Puneeth Rajkumar: ಮನೆಯಂಗಳದಲ್ಲೇ `ಪರಮಾತ್ಮ’ನ ಪುತ್ಥಳಿ ನಿರ್ಮಾಣ: ಪ್ರತಿದಿನ ದಂಪತಿಯಿಂದ ಅಪ್ಪುಗೆ ಮೊದಲ ಪೂಜೆ!

ಅಪ್ಪು ಅವರ ಮತ್ತೊಬ್ಬ ಅಭಿಮಾನಿಯೊಬ್ಬರು ತಮ್ಮ ಮನೆಯ ಅಂಗಳದಲ್ಲೇ ಅಪ್ಪು ಅವರ ಕಂಚಿನ ಪುತ್ಥಳಿ(Bronze Statue)ಯನ್ನು ಅನಾವರಣ ಮಾಡಿದ್ದಾರೆ. ಅಪ್ಪು ಅವರಿಗೆ ದೇವರ ಸ್ಥಾನ ಕೊಡಲಾಗಿದೆ. ಪ್ರತಿದಿನ ಮೊದಲ ಪೂಜೆ ಈ ಪುತ್ಥಳಿಗೆ ಮಾಡಲಾಗುತ್ತಿದೆ.

ಮನೆಯಂಗಳದಲ್ಲೇ ಅಪ್ಪು ಪುತ್ಥಳಿ

ಮನೆಯಂಗಳದಲ್ಲೇ ಅಪ್ಪು ಪುತ್ಥಳಿ

  • Share this:
ಕರುನಾಡಿನ ಮಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​(Puneeth Rajkumar) ದೈಹಿಕವಾಗಿ ಇಂದು ನಮ್ಮ ಜೊತೆ ಇಲ್ಲ. ಅವರು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಇಡೀ ಕರ್ನಾಟಕ(Karnataka)ಕ್ಕೆ ಆವರಿಸಿರುವ ಸೂತಕ ಮಾತ್ರ ಹಾಗಯೇ ಇದೆ. ಎಷ್ಟೆ ಆದರೂ ಯಾರ ಮಗ ಹೇಳಿ.. ಡಾ.ರಾಜ್​​ಕುಮಾರ್(Dr. Rajkumar)​ ಅವರ ತೃತೀಯ ಪುತ್ರ ಪವರ್​ ಸ್ಟಾರ್​ ಅಪ್ಪನ ಹಾಗೇ ಅಪ್ಪು ಬದುಕಿದರೇ ಹೀಗೆ ಬದುಕಬೇಕು ಎಂದು ಎಲ್ಲರಿಗೂ ತೋರಿಸಿ ಇಹಲೋಕ ತ್ಯಜಿಸಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಎಲ್ಲರೂ ಒಪ್ಪಿಕೊಂಡು ಹೋಗಬೇಕು. ಅವರು ಮಾಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಅಳವಡಿಸಿಕೊಂಡಿದ್ದಾರೆ. ಪ್ರತಿದಿನ ಅಪ್ಪು(Appu) ಅವರನ್ನು ನೆನಪು ಮಾಡಿಕೊಳ್ಳವ ಕಾರ್ಯಕ್ರಮಗಳು ನಡೆಯುತ್ತಲೇ ಇದೆ.ಮೊನ್ನೆ ನಡೆದ ಕೇಕ್​ ಶೋ(Cake Show)ನಲ್ಲಿ ಚಾಕೋಲೆಟ್​(Chocolate)ನಲ್ಲಿ ಅಪ್ಪು ಪುತ್ಥಳಿ ಮಾಡಲಾಗಿತ್ತು. ಅದನ್ನು ಕಂಡು ಫ್ಯಾನ್ಸ್​ ಭಾವುಕರಾಗಿದ್ದರು. ಇದೀಗ ಅಪ್ಪು ಅವರ ಮತ್ತೊಬ್ಬ ಅಭಿಮಾನಿಯೊಬ್ಬರು ತಮ್ಮ ಮನೆಯ ಅಂಗಳದಲ್ಲೇ ಅಪ್ಪು ಅವರ ಕಂಚಿನ ಪುತ್ಥಳಿ(Bronze Statue)ಯನ್ನು ಅನಾವರಣ ಮಾಡಿದ್ದಾರೆ. ಅಪ್ಪು ಅವರಿಗೆ ದೇವರ ಸ್ಥಾನ ಕೊಡಲಾಗಿದೆ. ಪ್ರತಿದಿನ ಮೊದಲ ಪೂಜೆ ಈ ಪುತ್ಥಳಿಗೆ ಮಾಡಲಾಗುತ್ತಿದೆ. ಈ ವಿಚಾರಕ ಕೇಳಿದ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಸಂತಸ ವ್ಯಕ್ತಪಡಿಸಿದ್ದಾರೆ. 

ಮನೆಯಂಗಳದಲ್ಲೇ ಪುನೀತ್​ ಕಂಚಿನ ಪುತ್ಥಳಿ!

‘ಒಮ್ಮೆಯಾದರೂ ನಟ ಪುನೀತ್ ರಾಜಕುಮಾರ್ ಅವರನ್ನು ನೋಡುವ ಆಸೆಯಿತ್ತು. ಆದರೆ, ಪುನೀತ್ ಅವರ ಅಕಾಲಿಕ ನಿಧನದಿಂದ ಸಾಧ್ಯವಾಗಿಲ್ಲ. ಹೀಗಾಗಿಯೇ, ಮನೆಯಂಗಳದಲ್ಲಿ  ಪುನೀತ್ ರಾಜಕುಮಾರ್ ಅವರ ಕಂಚಿನ ಪುತ್ಥಳಿ ಸ್ಥಾಪಿಸುವ ಮೂಲಕ ಅಭಿಮಾನ ಮೆರೆದ ದಂಪತಿಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಕೂಡ್ಲಿಗಿ ತಾಲೂಕಿನ ಸಿದ್ದಾಪುರ ವಡ್ಡರಹಟ್ಟಿಯಲ್ಲಿ ಆರ್.ಟಿ.ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅವರ ಅಭಿಮಾನದ ಸಾಕ್ಷಿಯಾಗಿ ತಮ್ಮ ಮನೆಯ ಅಂಗಳದಲ್ಲೇ ಪುನೀತ್ ರಾಜ್ ಅವರ ಪುತ್ಥಳಿ ಅನಾವರಣಗೊಂಡಿದೆ.



ಇದನ್ನು ಓದಿ : ದೊಡ್ಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನ: ಅಪ್ಪು ಪಡೆದಿದ್ದ 2.5 ಕೋಟಿ ಅಡ್ವಾನ್ಸ್​ ವಾಪಸ್​ ಕೊಟ್ಟ ಅಶ್ವಿನಿ!

ಅಪ್ಪು ಕಂಚಿನ ಪುತ್ಥಳಿಗೆ 50 ಸಾವಿರ ಖರ್ಚು! 

ಪುನೀತ್​ ರಾಜ್​ಕುಮಾರ್​ ಎಂದರೆ ಈ ದಂಪತಿಗೆ ಪಂಚಪ್ರಾಣ. ನಟನ ಮೇಲಿನ ಗೌರವ ಮತ್ತು ಅಭಿಮಾನದಿಂದ ಮನೆಯಂಗಳದಲ್ಲಿ ಪುನೀತ್ ರಾಜಕುಮಾರ ಅವರ ಕಂಚಿನ ಪುತ್ಥಳಿಯನ್ನು ನಿರ್ಮಿಸಿದ್ದಾರೆ. 50 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ರೈತ ದಂಪತಿಗಳಾದ ಆರ್​.ಟಿ. ನಾಗರಾಜ್​ ಮತ್ತ ಮತ್ತು ಮಲ್ಲಮ್ಮ ಪುನೀತ್​ ಕಂಚಿನ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಮನೆಯಂಗಳದಲ್ಲಿ ಸ್ಥಾಪಿಸಿರುವ ನಟ ಪುನೀತರ ಕಂಚಿನ ಪುತ್ಥಳಿಯನ್ನು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಸದಸ್ಯ ಲೋಕೇಶ್ ವಿ.ನಾಯಕ ಅನಾವರಣಗೊಳಿಸಿದ್ದಾರೆ.

ಇದನ್ನು ಓದಿ : ಮಕ್ಕಳ ಜೊತೆ ಮಗುವಾದ ಶಿವಣ್ಣ: ಖೋ ಖೋ ಆಡುತ್ತಿರುವ ಹಳೆ​ ವಿಡಿಯೋ ವೈರಲ್​!

ಮತ್ತೊಂದೆಡೆ ಅಪ್ಪು ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳು

ಪುನೀತ್​ ರಾಜ್​ಕುಮಾರ್​ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹಲವು ರಸ್ತೆಗಳಿಗೆ ಹಾಗೂ ಪಾರ್ಕ್​ಗೆ ಪುನೀತ್​ ಹೆಸರನ್ನು ಇಡುವ ಕೆಲಸ ನಡೆದಿದೆ. ಅದೇ ರೀತಿ ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿಗಾಗಿ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಸಾಗರ ರಸ್ತೆಯಲ್ಲಿನ ಕುಕ್ಕಳಲೆ ಗ್ರಾಮದ ಸಂಪರ್ಕ ರಸ್ತೆಗೆ ಊರಿನ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆಯವರು ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದರು. ಡಿಸೆಂಬರ್​ 23ರ ತಡರಾತ್ರಿ ಕೆಲವು ಕಿಡಿಗೇಡಿಗಳು ಆ ನಾಮಫಲಕಕ್ಕೆ ಬಿಳಿ ಬಣ್ಣವನ್ನು ಹಚ್ಚಿದ್ದಾರೆ.
Published by:Vasudeva M
First published: