೋಡಿ.
ಅಪ್ಪು ಸರ್ ಜೊತೆ ನಾನು ಮಾಡಿರೊದು ಎರಡೇ ಸಿನಿಮಾಗಳು


ಇಷ್ಟೇ ನೋಡಿ, ಇದರ ಮುಂದೆ ಈಗ ಬರೀ ನೆನಪುಗಳೇ ಉಳಿದಿವೆ. ಅಪ್ಪು ಜೊತೆಗೆ ಮಾಡಿರೊ ಎರಡೇ ಎರಡು ಚಿತ್ರಗಳು ಡೈರೆಕ್ಟರ್ ಸಂತೋಷ್ ಆನಂದರಾಮ್ ಅವರಿಗೆ ಸಾಕಷ್ಟು ಅಪ್ಪು ನೆನಪುಗಳನ್ನ ಕಟ್ಟಿಕೊಟ್ಟಿದೆ.


Rajkumara Film Director Santhosh Ananddram talks about Power Star Puneeth Rajkumar
ನಾನೂ ಅಪ್ಪು ಪ್ರತಿನಿಧಿ ಎಂದು ಸಂತೋಷ್ ಆನಂದರಾಮ್


ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿಯೇ ಅಪ್ಪು ಹೊರಟು ಹೋದ ನೋವಿನಲ್ಲಿಯೇ ಎಲ್ಲರೂ ಅಪ್ಪು ಆದರ್ಶನಗಳನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ರೆಡಿ ಆಗಿದ್ದಾರೆ.


ಹೌದು, ನಾನೂ ಅಪ್ಪು ಪ್ರತಿನಿಧಿ ಅಂತಲೇ ಡೈರೆಕ್ಟರ್ ಸಂತೋಷ್ ಆನಂದರಾಮ್ ಹೇಳಿದ್ದಾರೆ. ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಇದ್ದದ್ದೇ ಹಾಗಲ್ಲವೇ? ಎಲ್ಲರ ಮನಸ್ಸಿನಲ್ಲಿಯ ಉಳಿದಿರೋ ಅಪ್ಪು ಜೊತೆಗಿನ ಒಡನಾಟದ ಒಂದಷ್ಟು ಮಾತುಗಳನ್ನ ಡೈರೆಕ್ಟರ್ ಸಂತೋಷ್ ಆನಂದರಾಮ್ ಈಗ ಹಂಚಿಕೊಂಡಿದ್ದಾರೆ.


ಗಂಧದ ಗುಡಿ ಮೂಲಕ ಸಾಕಷ್ಟು ನೆನಪು ಬಿಟ್ಟು ಹೋಗಿದ್ದಾರೆ
"ನಾನೂ ಅಪ್ಪು ಪ್ರತಿನಿಧಿ. ಹೌದು, ಪುನೀತ್ ರಾಜಕುಮಾರ್ ಜೊತೆಗೆ ನಾನು ಮಾಡಿರೋದು ಕೇವಲ ಎರಡೇ ಸಿನಿಮಾಗಳು. ಆದರೆ 8 ವರ್ಷ ಇವರ ಜೊತೆಗಿದ್ದ ಖುಷಿ ಇದೆ. ಈ 8 ವರ್ಷದಲ್ಲಿ ಪುನೀತ್ ರಾಜಕುಮಾರ್ ಜೊತೆಗೆ ಸಾಕಷ್ಟು ಒಡನಾಟ ಬೆಳೆದಿತ್ತು" ಎಂದು ಸಂತೋಷ್ ಆನಂದರಾಮ್ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Kantara-Sapthami Gowda: ಬೆಂಗ್ಳೂರು ಹುಡುಗಿಗೆ ಮೀನು ಕಟ್ ಮಾಡೋದನ್ನು ಕಲಿಸಿಬಿಟ್ರು ಶೆಟ್ರು


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಕನಸನ್ನ ಗಂಧದ ಗುಡಿ ಚಿತ್ರದಲ್ಲಿ ಬಿಟ್ಟು ಹೋಗಿದ್ದಾರೆ. ಅಪ್ಪ ಅವರ ಈ ಕನಸಿನ ಚಿತ್ರದಲ್ಲಿ ಅಪ್ಪು ನೈಜ ಜೀವನದ ಚಿತ್ರಣವೂ ಇದೆ.


ಅಪ್ಪು ಗಂಧದ ಗುಡಿ ಚಿತ್ರವನ್ನ ನಾವು ಎಲ್ಲರೂ ನೋಡೋಣ
ಅಪ್ಪು ಅವರ ಈ ಒಂದು ವಿಶೇಷ ಚಿತ್ರವನ್ನ ಎಲ್ಲರೂ ನೋಡಲೇಬೇಕು. ಅಪ್ಪು ಈ ಮೂಲಕ ಕನ್ನಡಿಗರಿಗೆ ಗಂಧದ ಗುಡಿಯ ಚಿತ್ರವನ್ನ ಕಟ್ಟಿಕೊಟ್ಟಿದ್ದಾರೆ. ಇಂತಹ ಈ ಸಿನಿಮಾ ಇದೇ 28 ರಂದು ರಿಲೀಸ್ ಆಗುತ್ತಿದ್ದರು.


ಪುನೀತ್​ ರಾಜಕುಮಾರ್ ಅವರ ಈ ಕೊನೆಯ ಸಿನಿಮಾದಲ್ಲಿ ಅಪ್ಪು ರಿಯಲ್ ಧ್ವನಿ ಇದೆ. ಅಪ್ಪು ರಿಯಲ್ ಆಗಿಯೇ ಕಾಡೊಳಗೆ ಓಡಾಡಿದ ಚಿತ್ರಣ ಇದೆ. ಇದೊಂದು ಸಿನಿಮಾ ಅಲ್ಲ. ಇದೊಂದು ಬದುಕಿನ ಅಸಲಿ ಅನುಭವವೇ ಆಗಿದೆ.


ಗಂಧದ ಗುಡಿ ಸಿನಿಮಾದಲ್ಲಿ ಅಪ್ಪು ಜೀವಂತ
ಈ ಸಿನಿಮಾ ನೋಡ್ತಾ ಹೋದ್ರೆ, ಸ್ವತಃ ಅಪ್ಪು ನಿಮ್ಮನ್ನ ಸುಂದರ ಕಾನನದೊಳಗೆ ಕರೆದುಕೊಂಡ ಅನುಭವ ಆಗುತ್ತದೆ. ಇಂತಹ ಒಂದು ಅದ್ಭುತ ಅನುಭವದ ಚಿತ್ರವನ್ನ ಎಲ್ಲರೂ ನೋಡೋಣ ಅಂತಲೇ ಅಪ್ಪು ಅಭಿಮಾನಿಯೂ ಆಗಿರೋ ಡೈರೆಕ್ಟರ್ ಸಂತೋಷ್ ಆನಂದರಾಮ್ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Simple Suni Birthday: ಸಿಂಪಲ್ ಡೈರೆಕ್ಟರ್-ನೋ ಸೆಲೆಬ್ರೇಷನ್! ಬರ್ತ್​ಡೇ ದಿನ ಶೂಟಿಂಗ್​​ನಲ್ಲಿ ಫುಲ್ ಬ್ಯುಸಿ


ಗಂಧದ ಗುಡಿ ಸಿನಿಮಾವನ್ನ ಅಮೋಘವರ್ಷ ಡೈರೆಕ್ಟ್ ಮಾಡಿದ್ದು, ಈಗಾಗಲೇ ಚಿತ್ರದ ಟೀಸರ್ ಮತ್ತು ಟ್ರೈಲರ್ ಸಾಕಷ್ಟು ಅಭಿಮಾನಿಗಳಿಗೆ ಖುಷಿ ತಂದಿದೆ. ಸಿನಿಮಾ ನೋಡಬೇಕು ಅನ್ನೋ ಹಂಬಲವನ್ನೂ ಹೆಚ್ಚಿಸಿದೆ.

First published: