Anitha EAnitha E
|
news18-kannada Updated:January 20, 2020, 1:51 PM IST
ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಸದ್ಯ 'ಕೋಟಿಗೊಬ್ಬ 3' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಂಕ್ರಾತಿ ಹಬ್ಬದ ಉಡುಗೊರೆಯಾಗಿ ಈ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
ಈ ನಡುವೆ ಮತ್ತೆ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾಗೆ ಬಗ್ಗೆ ಸುದ್ದಿಯೊಂದು ಹರಿದಾಡ ತೊಡಗಿತ್ತು. ಅದು ಸುದೀಪ್ ರಾಜಮೌಳಿ ಅವರ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಅನ್ನೋದು.
ಈ ವಿಷಯವಾಗಿ ಖುದ್ದು ಕಿಚ್ಚ ತಮ್ಮ ಟ್ವಿಟರ್ ಮೂಲಕ ಸ್ಪಷ್ಟಣೆ ನೀಡಿದ್ದರು. 'ನನಗೆ ಯಾವುದೇ ಆಫರ್ ಬಂದಿಲ್ಲ. ನನ್ನನ್ನು ಯಾರೂ ಸಂಪರ್ಕಿಸಿಲ್ಲ' ಎಂದು ಟ್ವೀಟ್ ಮಾಡಿದ್ದರು ಸುದೀಪ್.
ಕಿಚ್ಚನಿಗೆ ಅಭಿಮಾನಿಗಳ ಮನವಿ
ಕಿಚ್ಚ ಸುದೀಪ್ ಅವರು ಮಾಡಿದ ಈ ಟ್ವೀಟ್ನಿಂದಾಗಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಜೊತೆಗೆ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳು ವಿಲನ್ ಹಾಗೂ ಅತಿಥಿ ಪಾತ್ರಗಳಲ್ಲಿ ಅಭಿನಯಿಸದಂತೆ ಮನವಿ ಮಾಡಿದ್ದಾರೆ.

ಕಿಚ್ಚನಿಗೆ ಅಭಿಮಾನಿಗಳ ಮನವಿ

ಕಿಚ್ಚನಿಗೆ ಅಭಿಮಾನಿಗಳ ಮನವಿ
ಬೇರೆಯವರ ಕೈಯಲ್ಲಿ ನೀವು ಹೊಡೆಸಿಕೊಳ್ಳುವುದನ್ನು ನೋಡಲು ಆಗುವುದಿಲ್ಲ. ಬೇರೆ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಅಭಿನಯಿಸೋದನ್ನು ಬಿಟ್ಟು ಹಾಲಿವುಡ್ ಸಿನಿಮಾಗಳತ್ತ ಗಮನ ಹರಿಸಿ ಎಂದು ಕೋರಿದ್ದಾರೆ.

ಕಿಚ್ಚನಿಗೆ ಅಭಿಮಾನಿಗಳ ಮನವಿ

ಕಿಚ್ಚನಿಗೆ ಅಭಿಮಾನಿಗಳ ಮನವಿ
ಕಿಚ್ಚ ಸುದೀಪ್ ಇತ್ತೀಚೆಗಷ್ಟೆ ತೆರೆಕಂಡ 'ದಬಾಂಗ್ 3' ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದರು. ಅಲ್ಲದೆ ಈ ಹಿಂದೆ ತಮಿಳಿನ 'ಪುಲಿ', ತೆಲುಗಿನ 'ಈಗ' ಹಾಗೂ 'ಸೈರಾ ನರಸಿಂಹ ರೆಡ್ಡಿ'ಯಲ್ಲೂ ಸುದೀಪ್ ನಟಿಸಿದ್ದಾರೆ.
Fighter: ವಿಜಯ್ ದೇವರಕೊಂಡ ಅಭಿನಯದ ಬಾಲಿವುಡ್ ಸಿನಿಮಾಗೆ ಸಿಕ್ತು ಕಿಕ್ ಸ್ಟಾರ್ಟ್
First published:
January 20, 2020, 1:51 PM IST