• Home
  • »
  • News
  • »
  • entertainment
  • »
  • Farzi-Shahid Kapoor: ಶಾಹಿದ್-ವಿಜಯ್ ಸೇತುಪತಿ ಕಾಂಬಿನೇಷನ್​ನಲ್ಲಿ ಹೊಸ ಥ್ರಿಲ್ಲರ್! ಫರ್ಜಿಗೆ ಹೆಚ್ಚಿದ ಕುತೂಹಲ

Farzi-Shahid Kapoor: ಶಾಹಿದ್-ವಿಜಯ್ ಸೇತುಪತಿ ಕಾಂಬಿನೇಷನ್​ನಲ್ಲಿ ಹೊಸ ಥ್ರಿಲ್ಲರ್! ಫರ್ಜಿಗೆ ಹೆಚ್ಚಿದ ಕುತೂಹಲ

ಫರ್ಜಿಯಲ್ಲಿ ಶಾಹಿದ್ ಕಪೂರ್-ವಿಜಯ್ ಸೇತುಪತಿ

ಫರ್ಜಿಯಲ್ಲಿ ಶಾಹಿದ್ ಕಪೂರ್-ವಿಜಯ್ ಸೇತುಪತಿ

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ವಿಜಯ್ ಸೇತುಪತಿ ಅವರ ಬಹುನಿರೀಕ್ಷಿತ ಫರ್ಜಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಪ್ರೇಕ್ಷಕರು ಕಾಯುತ್ತಿರೋ ಆ್ಯಕ್ಷನ್ ಥ್ರಿಲ್ಲರ್ ಸಿರೀಸ್ ಕುರಿತು ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

  • News18 Kannada
  • Last Updated :
  • Bangalore, India
  • Share this:

ಬಾಲಿವುಡ್ (Bollywood) ನಟ ಶಾಹೀದ್ ಕಪೂರ್ (Shahid Kapoor) ಒಟಿಟಿಗೆ (OTT) ಎಂಟ್ರಿ ಕೊಡ್ತಿದ್ದಾರೆ. ಬಾಲಿವುಡ್​ನ ಚಾಕೊಲೇಟ್, ರೊಮ್ಯಾಂಟಿಕ್ ಹೀರೋ ಶಾಹಿದ್ ಅವರದ್ದು ಇದು ಮೊದಲ ಒಟಿಟಿ ಪ್ರಾಜೆಕ್ಟ್. ಅದೇ ರೀತಿ ಇಲ್ಲಿ ಇನ್ನೊಂದು ಕುತೂಹಲಕಾರಿ ವಿಚಾರ ಏನೆಂದರೆ ಇದರಲ್ಲಿ ಶಾಹಿದ್​​ಗೆ ಜೋಡಿಯಾಗಿರುವುದು ಕಾಲಿವುಡ್​ನ  (Kollywood)ವಿಜಯ್ ಸೇತುಪತಿ (Vijay Sethupathi). ಇವರಿಬ್ಬರ ಸಖತ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಫರ್ಜಿ ಸಿರೀಸ್ ಅಮೆಝಾನ್ ಪ್ರೈಮ್​ನಲ್ಲಿ ರಿಲೀಸ್ ಆಗಲಿದೆ. ಪ್ರೇಕ್ಷಕರು ಇದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ಕುರಿತು ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.


ಶಾಹಿದ್ ಕಪೂರ್ ಅವರು ಹೊಸ ವರ್ಷದಲ್ಲಿ ಹೊಸ ಪ್ರಯಾಣಕ್ಕೆ ಫುಲ್ ರೆಡಿಯಾಗಿದ್ದಾರೆ. ಬಾಲಿವುಡ್​ನ ಸ್ಟಾರ್ ನಟ ಒಟಿಟಿ ಎಂಟ್ರಿಗೆ ಸಿದ್ಧರಾಗಿದ್ದಾರೆ. ಅವರ ಮುಂದಿನ ಆ್ಯಕ್ಷನ್ ಥ್ರಿಲ್ಲರ್ ಫರ್ಜಿ ರಿಲೀಸ್​ಗೆ ರೆಡಿಯಾಗಿದೆ. ವಿಜಯ್ ಸೇತುಪತಿ ಜೊತೆ ಭರ್ಜರಿ ಕಾಂಬಿನೇಷನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಹಾಗೂ ಡಿಕೆ ಕಾಂಬಿನೇಷನ್​ನಲ್ಲಿ ಈ ಸಿರೀಸ್ ಸೆಟ್ಟೇರಿದೆ. ತಂಡವು ವಿಜಯ್ ಹಾಗೂ ಶಾಹಿದ್ ಅವರ ಫಸ್ಟ್ ಲುಕ್ ಕೂಡಾ ರಿಲೀಸ್ ಮಾಡಿದೆ.


ಜನವರಿ 4 ರಂದು ಶಾಹಿದ್ ಕಪೂರ್ ಹೊಸ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದು ವೆಬ್ ಸಿರೀಸ್​ನ ಬಗ್ಗೆ ಕೆಲವು ಪ್ರಮುಖ ಸುಳಿವುಗಳನ್ನು ಕೊಟ್ಟಿದೆ. ಫೆಬ್ರವರಿ 10 ರಂದು ಪ್ರೀಮಿಯರ್ ಆಗಲಿರುವ ಅಮೆಜಾನ್ ಪ್ರೈಮ್ ವೀಡಿಯೋದೊಂದಿಗೆ ನಿರ್ಮಾಪಕರು ಕೂಡಾ ಪಾಲುದಾರರಾಗಿದ್ದಾರೆ.
ವಿಜಯ್ ಗನ್ ಹಿಡಿದು ಕ್ಯಾಮೆರಾ ನೋಡುತ್ತಿದ್ದು ವಿಲನ್ ಲುಕ್ ಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆಗೆ ಭಾರತೀಯ ಕರೆನ್ಸಿಯನ್ನು ಮುದ್ರಿಸಿ ವಿಶಿಷ್ಟ ವಿನ್ಯಾಸವನ್ನು ನೀಡಲಾಗಿದೆ. ಮತ್ತೊಂದೆಡೆ, ಶಾಹಿದ್ ತನ್ನ ಒರಟಾದ ಉಡುಪಿನಲ್ಲಿ ನಗುತ್ತಾ ಕ್ಯಾಮರಾವನ್ನು ಎದುರಿಸಿದ್ದಾರೆ. ಇದರಲ್ಲಿ ನಟನ ರೆಬಲ್ ಲುಕ್ ಕಾಣಬಹುದು.
ಯಾಗಾವ ರಿಲೀಸ್?


ಫೆಬ್ರವರಿ 10ರಂದು ಫರ್ಜಿ ಅಮೆಝಾನ್ ಪ್ರೈಮ್​ನಲ್ಲಿ ರಿಲೀಸ್ ಆಗಲಿದೆ. ಹಲವು ಎಪಿಸೋಡ್​ಗಳಾಗಿ ಪ್ರಸಾರವಾಗಲಿದ್ದು ಒಟಿಟಿ ಪ್ರೇಕ್ಷಕರ ದಂಡು ಈ ದಿನಕ್ಕಾಗಿ ಕುತೂಹಲದಿಂದ ಕಾಯುತ್ತಿದೆ. ಅಂತೂ ಇದೊಂದು ಬಿಗ್ ಹಿಟ್ ಆಗುತ್ತೆ ಎನ್ನುತ್ತಿದ್ದಾರೆ ನೆಟ್ಟಿಗರು.ಈ ಸಿರೀಸ್​ನಲ್ಲಿ ರಾಶಿ ಖನ್ನಾ, ಕೆಕೆ ಮೆನೋನ್, ಅಮೋಲ್ ಪಾಲೆಕರ್, ರೆಜಿನಾ ಕಸ್ಸಾಂದ್ರ, ಹೊಸ ಮುಖ ಭುವನ ಅರೋರಾ ನಟಿಸಿದ್ದಾರೆ. ಎಂಟು ಎಪಿಸೋಡ್​ಗಳನ್ನು ಹೊಂದಿರುವ ಈ ವೆಬ್ ಸಿರೀಸ್ ಒಂದು ರೀತಿಯ ಕ್ರೈಂ ಥ್ರಿಲ್ಲರ್ ಕೂಡಾ ಹೌದು.ಈಗಾಗಲೇ ಫ್ಯಾಮಿಲಿ ಮ್ಯಾನ್​ನಂತರ ಬಿಗ್ ಹಿಟ್ ಕೊಟ್ಟಿರುವ ಕಾಂಬಿನೇಷನ್​ನಲ್ಲಿ ಸೌತ್ ಹಾಗೂ ನಾರ್ತ್​ ಇಂಡಸ್ಟ್ರಿಯ ನಟ ಒಂದಾಗಿದ್ದು ಇದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ. ಶಾಹಿದ್ ಈ ರೀತಿ ರೆಬೆಲ್ ಪಾತ್ರದಲ್ಲಿ ಕಾಣುವ ಕುತೂಗಲ ಒಂದುಕಡೆಯಾದರೆ ಇನ್ನೊಂದು ಕಡೆ ಈಗಾಗಲೇ ವಿಕ್ರಮ್​ನಂತಹ ಸಿನಿಮಾದಲ್ಲಿ ವಿಲನ್ ಆಗಿ ಟೆರರ್ ಮೂಡಿಸಿದ ವಿಜಯ್ ಸೇತುಪತಿ ಹೇಗಿರ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

Published by:Divya D
First published: