Bollywood: ಈ ಯುವ ನಟನ ಜೊತೆ ಅಮಿತಾಭ್​ ಬಚ್ಚನ್​ ಮೊಮ್ಮಗಳು ಡೇಟಿಂಗ್​? ವಿಷಯ ಗೊತ್ತಾದ್ರೆ ಸುಮ್ನೆ ಬಿಡ್ತಾರಾ?

ನವ್ಯಾ ನವೇಲಿ ನಂದಾ ಅವರು ಈಗ ಸುದ್ದಿಯಲ್ಲಿ ಇರುವುದು ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮದಲ್ಲಿನ ಚಟುವಟಿಕೆಯಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ನವ್ಯಾ, ಅಮಿತಾಭ್​ ಬಚ್ಚನ್​

ನವ್ಯಾ, ಅಮಿತಾಭ್​ ಬಚ್ಚನ್​

  • Share this:
ನವ್ಯಾ ನವೇಲಿ ನಂದಾ (Navya Naveli Nanda) ಎಂಬ ಹೆಸರು ಕೇಳಿದರೆ ಬಹುತೇಕರಿಗೆ ‘ಎಲ್ಲೋ ಈ ಹೆಸರು ಕೇಳಿದ್ದೆವಲ್ಲ’ ಅಂತ ಅನ್ನಿಸುತ್ತದೆ. ಹೌದು.. ಇವರು ಬಾಲಿವುಡ್(Bollywood)ನ ಬಿಗ್ ಬಿ ಅಮಿತಾಭ್ ಬಚ್ಚನ್ (Amithabh Bachchan) ಅವರ ಮೊಮ್ಮಗಳು. ಇವರು ನಂದಾ ಶ್ವೇತಾ ಬಚ್ಚನ್ (Nanda Shweta Bachchan) ಮತ್ತು ನಿಖಿಲ್ ನಂದಾ ಅವರ ಮಗಳು. ಕೆಲವು ತಿಂಗಳುಗಳ ಹಿಂದೆಯಷ್ಟೆ ಸಾಮಾಜಿಕ ಮಾಧ್ಯಮ (Social Media) ದಲ್ಲಿ ತಮ್ಮ ಉದ್ದವಾದ ಕೂದಲಿನ ಒಂದು ಫೋಟೋವನ್ನು ಹಂಚಿ ಕೊಂಡಿದ್ದರು ಎನ್ನುವುದು ನೆನಪಿಗೆ ಬರುತ್ತದೆ. ಇವರು ಮತ್ತೆ ಈಗ ಸುದ್ದಿಯಲ್ಲಿ ಇದ್ದಾರೆ ಎಂದು ಹೇಳಬಹುದು. ನವ್ಯಾ ನವೇಲಿ ನಂದಾ ಅವರು ಈಗ ಸುದ್ದಿಯಲ್ಲಿ ಇರುವುದು ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮದಲ್ಲಿನ ಚಟುವಟಿಕೆಯಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಬುಧವಾರ ಗಿರಿಧಾಮದಲ್ಲಿನ ತನ್ನ ಫೋಟೋವನ್ನು ಹಂಚಿ ಕೊಂಡಿದ್ದು, ಈಗ ಎಡಿಟ್ ಮಾಡಿದ ಶೀರ್ಷಿಕೆಯಲ್ಲಿ "ಫೋಟೋಗ್ರಫಿ ಬೈ ದಿ” ಅಂತ ಹೇಳಿ ಒಂದು ಚಿತ್ರವಿದೆ. ಆದರೆ ಇದು ಈ ಹಿಂದೆ "ಫೋಟೋಗ್ರಾಫ್ಡ್ ಬೈ ದಿ ಮೂನ್” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿತ್ತು.

ಲವ್​ನಲ್ಲಿ ಬಿದ್ದಿದ್ದಾರಾ ಬಿಗ್​ಬಿ ಮೊಮ್ಮಗಳು?

ಅವರ ವದಂತಿಯ ಗೆಳೆಯ, ನಟ ಸಿದ್ಧಾಂತ್ ಚತುರ್ವೇದಿ ಕೂಡ ಅದೇ ಸ್ಥಳದಿಂದ ತೆಗೆಸಿಕೊಂಡ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಎಂಬುದು ಇಂಟರ್ನೆಟ್ ಗೂಢಚಾರರನ್ನು ಗೊಂದಲಕ್ಕೀಡು ಮಾಡಿದೆ. ಅದೇ ಸಮಯದಲ್ಲಿ, ಸಿದ್ಧಾಂತ್ ರಿಷಿಕೇಶದಲ್ಲಿ ತಮ್ಮ ಸಾಹಸಗಳ ವೀಡಿಯೋ ಮಾಂಟೇಜ್ ಅನ್ನು ಹಂಚಿಕೊಂಡರು, ಇದು ಬೈಕ್ ಸವಾರಿಗಳು, ರಾಕ್ ಕ್ಲೈಂಬಿಂಗ್ ಮತ್ತು ನವ್ಯಾ ಅವರ ಅದೇ ಕಟ್ಟಡದ ಮೇಲ್ಛಾವಣಿಯ ಮೇಲೆ ಇದ್ದಿರಬಹುದು ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡಿದೆ.ಸಿದ್ದಾಂತ್​ ಚತುರ್ವೇದಿ ಜೊತೆ ನವ್ಯಾ ಡೇಟಿಂಗ್​?

ನಟ ಸಿದ್ಧಾಂತ್ ಚತುರ್ವೇದಿ ಅವರು ತಮ್ಮ ಫೋಟೋಗೆ ಶೀರ್ಷಿಕೆಯನ್ನು ನೀಡುತ್ತಾ "ನಮ್ಮ ಮನಸ್ಸು ಮತ್ತು ಚಂದ್ರ ಎರಡು ಕ್ಲಿಯರ್ ಆಗಿವೆ” ಎಂದು ಬರೆದು ಕೊಂಡಿದ್ದಾರೆ. ನವ್ಯಾ ಸಹ ಇತ್ತೀಚೆಗೆ ಅದೇ ಬೆಟ್ಟದ ಸ್ಥಳದಿಂದ ಸಿದ್ಧಾಂತ್ ಅವರ ಇತ್ತೀಚಿನ ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ಹೃದಯದ ಎಮೋಜಿಯನ್ನು ಸಹ ಬಿಟ್ಟಿದ್ದಾರೆ. ಅಭಿಮಾನಿಗಳು ತಕ್ಷಣವೇ ಪ್ರತಿಕ್ರಿಯೆಯಲ್ಲಿ ಅವರನ್ನು ಸಂಪರ್ಕಿಸಿದರು. "ನೀವಿಬ್ಬರೂ ಡೇಟಿಂಗ್ ಮಾಡುತ್ತಿದ್ದೀರಿ ಎಂದು ನಮಗೆ ತಿಳಿದಿದೆ" ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾನೆ. ಇನ್ನೊಬ್ಬ ವ್ಯಕ್ತಿಯು "ಹೌದು, ಅವರು ಡೇಟಿಂಗ್ ಮಾಡುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.ಸಖತ್​ ವೈರಲ್ ಆಗ್ತಿದೆ ಇಬ್ಬರ  ಪೋಸ್ಟ್​!

ನವ್ಯಾ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿ, ಅವರ ಸ್ನೇಹಿತೆ ಶನಾಯಾ ಕಪೂರ್ "ಬ್ಯೂಟಿ" ಎಂದು ಬರೆದಿದ್ದಾರೆ. ಅನನ್ಯಾ ಪಾಂಡೆ ಹೃದಯ ಮತ್ತು ಚಿಟ್ಟೆ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ. ನವ್ಯಾ ಇತ್ತೀಚೆಗೆ ತಾನು ಚಿತ್ರರಂಗದಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಹೋಗುವುದಿಲ್ಲ ಎಂದು ಘೋಷಿಸಿದಳು ಮತ್ತು ತನ್ನ ತಂದೆ ನಿಖಿಲ್ ನಂದಾ ಅವರ ವ್ಯವಹಾರವಾದ ಎಸ್ಕಾರ್ಟ್ಸ್ ಗೆ ಸೇರಲು ತಯಾರಿ ನಡೆಸುತ್ತಿದ್ದಾಳೆ.

ಇದನ್ನೂ ಓದಿ: KGF, Salaar ಬಳಿಕ ಮತ್ತೊಂದು ದೊಡ್ಡ ಸಿನಿಮಾಗೆ ಕೈ ಹಾಕಿದ ಹೊಂಬಾಳೆ! ಆ ನಿರ್ದೇಶಕಿಯನ್ನೇ ಸೆಲೆಕ್ಟ್ ಮಾಡಿದ್ದು ಯಾಕೆ?

ಜೋಯಾ ಅಖ್ತರ್ ಅವರ ಗಲ್ಲಿ ಬಾಯ್ ಚಿತ್ರದ ಮೂಲಕ ನಟ ಸಿದ್ಧಾಂತ್ ಚಿತ್ರರಂಗವನ್ನು ಪ್ರವೇಶಿಸಿದರು, ಮತ್ತು ಇತ್ತೀಚೆಗೆ ಶಕುನ್ ಬಾತ್ರಾ ಅವರ ‘ಗೆಹರಾಯಿಯಾ’ ನಲ್ಲಿ ಕಾಣಿಸಿಕೊಂಡರು. ಅವರು ಕತ್ರಿನಾ ಕೈಫ್ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ ‘ಫೋನ್ ಭೂತ್’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಇನ್ಮೇಲೆ ತಂಬಾಕಿನ ಜಾಹೀರಾತಿನಲ್ಲಿ ನಾನು ಇರಲ್ಲ ಎಂದ ನಟ, ಕೋಟ್ಯಂತರ ರೂಪಾಯಿ ದಾನ!

ನವ್ಯಾ ಅವರು ನಟ ಜಾವೆದ್ ಜಾಫೆರಿ ಅವರ ಮಗ ಮೀಜಾನ್ ನೊಂದಿಗೆ ನಂಟು ಹೊಂದಿದ್ದರು ಎಂದು ಹೇಳಲಾಗುತ್ತಿತ್ತು. ನಟ ಒಮ್ಮೆ ಬಚ್ಚನ್ ಕುಟುಂಬದ ಮನೆ, ಜಲ್ಸಾಗೆ ಭೇಟಿ ನೀಡಿದ್ದರು ಮತ್ತು ಹಲವಾರು ಸಂದರ್ಶನಗಳಲ್ಲಿ ನವ್ಯಾ ಅವರೊಂದಿಗಿನ ಅವರ ಸಂಬಂಧದ ಬಗ್ಗೆ ಕೇಳಲಾಗಿತ್ತು. "ನಾವಿಬ್ಬರೂ ಒಂದೇ ಸ್ನೇಹಿತರ ವಲಯದಿಂದ ಬಂದವರು, ಅವಳು ನನ್ನ ತಂಗಿಯ ಸ್ನೇಹಿತೆ ಮತ್ತು ನಿಜವಾಗಿಯೂ ನನಗೂ ಒಳ್ಳೆಯ ಸ್ನೇಹಿತೆ. ನಾನು ಯಾರೊಂದಿಗೂ ಸಂಬಂಧ ಹೊಂದಿಲ್ಲ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದರು.
Published by:Vasudeva M
First published: