HOME » NEWS » Entertainment » FIGHTING STARTED BETWEEN PRASHNATH SAMBARGI AND BRO GOWDA IN BIGG BOSS 8 HERE IS THE DETAILS AE

Bigg Boss 8: ದಿವ್ಯಾ-ಪ್ರಶಾಂತ್​ ಸಂಬರಗಿ ನಡುವೆ ಬಂದ ಬ್ರೋ ಗೌಡ: ಬಿಗ್​ ಬಾಸ್​ ಮನೆಯಲ್ಲಿ ಶುರವಾಯ್ತು ಕಿತ್ತಾಟ

Bro Gowda-Prashanth Sambargi: ಬ್ರೋ ಗೌಡ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಕಿತ್ತಾಟ ಆರಂಭವಾಗಲು ಕಾರಣವಾದರೂ ಏನು ಅಂತೀರಾ..? ಸದ್ಯಕ್ಕೆ ಪ್ರೋಮೊದಲ್ಲಿ ತೋರಿಸಿರುವಂತೆ ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ಪ್ರೇಮಗೀತೆ ಹಾಡುವಾಗ ಬ್ರೋ ಗೌಡ ಕ್ಯಾಮೆರಾ ಮೆನ್​ ಆಗಿರುತ್ತಾರೆ. ಆಗ ಕಿತ್ತಾಟ ಆರಂಭವಾಗುತ್ತದೆ.

Anitha E | news18-kannada
Updated:March 3, 2021, 2:24 PM IST
Bigg Boss 8: ದಿವ್ಯಾ-ಪ್ರಶಾಂತ್​ ಸಂಬರಗಿ ನಡುವೆ ಬಂದ ಬ್ರೋ ಗೌಡ: ಬಿಗ್​ ಬಾಸ್​ ಮನೆಯಲ್ಲಿ ಶುರವಾಯ್ತು ಕಿತ್ತಾಟ
ಬಿಗ್​ ಬಾಸ್​ ಇಂದಿನ ಸಂಚಿಕೆ ಪ್ರೋಮೋ
  • Share this:
ಬಿಗ್​ ಬಾಸ್ ಮನೆಯಲ್ಲಿ ಈಗಾಗಲೇ ಸ್ನೇಹ, ಪ್ರೀತಿ, ಕೋಪ, ಜಗಳ ಎಲ್ಲವೂ ಆರಂಭವಾಗಿದೆ. 17 ಮಂದಿ ಒಂದೇ ಸೂರಿನಡಿ ಇರುವ ಈ ಕಾರ್ಯಕ್ರಮದಲ್ಲಿ ಮೊದಲ ವಾರದಲ್ಲೇ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಾರಂಭಿಸಿದೆ. ಇನ್ನು ಈಗಾಗಲೇ ಕೆಲವರು ಸ್ನೇಹಿತರಾದರೆ, ಮತ್ತೆ ಕೆಲವರ ನಡುವೆ ಜಗಳ ಆರಂಭಾಗಿದೆ. ಆಗಲಿರುವ ಕಿತ್ತಾಟವನ್ನು ತಡೆಯಲು ಇನ್ನು ಕೆಲವರು ಪ್ರಯತ್ನಿಸುತ್ತಿದ್ದಾರೆ. ಬಿಗ್​ ಬಾಸ್​ ಸೀಸನ್​ 9ರಲ್ಲಿ ಮೊದಲ ದಿನದ ಟಾಸ್ಕ್​ನಲ್ಲಿ ಗೆದ್ದು ಬ್ರೋ ಗೌಡ ಅಲಿಯಾಸ್​ ಶಮಂತ್​ ಈ ಸೀಸನ್​ನ ಮೊಲದ ಕ್ಯಾಪ್ಟನ್​ ಆಗಿದ್ದಾರೆ. ಇನ್ನು ಮೊಲದ ಸಲ ಕ್ಯಾಪ್ಟನ್ ಆಗಿರುವ ಬ್ರೋ ಗೌಡ ತಮ್ಮ ಜವಾಬ್ದಾರಿಯನ್ನು ಹೇಗೆ ಹಾಗೂ ಎಷ್ಟು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಅನ್ನೋದು ಮೆಲ್ಲನೆ ತಿಳಿಯಲಿದೆ. ಕ್ಯಾಪ್ಟನ್​ ಆಗಿರುವ ಬ್ರೋ ಗೌಡ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಕಣ್ಣೀರಿಟ್ಟಿದ್ದಾರೆ. ಅಪ್ಪ-ಅಮ್ಮ ಹಾಗೂ ಸ್ನೇಹಿತರನ್ನು ನೆನಪಿಸಿಕೊಂಡು ಅಳುತ್ತಿದ್ದ ಬ್ರೋ ಗೌಡ ಅವರಿಗೆ ಗೀತಾ ಭಟ್​  ಸಾಮಾಧಾನದ ಮಾತುಗಳನ್ನಾಡಿದ್ದಾರೆ. 

ಮನೆಯಲ್ಲಿ ಮೊಲದ ವಾರ ಎಲಿಮಿನೇಟ್​ ಆಗಲು ಸ್ಪರ್ಧಿಗಳು ನಾಮಿನೇಟ್​ ಆಗಿದ್ದಾರೆ. ನಾಮಿನೇಷನ್​ನಿಂದ ತಪ್ಪಿಸಿಕೊಳ್ಳಲು ನಡೆಯುತ್ತಿರುವ ಟಾಸ್ಕ್​ಗಳಲ್ಲಿ ಎಲ್ಲರೂ ಭಾಗಿಯಾಗುತ್ತಿದ್ದಾರೆ.  ನಿನ್ನೆ ನಡೆದ ಟಾಸ್ಕ್​ನಲ್ಲಿ ಪ್ರಶಾಂತ್ ಸಂಬರಗಿ ವಿಜೇತರಾಗುವ ಮೂಲಕ ಗಾಯಕ ವಿಶ್ವನಾಥ್​ ಅವರನ್ನು ಎಲಿಮಿನೇಟ್​ ಆಗುವವರ ಪಟ್ಟಿಗೆ ಸೇರುವಂತೆ ಮಾಡಿದ್ದಾರೆ.

bigg boss kannada 8, conetion between Divya and Prashanth Sambargi, bigg boss kannada 8 today promo highlights, divya uruduga and Prashanth Sambargi, Bigg Boss kannada Promo Today, ಬಿಗ್ ಬಾಸ್ ಕನ್ನಡ, ಬಿಗ್ ಬಾಸ್ ಕನ್ನಡ ಪ್ರೋಮೋ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರ್ಗಿ, ದಿವ್ಯಾ ಮತ್ತು ಪ್ರಶಾಂತ್ ಸಂಬರ್ಗಿ ನಡುವಿನ ಕನೆಕ್ಷನ್ ಏನು, Bigg Boss Kannada 8 what is going between Prashanth Sambargi and Divya Uruduga ae
ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ


ಇನ್ನು ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್​ ಆಗಿದ್ದು, ಅದರಲ್ಲಿ ಕ್ಯಾಪ್ಟನ್ ಬ್ರೋ ಗೌಡ ಹಾಗೂ ಪ್ರಶಾಂತ್​ ಸಂಬರಗಿ ಅವರ ನಡುವೆ ಕಿತ್ತಾಟ ಆರಂಭವಾಗಿದೆ. ಈ ವಿಡಿಯೋದಲ್ಲಿ ಪ್ರಶಾಂತ್​ ಸಂಬರಗಿ, ಬ್ರೋ ಗೌಡ ಅವರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಇನ್ನು ಬ್ರೋ ಗೌಡ ಸಹ ಖಾರವಾಗಿಯೇ ಮಾತನಾಡಿದ್ದಾರೆ. ನಾನು ಕ್ಯಾಪ್ಟನ್​ ಅಂತ ಹೀಗೆಲ್ಲ ಮಾತನಾಡುತ್ತಿಲ್ಲ ಎನ್ನುತ್ತಿರುವ ಬ್ರೋ ಗೌಡ ಅವರನ್ನು ಗೀತಾ ಜಗಳ ಮಾಡದಂತೆ ತಡೆಯುತ್ತಿದ್ದಾರೆ.
ಅಷ್ಟಕ್ಕೂ ಬ್ರೋ ಗೌಡ ಹಾಗೂ ಪ್ರಶಾಂತ್ ಸಂಬರಗಿ ನಡುವೆ ಕಿತ್ತಾಟ ಆರಂಭವಾಗಲು ಕಾರಣವಾದರೂ ಏನು ಅಂತೀರಾ..? ಸದ್ಯಕ್ಕೆ ಪ್ರೋಮೊದಲ್ಲಿ ತೋರಿಸಿರುವಂತೆ ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ಪ್ರೇಮಗೀತೆ ಹಾಡುವಾಗ ಬ್ರೋ ಗೌಡ ಕ್ಯಾಮೆರಾ ಮೆನ್​ ಆಗಿರುತ್ತಾರೆ. ಆಗ ಬ್ರೋ ಗೌಡ ಕೊಡುವ ಕಾಮೆಂಟ್ರಿಯಿಂದಾಗಿ ಈ ಕಿತ್ತಾಟಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಇನ್ನು ಸಂಪೂರ್ಣ ಮಾಹಿತಿಗಾಗಿ ಇಂದಿನ ಸಂಚಿಕೆ ವೀಕ್ಷಿಸಬೇಕು.

ಹುಳಿ ಹಿಂಡುವ ವಿಷಯ ತಂದ ಕಿರಿಕಿರಿ

ಹೆಪ್ಪು ಇಲ್ಲದೆ ಹಾಲಿಗೆ ನಿಂಬೆ ಹಣ್ಣಿನ ರಸ ಹಾಕಿ ಮೊಸರು ಮಾಡುವುದಾಗಿ ನಿನ್ನೆ ಪ್ರಶಾಂತ್​ ಸಂಬರಗಿ ಹೇಳಿದ್ದಾರೆ. ಹಾಲಿಗೆ ಹುಳಿ ಹಿಂಡುವ ಈ ವಿಷಯ ಸಾಕಷ್ಟು ಮಂದಿಗೆ ಕಿರಿಕಿರಿ ಉಂಟಾಗಿದೆ. ಅದಕ್ಕಾಗಿಯೇ ನಿಂಬೆ ಹುಳಿ ಹಿಂಡಿ ಮೊಸರು ಮಾಡಲು ಪ್ರಶಾಂತ್ ಸಂಬರಗಿ ಅವರಿಗೆ ಒಂದು ಗ್ಲಾಸ್ ಹಾಲು ಸಹ ನೀಡಿದ್ದಾರೆ.
ಹೆಪ್ಪಿಲ್ಲದೆ ಪ್ರಶಾಂತ್ ಸಂಬರಗಿ ನಿಂಬೆ ರಸದಿಂದ ಹೇಗೆ ಮೊಸರು ಮಾಡುತ್ತಾರೆ ಅಂತ ಇಂದು ತಿಳಿಯಲಿದೆ. ಈಗಾಗಲೇ ಬಿಗ್​ ಬಾಸ್​ ಮನೆಯಲ್ಲಿ ಉಳಿದುಕೊಳ್ಳಲು ವಯಸ್ಸಿನಲ್ಲಿ ತಮಗಿಂತ ಚಿಕ್ಕವರಾದ ವಿಶ್ವನಾಥ್​ ಅವರನ್ನು ಟಾಸ್ಕ್​ ಮಾಡಲು ಆಯ್ಕೆ ಮಾಡಿಕೊಂಡು ಕೆಲವರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ.
Published by: Anitha E
First published: March 3, 2021, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories