Father's Day Special: ಅಪ್ಪ-ಮಗ ಅಂದ್ರೆ ಹೀಗಿರಬೇಕು, ಕೊನೆ ಸಿನಿಮಾದಲ್ಲೂ ಒಂದೇ ಸಂದೇಶ ಕೊಟ್ಟ ಪುನೀತ್-ರಾಜ್​ಕುಮಾರ್!

Puneeth Rajkumar and Dr.Rajkumar: ಇದು ಕಾಕತಾಳೀಯವಿರಬಹುದು, ಗೊತ್ತಿಲ್ಲ, ಆದರೆ ಈ ಸಿನಿಮಾದಲ್ಲಿನ ಸಾಮ್ಯತೆಯನ್ನು ನಾವು ಅಲ್ಲಗೆಳೆಯುವಂತಿಲ್ಲ. ಇದಿಷ್ಟೇ ಅಲ್ಲ ಅವರಿಬ್ಬರ ಸಂಬಂಧ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಘಟನೆಗಳಿವೆ.

ಪುನೀತ್ ರಾಜ್​ಕುಮಾರ್ ಹಾಗೂ ಡಾ.ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್ ಹಾಗೂ ಡಾ.ರಾಜ್​ಕುಮಾರ್

  • Share this:
ತಾಯಿ (Mother) ಮಗುವಿನ ಬಾಂಧವ್ಯಕ್ಕೆ ಮೊದಲಿನಿಂದಲೂ ಒಂದು ಮಹತ್ವವಿದೆ. ಅದನ್ನು ಮೀರಿಸಲಾಗದ ಸಂಬಂಧ ಎನ್ನಲಾಗುತ್ತದೆ. ಆದರೆ ತಂದೆಯ ಮತ್ತು ಮಗನ ಅಥವಾ ಮಗಳ ಬಾಂಧವ್ಯದ ಬಗ್ಗೆ ಹೆಚ್ಚಾಗಿ ಹೇಳಲಾಗುವುದಿಲ್ಲ. ತಂದೆ ಪ್ರೀತಿ ತೋರಿಸದಿದ್ದರೂ ಸಹ ಮನಸ್ಸಲ್ಲಿ ಇಟ್ಟುಕೊಂಡು, ಕುಟುಂಬಕ್ಕಾಗಿ ದುಡಿಯುವ ಜೀವ ಅದು. ಅಪ್ಪಂದಿರ ದಿನ ಹತ್ತಿರ ಬಂದಿದೆ. ತಮ್ಮ ಸ್ಯಾಂಡಲ್​ವುಡ್(Sandalwood)ನಲ್ಲಿ ಸಹ ಅಪ್ಪ ಹಾಗೂ ಮಗನ ಸಂಬಂಧ ಎಂದರೆ ಹೀಗಿರಬೇಕು ಎಂದು ಕೆಲ ತಂದೆ – ಮಗನ ಜೋಡಿ ತೋರಿಸಿ ಜನರಿಗೆ ಹೇಳುತ್ತೇವೆ. ಅದರಲ್ಲಿ ಮುಖ್ಯವಾಗಿ ರಾಜರತ್ನ ಪುನೀತ್ ರಾಜ್​ಕುಮಾರ್ ಹಾಗೂ ವರನಟ ಡಾ ರಾಜ್​ಕುಮಾರ್​. ಇವರಿಬ್ಬರದ್ದು ಸ್ಯಾಂಡಲ್​​ವುಡ್​ನಲ್ಲಿ ಬಹಳ ಇಷ್ಟವಾಗುವ ಅಪ್ಪ ಮಗನ ಜೋಡಿ ಎನ್ನಬಹುದು. ಹಾಗಿತ್ತು ಅವರ ಸಂಬಂಧ. ಈ ಅದ್ಭುತ ಸಂಬಂಧದ ಹೇಗಿತ್ತು ಎಂಬ ಸಣ್ಣ ಸ್ಟೋರಿ ಇಲ್ಲಿದೆ.  

ಯಾವುದಕ್ಕೂ ಸಾಟಿ ಇಲ್ಲದ ಸಂಬಂಧ ಇದು

ಅಪ್ಪು ರಾಜ್​ಕುಮಾರ್ ಅವರ ಕಿರಿಯ ಮಗ, ಆದರೆ ಅವರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದವರೂ ಸಹ ಅವರೇ. ಅವರಿಬ್ಬರೂ ಹೆಚ್ಚಾಗಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಅವರ ಜೊತೆ ಹೆಚ್ಚು ಸಿನಿಮಾ ಮಾಡಿದವರು ಸಹ ಅಪ್ಪು. ಬಾಲ ನಟನಾಗಿ ಅಪ್ಪು ತಂದೆಯ ಜೊತೆಯೇ ಸಿನಿ ಜರ್ನಿ ಆರಂಭಿಸಿದವರು. ಅವರಿಬ್ಬರನ್ನು ಉದಾಹರಣೆಯಾಗಿ ಹೇಳಲಾಗುತ್ತದೆ ಅಷ್ಟರ ಮಟ್ಟಿಗೆ ಅದ್ಭುತವಾಗಿತ್ತು ಅವರ ಸಂಬಂಧ.ಅಲ್ಲದೇ, ಸಂದರ್ಶನವೊಂದರಲ್ಲಿ ತಂದೆ ಹಾಗೂ ಅವರ ಸಂಬಂಧದ ಬಗ್ಗೆ ಮಾತನಾಡಿದ್ದ ಅವರು ನಾನು ನನ್ನ ಬರ್ತ್​ ಡೇ ದಿನ ತಂದೆಯ ವಿಶ್​ ಮಿಸ್​ ಮಾಡ್ತೀನಿ ಎಂದಿದ್ದರು. ಅಲ್ಲದೇ, ಮತ್ತೊಂದು ಕಡೆ ಅವರಿಬ್ಬರೂ ಹೇಗೆ ಹೊರಗೆ ಹೋಗಿ ತಿನ್ನುತ್ತಿದ್ದರು ಎಂಬ ಅನುಭವವನ್ನು ಹಂಚಿಕೊಂಡಿದ್ದರು.

ಎಲ್ಲರಿಗೂ ಗೊತ್ತಿರುವಂತೆ ಮೊದಲಿನಿಂದಲೂ ಅಪ್ಪು ತಂದೆಯ ಜೊತೆ ಸಮಯ ಕಳೆದಿದ್ದು ಹೆಚ್ಚು. ಅವರ ಶೂಟಿಂಗ್ ಇದ್ದ ಕಡೆ ಅಪ್ಪು ಇರುತ್ತಿದ್ದರು. ಈಗಲೂ ಅಪ್ಪು ಹಾಗೂ ರಾಜ್​ಕುಮಾರ್ ಅವರ ಫೋಟೋಗಳು ಇದಕ್ಕೆ ಸಾಕ್ಷಿಯಾಗಿದೆ. ಇನ್ನು ಪುನೀತ್ ಅವರಿಗೆ ಫುಡ್​ ಎಂದರೆ ಬಹಳ ಇಷ್ಟ. ಹೊಸ ಹೊಸ ಸ್ಥಳಗಳನ್ನು ಹುಡುಕಿಕೊಂಡು ಅಲ್ಲಿನ ರುಚಿ ಸವಿಯಲು ಹೋಗುವ ಅಭ್ಯಾಸ ಅವರಿಗಿತ್ತು.  ಈ ಬಗ್ಗೆ ಒಂದು ತಮಾಷೆಯ ಘಟನೆಯನ್ನು ಸಹ ಅವರು ಹೇಳಿಕೊಂಡಿದ್ದರು.  ಪುನೀತ್ ಕೆಲವೊಮ್ಮೆ ತಾವು ಹೊರಗಡೆ ತಿನ್ನಲು ಹೋಗುವಾಗ ರಾಜ್​ಕುಮಾರ್ ಅವರನ್ನು ಸಹ ಕರೆದುಕೊಂಡು ಹೋಗುತ್ತಿದ್ದರಂತೆ. ಒಮ್ಮೆ ಹೀಗೆ ಹೊರಗೆ ಹೋಗಿದ್ದರಂತೆ, ಆಗ ಅಲ್ಲಿ ಬಿಲ್​ ನೋಡಿ ರಾಜ್​ಕುಮಾರ್ ಅವರು, ಇಷ್ಟೊಂದಾ ಎಂದು ಹೇಳಿದ್ದರಂತೆ.ಇದನ್ನೂ ಓದಿ: ಚಿಕ್ಕಣ್ಣ ಹೊಸ ಸಿನಿಮಾ ಶೂಟಿಂಗ್ ಸ್ಟಾರ್ಟ್, ಉಪಾಧ್ಯಕ್ಷರಾದ ಕಾಮಿಡಿ ಕಿಂಗ್

ಕೊನೆಯ ಸಿನಿಮಾದಲ್ಲೂ ಒಂದೇ ಸಂದೇಶ ನೀಡಿದ ತಂದೆ-ಮಗ

ಇನ್ನೊಂದು ವಿಚಾರ ಗೊತ್ತಾ ಅಪ್ಪು ಅಭಿಮಾನಿಗಳನ್ನು ಬಿಟ್ಟು ಹೋಗುವ ಮುನ್ನ ತಂದೆಯನ್ನು ನೆನೆದು ಫೋಟೋವೊಂದನ್ನು ಶೇರ್ ಮಾಡಿಕೊಂಡು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದರು. ಸಾವಿನ ಕೊನೆ ಘಳಿಗೆಯಲ್ಲಿ ತಂದೆ ಹಾಗೂ ತಂದೆಯ ಹುಟ್ಟೂರಾದ ಗಾಜನೂರನ್ನು ಕನವರಿಸಿದ್ದರಂತೆ ಪುನೀತ್. ಅಲ್ಲದೇ, ಕೆಲವೇ ದಿನಗಳ ಹಿಂದೆ ಅಪ್ಪನೊಂದಿಗೆ ಕಳೆದಿದ್ದ ಅಪರೂಪದ ಫೋಟೋವನ್ನು ಹಂಚಿಕೊಂಡು, ‘ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು’ ಎಂದು ಬರೆದುಕೊಂಡಿದ್ದರು ಅಪ್ಪು.

ಒಂದು ವಿಶೇಷ ಹಾಗೂ ವಿಚಿತ್ರ ವಿಚಾರ ಎಂದರೆ ಪುನೀತ್ ರಾಜ್​ಕುಮಾರ್ ಹಾಗೂ ರಾಜ್​ಕುಮಾರ್ ಅವರ ಕೊನೆಯ ಸಿನಿಮಾದ ಸಂದೇಶ ಒಂದೇ ಎಂಬುದು. ಹೌದು, ಅಣ್ಣಾವ್ರು ನಟಿಸಿದ್ದ ಕೊನೆಯ ಸಿನಿಮಾ ‘ಶಬ್ದವೇಧಿ’ಯಲ್ಲಿ ಡ್ರಗ್ಸ್​ ವಿರುದ್ಧ ಹೋರಾಡುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಅಪ್ಪು ಅವರ ಕೊನೆಯ ಸಿನಿಮಾ ‘ಜೇಮ್ಸ್​’ ಸಿನಿಮಾದಲ್ಲೂ ಪುನೀತ್​​ ರಾಜ್​​ಕುಮಾರ್​ ಕೂಡ ಡ್ರಗ್ಸ್​ ವಿರುದ್ಧ ಹೋರಾಡುವ ಸೈನಿಕನ ಪಾತ್ರದಲ್ಲಿ ಮಿಂಚಿದ್ದರು.

ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಜೊತೆ ಕೆಲ್ಸ ಮಾಡೋ ಆಸೆ ಇದೆಯಾ? ಹಾಗಾದ್ರೆ ಇಲ್ಲಿದೆ ಬಂಪರ್ ಅವಕಾಶ, ಇಷ್ಟು ಮಾಡಿ ಸಾಕು

ಇದು ಕಾಕತಾಳೀಯವಿರಬಹುದು, ಗೊತ್ತಿಲ್ಲ, ಆದರೆ ಈ ಸಿನಿಮಾದಲ್ಲಿನ ಸಾಮ್ಯತೆಯನ್ನು ನಾವು ಅಲ್ಲಗೆಳೆಯುವಂತಿಲ್ಲ. ಇದಿಷ್ಟೇ ಅಲ್ಲ ಅವರಿಬ್ಬರ ಸಂಬಂಧ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಘಟನೆಗಳು ಹಾಗೂ ಫೋಟೋಗಳಿವೆ. ಅವುಗಳನ್ನು ಹೇಳುತ್ತಾ ಹೋದಷ್ಟು ಮುಗಿಯುವುದಿಲ್ಲ.
Published by:Sandhya M
First published: