Allu Arjun: ವರದಕ್ಷಿಣೆ ಪಡೆದಿದ್ದರಾ 'ಪುಷ್ಪ.. ಪುಷ್ಪರಾಜ್'? ಅಲ್ಲು ಬಗ್ಗೆ ಮಾವ ಹೇಳಿದ್ದೇನು?

ಅಲ್ಲು ಅರ್ಜುನ್ ಅವರ ಮಾವ (Father-in-law) ಚಂದ್ರಶೇಖರ್ ತಮ್ಮ ಅಳಿಯನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮಗಳು ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರ್ಜುನ್ ಪ್ರೀತಿ (Love), ಸಂಸಾರದ ಬಗ್ಗೆ ಹೇಳಿದ್ದಾರೆ. ಮುಖ್ಯವಾಗಿ ಮದುವೆ (Marriage) ವೇಳೆ ಅಲ್ಲು ಅರ್ಜುನ್ ವರದಕ್ಷಿಣೆ (Dowry) ಪಡೆದಿದ್ದರಾ? ಇಲ್ಲವಾ ಎನ್ನುವ ಬಗ್ಗೆಯೂ ಚಂದ್ರಶೇಖರ್ ಸಂದರ್ಶನವೊಂದರಲ್ಲಿ (Interview) ಹೇಳಿದ್ದಾರೆ.

ಅಲ್ಲು ಅರ್ಜುನ್ ಹಾಗೂ ಮಾವ ಚಂದ್ರಶೇಖರ್

ಅಲ್ಲು ಅರ್ಜುನ್ ಹಾಗೂ ಮಾವ ಚಂದ್ರಶೇಖರ್

  • Share this:
ತೆಲುಗಿನ (Telugu) ಖ್ಯಾತ ನಟ (Actror) ಅಲ್ಲು ಅರ್ಜುನ್ (Allu Arjun) ‘ಪುಷ್ಪ-2’ (Pushpa 2) ಸಿನಿಮಾ (Cinema) ತಯಾರಿಯಲ್ಲಿದ್ದಾರೆ. ಅಭಿಮಾನಿಗಳೂ (Fans) ಸಹ ‘ಪುಷ್ಪರಾಜ್’ ಅಲಿಯಾಸ್ ಅಲ್ಲು ಅರ್ಜುನ್ ಹೋದಲ್ಲಿ ಬಂದಲ್ಲಿ ಎಲ್ಲಾ ಅದೇ ಪ್ರಶ್ನೆ ಕೇಳುತ್ತಿದ್ದಾರೆ, “ಪುಷ್ಪ 2 ಸಿನಿಮಾ ಯಾವಾಗ?” ಅಂತ. ಈ ನಡುವೆ ತಮ್ಮ ನೆಚ್ಚಿನ ನಟನ ಫ್ಯಾಮಿಲಿ (Family) ಬಗ್ಗೆಯೂ ತಿಳಿದುಕೊಳ್ಳೋದಕ್ಕೆ ಫ್ಯಾನ್ಸ್ ಕಾತರರಾಗಿದ್ದಾರೆ. ಇದೀಗ ಅಲ್ಲು ಅರ್ಜುನ್ ಅವರ ಮಾವ (Father-in-law) ಚಂದ್ರಶೇಖರ್ ತಮ್ಮ ಅಳಿಯನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಮಗಳು ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರ್ಜುನ್ ಪ್ರೀತಿ (Love), ಸಂಸಾರದ ಬಗ್ಗೆ ಹೇಳಿದ್ದಾರೆ. ಮುಖ್ಯವಾಗಿ ಮದುವೆ (Marriage) ವೇಳೆ ಅಲ್ಲು ಅರ್ಜುನ್ ವರದಕ್ಷಿಣೆ (Dowry) ಪಡೆದಿದ್ದರಾ? ಇಲ್ಲವಾ ಎನ್ನುವ ಬಗ್ಗೆಯೂ ಚಂದ್ರಶೇಖರ್ ಸಂದರ್ಶನವೊಂದರಲ್ಲಿ (Interview) ಹೇಳಿದ್ದಾರೆ. ಅವರ ಸಂದರ್ಶನದ ಪೂರ್ಣ ವಿವರ ಇಲ್ಲಿದೆ…

ವರದಕ್ಷಿಣೆ ಪಡೆದಿದ್ದರಾ ಅಲ್ಲು ಅರ್ಜುನ್?

ತೆಲುಗು ಸಂದರ್ಶನವೊಂದರಲ್ಲಿ ಅಲ್ಲು ಅರ್ಜುನ್ ಅವರ ಮಾವ ಚಂದ್ರಶೇಖರ್ ಅಳಿಯನ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ವರದಕ್ಷಿಣೆ ಪಡೆದಿದ್ದರಾ ಅಂತ ಆ್ಯಂಕರ್ ಕೇಳುತ್ತಾರೆ. ಅದಕ್ಕೆ ನೋ ಎಂದ ಚಂದ್ರಶೇಖರ್, ಅಲ್ಲು ಅರ್ಜುನ್ ಯಾವುದೇ ವರದಕ್ಷಿಣೆ ಪಡೆದಿಲ್ಲ. ಅಲ್ಲು ಕುಟುಂಬ ವರದಕ್ಷಿಣೆ ವಿರುದ್ಧವಾಗಿದೆ. ಅವರು ಅವರದ್ದೇ ಆದ ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ. ನಾವು ಅವರಿಗೆ ಕೊಡುವುದು ದೊಡ್ಡ ವಿಷಯ ಎಂದು ನಾನು ಭಾವಿಸುವುದಿಲ್ಲ ಅಂತ ಹೇಳಿದ್ದಾರೆ.

ಅಳಿಯನಿಗೆ ನೂರಕ್ಕೆ ನೂರರಷ್ಟು ಅಂಕ!

ಅಳಿಯ ಅಲ್ಲು ಅರ್ಜುನ್‌ ತುಂಬಾ ಒಳ್ಳೆಯವರು. ಅವರಿಗೆ 100ಕ್ಕೆ 100 ಅಂಕ ಕೊಡುತ್ತೇನೆ ಅಂತ ಚಂದ್ರಶೇಖರ್ ಹೇಳಿದ್ದಾರೆ. ಅಲ್ಲು ತೆಲುಗು ಮಾತ್ರವಲ್ಲದೇ ಇತರೆ ರಾಜ್ಯಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಜಮ್ಮು- ಕಾಶ್ಮೀರದಲ್ಲೂ ಅಲ್ಲು ಅರ್ಜುನ್ ಸಿನಿಮಾದ ಹಾಡುಗಳನ್ನು ಕೇಳುತ್ತಾರೆ. ಇದು ಕಠಿಣ ಶ್ರಮದಿಂದ ಮಾತ್ರ ಸಾಧ್ಯ ಅಂತ ಚಂದ್ರಶೇಖರ್ ಶ್ಲಾಫಿಸಿದ್ದಾರೆ.

ಇದನ್ನೂ ಓದಿ: Sanjjanaa Galrani: 'ಗಂಡ-ಹೆಂಡತಿ' ಬಾಳಲ್ಲಿ ರಂಗು ತುಂಬಿದ ಕಂದಮ್ಮ! ಮಗನ ಬಗ್ಗೆ ಸಂಜನಾ ಮನದ ಮಾತು

ಪ್ರೀತಿಸಿ ಮದುವೆಯಾಗಿದ್ದ ಅಲ್ಲು ಅರ್ಜುನ್, ಸ್ನೇಹಾ ರೆಡ್ಡಿ

ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಅಲ್ಲು ಅರ್ಜುನ್ ತನ್ನ ಸ್ನೇಹಿತನ ಮದುವೆಗೆಂದು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿ ಅವರು ಸ್ನೇಹಾ ರೆಡ್ಡಿಯನ್ನು ಮೊದಲು ಭೇಟಿಯಾದರು. ಸ್ನೇಹಿತ ಅಲ್ಲು ಅರ್ಜುನ್ ಅವರಿಗೆ ಸ್ನೇಹಾ ಅವರನ್ನು ಪರಿಚಯ ಮಾಡಿಕೊಟ್ಟರು. ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗೆ ಅಲ್ಲು ಅರ್ಜುನ್ ಮೊದಲ ನೋಟದಲ್ಲೇ ಸ್ನೇಹಾ ರೆಡ್ಡಿಗೆ ಮನಸೋತರು. ಬಳಿಕ ಇಬ್ಬರು ಪ್ರೀತಿಸಲು ಪ್ರಾರಂಭಿಸಿದರು. ನಂತರ ಮನೆಯವರ ಒಪ್ಪಿಗೆ ಪಡೆದು ಮಾರ್ಚ್ 6, 2011ರಲ್ಲಿ ಇಬ್ಬರು ಹಸೆಮಣೆ ಏರಿದರು.

ಅಲ್ಲು ಸಂಸಾರದಲ್ಲಿ ಇಬ್ಬರು ಮಕ್ಕಳು

ಅಲ್ಲು ಹಾಗೂ ಸ್ನೇಹಾ ರೆಡ್ಡಿಗೆ ಇಬ್ಬರು ಮಕ್ಕಳಿದ್ದಾರೆ. ಆರತಿಗೊಬ್ಬಳು ಮಗ, ಕೀರ್ತಿಗೊಬ್ಬಳು ಮಗಳು ಎನ್ನುವಂತೆ ಮಗ ಹಾಗೂ ಮಗಳಿದ್ದಾರೆ. ಮಗನ ಹೆಸರು ಅಲ್ಲು ಅಯಾನ್ ಹಾಗೂ ಮಗಳ ಹೆಸರು ಅಲ್ಲು ಆರ್ಹಾ.

ಇದನ್ನೂ ಓದಿ: Priyanka Chopra: ಪತ್ನಿಗೋಸ್ಕರ ಆರ್ಡರ್ ಕೊಟ್ಟು ಕಾರ್ ಮಾಡಿಸಿದ್ದಾರೆ ನಿಕ್ ಜೋನಸ್, ಹೇಗಿದೆ ನೋಡಿ ಪಿಗ್ಗಿ ಹೊಸಾ ಸವಾರಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ

ಇನ್ನು ಅಲ್ಲು ಅರ್ಜುನ್ ಮಾವ ಚಂದ್ರಶೇಖರ್ ಅವರ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ಅಲ್ಲು ಅರ್ಜುನ್‌ ಬಗ್ಗೆ ಮಾವ ಹೇಳಿದ್ದಕ್ಕೆ ಮೆಚ್ಚುಗೆಯ ಕಾಮೆಂಟ್ ಹರಿದು ಬರುತ್ತಿದೆ. ಅಭಿಮಾನಿಗಳು ಈ ವಿಡಿಯೋ ವೈರಲ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Published by:Annappa Achari
First published: