Farhan Akhtar: ಮುದ್ದಿನ ಸಾಕು ನಾಯಿಗಳೊಂದಿಗೆ ಫರ್ಹಾನ್‌ ಸಿಂಗಿಂಗ್; ವಿಡಿಯೋ ವೈರಲ್

ಬಾಲಿವುಟ್‌ ನಟ ಫರ್ಹಾನ್‌ ಅಖ್ತರ್‌ ಕೂಡ ತಮ್ಮ ಮನೆಯಲ್ಲಿ ಎರಡು ಮುದ್ದಾದ ನಾಯಿಗಳನ್ನ ಸಾಕಿದ್ದಾರೆ. ಅದರಲ್ಲೂ ತನ್ನ ಮುದ್ದಿನ ನಾಯಿಗಳ ಜೊತೆ ಹಾಡನ್ನ ಹಾಡಿದ್ದಾರೆ. ಅದೂ ಗಿಟಾರ್‌ ನುಡಿಸುತ್ತ ಕೂಲ್‌ ಆಗಿ ಹಾಡ್ತಿದ್ದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಿನ್ನೆ ಭಾನುವಾರ ಮಾಡಿದಂಥ ಈ ವಿಡಿಯೋವನ್ನು ಸ್ವತಃ ಫರ್ಹಾನ್‌ ಅಖ್ತರ್‌ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ನಟ ಫರ್ಹಾನ್‌  ಮತ್ತು ಸಾಕು ನಾಯಿಗಳು

ನಟ ಫರ್ಹಾನ್‌ ಮತ್ತು ಸಾಕು ನಾಯಿಗಳು

  • Share this:
ನಾಯಿಗಳನ್ನು (Dogs) ಸಾಕೋದು ಇತ್ತೀಚಿಗೆ ತುಂಬಾ ಜನರ ಹಾಬಿ. ಅದರಲ್ಲೂ ಕ್ಯೂಟ್‌ ಕ್ಯೂಟ್‌ ಆಗಿರೋ ನಾಯಿಗಳನ್ನ ಮನೆ ಜನರ ಹಾಗೆಯೇ ನೋಡಿಕೊಳ್ಳೋದು ಸಾಮಾನ್ಯವಾಗಿದೆ. ಸಾಮಾನ್ಯ ಜನರಂತೆಯೇ ಸೆಲೆಬ್ರಿಟಿಗಳು ಕೂಡ ಒಂದಲ್ಲ ಒಂದು ಪೆಟ್‌ ಸಾಕೋದು ಇತ್ತೀಚಿಗೆ ಕಾಮನ್‌ ಆಗಿದೆ. ಅಂಥವರ ಮನೆಯ ನಾಯಿಗಳು ಅವರ ಹಾಗೆಯೇ ಸೆಲೆಬ್ರಿಟಿಗಳಾಗುತ್ತವೆ (Celebrities) ಅನ್ನೋದೂ ನಿಜ.  ಇತ್ತೀಚಿಗೆ ಪೆಟ್‌ ಸಾಕೋದು ಒಂದು ಫ್ಯಾಷನ್.‌ ಅದಕ್ಕೆಂದೇ ವಿಶೇಷ ರೀತಿಯ ಆಹಾರ ಹಾಕೋದು.. ಅದನ್ನು ವಾಕ್‌ ಮಾಡಿಸೋದು.. ಅದನ್ನು ಪೆಟ್‌ ಪಾರ್ಲರ್‌ ಗೆ (Pet Parlour) ಕರೆದುಕೊಂಡು ಹೋಗಿ ಸ್ನಾನ ಮಾಡಿಸೋದು.. ಹೇರ್‌ ಕಟ್‌ ಮಾಡಿಸೋದು.. ಪೆಟ್‌ ಗಳನ್ನು ರಾಯಲ್‌ ಆಗಿ ನೋಡಿಕೊಂಡು ಅದರ ಜೊತೆ ಫೋಟೋ, ವಿಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ (Social Media) ಹಾಕೋದು ಇಂದಿನ ಟ್ರೆಂಡ್‌.

ಮುದ್ದಿನ ನಾಯಿಗಳ ಜೊತೆ ಕಾಲ ಕಳೆದ ನಟ ಫರ್ಹಾನ್‌
ವಿಷ್ಯ ಏನಪ್ಪ ಅಂದ್ರೆ ಬಾಲಿವುಟ್‌ ನಟ ಫರ್ಹಾನ್‌ ಅಖ್ತರ್‌ ಕೂಡ ತಮ್ಮ ಮನೆಯಲ್ಲಿ ಎರಡು ಮುದ್ದಾದ ನಾಯಿಗಳನ್ನ ಸಾಕಿದ್ದಾರೆ. ಅದರಲ್ಲೂ ತನ್ನ ಮುದ್ದಿನ ನಾಯಿಗಳ ಜೊತೆ ಹಾಡನ್ನ ಹಾಡಿದ್ದಾರೆ. ಅದೂ ಗಿಟಾರ್‌ ನುಡಿಸುತ್ತ ಕೂಲ್‌ ಆಗಿ ಹಾಡ್ತಿದ್ದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಿನ್ನೆ ಭಾನುವಾರ ಮಾಡಿದಂಥ ಈ ವಿಡಿಯೋವನ್ನು ಸ್ವತಃ ಫರ್ಹಾನ್‌ ಅಖ್ತರ್‌ ತಮ್ಮ ಇನ್‌ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ವೀಕೆಂಡ್‌ ಅಂದ್ರೆ ಎಲ್ಲರೂ ರೆಸ್ಟ್‌ ಮಾಡ್ತಾರೆ ಅಥವಾ ಸುತ್ತೋಕೆ ಹೋಗ್ತಾರೆ. ಇನ್ನೂ ಕೆಲವರು ತಮ್ಮಿಷ್ಟದ ಕೆಲಸದಲ್ಲಿ ತೊಡಗುತ್ತಾರೆ. ಹಾಗೆಯೇ ನಟ ಫರ್ಹಾನ್‌ ಅಖ್ತರ್‌ ಕೂಡ ತಮ್ಮಿಷ್ಟದ ನಾಯಿಗಳೊಂದಿಗೆ ಸಮಯ ಕಳೆದಿದ್ದಾರೆ.

ವಿಡಿಯೋದಲ್ಲೇನಿದೆ?
ಸಿಂಪಲ್‌ ಟಿ ಶರ್ಟ್‌ ತೊಟ್ಟು, ತೆಲೆಗೆ ಬ್ಯಾಂಡ್‌ ಹಾಕಿದ್ದ ನಟ ಫರ್ಹಾನ್‌ ಅಖ್ತರ್‌ ಸಖತ್‌ ಕೂಲ್‌ ಆಗಿ ಕಾಣ್ತಾ ಇದ್ರು. ಇನ್ನು ಗಿಟಾರ್‌ ನುಡಿಸುತ್ತ ಫರ್ಹಾನ್‌ ಅಖ್ತರ್‌ ಹಾಡ್ತಾ ಇದ್ರೆ ಜೊತೆಗೆ ನಾಯಿಗಳೂ ತಮಗೆ ಬಂದ ಹಾಗೆ ಹಾಡುತ್ತಿದ್ದವು. ಇದು ಸಖತ್‌ ಕ್ಯೂಟ್‌ ಆಗಿ ಕಾಣುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಫರ್ಹಾನ್‌ ಅಖ್ತರ್‌, ಜಿಮ್‌ ಮತ್ತು ಟೈ ಜೊತೆಗೆ ಸನ್‌ ಡೇ ಅನ್ನೋ ಕ್ಯಾಪ್ಶನ್‌ ಬರೆದುಕೊಂಡಿದ್ದಾರೆ. ಇದರ ಜೊತೆಗೆ ಹ್ಯಾಶ್‌ ಟ್ಯಾಗ್‌ ಹಾಕಿ ಡಾಗ್ಸ್‌ ಆರ್‌ ದ ಬೆಸ್ಟ್‌ ಅಂತ ಬರೆದು ಹಾರ್ಟ್‌ ಎಮೋಜಿ ಕೂಡ ಹಾಕಿದ್ದಾರೆ.
ಇದನ್ನೂ ಓದಿ:  Disha Patani: ಬ್ಯೂಟಿ ಕ್ವೀನ್‌ಗೆ ಗೋಲ್ಡನ್ ಕ್ರೌನ್! ಪಡ್ಡೆಗಳ ಎದೆಯ ದಶದಿಕ್ಕುಗಳಲ್ಲೂ ಕಿಚ್ಚು ಹಚ್ಚಿದ ದಿಶಾ ಪಾಟ್ನಿ

ವಿಡಿಯೋ ನೋಡಿ ನಟ ನಟಿಯರು ಏನಂದ್ರು
ಫರ್ಹಾನ್‌ ಅಖ್ತರ್‌ ಹಾಕಿರೋ ಈ ವಿಡಿಯೋಗೆ ಲಕ್ಷಾಂತರ ಜನ ಲೈಕ್‌ ಕೊಟ್ಟಿದ್ದಾರೆ. ಅಲ್ಲದೇ ಬಾಲಿವುಡ್‌ ನ ನಟ ನಟಿಯರೂ ಕಾಮೆಂಟ್‌ ಮಾಡಿದ್ದಾರೆ. ಫರ್ಹಾನ್‌ ಅಖ್ತರ್‌ ಪತ್ನಿ ಶಿಬಾನಿ ದಂಡೇಕರ್‌ ವರ್ಡ್‌ ಟೂರ್‌ ಗೆ ಕಾಯುತ್ತಿರೋದಾಗಿ ಕಾಮೆಂಟ್‌ ಮಾಡಿದ್ದಾರೆ.

ನಟ ಮೃಣಾಲ್‌ ಠಾಕೂರ್‌, OMG, ಈ ಬಾಂಡ್‌ ನಲ್ಲಿ ನಾನೂ ಜಾಯಿನ್‌ ಆಗಲಾ ಅಂತಾ ಕಾಮೆಂಟ್‌ ನಲ್ಲಿ ಕೇಳಿದ್ದಾರೆ. ಇನ್ನು ನಟಿ ಕೃತಿ ಸೆನೋನ್‌ ಹಾಗೂ ಗೌಹರ್‌ ಖಾನ್‌ ಈ ವಿಡಿಯೋವನ್ನು ಅದ್ಭುತ ಅಂತ ವರ್ಣಿಸಿದ್ದಾರೆ.

ನಟ ಫರ್ಹಾನ್‌ ಅವರ ಮುಂದಿನ ಸಿನೆಮಾ 
ಇನ್ನು ಬಾಲಿವುಡ್‌ ನ ಬೇಡಿಕೆಯ ಹಾಗೂ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಫರ್ಹಾನ್‌ ಅಖ್ತರ್‌, ಜೀ ಲೇ ಝರಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಯರಾದ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್‌ ಹಾಗೂ ಕತ್ರಿನಾ ಕೈಫ್‌ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ: Pushpa 2: ಪುಷ್ಪ 2 ಐಟಂ ಸಾಂಗ್​​ನಲ್ಲಿ ಸಮಂತಾ ಇರಲ್ಲ! ಬಾಲಿವುಡ್​ನಿಂದ ಬರ್ತಿರೋ ಬ್ಯೂಟಿ ಯಾರು?

ಅಂದಹಾಗೆ ಫರ್ಹಾನ್‌ ಅಖ್ತರ್‌ ಕಳೆದ ಚಿತ್ರ ತೂಫಾನ್‌ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಮೃಣಾಲ್‌ ಠಾಕೂರ್‌ ಹಾಗೂ ಪರೇಶ್‌ ರಾವಲ್‌ ಕೂಡ ನಟಿಸಿದ್ದರು. ಈ ಚಿತ್ರ ಕಳೆದ ವರ್ಷ ಜುಲೈನಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು.
Published by:Ashwini Prabhu
First published: