ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ಕೆಜಿಎಫ್. ಈಗಾಗಲೇ ರಾಕಿ ಭಾಯ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್2 ಸಿನಿಮಾದ ಬಗ್ಗೆ ದೊಡ್ಡ ಹೈಫ್ ಕ್ರಿಯೇಟ್ ಆಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಿನಲ್ಲಿ ಈ ಸಿನಿಮಾ ತೆರೆ ಮೇಲೆ ಬರಲಿದೆ.
ಅಭಿಮಾನಿಗಳಂತೂ ಕೆಜಿಎಫ್ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರತಿ ದಿನ ಕೆಜಿಎಫ್ ಕುರಿತಾಗಿ ಏನಾದರು ಅಪ್ಡೇಟ್ ಬರಬಹುದೆ ಎಂದು ಕಾದು ಕುಳಿತಿದ್ದಾರೆ. ಆದರೆ ಇತ್ತೀಚೆಗೆ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್- 1 ಸಿನಿಮಾ ತೆಲುಗಿನ ಸ್ಟಾರ್ ಮಾ ವಾಹಿನಿ ರೈಟ್ಸ್ ತೆಗೆದುಕೊಂಡು ಮೊದಲ ಬಾರಿಗೆ ಪ್ರಸಾರ ಮಾಡುತ್ತಿದೆ ಎಂಬ ವಿಚಾರವನ್ನು ಹೇಳಿದ್ದರು. ಆದರೆ ಚಾಪ್ಟರ್ 2 ಬಗ್ಗೆ ಯಾವುದೇ ಅಪ್ಡೇಟ್ ನೀಡಿರಲಿಲ್ಲ.
ಕೆಜಿಎಫ್-2 ಸಿನಿಮಾದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಇದೀಗ ಕೆಜಿಎಫ್ -2 ಫ್ಯಾನ್ ಮೇಡ್ ಟ್ರೇಲರ್ ಸಿದ್ಧಪಡಿಸಿ ಯ್ಯೂಟೂಬ್ನಲ್ಲಿ ಬಿಟ್ಟಿದ್ದಾರೆ. ಮಾತ್ರವಲ್ಲದೆ, ಈ ಟ್ರೇಲರ್ ಲಕ್ಷ ವೀಕ್ಷಣೆ ಕಂಡಿದೆ.
ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಲುಕ್ ನೋಡಿದ ನಂತರ ಬೇರೆ ರಾಜ್ಯದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ತನ್ನ ನೆಚ್ಚಿನ ನಟನ ಕೆಜಿಎಫ್ ಸಿನಿಮಾದ ಟ್ರೇಲರ್ ಸಿದ್ಧಪಡಿಸಿ ಬಿಡುಗಡೆ ಮಾಡಿದ್ದಾರೆ. ಕೆಜಿಎಫ್ ಚಾಪ್ಟರ್ 1 ಮತ್ತು ಟ್ರೇಲರ್ ಮತ್ತು ಹಾಡಿನ ಕೆಲವು ತುಣುಕುಗಳನ್ನು ತೆಗೆದುಕೊಂಡು ಈ ಟ್ರೇಲರ್ ಸಿದ್ಧಪಡಿಸಿದ್ದಾರೆ.
ರಾಕಿ ಭಾಯ್ ಕೆಜಿಎಫ್ ಚಾಪ್ಟರ್- 2 ಸಿನಿಮಾದ ಮೂಲಕ ತೆರೆ ಮೇಲೆ ಮತ್ತೆ ಧೂಳೆಬ್ಬಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಈ ಬಾರಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಕೂಡ ನಟಿಸಿದ್ದಾರೆ. ಹಾಗಾಗಿ ಅಕ್ಟೋಬರ್ನಲ್ಲಿ ಈ ಸಿನಿಮಾ ತೆರೆ ಮೇಲೆ ಬಂದು ಹೊಸ ದಾಖಲೆಯನ್ನು ಬರೆಯುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಜೊತೆಗೆ ಕೆಜಿಎಫ್ ಚಾಪ್ಟರ್ 1 ದಾಖಲೆಯನ್ನು ಧೂಳಿಪಟ ಮಾಡಲಿದೆ.
Virat Kohli: ನೀರುದೋಸೆ ಸವಿದ ವಿರಾಟ್ ಕೊಹ್ಲಿ: ಇದರ ಹಿಂದಿದೆ ಕುಡ್ಲದ ನಂಟು
Jio Prepaid Plan: ಜುಲೈ ತಿಂಗಳಲ್ಲಿ ಅಳವಡಿಸಬಹುದಾದ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ