ಟಾಲಿವುಡ್ ನಟಿ ಸಮಂತಾ (Samantha) ನಟ ನಾಗಚೈತನ್ಯ ಅವರೊಂದಿಗಿನ ವಿವಾಹ ಬಂಧನದಿಂದ ಹೊರ ಬಂದ ಮೇಲೆ ಕೆಲವು ತಿಂಗಳುಗಳ ಕಾಲ ತಮ್ಮ ಕೆಲಸದಿಂದ ವಿರಾಮ ಪಡೆದಿದ್ದರು. ನಟಿ ಈಗ ಮತ್ತೆ ತಮ್ಮ ಕೆಲಸವನ್ನು ಪುನಾರಂಭಿಸಿದ್ದು, ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ‘ಪುಷ್ಪ: ದಿ ರೈಸ್’ (Pushpa: The Rise)ಚಿತ್ರದಲ್ಲಿನ ಐಟಂ ಹಾಡಿನ ಚಿತ್ರೀಕರಣ ಪ್ರಾರಂಭಿಸಿದ್ದಾರೆ.
ಈಗ, ಚಿತ್ರದ ನಿರ್ಮಾಪಕರು ಸಮಂತಾ ಅವರ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ, ಏಕೆಂದರೆ ಅವರು ವರ್ಷದ ಐಟಂ ಹಾಡಿನ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಈ ಹಾಡಿಗಾಗಿ ವಿಶೇಷವಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾದ ಸೆಟ್ನಲ್ಲಿ ಹಾಡಿನ ಚಿತ್ರೀಕರಣವನ್ನು ಮಂಗಳವಾರದಂದು ಪ್ರಾರಂಭಿಸಿದ್ದಾರೆ. ಈ ಪೆಪ್ಪಿ ಹಾಡಿಗೆ ಗಣೇಶ್ ಆಚಾರ್ಯ ಮತ್ತು ದೇವಿ ಶ್ರೀ ಪ್ರಸಾದ್ ನೃತ್ಯ ಸಂಯೋಜಿಸಿದ್ದಾರೆ.
ಸ್ಮಗ್ಲರ್ ಪಾತ್ರದಲ್ಲಿ ಅಲ್ಲು ಅರ್ಜುನ್
ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ನಟ ಅಲ್ಲು ಅರ್ಜುನ್, ಪುಷ್ಪ ರಾಜ್ ಎಂಬ ಶ್ರೀಗಂಧದ ಸ್ಮಗ್ಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಯಲಸೀಮಾ ಮಹಿಳೆಯ ಪಾತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರೆ. ಮಲಯಾಳಂ ನಟ ಫಹಾದ್ ಫಾಸಿಲ್ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ಎದುರಾಳಿಯಾಗಿ ನಟಿಸಿದ್ದಾರೆ.
ಈ ಚಿತ್ರದ ಹೊಸ ಪೋಸ್ಟರ್ ಹಂಚಿಕೊಳ್ಳುವಾಗ, ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅವರು "ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸಮಂತಾ ಪ್ರಭು ಭವ್ಯವಾದ ಹಾಗು ದೈತ್ಯಾಕಾರದ ಸೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಶೀಘ್ರದಲ್ಲಿಯೇ ಈ ವರ್ಷದ ರಾಕಿಂಗ್ ಹಾಡನ್ನು ನೋಡಲು ಸಿದ್ಧರಾಗಿ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ಪೋಸ್ಟರ್ನಲ್ಲಿ ಸಮಂತಾ ನೀಲಿ ಬಣ್ಣದ ಬಟ್ಟೆಯನ್ನು ಧರಿಸಿದ್ದು ನಾವು ನೋಡಬಹುದು.
ಕಳ್ಳ ಸಾಗಾಣಿಕೆದಾರರ ಜೀವನ ಕಥೆ
ಆಂಧ್ರ ಪ್ರದೇಶದ ರಾಯಲ ಸೀಮಾ ಪ್ರದೇಶದ ಇಶಾಚಲಂ ಬೆಟ್ಟಗಳಲ್ಲಿನ ಕೆಂಪು ಶ್ರೀಗಂಧ ಕಳ್ಳಸಾಗಾಣಿಕೆದಾರರ ಜೀವನದ ಕಥೆಯನ್ನು ‘ಪುಷ್ಪ’ ಚಿತ್ರವು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಪ್ಯಾನ್ ಇಂಡಿಯಾದ ಚಿತ್ರದಲ್ಲಿ ನಟರಾದ ಜಗಪತಿ ಬಾಬು, ಪ್ರಕಾಶ್ ರಾಜ್, ಅನಸೂಯ ಭಾರದ್ವಾಜ್, ಧನಂಜಯ್, ಸುನೀಲ್, ಹರೀಶ್ ಉಥಮನ್, ವೆನ್ನೆಲಾ ಕಿಶೋರ್ ಮತ್ತು ಶ್ರೀತೇಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನು ಓದಿ: ನಟಿ ದೀಪಿಕಾರ ಈ ಓವರ್ ಸೈಜ್ ಜಾಕೆಟ್ ಬೆಲೆ ಕೇಳಿದ್ರೆ ದಂಗಾಗುತ್ತೀರಾ!
ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವು ಇದೇ ಡಿಸೆಂಬರ್ 17ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಶಕುಂತಲಂಗಾಗಿ ಕಾಯುತ್ತಿರುವ ಸಮಂತಾ
ಈ ಮಧ್ಯೆ, ನಟಿ ಸಮಂತಾ ನಿರ್ದೇಶಕ ಗುಣಶೇಖರ್ ಅವರ ‘ಶಕುಂತಲಂ’ ಮತ್ತು ವಿಘ್ನೇಶ್ ಶಿವನ್ ಅವರ ‘ಕಾತು ವಕುಲ ರೆಂಡು ಕಾದಲ್’ ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ, ನಟಿ ಮೊದಲ ಅಂತಾರಾಷ್ಟ್ರೀಯ ಯೋಜನೆಗೆ ಸಹಿ ಮಾಡಿದ್ದು, ಅದರ ಶೀರ್ಷಿಕೆ ‘ಅರೇಂಜ್ಮೆಂಟ್ಸ್ ಆಫ್ ಲವ್’ ಎಂದಾಗಿದೆ. ಈ ಚಿತ್ರವನ್ನು ಬಾಫ್ಟಾ ವಿಜೇತ ನಿರ್ದೇಶಕ ಫಿಲಿಪ್ ಜಾನ್ ನಿರ್ದೇಶಿಸಲಿದ್ದಾರೆ ಮತ್ತು ಸುನೀತಾ ಟಾಟಿ ಅವರ ಗುರು ಫಿಲ್ಮ್ಸ್ ನಿರ್ಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ಪುನೀತ್ ದಾಂಪತ್ಯಕ್ಕೆ 22 ವರ್ಷ: ನನ್ನ ಸಿನಿಮಾಗಳ ಬೆಸ್ಟ್ ಕ್ರಿಟಿಕ್ ಅಶ್ವಿನಿ ಎನ್ನುತ್ತಿದ್ದ ಅಪ್ಪು
ರಶ್ಮಿಕಾ ಮಂದಣ್ಣ ಅವರು ಈ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದ ಮೂಲಕ ಸಿನಿಪ್ರಿಯರ ಮುಂದೆ ಬರಲಿದ್ದಾರೆ ಎಂದೂ ಹೇಳಲಾಗಿತ್ತು. ಅಂತೆಯೇ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಈ ಸಲ ಸಖತ್ ರಗಡ್ ಲುಕ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲು ಅರ್ಜುನ್ಗೆ ಶ್ರೀವಲ್ಲಿಯಾಗಿ ಜೊತೆಯಾಗಿದ್ದಾರೆ. ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ