Samantha: ಅಬ್ಬೋ, ಆ ಕಾಸ್ಟ್ಲಿ ಕಾರ್​ ಖರೀದಿಸಿದ್ರಾ ಸಮಂತಾ? ಏನ್​ ಗುರೂ ಕೋಟಿಗಳಿಗೆ ಬೆಲೆನೇ ಇಲ್ವಾ!

ಎಷ್ಟೇ ಬ್ಯುಸಿಯಾಗಿದ್ದರು ಸೋಷಿಯಲ್​ ಮೀಡಿಯಾದಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ ಬ್ಯೂಟಿ ಕ್ವೀನ್ (Beauty Queen)​. ಅಭಿಮಾನಿಗಳಿಗೆ ದಿನನಿತ್ಯ ಏನಾದರು ಅಪ್ಡೇಟ್ ನೀಡುತ್ತಿರುತ್ತಾರೆ ಸಮಂತಾ.

ಸಮಂತಾ

ಸಮಂತಾ

  • Share this:
ಸಮಂತಾ (Samantha) ದಕ್ಷಿಣ ಭಾರತದ ಕ್ಯೂಟೆಸ್ಟ್ (Cutest)​ ನಟಿ ಅಂದರೆ ತಪ್ಪಾಗಲ್ಲ. ಡಿವೋರ್ಸ್ (Divorce)​ ಆದ ಮೇಲಂತೂ ಇನ್ನೂ ಕ್ಯೂಟ್​ ಆಗಿಬಿಟ್ಟಿದ್ದಾರೆ ಸಮಂತಾ ಅನ್ನುತ್ತಿದ್ದಾರೆ  ಅವರ ಅಭಿಮಾನಿಗಳು. ಡಿವೋರ್ಸ್​ ಆದ ಬಳಿಕ ಹೆಚ್ಚು ಬೋಲ್ಡ್ (Bold)​ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತುಂಡು ಬಟ್ಟೆಗಳನ್ನು ತೊಟ್ಟು ಪಡ್ಡೆ ಹೈಕ್ಳ ಹೃದಯಕ್ಕೆ ಬೆಂಕಿ (Fire) ಹಚ್ಚುತ್ತಿದ್ದಾರೆ. ತೆಲುಗು (Telugu) , ತಮಿಳು (Tamil) ಸಿನಿಮಾಗಳ ಜೊತೆಗೆ ಬಾಲಿವುಡ್‌ (Bollywood) ನಲ್ಲೂ ಸಾಲು ಸಾಲು ಆಫರ್‌ಗಳನ್ನು ಪಡೆಯುತ್ತಾ ಸಮಂತಾ ರುಥು ಪ್ರಭು ಬ್ಯುಸಿಯಾಗಿದ್ದಾರೆ. ಎಷ್ಟೇ ಬ್ಯುಸಿಯಾಗಿದ್ದರು ಸೋಷಿಯಲ್​ ಮೀಡಿಯಾದಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ ಬ್ಯೂಟಿ ಕ್ವೀನ್ (Beauty Queen)​. ಅಭಿಮಾನಿಗಳಿಗೆ ದಿನನಿತ್ಯ ಏನಾದರು ಅಪ್ಡೇಟ್ ನೀಡುತ್ತಿರುತ್ತಾರೆ. ಸಮಂತಾ ಡ್ರೆಸ್ಸಿಂಗ್ ಬಗ್ಗೆ ಟ್ರೋಲ್ (Troll) ಮಾಡುವುದು ಸಾಮಾನ್ಯ ಸಂಗತಿಯಲ್ಲ. ಡ್ರೆಸ್ಸಿಂಗ್ ಸೆನ್ಸ್ ಮೇಲೆ ಬಂದ ಟ್ರೋಲಿಂಗ್​​ಗೆ ಸಮಂತಾ ಯಾವ ರೇಂಜ್​​ನಲ್ಲಿ ಕಿಡಿಕಾರಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ.

ಸಮಂತಾ ಕಾರಿನಿಂದ ಇಳಿಯೋ ವಿಡಿಯೋ ವೈರಲ್​!

ಯಾವುದೇ ಸಿನಿಮಾ ಮಾಡಿದರೂ.. ಯಾವುದೇ ನಾಯಕನ ಜೊತೆ ನಟಿಸಿದರೂ ಸಮಂತಾ ವೈರಲ್ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಸಮಂತಾ ಅವರ ವಿಡಿಯೋವೊಂದು ವೈರಲ್ ಆಗಿತ್ತು. ಸಮಂತಾ ಕಾರಿನಿಂದ ಇಳಿದು ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಇದೀಗ ಈ ವಿಡಿಯೋ ಬಗ್ಗೆ ನೆಟಿಜನ್‌ಗಳು ನಾನಾ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಮಂತಾ ಯಾವ ಕಾರಿನಲ್ಲಿ ಬಂದಿದ್ದರು? ಅವಳ ಬಳಿ ಆ ಕಾರು ಇದೆಯೇ? ಯಾವಾಗ ಖರೀದಿಸಲಾಗಿದೆ ಎಂಬ ಬಗ್ಗೆ ನಾನಾ ಅನುಮಾನಗಳಿಗೆ ಕಾರಣವಾಗಿದೆ.

ರೋಲ್ಸ್​ ರಾಯ್ಸ್​ ಕಾರು ಖರೀದಿಸಿದ್ರಾ ಬ್ಯುಟಿ ಕ್ವೀನ್​?

ವೈರಲ್​ ಆಗಿರುವ ವಿಡಿಯೋದಲ್ಲಿ ಸಮಂತಾ ಇಳಿದು ಬಂದ  ಕಾರು ರೋಲ್ಸ್ ರಾಯ್ಸ್ ಎಂದು ಕೆಲವರು ಹೇಳುತ್ತಾರೆ. ಆದಾಗ್ಯೂ ಸಮಂತಾ ರೋಲ್ಸ್ ರಾಯ್ಸ್ ಯಾವಾಗ ಖರೀದಿಸಿದರು ಎಂದು ಮತ್ತೊಬ್ಬ ನೆಟಿಜನ್ ಪ್ರಶ್ನಿಸಿದ್ದಾರೆ. ಸಮಂತಾಗೆ ರೋಲ್ಸ್ ರಾಯಲ್ಸ್ ಇದೆಯೇ ಎಂದು ಇನ್ನೊಬ್ಬ ನೆಟಿಜನ್ ಕಮೆಂಟ್ ಮಾಡಿದ್ದಾರೆ.ಮತ್ತೊಬ್ಬ ನೆಟ್ಟಿಗರು ದೀಪಿಕಾರನ್ನು ಕಾಪಿ ಮಾಡಿದ ಸಮಂತಾ ಶೈಲಿಯನ್ನು ಟೀಕಿಸಿದ್ದಾರೆ. ಇತರರು ಸಮಂತಾ ಅವರ ಅದ್ಭುತ ನೋಟಕ್ಕಾಗಿ ಹೊಗಳಿದ್ದಾರೆ. ತನ್ನ ಬಳಿ ರೋಲ್ಸ್ ರಾಯ್ಸ್ ಕಾರು ಇದೆಯೋ ಇಲ್ಲವೋ ಎಂಬುದನ್ನು ಸಮಂತಾ ಸ್ಪಷ್ಟಪಡಿಸಬೇಕು. ರೋಲ್ಸ್ ರಾಯ್ಸ್ ಕಾರು ತುಂಬಾ ದುಬಾರಿ.. ಏಳು ಕೋಟಿಗೂ ಹೆಚ್ಚು.



ಇದನ್ನೂ ಓದಿ: ಮತ್ತೆ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಸಮಂತಾ, ಫೋಟೋ ನೋಡಿ ಪಡ್ಡೆ ಹೈಕ್ಳು ಕ್ಲೀನ್​ ಬೋಲ್ಡ್​!

ರೆಡ್​ ಡ್ರೆಸ್​ನಲ್ಲಿ ಸ್ಯಾಮ್​ ಪೋಸ್!



Published by:Vasudeva M
First published: