Vikram ಕ್ಲೈಮ್ಯಾಕ್ಸ್​ನಲ್ಲಿ ಸೂರ್ಯ ಎಂಟ್ರಿಯಾಗ್ತಿದ್ದಂತೆ ಧಗಧಗಿಸಿದ ಸ್ಕ್ರೀನ್​! ಪಾಂಡಿಚರಿಯಲ್ಲಿ ಅಭಿಮಾನಿಗಳ ಅತಿರೇಕ

ಜಯಾ ಥಿಯೇಟರ್ ನಲ್ಲಿ ವಿಕ್ರಮ್ ಚಿತ್ರ ಸಂಜೆ ಚಿತ್ರ ಮುಗಿಯುವ ಮುನ್ನಾ ಬೆಂಕಿ ಅವಘಡ ಸಂಭವಿಸಿದೆ. ಸಿನಿಮಾ ಸ್ಕ್ರೀನಿಂಗ್​ ವೇಳೆ ಸೂರ್ಯ ಎಂಟ್ರಿಯಾಗುವ ಸೀನ್​ಗೆ ಸರಿಯಾಗಿ ಪರದೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ. 

ಚಿತ್ರಮಂದಿರದಲ್ಲಿ ಬೆಂಕಿ

ಚಿತ್ರಮಂದಿರದಲ್ಲಿ ಬೆಂಕಿ

  • Share this:
ಲೋಕೇಶ್ ಕಂಗರಾಜ್ ಈಗ ತಮಿಳು ಚಿತ್ರರಂಗದಲ್ಲಿ (Tamil Film Industry) ಹೊಸ ಆಯಾಮವನ್ನೇ ಸೃಷ್ಟಿಸಿದ್ದಾರೆ. ನಾಲ್ಕು ಚಿತ್ರಗಳನ್ನು (Cinema) ಬತ್ತಳಿಕೆಯಲ್ಲಿ ಹೊಂದಿರುವ ಈ ಯುವ ನಿರ್ದೇಶಕ (Director) ತಮ್ಮ ಬಹು ನಿರೀಕ್ಷಿತ ಚಿತ್ರ 'ವಿಕ್ರಮ್' (Vikram) ಮೂಲಕ ಅಮೋಘವಾದ ದೃಶ್ಯಾನುಭೂತಿಯನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ (Successful). ಆದರೆ, 1986 ರಲ್ಲಿ ತೆರೆಕಂಡಿದ್ದ ಕಮಲ್ ಅವರ ವಿಕ್ರಮ್ ಮೂಲ ಚಿತ್ರದ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ನಿರಾಸೆಯಾಗುವುದು ಖಚಿತ ಎಂದಷ್ಟೇ ಹೇಳಬಹುದು. ಆದರೆ ಸಿನಿಮಾದಲ್ಲಿರುವ ಸ್ಟಾರ್​ ಕ್ಯಾಸ್ಟ್ (Star Cast)​ ಎಲ್ಲರನ್ನೂ ಮೋಡಿ ಮಾಡಿದೆ ಎಂದರೆ ತಪ್ಪಾಗಲ್ಲ. ಫಹಾದ್​ ಫಾಜಿಲ್​, ವಿಜಯ್​ ಸೇತುಪತಿ (Vijay Sethupathi) , ಕಮಲ್​ ಹಾಸನ್ (Kamal Haasan)​ ಈ ಮೂವರು ಒಟ್ಟಿಗೆ ಸೇರಿದರೆ ಏನಾಗಬಹುದು ಎಂದು ನೀವೇ ಊಹಿಸಿ.

ಪಾಂಡಿಚೇರಿಯ ಚಿತ್ರಮಂದಿರದಲ್ಲಿ ಬೆಂಕಿ ಅವಘಡ!

ವಿಶ್ವನಾಯಕ ಕಮಲ್ ಹಾಸನ್ ಅಭಿನಯದ ಚಿತ್ರ ವಿಕ್ರಂ. ಪಾಂಡಿಚೇರಿಯ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಚಿತ್ರ ಬಿಡುಗಡೆಯಾದ 3ನೇ ದಿನವೂ ಎಲ್ಲ ಥಿಯೇಟರ್​ಗಳು ಹೌಸ್​ ಫುಲ್​ ಬೋರ್ಡ್​ ಹಾಕಿದ್ದಾರೆ. ಕಮಲ್, ವಿಜಯ್ ಸೇತುಪತಿ, ಸೂರ್ಯ ಮುಂತಾದ ನಟರು ಚಿತ್ರದಲ್ಲಿ ನಟಿಸಿದ್ದಾರೆ. ಇವರನ್ನು ಒಟ್ಟಿಗೆ ನೋಡುವುದಕ್ಕೆ ಅಭಿಮಾನಿಗಳು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ. ಪಾಂಡಿಚೇರಿ ನಗರ ಮತ್ತು ಹಳ್ಳಿಯ 15 ಚಿತ್ರಮಂದಿರಗಳಲ್ಲಿ ವಿಕ್ರಮ್ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಎಲ್ಲೆಲ್ಲಿ ವಿಕ್ರಮ್​ ಸಿನಿಮಾ ಪ್ರದರ್ಶನವಾಗುತ್ತಿದೆಯೋ ಅಲ್ಲೆಲ್ಲಾ ಹೌಸ್​ಫುಲ್​ ಬೋರ್ಡ್​ ಬಿದ್ದಿದೆ.

ಸೂರ್ಯ ಎಂಟ್ರಿಯಾಗ್ತಿದ್ದಂತೆ ಧಗಧಗಿಸಿದ ಸ್ಕ್ರೀನ್​!

ನಿನ್ನೆ ಕಾಳಪಟ್ಟು ಪ್ರದೇಶದ ಜಯಾ ಥಿಯೇಟರ್ ನಲ್ಲಿ ವಿಕ್ರಮ್ ಚಿತ್ರ ಸಂಜೆ ಚಿತ್ರ ಮುಗಿಯುವ ಮುನ್ನಾ ಬೆಂಕಿ ಅವಘಡ ಸಂಭವಿಸಿದೆ. ಸಿನಿಮಾ ಸ್ಕ್ರೀನಿಂಗ್​ ವೇಳೆ ಸೂರ್ಯ ಎಂಟ್ರಿಯಾಗುವ ಸೀನ್​ಗೆ ಸರಿಯಾಗಿ ಪರದೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ. ಇದನ್ನು ನೋಡಿದ ಅಭಿಮಾನಿಗಳು ಕಿರುಚಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ರಾತ್ರಿ ಪ್ರದರ್ಶನವನ್ನು ಕೂಡ ಕ್ಯಾನ್ಸಲ್​ ಮಾಡಲಾಗಿತ್ತು.


ಇದನ್ನೂ ಓದಿ: ದಳಪತಿ ವಿಜಯ್ ಬಗ್ಗೆ ಅಭಿಮಾನಿಯ ಪ್ರಶ್ನೆಗೆ ಕಮಲ್ ಹಾಸನ್ ಹೀಗೆಂದಿದ್ದೇಕೆ?

ಫ್ಯಾನ್ಸ್​ ಹಚ್ಚಿದ ಕರ್ಪೂರದಿಂದ ಹೊತ್ತಿಕೊಂಡ ಬೆಂಕಿ?

ಚಿತ್ರದ ಕೊನೆಯ ದೃಶ್ಯದಲ್ಲಿ ಸೂರ್ಯ ಬಂದಾಗ ವಿದ್ಯುತ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆಯಾ? ಅಥವಾ ಅಭಿಮಾನಿಗಳು ಕರ್ಪೂರ ಹಚ್ಚಿದ್ದರಿಂದ ಬೆಂಕಿ ಹೊತ್ತಿಕೊಂಡಿದೆಯಾ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಅಭಿಮಾನಿಗಳ ಎಡವಟ್ಟಿನಿಂದ ಹೀಗೆ ಆಗಿದ್ದರೆ ಅದು ಅಭಿಮಾನಿದ ಹುಚ್ಚುತನ ಎಂದರೆ ತಪ್ಪಾಗಲ್ಲ.

ಆಕ್ಷನ್ ಥ್ರಿಲ್ಲರ್ ಅನುಭವ ಉಂಟು ಮಾಡುವ ಸಿನಿಮಾ

ಯಾವುದೇ ಯಂತ್ರವು ತನ್ನ ದಕ್ಷತೆಯ ಕಾರ್ಯ ಸಾಧಿಸಲು ಅದಕ್ಕೆ ಸಮರ್ಪಕವಾಗಿ ಎಣ್ಣೆಯಿಂದ ಲ್ಯೂಬ್ರಿಕೇಟ್ ಮಾಡಿರಬೇಕು. ಅಂತಹ ಲ್ಯೂಬ್ರಿಕೇಟ್ ಮಾಡಲಾಗಿರುವ ಯಂತ್ರದಂತಿದೆ ಈಗ ಬಿಡುಗಡೆಯಾಗಿರುವ ವಿಕ್ರಮ್. ಚಿತ್ರದ ಪ್ರತಿ ಹಂತದಲ್ಲೂ ಆಕ್ಷನ್ ಥ್ರಿಲ್ಲರ್ ಅನುಭವ ಉಂಟಾಗುವುದು ನಿಶ್ಚಿತ. ಅಷ್ಟಕ್ಕೂ ಈ ಚಿತ್ರದ ಸ್ಕ್ರೀನ್ ಪ್ಲೇಯು ಚಿತ್ರದ ಪ್ರೋಟಾಗೋನಿಸ್ಟ್ ಕಮಲ್ ಅವರ ಪರಿಕಲ್ಪನೆಯಿಂದಲೇ ಉದ್ಭವಿಸಿದ್ದು ಎಂಬುದು ನಿಮಗೆ ಗೊತ್ತಿರಬಹುದು.

ಇದನ್ನೂ ಓದಿ: ವಿಕ್ರಂ ಸಿನಿಮಾದಲ್ಲಿ ಕಮಲ್ ಹಾಸನ್ ಅಭಿನಯದ ಬಗ್ಗೆ ಅಭಿಮಾನಿಗಳು ಹೀಗ್ಯಾಕೆ ಅಂದ್ರು?

ಚಿತ್ರದ ಮೊದಲರ್ಧವು ಅದ್ಭುತವಾಗಿದ್ದು ನಿಮ್ಮ ತಲೆಯಲ್ಲಿ ಹಲವಾರು ಗೊಂದಲ ಉಂಟಾಗುವಂತೆ ಮಾಡಲು ಲೋಕೇಶ್ ಸಮರ್ಥರಾಗುತ್ತಾರೆ. ಅಷ್ಟಕ್ಕೂ ಈ ಚಿತ್ರದ ನಾಯಕ ಯಾರು ಎಂಬ ಹುಡುಕಾಟವೇ ಒಂದು ಸಾಹಸಮಯ ಪ್ರಯಾಣವಾಗಿ ಪ್ರೇಕ್ಷಕರಿಗೆ ಮೊದಲರ್ಧವು ಅಮೋಘವಾದ ದೃಶ್ಯಾನುಭೂತಿ ನೀಡುವಲ್ಲಿ ಸಫಲವಾಗುತ್ತದೆ. ಪ್ರತಿ ದೃಶ್ಯಗಳು ಮನ ರೋಮಾಂಚನ ಉಂಟು ಮಾಡುತ್ತವೆ.
Published by:Vasudeva M
First published: