Prathyusha Garimella: ಅನುಮಾನಾಸ್ಪದವಾಗಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲ ಸಾವು, ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ ಪೊಲೀಸರು

Fashion designer Prathyusha Garimella: ಮೂಲಗಳ ಪ್ರಕಾರ ಅವರ ಮೃತದೇಹ ಬಾತ್ ರೂಮ್​ನಲ್ಲಿ ಪತ್ತೆಯಾಗಿದ್ದು, ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಂಜಾರಾ ಹಿಲ್ಸ್‌ನ ಸರ್ಕಲ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಪ್ರತ್ಯೂಷಾ ಗರಿಮೆಲ್ಲ

ಪ್ರತ್ಯೂಷಾ ಗರಿಮೆಲ್ಲ

  • Share this:
ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ (Fashion designer) ಪ್ರತ್ಯೂಷಾ ಗರಿಮೆಲ್ಲಾ (Prathyusha Garimella) ಶನಿವಾರ ತೆಲಂಗಾಣದ ಹೈದರಾಬಾದ್‌ನಲ್ಲಿರುವ (Hyderabad)  ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು (Dead), ಅವರ ಮೃತ ದೇಹ ಪತ್ತೆಯಾಗಿದೆ. ಪ್ರತ್ಯುಷಾ ಗರಿಮೆಲ್ಲ ಎಂಬ ಹೆಸರಿನ ತನ್ನದೇ ಡಿಸೈನರ್ (designer) ಲೇಬಲ್‌ನ ಸಂಸ್ಥಾಪಕಿಯಾಗಿದ್ದ ಪ್ರತ್ಯುಷಾ, ಬಂಜಾರಾ ಹಿಲ್ಸ್‌ನಲ್ಲಿ ಫ್ಯಾಶನ್ ಸ್ಟುಡಿಯೋವನ್ನು ನಡೆಸುತ್ತಿದ್ದರು ಮತ್ತು ಟಾಲಿವುಡ್ (Tollywood), ಬಾಲಿವುಡ್ (Bollywood) ಮತ್ತು ಇತರ ಕ್ಷೇತ್ರಗಳ ಟಾಪ್ ಕ್ಲೈಂಟ್‌ಗಳನ್ನು ಸಹ ಹೊಂದಿದ್ದ ಡಿಸೈನರ್​ಗಳಲ್ಲಿ ಒಬ್ಬರಾಗಿದ್ದಾರೆ.

ಬಾತ್​ ರೂಮ್​ನಲ್ಲಿ ಮೃತ ದೇಹ ಪತ್ತೆ 

ಮೂಲಗಳ ಪ್ರಕಾರ ಅವರ ಮೃತ ದೇಹ ಬಾತ್ ರೂಮ್​ನಲ್ಲಿ ಪತ್ತೆಯಾಗಿದ್ದು, ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಂಜಾರಾ ಹಿಲ್ಸ್‌ನ ಸರ್ಕಲ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆಯ ನಂತರವೇ ತಿಳಿಯಬೇಕಿದೆ. ಆದರೆ ಅವರು ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಜಾರ ಹಿಲ್ಸ್‌ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣದಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿದ್ದಾರೆ.

ಕಳೆದ ವರ್ಷ, ಪ್ರತ್ಯುಷಾ ಫೆಮಿನಾಗೆ ತನ್ನ ಫ್ಯಾಶನ್ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಯುಕೆಯಲ್ಲಿ ಮಾಸ್ಟರ್​ ಡಿಗ್ರಿ ಮಾಡಿದ್ದಾರೆ. ನಂತರ ತನ್ನ ತಂದೆಯ ವ್ಯಾಪಾರವಾದ ಎಲ್ಇಡಿ ಉತ್ಪಾದನಾ ಕಂಪನಿಗೆ ಸೇರಿಕೊಂಡಿದ್ದಾರೆ, ಆದರೆ ಅದರಲ್ಲಿ ಆಸಕ್ತಿ ಇಲ್ಲ ಎಂದು, ಫ್ಯಾಷನ್​ ಕ್ಷೇತ್ರದತ್ತ ಮುಖ ಮಾಡಿದ್ದರು.

ಪ್ರತ್ಯುಷಾ ಟಾಲಿವುಡ್‌ನ ಅನೇಕ ಜನಪ್ರಿಯ ಸೆಲೆಬ್ರಿಟಿಗಳಿಗೆ ಮತ್ತು ಬಾಲಿವುಡ್‌ನಲ್ಲಿ ಸಹ  ಕೆಲ ಸೆಲೆಬ್ರಿಟಿಗಳಿಗೆ ಕೆಲಸ ಮಾಡಿದ್ದಾರೆ. ಯುಕೆಯ ವಾರ್ವಿಕ್ ವಿಶ್ವವಿದ್ಯಾನಿಲಯದಿಂದ ವ್ಯವಹಾರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ  2013 ರಲ್ಲಿ ತನ್ನದೇ ಆದ ಲೇಬಲ್ ಪ್ರತ್ಯುಷಾ ಗರಿಮೆಲ್ಲಾ ಪ್ರಾರಂಭಿಸಿ, ಸಕ್ಸಸ್ ಆಗಿದ್ದರು.

ರವೀನಾ ಟಂಡನ್, ನೇಹಾ ಧೂಪಿಯಾ, ಶ್ರೀಯಾ ಶರಣ್, ಕಾಜಲ್ ಅಗರ್ವಾಲ್‌, ರಾಕುಲ್ ಪ್ರೀತ್ ಸಿಂಗ್, ಲಕ್ಷ್ಮೀ ಮಂಚು, , ಹುಮಾ ಖುರೇಷಿ, ರಾಣಾ ದಗ್ಗುಬಾಟಿ, ಕಾಜೋಲ್, ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಡಿಸೈನ್ ಮಾಡಿದ್ದಾರೆ.

ಇದನ್ನೂ ಓದಿ: ನಯನತಾರಾ ಮದುವೆಗೆ ಬಂದ್ ಶಾರುಖ್ ಖಾನ್ ಟ್ರೋಲ್, ಇಷ್ಟ್​ ಬೇಗ ಕೊರೊನಾ ಹೋಯ್ತಾ ಎಂದ ನೆಟ್ಟಿಗರು

ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ನಾನು ಯಾವಾಗಲೂ ಫ್ಯಾಶನ್ ಕಡೆಗೆ ಒಲವು ಹೊಂದಿದೆ, ಹಾಗಾಗಿ ಅದನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಡಿಸೈನಿಂಗ್ ಪದವಿ ಪಡೆದಿಲ್ಲ, ಅದು ಕೇವಲ ನನ್ನ ಹವ್ಯಾಸವಾಗಿತ್ತು.  ಅದನ್ನೇ ವೃತ್ತಿ ಮಾಡಿಕೊಳ್ಳುವಂತೆ ನನಗೆ ನನ್ನ ಸ್ನೇಹಿತರು ಹಲವಾರು ಬಾರಿ ಸಲಹೆ ನೀಡಿದ್ದಾರೆ. ಹಾಗಾಗಿ ನಾನು ಒಂದು ಸಣ್ಣ ಪ್ರದರ್ಶನವನ್ನು ಮಾಡಿದ್ದೆ, ನನ್ನ ಡಿಸೈನ್​ ಕೇವಲ ಒಂದೆರೆಡು ಗಂಟೆಗಳಲ್ಲಿ ಮಾರಾಟವಾಗಿದ್ದವು. ಇದು ನನಗೆ ನನ್ನ ಕಂಪೆನಿ ಆರಂಭಿಸಲು ಸ್ಫೂರ್ತಿ ನೀಡಿತು ಎಂದು  ತಾವು ಈ ಫ್ಯಾಷನ್ ವೃತ್ತಿಗೆ ಬಂದ ರೀತಿಯನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇನ್ನು ಮೂಲಗಳ ಪ್ರಕಾರ 36 ವರ್ಷದ ಪ್ರತ್ಯೂಷಾ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದು ಪೊಲೀಸರಿಗೆ ಸಿಕ್ಕಿದೆ. ನನ್ನ ತಂದೆ-ತಾಯಿಗೆ ನಾನು ಹೊರೆಯಾಗುವುದಕ್ಕೆ ಇಷ್ಟಪಡುವುದಿಲ್ಲ. ನನಗೆ ಒಂಟಿ ಎಂಬ ಭಾವ ಕಾಡುತ್ತಿದೆ ಎಂದು ಬರೆದಿದ್ದಾರೆ. ಅಲ್ಲದೇ ಅವರಿಗೆ ಮದುವೆ ಆಗಿರಲಿಲ್ಲ. ಶುಕ್ರವಾರ ಸಂಜೆ ಸ್ನೇಹಿತರ ಜೊತೆಗೆ ಪಾರ್ಟಿ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದ ಪ್ರತ್ಯೂಷಾ, ಶನಿವಾರ ಕೂಡ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಗರಡಿ ಸಿನಿಮಾದ ಸ್ಪೆಷಲ್ ಪೋಸ್ಟರ್ ರಿಲೀಸ್, ಕುಸ್ತಿ ಅಖಾಡದಲ್ಲಿ ನಟ ಸೂರ್ಯ ಭರ್ಜರಿ ಪೋಸ್​

2 ದಿನ ಕಳೆದರೂ ಸಹ ಪ್ರತ್ಯೂಷಾ ಮನೆಗೆ ಬಂದಿರಲಿಲ್ಲ, ಅಲ್ಲದೇ ಸಂಪರ್ಕಕ್ಕೆ ಸಹ ಬಂದಿರಲಿಲ್ಲ, ಇದರಿಂದ ಗಾಬರಿಯಾದ ಪೋಷಕರು, ಪ್ರತ್ಯೂಷಾರಾ ಆಪ್ತರಿಗೆ, ಸ್ನೇಹಿತರಿಗೆ ಕರೆಮಾಡಿ ವಿಚಾರಿಸಿದ್ದಾರೆ. ಆದರೆ ಯಾವುದೇ ಮಾಹಿತಿ ಲಭಿಸಿರಲಿಲ್ಲ. ಇನ್ನು ಶನಿವಾರ ಬೆಳಗ್ಗೆ ಪ್ರತ್ಯೂಷಾರ ಸ್ಟುಡಿಯೋ ಕಟ್ಟಡದ ವಾಚ್‌ಮ್ಯಾನ್‌ ಕರೆ ಮಾಡಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪ್ರಕಾರ ಶುಕ್ರವಾರ ರಾತ್ರಿಯೇ ಸ್ಟುಡಿಯೋಗೆ ಬಂದ ಪ್ರತ್ಯೂಷಾ, ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ. ಎಷ್ಟೇ ಬೆಲ್‌ ಮಾಡಿದರು, ಅವರ ಹೆಸರನ್ನು ಕರೆದರೂ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಹೆದರಿದ ಪೋಷಕರೇ ಬಾಗಿಲು ಮುರಿದು ಒಳಗೆ ಹೋದಾಗ ಪ್ರತ್ಯೂಷಾ ಶವ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Published by:Sandhya M
First published: