Vijay Deverakonda: ಲೇಡಿ ಫ್ಯಾನ್​ ಬೆನ್ನ ಮೇಲೆ ವಿಜಯ್​ ಟ್ಯಾಟೂ! ಡಾಕ್ಟರ್​ ಆಗಿ ಹಿಂಗ್ ಮಾಡ್ತಿರಲ್ಲಾ ಮೇಡಂ ಎಂದಿದ್ಯಾಕೆ ನೆಟ್ಟಿಗರು?

ಅರ್ಜುನ್​ ರೆಡ್ಡಿ ಬಳಿಕ ಗೀತಾ ಗೋವಿಂದ (Geetha Govinda) ಮತ್ತೊಂದು ಹಿಟ್​ ತಂದುಕೊಟ್ಟಿದೆ. ಇದೀಗ ಸದ್ಯ ಲೈಗರ್ (Liger)​ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಟ್ಟು ವಿಜಯ್ ದೇವರಕೊಂಡ ಈಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಯಾಕೆ ಅಂತ ನೀವೇ ನೋಡಿ.

ಲೇಡಿ ಫ್ಯಾನ್​ ಭೇಟಿಯಾದ ವಿಜಯ್​

ಲೇಡಿ ಫ್ಯಾನ್​ ಭೇಟಿಯಾದ ವಿಜಯ್​

  • Share this:
‘ಅರ್ಜುನ್​ ರೆಡ್ಡಿ’ (Arjun Reddy) ತೆಲುಗು ಸಿನಿಮಾವನ್ನು ನೋಡಿದೆ ಇರುವವರು ಕಡಿಮೆ ಮಂದಿ. ಆ ಸಿನಿಮಾ ಮೂಲಕ ವಿಜಯ್​ ದೇವರಕೊಂಡ (Vijay Deverakonda) ಸಖತ್​ ಫೇಮಸ್​ ಆದವರು. ಅರ್ಜುನ್​ ರೆಡ್ಡಿ ಸಿನಿಮಾಗೂ ಮುನ್ನ ಕೆಲ ಸಿನಿಮಾಗಳಲ್ಲಿ ವಿಜಯ್​ ದೇವರಕೊಂಡ ನಟಿಸಿದ್ದರು. ಆದರೆ, ಅರ್ಜುನ್​ ರೆಡ್ಡಿ ತಂದುಕೊಟ್ಟ ಗೆಲುವು (Success) ಮಾತ್ರ ಬಹಳ ವಿಶೇಷ. ಇದಾದ ಬಳಿಕ ರೌಡಿ (Rowdy) ಅಂತಲೇ ಫೇಮಸ್​ ಆದ ವಿಜಯ್​ ದೇವರಕೊಂಡ ಹಿಂದೆ ತಿರುಗಿ ನೋಡಲೇ ಇಲ್ಲ. ಈಗ ಅವರು ಮುಟ್ಟಿದೆಲ್ಲ ಚಿನ್ನ. ಅರ್ಜುನ್​ ರೆಡ್ಡಿ ಬಳಿಕ ಗೀತಾ ಗೋವಿಂದ (Geetha Govinda) ಮತ್ತೊಂದು ಹಿಟ್​ ತಂದುಕೊಟ್ಟಿದೆ. ಇದೀಗ ಸದ್ಯ ಲೈಗರ್ (Liger)​ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಟ್ಟು ವಿಜಯ್ ದೇವರಕೊಂಡ ಈಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಯಾಕೆ ಅಂತ ನೀವೇ ನೋಡಿ.

ಲೇಡಿ ಫ್ಯಾನ್​ ಬೆನ್ನ ಮೇಲೆ ವಿಜಯ್​ ಟ್ಯಾಟೂ!

ನೆಚ್ಚಿನ ನಾಯಕ ನಟ, ನಟಿಯರನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ. ಒಮ್ಮೆಯಾದರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಬೇಕೆಂಬ ಆಸೆ ಎಲ್ಲರಿಗೂ ಇದೆ. ಟಾಲಿವುಡ್‌ನ ಕ್ರೇಜಿ ಹೀರೋ, ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ವಿಜಯ್ ದೇವರಕೊಂಡ ಇದೀಗ ಈ ವಿಚಾರದಲ್ಲಿ ಸೌಂಡ್ ಮಾಡುತ್ತಿದ್ದಾರೆ. ವಿಜಯ್​ ಲೇಡಿ ಅಭಿಮಾನಿ ಆಕೆಯ ಬೆನ್ನ ಮೇಲೆ ತನ್ನ ನೆಚ್ಚಿನ ನಟ ದೇವರಕೊಂಡ ಫೋಟೋ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದನ್ನು ಬಂದು ವಿಜಯ್​ ದೇವರಕೊಂಡ ಅವರಿಗೆ ತೋರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ವಿಜಯ್​ ದೇವರಕೊಂಡ ಅವರನ್ನು ಆ ಲೇಡಿ ಫ್ಯಾನ್​ ಭೇಟಿಯಾಗಿದ್ದರು. . ಸ್ವತಃ ಹೀರೋ ಅವರ ಜೊತೆ ಮಾತನಾಡುತ್ತಾ, ಕೈಕುಲುಕಿ ಫೋಟೋ ತೆಗೆಯುತ್ತೀರಾ ಎಂದು ಕೇಳಿದಾಗ ಲೇಡಿ ಡಾಕ್ಟರ್ ಫ್ಯಾನ್​ ಸಿಕ್ಕಾಪಟ್ಟೆ ಥ್ರಿಲ್​ ಆದರು. ಇಬ್ಬರು ಅಭಿಮಾನಿಗಳನ್ನು ವಿಜಯ್​ ಅಪ್ಪಿಕೊಂಡಿದ್ದಾರೆ. ಜೊತೆಗೆ ಅಲ್ಲೇ ಇದ್ದ ಲೈಗರ್​ ಚಿತ್ರತಂಡದವರಿಗೆ ಪರಿಚಯ ಮಾಡಿಸಿಕೊಟ್ಟಿದ್ದಾರೆ. ನಂತರ ಖುಷಿಯಿಂದ ಸೋಫಾದಲ್ಲಿ ಕೂತು ನಾಯಕ ವಿಜಯದೇವರಕೊಂಡ ಜೊತೆ ಮಾತನಾಡಿದರು. ನಂತರ ಫೋಟೋ ತೆಗೆದರು. ಯಂಗ್ ಹೀರೋಗೆ ಈ ರೇಂಜ್ ನಲ್ಲಿ ಅಭಿಮಾನಿಗಳಿರುವುದು ಹೊಸದೇನಲ್ಲ, ಆದರೆ ವಿಜಯ್ ದೇವರಕೊಂಡ ಡಾ.ಚೆರ್ರಿ ಅವರ ಸೂಪರ್ ಫ್ಯಾನ್ ಆಗಿದ್ದು, ಈ ವಿಡಿಯೋವನ್ನು ಲಿಗರ್ ಟೀಮ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗುತ್ತಿದೆ.


ಇದನ್ನೂ ಓದಿ: ಹಣ ಕೊಟ್ರೆ ಬೇಗ ಫೇಮಸ್​ ಆಗ್ಬೋದು, ಹಿಂಗ್ಯಾಕಂದ್ರು ಸಂಯುಕ್ತಾ ಹೆಗ್ಡೆ?

ಹೊಸ ಲುಕ್ ನೋಡಿ ಫ್ಯಾನ್ಸ್ ಶಾಕ್ 

ಹೌದು, ಸಿನಿಮಾಗೆ ಸಂಬಂಧಪಟ್ಟ ಫೋಟೋವನ್ನು ನಟ ವಿಜಯ್ ದೇವರಕೊಂಡ ಶೇರ್ ಮಾಡಿಕೊಂಡಿದ್ದು, ಈ ಫೋಟೋದಲ್ಲಿ, 'ಸಾಲಾ ಕ್ರಾಸ್‌ಬ್ರೀಡ್' ಎಂದು ಬರೆದಿದೆ. ಆದರೆ ಶಾಕಿಂಗ್ ನ್ಯೂಸ್​ ಎಂದರೆ ವಿಜಯ್ ದೇವರಕೊಂಡ ಅವರು ಬಟ್ಟೆಯಿಲ್ಲದೆ ಪೋಸ್ ನೀಡುತ್ತಿರುವುದು. ಹೌದು, ಗುಲಾಬಿ ಹೂವಿನ ಬೊಕ್ಕೆಗಳಿಂದ ಖಾಸಗಿ ಅಂಗವನ್ನು ಮುಚ್ಚಲಾಗಿದ್ದು, ಈ ಫೋಟೋ ಫುಲ್ ವೈರಲ್ ಆಗುತ್ತಿದೆ. ಇನ್ನು ಈ ಸಿನಿಮಾದ ನಿರ್ಮಾಪಕರಾಗಿರುವ ಕರಣ್ ಜೋಹರ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಎಲ್ಲಾ ಬಿಟ್ಟು ಹಿಂಗ್ಯಾಕಾದ್ರು ವಿಜಯ್ ದೇವರಕೊಂಡ? ಅರ್ಜುನ್ ರೆಡ್ಡಿ ಹೊಸ ಅವತಾರ ನೋಡಿ ಫ್ಯಾನ್ಸ್ ಶಾಕ್

ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ಲೈಗರ್ ವಿಜಯ್ ದೇವರಕೊಂಡ ಅವರು ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನನ್ಯಾ ಪಾಂಡೆ ಜೊತೆಗಿನ ಅವರ ಕೆಮಿಸ್ಟ್ರಿ ಹೇಗಿರಲಿದೆ ಎಂಬುದು ಈ ಚಿತ್ರದ ಮತ್ತೊಂದು ಕುತೂಹಲಕಾರಿ ಅಂಶವಾಗಿದೆ. ಇನ್ನು ಈ ಸಿನಿಮಾ ಆಗಸ್ಟ್ 25, 2022 ರಂದು ಬಿಡುಗಡೆಯಾಗಲಿದೆ.
Published by:Vasudeva M
First published: