Yuvarathnaa: ರಿಲೀಸ್ ಆಯ್ತು ಯುವರತ್ನ ಸಿನಿಮಾದ ಫೀಲ್​ ದ ಪವರ್​ ವಿಡಿಯೋ ಹಾಡು..!

Feel The Power Video Song: ಕನ್ನಡ ಸಿನಿಪ್ರಿಯರ ಮನ ಗೆದ್ದ ಯುವರತ್ನ ಸಿನಿಮಾ ಫೀಲ್​ ದ ಪವರ್​ ವಿಡಿಯೋ ಹಾಡು ಈಗ ಯೂಟ್ಯೂಬ್​ನಲ್ಲಿ ರಿಲೀಸ್​ ಆಗಿದೆ. ಥಮನ್ ಸಂಗೀತ ನೀಡಿರುವ ಯುವರತ್ನ ಸಿನಿಮಾದ ಫೀಲ್​ ದ ಪವರ್​ ಹಾಡನ್ನು ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದೆ.

ಯುವರತ್ನ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​

ಯುವರತ್ನ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​

  • Share this:
ಸ್ಯಾಂಡಲ್​ವುಡ್​ ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್ ಹಾಗೂ ಸಂತೋಷ್​ ಆನಂದ್​ ರಾಮ್​ ಕಾಂಬಿನೇಶನ್​ನಲ್ಲಿ ಮೂಡಿ ಬಂದಿರುವ ಸಿನಿಮಾ ಯುವರತ್ನ. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಾಕಷಟು ಸದ್ದು ಮಾಡಿತ್ತು. ಕೊರೋನಾ ಲಾಕ್​ಡೌನ್ ನಡುವೆಯೇ ಚಿತ್ರೀಕರಣ ಮುಗಿಸಿ, ನಂತರ ಸಿನಿಮಾ ಸಹ ರಿಲೀಸ್ ಮಾಡಿತು ಈ ಚಿತ್ರತಂಡ. ಕೊರೋನಾ ಹಾವಳಿ ಕಡಿಮೆಯಾಯಿತು ಅಂತ ಸಿನಿಮಾ ಮಂದಿಗಳನ್ನು ತೆರೆದು ಶೇ.100ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ರಿಲೀಸ್​ ಆಗಿ, ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಅದರ ಬೆನ್ನಲ್ಲೇ ಅಂದರೆ ಏ.1ರಂದು ಯುವರತ್ನ ಸಿನಿಮಾ ಸಹ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು. ಆದರೆ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು, ಆ ಸಮಯಕ್ಕೆ ಸರಿಯಾಗಿ ಕೊರೋನಾ ಎರಡನೇ ಅಲೆಯೂ ಜೋರಾಯಿತು. ಇದೇ ಕಾರಣದಿಂದ ರಾಜ್ಯ ಸರ್ಕಾರ ಮತ್ತೆ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಭರ್ತಿಗೆ ಅವಕಾಶ ಎಂದು ಆದೇಶ ಹೊರಡಿಸಿತು. 

ರಾಜ್ಯ ಸರ್ಕಾರದ ಆದೇಶ ಹೊರ ಬೀಳುತ್ತಿದ್ದಂತೆಯೇ ಪುನೀತ್​ ರಾಜ್​ಕುಮಾರ್ ಹಾಗೂ ಚಿತ್ರತಂಡದವರು ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಅದಕ್ಕೆ ರಾಜ್ಯ ಸರ್ಕಾರ ಸಹ ಸ್ಪಂದಿಸಿತ್ತು. ಬಾಕ್ಸಾಫಿಸ್​ನಲ್ಲೂ ಯುವರತ್ನ ಒಳ್ಳೆಯ ಕಲೆಕ್ಷನ್​ ಮಾಡಿತ್ತು.

Yuvaratna sold out for Rs 20 cr for Amazon Prime? This is the highest any OTT platform paid for a Kannada movie so far
ಅಮೇಜಾನ್ ಪ್ರೈಮ್​ನಲ್ಲಿ `ಯುವರತ್ನ'


ಯೂತ್​ ಹಾಗೂ ಫ್ಯಾಮಿಲಿಗಳ ಮನಸ್ಸು ಗೆದ್ದ ಯುವರತ್ನ ಸಿನಿಮಾ ತುಂಬಾ ಸಮಯ ಚಿತ್ರಮಂದಿರಗಳಲ್ಲಿ ಉಳಿಯಲಿಲ್ಲ. ಕಾರಣ ಕೊರೋನಾ ಕಾರಣದಿಂದಾಗಿ ಮತ್ತೆ ಚಿತ್ರಮಂದಿರಗಳನ್ನು ಮುಚ್ಚಲಾಯಿತು. ಇದಾದ ಕೆಲವೇ ಸಮಯದಲ್ಲಿ ಈ ಸಿನಿಮಾ ಒಟಿಟಿ ವೇದಿಕೆಯಲ್ಲಿ ರಿಲೀಸ್​ ಆಯಿತು.ಕನ್ನಡ ಸಿನಿಪ್ರಿಯರ ಮನ ಗೆದ್ದ ಯುವರತ್ನ ಸಿನಿಮಾ ಫೀಲ್​ ದ ಪವರ್​ ವಿಡಿಯೋ ಹಾಡು ಈಗ ಯೂಟ್ಯೂಬ್​ನಲ್ಲಿ ರಿಲೀಸ್​ ಆಗಿದೆ. ಥಮನ್ ಸಂಗೀತ ನೀಡಿರುವ ಯುವರತ್ನ ಸಿನಿಮಾದ ಫೀಲ್​ ದ ಪವರ್​ ಹಾಡನ್ನು ಶಶಾಂಕ್​ ಶೇಷಗಿರಿ ಹಾಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದೆ.ಯುವರತ್ನ ಸಿನಿಮಾದ ಹಾಡುಗಳಿಗೆ ಅಪು ಎಂದಿನಂತೆ ಸಖತ್​ ಸ್ಟೆಪ್​ ಹಾಕಿದ್ದಾರೆ. ಇನ್ನು ತೆಲುಗ ಹಾಗೂ ಕನ್ನಡದಲ್ಲಿ ರಿಲೀಸ್​ ಆಗಿರುವ ಸಿನಿಮಾದ ಹಾಡು ಸಹ ಈಗ ಎರಡೂ ಭಾಷೆಯಲ್ಲಿ ರಿಲೀಸ್​ ಆಗಿದೆ.ಸಿನಿಮಾ ರಿಲೀಸ್ ಆಗುವ ಮೊದಲೇ ಸಿನಿಮಾದ ಟೈಟಲ್​ ಟ್ರ್ಯಾಕ್​, ಪಾಠಶಾಲಾ ಲಿರಿಕಲ್​ ವಿಡಿಯೋ ಸಹ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಊರಿಗೊಬ್ಬ ರಾಜ ಹಾಡಿಗೆ ಸಖತ್​ ಪ್ರತಿಕ್ರಿಯೆ ವ್ಯಕ್ತಪವಾಗಿದೆ. ಪುನೀತ್​ ರಾಜ್​ಕುಮಾರ್​ ಹಾಡಿರುವ ಈ ಹಾಡಿಗೆ ಆಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿತ್ತು.

ಇದನ್ನೂ ಓದಿ: ಬಂಗಾಳಿ ನಟಿ ಗರ್ಭಿಣಿ; ನಟ ಯಶ್ ಮತ್ತು ಆಕೆಯ ನಡುವಿನ ಸಂಬಂಧದ ಬಗ್ಗೆ ಭಾರೀ ಚರ್ಚೆ !

ಯುವರತ್ನ ಸಿನಿಮಾದಲ್ಲಿ ಪುನೀತ್​ ಮತ್ತೆ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ತಮ್ಮ ದೇಹದ ಮೇಲೆ ತುಂಬಾ ಕೆಲಸ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಅವರ ಇನ್​​ಸ್ಟಾಗ್ರಾಂನಲ್ಲಿರುವ ಫಿಟ್ನೆಸ್ ವಿಡಿಯೋಗಳು. ಮೊದಲ ಸಲ ಲಾಕ್​ಡೌನ್​ ಆದಾಗಲೂ ಪುನೀತ್​ ತಮ್ಮ ಫಿಟ್ನೆಸ್ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಅಭಿಮಾನಿಗಳ ಮನ ಗೆದ್ದಿರುವ ಫಿಟ್ನೆಸ್​ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು.

ಹೊಂಬಾಳೆ ಫಿಲಂಸ್​ ನಿರ್ಮಾಣದ ಹಾಗೂ ಸಂತೋಷ್​ ಆನಂದ್​ ರಾಮ್​ ನಿರ್ದೇಶನದ ಯುವರತ್ನ ಸಿನಿಮಾದಲ್ಲಿ ಸಯೇಷಾ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ದಿಗಂತ್​ ಸಹ ನಟಿಸಿದ್ದಾರೆ.
Published by:Anitha E
First published: