• Home
 • »
 • News
 • »
 • entertainment
 • »
 • Farah Khan: ತಂದೆ ತೀರಿಕೊಂಡಾಗ 30 ರೂ. ಇಟ್ಟುಕೊಂಡಿದ್ದ ಫರಾ ಈಗ 360 ಕೋಟಿಗಳ ಒಡತಿ

Farah Khan: ತಂದೆ ತೀರಿಕೊಂಡಾಗ 30 ರೂ. ಇಟ್ಟುಕೊಂಡಿದ್ದ ಫರಾ ಈಗ 360 ಕೋಟಿಗಳ ಒಡತಿ

ಫರಾ ಖಾನ್

ಫರಾ ಖಾನ್

ಫರಾ ಖಾನ್ ಅವರ ಬಾಲ್ಯ ತುಂಬಾನೇ ನೋವಿನಿಂದ ಕೂಡಿತ್ತು ಅಂತ ತುಂಬಾ ಜನರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ. ಅವರು ತನ್ನ ಸಹೋದರ ಸಾಜಿದ್ ಮತ್ತು ತಾಯಿಯೊಂದಿಗೆ ತಮ್ಮ ತಂದೆಯ ಮರಣದ ನಂತರ ಆರ್ಥಿಕವಾಗಿ ತುಂಬಾ ಕಷ್ಟಪಟ್ಟಿದ್ದರು.

 • Trending Desk
 • 4-MIN READ
 • Last Updated :
 • Bangalore, India
 • Share this:

ಹಿಂದಿ ಭಾಷೆಯ ಬಿಗ್‌ಬಾಸ್ ನ (Bigg boss) ಸೀಸನ್ 16 ರಲ್ಲಿ ವಿವಿಧ ಸ್ಪರ್ಧಿಗಳ ಕುಟುಂಬ ಸದಸ್ಯರು ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಈ ಸೀಸನ್‌ನಲ್ಲಿ ಸ್ಪರ್ಧಿಯಾಗಿರುವ ತನ್ನ ಸಹೋದರ ಸಾಜಿದ್ ಖಾನ್ (Sajid Khan) ಅವರನ್ನು ಭೇಟಿಯಾಗಲು ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿಯಾದ ಫರಾ ಖಾನ್ (Farah Khan) ಮನೆಗೆ ಭೇಟಿ ನೀಡಿದರು. ಅವತ್ತು ಇನ್ನೊಂದು ವಿಶೇಷತೆ ಎಂದರೆ ಫರಾ ಅವರ ಹುಟ್ಟುಹಬ್ಬವಾಗಿತ್ತು. ಇದನ್ನು ಅವರು ತಮ್ಮ ಸಹೋದರ ಮತ್ತು ಮನೆಯ ಇತರ ಸ್ಪರ್ಧಿಗಳೊಂದಿಗೆ ಆಚರಿಸಿಕೊಂಡರು.


ಫರಾಹ್ ಖಾನ್ ಸಹೋದರ ಸಾಜಿದ್ ಖಾನ್ ಅವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲು ಶೋಗೆ ಪ್ರವೇಶಿಸುವುದನ್ನು ನೀವು ನೋಡಬಹುದು. ಅಷ್ಟೇ ಅಲ್ಲದೆ ಅವರು ಅಲ್ಲಿರುವ ಸ್ಪರ್ಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಅವರಿಗೆ ತಮಾಷೆಯ ಟೈಟಲ್ ಕೂಡಾ ನೀಡಿದ್ದಾರೆ. ಶಿವ ಥಾಕರೆ, ಅಬ್ದು ರೋಜಿಕ್ ಮತ್ತು ಎಂ.ಸಿ.ಸ್ಟಾನ್ ಅವರೊಂದಿಗೆ ಅವರು ಭಾವನಾತ್ಮಕ ಕ್ಷಣವನ್ನು ಕಳೆದರು. ಅವರೆಲ್ಲರನ್ನು ಆಕೆ ನನಗೆ ಸಿಕ್ಕ ಹೊಸ ಸಹೋದರರು ಎಂದು ಕರೆದಿದ್ದಾರೆ.


ಸದಾ ಹಸನ್ಮುಖಿಯಾಗಿರುವ ಫರಾ ಬಾಲ್ಯ ತುಂಬಾನೇ ನೋವಿನಿಂದ ಕೂಡಿತ್ತು


ಸದಾ ಹಸನ್ಮುಖಿಯಾಗಿರುವ ಫರಾ ಖಾನ್ ಅವರ ಬಾಲ್ಯ ತುಂಬಾನೇ ನೋವಿನಿಂದ ಕೂಡಿತ್ತು ಅಂತ ತುಂಬಾ ಜನರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ. ಅವರು ತನ್ನ ಸಹೋದರ ಸಾಜಿದ್ ಮತ್ತು ತಾಯಿಯೊಂದಿಗೆ ತಮ್ಮ ತಂದೆಯ ಮರಣದ ನಂತರ ಆರ್ಥಿಕವಾಗಿ ತುಂಬಾನೇ ಹೆಣಗಾಡಬೇಕಾಯಿತಂತೆ.
ಬಿಗ್‌ಬಾಸ್ ಸೀಸನ್ 16 ರ ಒಂದು ಸಂಚಿಕೆಯಲ್ಲಿ, ಸಾಜಿದ್ ಖಾನ್ ತಮ್ಮ ತಂದೆ ಕಮ್ರಾನ್ ಚಲನಚಿತ್ರ ನಿರ್ದೇಶಕರಾಗಿದ್ದರು. ಅವರು ಎಷ್ಟು ಶ್ರೀಮಂತರಾಗಿದ್ದರು ಅಂತ ಹೇಳಿದ್ದರು. ಆದರೂ ಒಂದು ಸಿನಿಮಾ ಫ್ಲಾಪ್ ಆದ ನಂತರ ಅವರ ಜೀವನವು ಸಂಪೂರ್ಣವಾಗಿ ಬದಲಾಯಿತು ಅಂತ ಸಹ ಹೇಳಿಕೊಂಡಿದ್ದರು.


ತಮ್ಮ ತಂದೆಯ ಬಗ್ಗೆ ಏನ್ ಹೇಳಿದ್ರು ನೋಡಿ ಫರಾ


ಫ್ಲಾಪ್ ಆದ ಚಿತ್ರದಲ್ಲಿ ತಮ್ಮ ಉಳಿತಾಯ ಮಾಡಿದ್ದ ಹಣವನ್ನೆಲ್ಲಾ ಕಳೆದುಕೊಂಡ ನಂತರ, ಅವರು ಕುಡಿತದ ದಾಸರಾಗಿದ್ದರು. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು. ಅಂತಿಮವಾಗಿ ಅವರು ಕೊನೆಯುಸಿರೆಳೆದಾಗ, ಅವರ ಅಂತ್ಯಕ್ರಿಯೆ ಮಾಡಲು ಸಹ ಕುಟುಂಬದವರ ಬಳಿ ಹಣ ಇರಲಿಲ್ಲ.


ಆಗ ಸಾಜಿದ್ ಖಾನ್ ಅವರು ತಮ್ಮ ಸಂಬಂಧಿಕರ ಮನೆಗಳಿಗೆ ಹೋದರು. ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಅವರು ಅಂತಿಮವಾಗಿ ಅವರಿಗೆ ಸ್ವಲ್ಪ ಹಣವನ್ನು ನೀಡಿದರು ಎಂದು ಹಂಚಿಕೊಂಡಿದ್ದಾರೆ. ಅವರು ಅಂತಿಮ ವಿಧಿಗಳನ್ನು ಗೌರವಯುತವಾಗಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಕೆಲವು ದಿನಗಳವರೆಗೆ ಅವರಿಗೆ ಅಡುಗೆ ಮಾಡಿಕೊಂಡು ತಿನ್ನಲು ಪಡಿತರವನ್ನು ಸಹ ಖರೀದಿಸಿ ಕೊಟ್ಟರು ಅಂತ ಹೇಳಿದರು.


ಇಂಡಿಯನ್ ಐಡಲ್ 13 ರ ಸಂಚಿಕೆಯಲ್ಲಿ ತಮ್ಮ ನೋವಿನ ಕಥೆಯನ್ನ ಹಂಚಿಕೊಂಡ ಫರಾಹ್


ಇಂಡಿಯನ್ ಐಡಲ್ 13 ರ ಸಂಚಿಕೆಯಲ್ಲಿ, ಫರಾಹ್ ಖಾನ್ ತಮ್ಮ ಹಿಂದೆ ಯಾರೂ ಇರಲಿಲ್ಲ, ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಯಿತು ಎಂದು ಹಂಚಿಕೊಂಡಿದ್ದರು. ನೃತ್ಯ ಸಂಯೋಜಕರಾಗಿ ಕೆಲಸ ಮಾಡುತ್ತಿರುವಾಗ ಅವರು ಆರು ವರ್ಷಗಳವರೆಗೆ ಸಂಬಂಧಿಕರ ಮನೆಯ ಸ್ಟೋರ್ ರೂಂನಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದರು. ತಮ್ಮ ತಂದೆ ತೀರಿಕೊಂಡಾಗ ತಮ್ಮ ಬಳಿ ಕೇವಲ 30 ರೂಪಾಯಿ ಇತ್ತು. ಅವರಿಗೆ ವಿದಾಯ ಹೇಳಲು ಸಹ ಹೆಣಗಾಡಬೇಕಾಯಿತು ಎಂದು ಫರಾಹ್ ಅವರು ಕಣ್ಣೀರು ಸುರಿಸಿದರು.


ಇದನ್ನೂ ಓದಿ: Rishab Shetty: ಬಾಲಿವುಡ್ ಮಂದಿಗೆ ರಿಷಬ್ ಶೆಟ್ಟಿ ಧನ್ಯವಾದ ಹೇಳಿದ್ಯಾಕೆ? ಇಲ್ಲಿದೆ ನೋಡಿ ಆ ಹೊಸ ವಿಷಯ!


ಫರಾಹ್ ಒಬ್ಬ ಪ್ರತಿಭಾವಂತ ನೃತ್ಯಗಾರ್ತಿಯಾಗಿದ್ದರಿಂದ, ನೃತ್ಯ ಸಂಯೋಜಕಿಯಾಗಿ ದೊಡ್ಡ ಹೆಸರು ಮಾಡಲು ಸಾಧ್ಯವಾಯಿತು. ಊಟಿಯಲ್ಲಿ ‘ಜೋ ಜೀತಾ ವೋಹಿ ಸಿಕಂದರ್’ ಚಿತ್ರೀಕರಣದ ಸಮಯದಲ್ಲಿ, ನೃತ್ಯ ಸಂಯೋಜಕರು ಬರಲಿಲ್ಲ, ಮತ್ತು "ಪೆಹ್ಲಾ ನಶಾ" ಹಾಡನ್ನು ನಿರ್ದೇಶಿಸಲು ಅವರನ್ನು ಕೇಳಲಾಯಿತು. ಹೀಗೆ ಇವರು ತಮ್ಮ ಮೊದಲ ಚಿತ್ರವನ್ನು ಪಡೆದರು. ಅಲ್ಲಿಂದ ಇವರು ತಮ್ಮ ವೃತ್ತಿಜೀವನದಲ್ಲಿ ಯಾವತ್ತೂ ಹಿಂದಕ್ಕೆ ತಿರುಗಿ ನೋಡಲಿಲ್ಲ.


ನೃತ್ಯ ಸಂಯೋಜಕಿಯಾಗಿ ಪ್ರಶಸ್ತಿಗಳನ್ನು ಗೆದ್ದ ನಂತರ, ಫರಾ ಖಾನ್ ‘ಮೈ ಹೂಂ ನಾ’ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಅವರು ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಮತ್ತು ತೀಸ್ ಮಾರ್ ಖಾನ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಜನಪ್ರಿಯ ರಿಯಾಲಿಟಿ ಟಿವಿ ಶೋ ಗಳ ನಿರೂಪಕಿ ಮತ್ತು ತೀರ್ಪುಗಾರರು ಸಹ ಆಗಿದ್ದಾರೆ.

Published by:Divya D
First published: