Urfi Javed: ಉರ್ಫಿ ಉಡುಪಿನ ಹಿಂದಿನ ಆಲೋಚನೆ ಭಾರೀ ಬೊಂಬಾಟ್! ಖ್ಯಾತ ಫ್ಯಾಷನ್ ಡಿಸೈನರ್ ಹೊಗಳಿಕೆ

ರಣವೀರ್ ಸಿಂಗ್ ಕೆಲ ದಿನಗಳ ಹಿಂದೆ ಉರ್ಫಿಯ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಹೊಗಳಿದ್ದರು. ಸದ್ಯ ಉರ್ಫಿ ಜಾವೇದ್ ರಣವೀರ್ ಸಿಂಗ್ ನಂತರ ಮತ್ತೊಬ್ಬ ಹೊಸ ಅಭಿಮಾನಿಯನ್ನು ಕಂಡುಕೊಂಡಿದ್ದಾರೆ. ಅದು ಬೇರೆ ಯಾರೂ ಅಲ್ಲ, ಫ್ಯಾಶನ್ ಡಿಸೈನರ್-ನಟಿಯಾಗಿರುವ ಫ್ಯಾಷನ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ಮಸಾಬ ಗುಪ್ತಾ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಬಾಲಿವುಡ್ ನಲ್ಲಿ (Bollywood) ರಣವೀರ್ ಸಿಂಗ್ ಮತ್ತು ಉರ್ಫಿ ಜಾವೇದ್ (Urfi Javed) ಈ ಇಬ್ಬರು ತಮ್ಮ ಚಿತ್ರ-ವಿಚಿತ್ರ ಡ್ರೆಸ್ ಗಳಿಂದ ಯಾವಾಗಲೂ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಉರ್ಫಿ ಜಾವೇದ್ ಅವರನ್ನು ಈ ಚಿತ್ರವಿಚಿತ್ರ ಬಟ್ಟೆಗಳ (Dresses) ಬ್ರ್ಯಾಂಡ್ ಅಂಬಾಸಿಡರ್ ಎನ್ನಬಹುದು. ನೆಟ್ಟಿಗರಂತೂ ಈಕೆ ತೊಡುವ ಬಟ್ಟೆಗಳಿಗೆ ಉರಿದು ಬೀಳುತ್ತಾರೆ. ಮೊದಲು ಸರಿಯಾಗಿ ಬಟ್ಟೆ ಹಾಕೋಳಮ್ಮ ಅಂತ ಕಾಮೆಂಟ್ (Comment) ಮಾಡುತ್ತಲೇ ಇರುತ್ತಾರೆ. ಆದರೆ ಫ್ಯಾಷನ್ (Fashion) ಪ್ರಿಯರಿಗೆ ಉರ್ಫಿ ಜಾವೇದ್ ರೋಲ್ ಮಾಡೆಲ್ ಆಗಿಬಿಟ್ಟಿದ್ದಾರೆ. ದೊಡ್ಡ ದೊಡ್ಡ ಡಿಸೈನರ್ ಗಳು (Designer) ಈಕೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಹಲವಾರು ಬ್ಯ್ರಾಂಡ್ ಗಳು ಇವಳ ಹಿಂದೆ ಸುತ್ತುತ್ತಿದ್ದಾರೆ.

ಹೌದು, ರಣವೀರ್ ಸಿಂಗ್ ಕೆಲ ದಿನಗಳ ಹಿಂದೆ ಉರ್ಫಿಯ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಹೊಗಳಿದ್ದರು. ಸದ್ಯ ಉರ್ಫಿ ಜಾವೇದ್ ರಣವೀರ್ ಸಿಂಗ್ ನಂತರ ಮತ್ತೊಬ್ಬ ಹೊಸ ಅಭಿಮಾನಿಯನ್ನು ಕಂಡುಕೊಂಡಿದ್ದಾರೆ. ಅದು ಬೇರೆ ಯಾರೂ ಅಲ್ಲ, ಫ್ಯಾಶನ್ ಡಿಸೈನರ್-ನಟಿಯಾಗಿರುವ ಫ್ಯಾಷನ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ಮಸಾಬ ಗುಪ್ತಾ.

ಉಡುಪಿನ ಹಿಂದಿನ ಆಲೋಚನೆ
ಸದ್ಯ ಇವರು ಪ್ರಸ್ತುತ ತಮ್ಮ ಮುಂಬರುವ ವೆಬ್ ಸೀರೀಸ್ ಮಸಾಬ ಮಸಾಬಾ ಸೀಸನ್ 2 ಅನ್ನು ಪ್ರಚಾರ ಮಾಡುತ್ತಿದ್ದಾರೆ. ಸೀರೀಸ್ ಪ್ರಚಾರದ ವೇಳೆ ಉರ್ಫಿಯ ಬಟ್ಟೆಗಳ ಆಯ್ಕೆ ಬಗ್ಗೆ ಹೊಗಳಿದ್ದಾರೆ. ಅವಳ ಪ್ರತಿ ಉಡುಪಿನ ಹಿಂದಿನ ಆಲೋಚನೆ ಉತ್ತಮವಾಗಿರುತ್ತದೆ ಎಂದು ಉರ್ಫಿಯನ್ನು ಪ್ರಶಂಸಿದ್ದಾರೆ.

ಉರ್ಫಿ ಬಟ್ಟೆಗಳಿಗೆ ಫುಲ್ ಮಾರ್ಕ್ಸ್ ನೀಡಿದ ಮಸಾಬ ಗುಪ್ತಾ
Red FM 93.5ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಚಿತ್ರರಂಗದಲ್ಲಿ ನಟಿಯಾಗಿ ಮತ್ತು ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ 33 ವರ್ಷದ ಮಸಾಬ ಗುಪ್ತಾ ಮಾತನಾಡಿ, "ನಾನು ಉರ್ಫಿ ಜಾವೇದ್ ಅವರಿಂದ ಕಲಿಯಲು ಬಯಸುತ್ತೇನೆ. ಅವಳು ಫ್ಯಾಷನ್ ಗಾಗಿ ತುಂಬಾ ಶ್ರಮ ಹಾಕುತ್ತಾಳೆ. ಯಾವುದೇ ಡಿಸೈನರ್, ಯಾವುದೇ ಬ್ರ್ಯಾಂಡ್‌ಗಿಂತ ಹೆಚ್ಚಾಗಿ, ಅವಳು ನಿಜವಾಗಿಯೂ ಪ್ರತಿದಿನ ತನ್ನ ಬಟ್ಟೆಗಳ ಮೇಲೆ ಕೆಲಸ ಮಾಡುತ್ತಾಳೆ. ನಾನು ಅವಳ ಆಯ್ಕೆಗಳಿಗೆ ಮತ್ತು ಶ್ರಮಕ್ಕೆ ಫುಲ್ ಮಾರ್ಕ್ಸ್ ಕೊಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Priyanka Chopra: ಹೊಸ ಕ್ಯಾಪ್ಟನ್ ಮಾರ್ವೆಲ್ ಆಗಿ ಬಾಲಿವುಡ್​ ಬೆಡಗಿ, ಸೂಪರ್​ ವುಮೆನ್​ ಆಗ್ತಾರಾ ಪ್ರಿಯಾಂಕಾ?

“ಪ್ರತಿಯೊಂದು ಉಡುಪಿನ ಹಿಂದೆ ಒಂದು ಆಲೋಚನೆ ಇರುತ್ತದೆ. ಅವಳು ತನ್ನ ಫೋಟೋಗಳನ್ನು ಎಲ್ಲಿ ತೆಗೆದುಕೊಳ್ಳಬೇಕೆಂದು ಬಯಸುತ್ತಾಳೆ ಎಂಬುದರ ಹಿಂದೆ ಒಂದು ಆಲೋಚನೆ ಇದೆ. ಕೂದಲು ಮತ್ತು ಮೇಕಪ್ ಹಿಂದೆಯೂ ಒಂದು ಆಲೋಚನೆ ಇದೆ. ಇದು ಬಹಳಷ್ಟು ಕಷ್ಟದ ಕೆಲಸ. ಕಂಟೆಂಟ್ ಮಾಡುವುದು, ಎಡಿಟ್ ಮಾಡುವುದು ಸುಲಭ ಎಂದು ಜನರು ಭಾವಿಸುತ್ತಾರೆ. ಆದರೆ ಇದು ನಿಜಕ್ಕೂ ಕಷ್ಟವಾದ ಕೆಲಸ. ಆದರೆ ಉರ್ಫಿ ಜಾವೇದ್ ಪ್ರತಿದಿನ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾಳೆ. ಹೀಗಾಗಿ ಅವಳ ಆಲೋಚನೆ, ಹಾರ್ಡ್ ವರ್ಕ್ ನನಗಿಷ್ಟ ಎಂದು ಹಾಡಿ ಹೊಗಳಿದ್ದಾರೆ.

ಉರ್ಫಿಯನ್ನು ಮೆಚ್ಚಿಕೊಂಡ ರಣವೀರ್ ಸಿಂಗ್
ಪಾಪರಾಜಿಗಳ ಫೇವರಿಟ್ ಆಗಿರುವ ಉರ್ಫಿ ಜಾವೇದ್ ಟ್ರೋಲ್ ಆಗದೇ ಇರುವ ದಿನಗಳೇ ಇತ್ತೀಚೆಗೆ ಇಲ್ಲ. ಕೆಲ ದಿನಗಳ ಹಿಂದಿನ ಕಾಫಿ ವಿತ್ ಕರಣ್ ಸೀಸನ್ 7 ನಲ್ಲಿ ರಣವೀರ್ ಸಿಂಗ್ ತನ್ನ ಫ್ಯಾಷನ್ ಆಯ್ಕೆಗಳ ಬಗ್ಗೆ ಮಾತನಾಡಿದ್ದರು. ರ್‍ಯಾಪಿಡ್ ಫೈರ್ ರೌಂಡಿನಲ್ಲಿ, ರಣವೀರ್ ಉರ್ಫಿ ಡ್ರೆಸ್ಸಿಂಗ್ ಶೈಲಿಯನ್ನು ಮೆಚ್ಚಿಕೊಂಡಿದ್ದರು ಮತ್ತು ಫ್ಯಾಷನ್ ಐಕಾನ್ ಎಂದು ರಣವೀರ್ ಹೇಳಿದ್ದರು. ಕರಣ್ ಜೋಹರ್ ಕೂಡ ಇದಕ್ಕೆ ಧ್ವನಿಗೂಡಿಸಿ ಉರ್ಫಿಯನ್ನು ಹೊಗಳಿದ್ದರು.

ಇದನ್ನೂ ಓದಿ:  Urfi Javed: ರಣವೀರ್​ ಹೀಗಿದ್ರೆ ಇಷ್ಟ ಎಂದ ಉರ್ಫಿ, ಬಾಲಿವುಡ್​ ನಟನ ಬೆಂಬಲಕ್ಕೆ ನಿಂತ ಫ್ಯಾಷನ್ ಕ್ವೀನ್​

ಇತ್ತೀಚೆಗೆ ಮ್ಯಾಗ್ ಜಿನ್ ಒಂದಕ್ಕೆ ನಗ್ನವಾಗಿ ಫೋಟೋ ಶೂಟ್ ಮಾಡಿಸಿಕೊಂಡು ರಣವೀರ್ ಸಿಂಗ್ ಸಕತ್ ಸುದ್ದಿಯಲ್ಲಿದ್ದರು. ಈ ವೇಳೆ ಉರ್ಫಿ ರಣವೀರ್ ಫೋಟೋಶೂಟ್ ಗೆ ಫುಲ್ ಫಿಧಾ ಆಗಿದ್ದಳು, ಮತ್ತೆ ರಣವೀರ್ ಸಿಂಗ್ 2ನೇ ಮದುವೆಯಾಗುವುದಾದರೆ ನಾನು ರೆಡಿ ಅಂತಾ ಹುಚ್ಚುಚ್ಚಾಗಿ ಹೇಳಿಕೆ ಸಹ ನೀಡಿದ್ಲು.
Published by:Ashwini Prabhu
First published: