ನಟ ನಟಿಯರು ಅಂದ್ಮೇಲೆ ರೂಮರ್ಸ್ ಕಾಮನ್. ಅದರಲ್ಲೂ ಅವರು ಒಬ್ಬರ ಜೊತೆ ಸುತ್ತಾಡಿದರು, ಮತ್ಯಾರದ್ದೋ ಜೊತೆ ರಿಲೇಶನ್ ಶಿಪ್ (Relationship) ನಲ್ಲಿದ್ದಾರೆ ಅನ್ನೋ ವದಂತಿಗಳೆಲ್ಲ ತೀರಾ ಸಾಮಾನ್ಯ. ಬಣ್ಣದ ಲೋಕದಲ್ಲಿ ಅದು ದೊಡ್ಡ ವಿಷಯ (Subject) ಅನ್ನಿಸಿಕೊಳ್ಳೋದೇ ಇಲ್ಲ. ಸೆಲೆಬ್ರಿಟಿ ಅಂದಮೇಲೆ ಅವರಿಗೆ ಲಕ್ಷಾಂತರ ಜನರ ಅಭಿಮಾನಿಗಳಿರ್ತಾರೆ. ಅದರಲ್ಲೂ ಈಗಿನ ಸೋಷಿಯಲ್ ಮೀಡಿಯಾದಿಂದಾಗಿ (Social Media) ಅಭಿಮಾನಿಗಳು ತಮ್ಮ ನೆಚ್ಚಿನ ನಟ (Favorite Actor) ನಟಿಯರ ಪ್ರತಿ ನಡೆ ನುಡಿಯನ್ನು ಗಮನಿಸ್ತಾ ಇರ್ತಾರೆ. ಅವರ ಡ್ರೆಸ್, ಎಕ್ಸಸರೀಸ್, ಹೇರ್ ಸ್ಟೈಲ್, ಎಲ್ಲಿಗೆ ಹೋದ್ರು ಎಲ್ಲಿಗೆ ಬಂದ್ರು ಅನ್ನೋದನ್ನು ಫ್ಯಾನ್ ಗಳು ನೆನಪಿಟ್ಟು ಕೊಂಡಿರ್ತಾರೆ. ಆದ್ರೆ ಅದೇ ಕೆಲವೊಮ್ಮೆ ಎಡವಟ್ಟಿಗೆ ಕಾರಣವಾಗುತ್ತೆ. ಸದ್ಯ ನಟಿ ರಶ್ಮಿಕಾ ಮಂದಣ್ಣ ವಿಚಾರದಲ್ಲಿ ಆಗಿರೋದೂ ಅದೇ!
ಇತ್ತೀಚಿಗೆ ರಶ್ಮಿಕಾ ಮಂದಣ್ಣ ಅವರು ಮಾಲ್ಡೀವ್ಸ್ ಪ್ರವಾಸದಲ್ಲಿದ್ರು. ಅವರು ನೀಲಿ ನೀರಿನ ನಡುವೆ ಕುಳಿತಿರುವಂತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಜುಕೊಳದ ಪಕ್ಕದಲ್ಲಿ ಕುಳಿತಿರುವ ಚೆಂದದ ಚಿತ್ರವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ತೇಲುವ ಬ್ರೇಕ್ ಫಾಸ್ಟ್ ಬಾಸ್ಕೆಟ್ ನಲ್ಲಿದ್ದ ಹೂವೊಂದನ್ನು ಹಿಡಿದುಕೊಂಡು ಪೋಸ್ ನೀಡಿದ್ದರು.
ರಶ್ಮಿಕಾ ಅವರ ಬ್ರೇಕ್ ಫಾಸ್ಟ್ ಹೇಗಿತ್ತು ಗೊತ್ತಾ?
ಇನ್ನು ಫೋಟೋದಲ್ಲಿ ಬಿಳಿ ಬಣ್ಣದ ಬ್ರೇಕ್ ಫಾಸ್ಟ್ ಬಾಸ್ಕೆಟ್ ನಲ್ಲಿ ಬಹಳಷ್ಟು ತಿಂಡಿಗಳಿರೋದು ಕಾಣಿಸುತ್ತಿತ್ತು. ಜೊತೆಗೆ ಆಕೆಯ ಹಿಂದೆ ಕೆಲವು ಕುರ್ಚಿಗಳು ಮತ್ತು ಮಂಚ ಕೂಡ ಕಾಣಿಸುತ್ತೆ. ಇದರಲ್ಲಿ ರಶ್ಮಿಕಾ ಪ್ರಿಂಟೆಡ್ ಫ್ಲೋರಲ್ ಔಟ್ ಫಿಟ್ ಜೊತೆಗೆ ಡಾರ್ಕ್ ಸನ್ ಗ್ಲಾಸ್ ಧರಿಸಿದ್ದು ಮುದ್ದಾಗಿ ಕಾಣುತ್ತಿದ್ದರು. ಈ ಇನ್ ಸ್ಟಾಗ್ರಾಂ ಪೋಸ್ಟ್ ಗೆ ಅವರು ಶೀರ್ಷಿಕೆ ಅಂತ ಏನನ್ನೂ ಬರೆಯದೇ ಹೋದರೂ ಇದಕ್ಕೆ ದ್ವೀಪ, ಹೂವು ಹಾಗೂ ಹಾರ್ಟ್ ಎಮೋಜಿ ಹಾಕಿದ್ದಾರೆ. ಅಲ್ದೇ, ಅವರು ಮಾಲ್ಡೀವ್ಸ್‌ನಲ್ಲಿ ಓಝೆನ್ ರಿಸರ್ವ್ ಬೊಲಿಫುಶಿ ಎಂದು ಸ್ಥಳವನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಪಾರುವನ್ನು ಸೊಸೆಯಾಗಿ ಸ್ವೀಕರಿಸುತ್ತಿದ್ದಾಳೆ ಅಖಿಲಾಂಡೇಶ್ವರಿ, ಖುಷಿಯಲ್ಲಿ ತೇಲ್ತಿದ್ದಾನೆ ಆದಿ!
ಅದು ದೇವರಕೊಂಡ ಸನ್ ಗ್ಲಾಸ್ ಎಂದ ಅಭಿಮಾನಿ
ರಶ್ಮಿಕಾ ಅವರ ಈ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ಸ್ ಬಂದಿದೆ. ಅಭಿಮಾನಿಗಳು ಕಾಮೆಂಟ್ ಸೆಕ್ಶನ್ ನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಒಬ್ಬರು, “ಈ ಚಿತ್ರವನ್ನು ವಿಜಯ್ ದೇವರಕೊಂಡ ಕ್ಲಿಕ್ ಮಾಡಿದ್ದಾರೆಯೇ” ಅಂತ ಕೇಳಿದ್ದಾರೆ. ಮತ್ತೊಬ್ಬ ಅಭಿಮಾನಿ, "ನಾನು ವಿಜಯ್ ದೇವರಕೊಂಡ ಅವರೊಂದಿಗೆ ಅದೇ ಕನ್ನಡಕವನ್ನು ನೋಡಿದ್ದೇನೆ" ಎಂದು ಬರೆದಿದ್ದಾರೆ.
ಮತ್ತೊಬ್ಬರು, "ನೀವು ವಿಜಯ್ ದೇವರಕೊಂಡ ಅವರ ಕನ್ನಡಕವನ್ನು ದೋಚಿದ್ದೀರಿ" ಎಂದು ಹೇಳಿದ್ದಾರೆ. ಇನ್ನೊಬ್ಬರು, “ನಿನ್ನೆ ಏರ್ ಪೋರ್ಟ್ ನಲ್ಲಿ ಇದೇ ಸನ್ ಗ್ಲಾಸ್ ಅನ್ನು ವಿಜಯ್ ದೇವರಕೊಂಡ ಧರಿಸಿದ್ದನ್ನು ನೋಡಿದ್ದೇನೆ. ಅಂದರೆ ಅವರಿಬ್ಬರೂ ಮಾಲ್ಡೀವ್ಸ್ ನಲ್ಲಿದ್ದಾರೆ”! ಎಂದು ಟಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಜೋಡಿ ನಂಬರ್ 1 ಪಟ್ಟ ಗಿಟ್ಟಿಸಿಕೊಂಡ ಆದರ್ಶ ಜೋಡಿ ಯಾರು?
ರಶ್ಮಿಕಾ ಇನ್‌ಸ್ಟಾಗ್ರಾಮ್ ಸ್ಟೋರೀಸ್
ಇನ್ನು ರಶ್ಮಿಕಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮರದ ಬಳಿ ನಿಲ್ಲಿಸಿರುವ ಕೆಲವು ಸೈಕಲ್‌ಗಳ ಫೋಟೋವನ್ನು ಪೋಸ್ಟ್ ಮಾಡಿದ್ದರು. ರಶ್ಮಿಕಾ ಮುಂಬೈನಿಂದ ಹೊರಟ ಒಂದು ದಿನದ ನಂತರ ಮಾಲ್ಡೀವ್ಸ್ ರಜೆಯ ಪೋಟೋವನ್ನು ಹಂಚಿಕೊಂಡಿದ್ದರು. ಸಾಗರದ ಮುಂದೆ ಕುಳಿತು ಕ್ಯಾಮರಾಗೆ ಪೋಸ್ ನೀಡುತ್ತಿದ್ದಂತೆ ಇನ್ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಸೆಲ್ಫಿ ಪೋಸ್ಟ್ ಮಾಡಿದ್ದು, "ಹಾಯ್ ಲವ್ಸ್” ಎಂದು ಬರೆದುಕೊಂಡಿದ್ದಾರೆ. ಈ ಮಧ್ಯೆ ವಿಜಯ್ ದೇವರಕೊಂಡ ಕೂಡ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದನ್ನು ಸಾಕಷ್ಟು ಜನರು ನೋಡಿದ್ದಾರೆನ್ನಲಾಗಿದೆ.
ಗೀತ ಗೊವಿಂದಂ ಜೋಡಿ
ಇನ್ನು ವಿಜಯ್ ಮತ್ತು ರಶ್ಮಿಕಾ ಇಬ್ಬರೂ ತೆಲುಗು ಚಿತ್ರಗಳಾದ ಗೀತಾ ಗೋವಿಂದಂ (2018) ಮತ್ತು ಡಿಯರ್ ಕಾಮ್ರೇಡ್ (2019) ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗಿನಿಂದಲೇ ಅವರಿಬ್ಬರೂ ವಲ್ ಬರ್ಡ್ಸ್ ಅನ್ನೋದಾಗಿ ರೂಮರ್ ಗಳಿವೆ. ಈ ಮಧ್ಯೆ, ವಿಜಯ್ ಮುಂದಿನ ರೋಮ್ಯಾಂಟಿಕ್ ಡ್ರಾಮಾ ಚಿತ್ರ ಖುಷಿಯಲ್ಲಿ ನಟಿ ಸಮಂತಾ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಈನ್ನು, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಮುಂದಿನ ಅನಿಮಲ್ ಚಿತ್ರದಲ್ಲಿ ರಶ್ಮಿಕಾ, ನಟ ರಣಬೀರ್ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅಲ್ದೇ ಆಕೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಮಿಷನ್ ಮಜ್ನು ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ