Celebrity Voting: ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಬೇರೆಯವರಿಗೆ ಪ್ರೇರಣೆಯಾದ ರೀಲ್​ ಲೈಫ್​ ಸ್ಟಾರ್​ಗಳು

ಬೆಳ್ಳಿತೆರೆ ಮೇಲೆ ಮನರಂಜನೆ ನೀಡುವ ಸಿನಿಮಾ ತಾರೆಯನ್ನು ಅನೇಕ ವಿಷಯಗಳಲ್ಲಿ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರುತ್ತಾರೆ. ಅದಕ್ಕಾಗಿ ಈ ಕರ್ತವ್ಯದಿಂದಾಗಿ ಅವರು ವಂಚಿತರಾಗುವುದಿಲ್ಲ. ಈ ರೀತಿ ತಮ್ಮ ಜವಾಬ್ದಾರಿ ನಿರ್ವಹಿಸುವ ಜೊತೆಗೆ ಸಾಮಾನ್ಯ ಜನರಿಗೆ ಪ್ರೇರಣೆ ನೀಡಿದ ಸಿನಿಮಾ ತಾರೆಯರ ಚಿತ್ರಣ ಇಲ್ಲಿದೆ.

ಮತದಾನದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ ಸಿನಿ ತಾರೆಯರು

ಮತದಾನದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ ಸಿನಿ ತಾರೆಯರು

  • News18
  • Last Updated :
  • Share this:
- ಅನಿತಾ ಈ, 

ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಮತದಾನ ಮಾಡುವಂತೆ ಪ್ರತಿಯೊಬ್ಬರನ್ನು ಉತ್ತೇಜಿಸುವ ಕೆಲಸವನ್ನು ಮಾಡುವ ಸಾಮರ್ಥ್ಯ ಇರುವುದು ಸೆಲೆಬ್ರಿಟಿಗಳಿಗೆ. ಅದಕ್ಕೆ ಪ್ರತಿ ಬಾರಿ ಚುನಾವಣಾ ಆಯೋಗ ಮತದಾನ ಜಾಗೃತಿ ಕಾರ್ಯಕ್ರಮಕ್ಕೆಂದು ಸೆಲೆಬ್ರಿಟಿಗಳನ್ನು ರಾಯಭಾರಿಗಳನ್ನಾಗಿ ನೇಮಕ ಮಾಡುತ್ತದೆ.

ಇದನ್ನೂ ಓದಿ: ವಿದೇಶಿ ಪ್ರವಾಸದಲ್ಲಿ ಪವರ್​ ಸ್ಟಾರ್​: ಮತ ಚಲಾಯಿಸದ ಪುನೀತ್​ ರಾಜ್​ಕುಮಾರ್

ಬೆಳ್ಳಿತೆರೆ ಮೇಲೆ ಮನರಂಜನೆ ನೀಡುವ ಸಿನಿಮಾ ತಾರೆಯನ್ನು ಅನೇಕ ವಿಷಯಗಳಲ್ಲಿ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರುತ್ತಾರೆ. ಅದಕ್ಕಾಗಿ ಈ ಕರ್ತವ್ಯದಿಂದಾಗಿ ಅವರು ವಂಚಿತರಾಗುವುದಿಲ್ಲ. ಈ ರೀತಿ ತಮ್ಮ ಜವಾಬ್ದಾರಿ ನಿರ್ವಹಿಸುವ ಜೊತೆಗೆ ಸಾಮಾನ್ಯ ಜನರಿಗೆ ಪ್ರೇರಣೆ ನೀಡಿದ ಸಿನಿಮಾ ತಾರೆಯರ ಚಿತ್ರಣ ಇಲ್ಲಿದೆ.

ಸ್ಯಾಂಡಲ್​ವುಡ್​ ಹಾಗೂ ಕಾಲಿವುಡ್​ ಸೆಲೆಬ್ರಿಟಿಗಳು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ಜನ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಮತ ಚಲಾಯಿಸಿದ್ದಾರೆ. ಚಂದನವನದ ತಾರೆಯರಾದ ದರ್ಶನ್​, ಶಿವಣ್ಣ, ಯಶ್​, ಸುಮಲತಾ, ದ್ವಾರಕೀಶ್​, ರಮೇಶ್ ಅರವಿಂದ್​, ರಜಿನಿಕಾಂತ್​, ಕಮಲ್​ ಹಾಸನ್​, ಅಜಿತ್​, ವಿಜಯ್​ ಸೇರಿದಂತೆ ಹಲವಾರು ಮಂದಿ ಮತದಾನ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ರಾಜರಾಜೇಶ್ವರಿ ನಗರದಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ನಟ ದರ್ಶನ್ ಮತ್ತು ಹೆಂಡತಿ ವಿಜಯಲಕ್ಷ್ಮಿ ಮತದಾನ ಮಾಡಿದ್ದಾರೆ.

ನಟ ದರ್ಶನ್​ ಹಾಗೂ ಪತ್ನಿ ವಿಜಯಲಕ್ಷ್ಮಿ


ಕಿಚ್ಚ ಸುದೀಪ್​ ಹಾಗೂ ಪತ್ನಿ ಪ್ರಿಯಾ ಬೆಳಿಗ್ಗೆಯೇ ಜೆ.ಪಿ. ನಗರದಲ್ಲಿ ಮತದಾನ ಮಾಡಿದ್ದಾರೆ. ನಂತರ ಮಾತನಾಡಿರುವ ಅವರು, 'ಬಂದು ಮತದಾನ ಮಾಡಿ ಎಂದು ಬುದ್ಧಿ ಹೇಳುವ ವಿಷಯಲ್ಲ. ಜನರಿಗೆ ಅವರ ಜವಾಬ್ದಾರಿ ನೆನಪಿರಬೇಕು' ಎಂದಿದ್ದಾರೆ.

 ಸೂಪರ್ ಡೂಪರ್ ಹಿಟ್ 'ಕೆಜಿಎಫ್' ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು ಸ್ವಗ್ರಾಮ ಮದ್ದೂರು ತಾಲೂಕಿನ ಕೌಡ್ಲೆಯಲ್ಲಿ ಮತದಾನ ಮಾಡಿದರು. ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, 'ನನ್ನ ಹಕ್ಕು ಚಲಾಯಿಸುವುದು ನನ್ನ ಕರ್ತವ್ಯ.‌‌ ಅರ್ಹರು ತಪ್ಪದೇ ಮತದಾನ ಮಾಡಿ' ಎಂದು ಸಲಹೆ‌ ನೀಡಿದರು.

ಛಾಯಾಗ್ರಾಹಕ ಭುವನ್​ ಗೌಡ


ನಟ ಶ್ರೀಮುರುಳಿ ಸಹ ಇಂದು ಮೌಂಟ್​ಕಾರ್ಮೆಲ್​ ಕಾಲೇಜಿನಲ್ಲಿ ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ. ನಂತರ ಅವರು ಮಾತನಾಡಿದ್ದು,  'ಮತದಾನ ಮಾಡಲು ನನಗೆ ನನ್ನ ತಂದೆ ತಾಯಿ ಪ್ರೇರಣೆ. ನಾನು ಶೂಟಿಂಗ್ ಮೇಲೆ ಮೈಸೂರು ತೆರಳಲಿದ್ದೆ. ಈಗ ಬೆಂಗಳೂರಿನಲ್ಲಿ ನನ್ನ ಮತ ಇದ್ದ ಕಾರಣಕ್ಕೆ ಇಲ್ಲಿಗೆ ಬಂದು ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ಯುವಕರು ಸಹ ಮತ ಹಾಕಲು ಮುಂದು ಬರಬೇಕು' ಎಂದು ಕಿವಿ ಮಾತು ಹೇಳಿದ್ದಾರೆ.

ಕತ್ರಿಗುಪ್ಪೆಯಲ್ಲಿ ನಟ ಉಪೇಂದ್ರ ಅವರು ತಮ್ಮ ಮಡದಿ ಪ್ರಿಯಾಂಕಾ ಉಪೇಂದ್ರ ಜೊತೆ ಬಂದು ಮತದಾನ ಮಾಡಿದರು. ವಿಶೇಷ ಅಂದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್  ಮತದಾನ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸೇರುವ ಗಣೇಶ್ ಬೆಳಿಗ್ಗೆಯೇ ಮತಗಟ್ಟೆಗೆ ಆಗಮಿಸಿ ವೋಟ್ ಮಾಡಿದರು.

ಗೋಲ್ಡನ್​ ಸ್ಟಾರ್​ ಗಣೇಶ್​


ಹಿರಿಯ ನಟ ಅನಂತ್ ನಾಗ್ ತಮ್ಮ ಹೆಂಡತಿ ಗಾಯತ್ರಿ ಅವರೊಂದಿಗೆ ಬಂದು ಇಂದು ಮತ ಚಲಾಯಿಸಿದರು. ಡಾಲರ್ಸ್ ಕಾಲೋನಿಯಲ್ಲಿರೋ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿಯಲ್ಲಿ ಮತದಾನ ಮಾಡಿದರು.

ಡಾಲರ್ಸ್​ ಕಾಲೋನಿಯಲ್ಲಿ ಮತದಾನಕ್ಕಾಗಿ ಸಾಲಿನಲ್ಲಿ ಕಾಯುತ್ತಿರುವ ಅನಂತ್ ನಾಗ್​


ನಟ ಹಾಗೂ ರಾಜಕಾರಣಿ ಜಗ್ಗೇಶ್​ ಬೆಳಿಗ್ಗೆಯೇ ಮಡದಿ ಪರಿಮಳಾ ಜತೆ ಸರತಿ ಸಾಲಿನಲ್ಲಿ ನಿಂತು ಮಲ್ಲೇಶ್ವರದಲ್ಲಿ ಮತದಾನ ಮಾಡಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, 'ದೇಶದ ಸಂವಿಧಾನ ಕೊಟ್ಟ ನನ್ನ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ತಾಳ್ಮೆಯಿಂದ ನಿಂತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

 ಸೆಂಚುರಿ ಸ್ಟಾರ್​ ಶಿವಣ್ಣ, ಪತ್ನಿ ಗೀತಾ ಹಾಗೂ ಮಕ್ಕಳೊಂದಿಗೆ ರಾಬೇನಹಳ್ಳಿಯ ಮತಗಟ್ಟೆಗೆ ಬಂದು ಮತದಾನ ಮಾಡಿದರು. ನಂತರ ಮಾತನಾಡಿದ ಅವರು, 'ಪ್ರತಿಯೊಬ್ಬರೂ ವೋಟ್ ಮಾಡಬೇಕು. ಒಂದು ಮತದಿಂದ ಒಬ್ಬ ಒಳ್ಳೆ ಅಭ್ಯರ್ಥಿ ಸೋಲುವ ಪರಿಸ್ಥಿತಿ ಇರುತ್ತದೆ. ನಾವು ಮತ ಚಲಾಯಿಸಿದರೆ ಒಳ್ಳೆಯ ಸರ್ಕಾರವನ್ನು ಆಯ್ಕೆ ಮಾಡಬಹುದು. ಎಲ್ಲರೂ ಬಂದು ಮತದಾನ ಮಾಡಿ. ಅವರು ಏನು ಮಾಡಿದ್ರು ಅನ್ನೋದಕ್ಕಿಂತ, ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎಂಬುದು ಮುಖ್ಯ. ನಮ್ಮ ಹಕ್ಕು ಚಲಾಯಿಸಿದರೆ ಮಾತ್ರ ಕೇಳುವ ಅಧಿಕಾರವಿರುತ್ತದೆ' ಮತದಾರರಿಗೆ ಕರೆ ಕೊಟ್ಟರು.

ಯಶ್​ ಹಾಗೂ ರಾಧಿಕಾ


ನಟ ಡಾಲಿ ಧನಂಜಯ್ ಪ್ರತಿವರ್ಷದಂತೆ ಈ ಬಾರಿಯೂ ತಮ್ಮ ಊರಿಗೆ ಹೋಗಿ ಮತದಾನ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಡಾಲಿಯ ತಮ್ಮ ಮತದಾನ ಹಕ್ಕು ಹೊಂದಿದ್ದು, ತಮ್ಮ ಗ್ರಾಮಸ್ಥರ ಜೊತೆ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ್ದಾರೆ.ಮತದಾನದ ಬಳಿಕ ನಟ ಸುಂದರ್ ರಾಜ್ ಹಾಗೂ ಪ್ರಮೀಳಾ ದಂಪತಿ, ನಟಿ ರೂಪಿಕಾ  ಮತದಾನದ ನಂತರ ಅವರು ತಿಂಡಿ‌ ಸೇವಿಸಲು ಕನ್ನಿಂಗ್​ ಹ್ಯಾಮ್​ ರಸ್ತೆಯಲ್ಲಿರುವ  ಗ್ರ್ಯಾಂಡ್ ನಿಸರ್ಗ ಹೋಟೆಲ್​ಗೆ ಬಂದಿದ್ದರು. ಅಲ್ಲಿ ಹೋಟೆಲ್​ನ ಮಾಲೀಕರಾದ ಕೃಷ್ಣ ರಾಜ್​ ಅವರು ಆಯೋಜಿಸಿದ್ದ ಉಚಿತ ತಿಂಡಿ ಹಾಗೂ ತಂಪು ಪಾನೀಯ ಸೇವಿಸಿದರು.

ಹೊಸಕೆರೆಹಳ್ಳಿ ಮತಗಟ್ಟೆಗೆ ಬಂದ ಯಶ್ ಮತಗಟ್ಟೆ ಸಂಖ್ಯೆ 4ರಲ್ಲಿ ಮತದಾನ. ಮಾಡಿದ್ದಾರೆ. ಫಿಲಂ ಚೇಂಬರ್​ ಅಧ್ಯಕ್ಷ ಚಿನ್ನೇ ಗೌಡ ಅವರು ಸಹ ಮೌಂಟ್​ಕಾರ್ಮೆಲ್​ ಕಾಲೇಜಿನಲ್ಲಿ,  ನಟ ಅವಿನಾಶ್​ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರಕ್ಕೆ ಸೇರುವ ರಾಜರಾಜೇಶ್ವರಿನಗರದಲ್ಲಿ, ರಮೇಶ್​ ಅರವಿಂದ್ ತಮ್ಮ ಮಡದಿಯೊಂದಿಗೆ ಬನಶಂಕರಿ ಎರಡನೇ ಹಂತದಲ್ಲಿ, ಅಮೂಲ್ಯ ಹಾಗೂ ಪತಿ ಜಗದೀಶ್​ ಬಿಇಎಂಎಲ್​ ಬಡಾವಣೆಯಲ್ಲಿ, ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ, ನೆನಪಿರಲಿ ಪ್ರೇಮ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೂ ಅವರು ತಮ್ಮ ಪತ್ನಿಯೊಂದಿಗೆ ಬಂದು ಮಲ್ಲೇಶ್ವರದಲ್ಲಿ ಮತ ದಾನ ಮಾಡಿದರು. ನಿರ್ದೇಶಕರಾದ ಸಂತೋಷ್​ ಆನಂದ್​ ರಾಮ್ ಹಾಗೂ ತರುಣ್​ ಸುಧೀರ್​ ಸಹ ಮತದಾನ ಮಾಡಿದ್ದು, ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚೆನ್ನೈನಲ್ಲಿ ಮತದಾನ ಮಾಡಿದ ಕಾಲಿವುಡ್​ ಸೆಲೆಬ್ರಿಟಿಗಳು

​ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಮಗಳು ಐಶ್ವರ್ಯಾ ಹಾಗೂ ಪತ್ನಿಯೊಂದಿಗೆ ಚೆನ್ನೈನಲ್ಲಿ  ಮತದಾನ ಮಾಡಿದ್ದಾರೆ. ಪತ್ನಿ ಮತ್ತು ತಮ್ಮ ಇಬ್ಬರು ಮಕ್ಕಳೊಂದಿಗೆ ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಉಳಿದಂತೆ ತಲಾ ಅಜಿತ್, ತಲೈವಾ ರಜಿನಿ, ಕಮಲ್​ ಹಾಸನ್​, ಶ್ರುತಿ ಹಾಸನ್​, ವಿಜಯ್​, ಸೂರ್ಯ, ಜ್ಯೋತಿಕಾ, ಕಾರ್ತಿ ಮುಂತಾದವರು ಚೆನ್ನೈನಲ್ಲಿ ಮತದಾನ ಮಾಡಿದ್ದಾರೆ.

ತಮಿಳು ನಟ ಅಜಿತ್​
ತಲೈವಾ ರಜಿನಿಕಾಂತ್​


ಒಟ್ಟಾರೆ ಸೆಲೆಬ್ರಿಟಿಗಳು ಇಂದು ತಮ್ಮ ಹಕ್ಕನ್ನು ಚಲಾಯಿಸುವುದರೊಂದಿಗೆ ಬೇರೆಯವರಿಗೂ ಮಾದರಿಯಾಗುವಂತೆ ಮತದಾನ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ.

Celebrity Voting: ಬಣ್ಣ ಹಚ್ಚಿಕೊಂಡು ರಂಜಿಸುವ ಸಿನಿ ತಾರೆಯರು ಬೆರಳಿಗೆ ಶಾಹಿ ಹಚ್ಚಿಸಿಕೊಂಡು ಪೋಸ್​ ನೀಡಿದ್ದು ಹೀಗೆ..!

First published: