Sai Pallavi: ಸಾಯಿ ಪಲ್ಲವಿಗೆ ನೀವೇ ನ್ಯಾಷನಲ್ ಕ್ರಶ್​ ಎಂದ ಫ್ಯಾನ್ಸ್, ಒಂದು ಸೀನ್​ಗಾಗಿ ಎರಡು ದಿನ ಉಪವಾಸ ಇದ್ರಂತೆ ನಟಿ

Sai Pallavi As National crush: ಕಳೆದ ಕೆಲ ವರ್ಷಗಳಿಂದ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್​ ಎಂದು ಕರೆಯಲಾಗುತ್ತದೆ. ಆದರೆ ಈಗ ಹೊಸದೊಂದು ಸುದ್ದಿ ಬಂದಿದೆ. ಅದು ಸಾಯಿ ಪಲ್ಲವಿ ನ್ಯಾಷನಲ್ ಕ್ರಶ್ ಅಂತೆ.

ನಟಿ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ

  • Share this:
ಸಹಜ ಸುಂದರಿ ಎಂದು ಹೆಸರಾಗಿರುವವರು ನಟಿ ಸಾಯಿಪಲ್ಲವಿ (Sai Pallavi), ದಕ್ಷಿಣ ಭಾರತದಲ್ಲಿ (South India)  ಅವರಿಗೆ ಅಭಿಮಾನಿಗಳು (Fans) ಬಹಳಷ್ಟಿದ್ದಾರೆ. ಅವರ ಅಭಿನಯ, ಬೇರೆಯವರೊಂದಿಗೆ ಬೆರೆಯುವ ಪರಿ ಎಲ್ಲವೂ ಅಭಿಮಾನಿಗಳಿಗೆ ಇಷ್ಟ. ಅದ್ಭುತ ಅಭಿನಯ, ಮುದ್ದಾದ ಮುಖದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಸಿನಿಪ್ರಿಯರ ಮನಗೆದ್ದಿರುವ ಸುಂದರಿ. ಅಭಿನಯ (Acting) ಮತ್ತು ನೃತ್ಯ (Dance) ದ ಮೂಲಕ ಚಿತ್ರಪ್ರಿಯರ ಹೃದಯ ಗೆದ್ದಿರುವ ಸಾಯಿ ಪಲ್ಲವಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ದಕ್ಷಿಣ ಭಾರತ ಸಿನಿರಂಗದಲ್ಲಿ ʼಮಲರ್‌ʼ (Malar) ಎಂದೇ  ಖ್ಯಾತಿ ಗಳಿಸಿದ್ದಾರೆ ಸಾಯಿ ಪಲ್ಲವಿ. ತಮಿಳು (Tamil), ಮಲಯಾಳಂ (Malayalam) ಮತ್ತು ತೆಲುಗು (Telugu) ಚಿತ್ರರಂಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ನಟಿ ಸಾಯಿ ಪಲ್ಲವಿ. ಇದೀಗ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ನ್ಯಾಷನಲ್ ಕ್ರಶ್​ ನೀವೇ ಅಂತಿದ್ದಾರೆ ಫ್ಯಾನ್ಸ್ 

ಕಳೆದ ಕೆಲ ವರ್ಷಗಳಿಂದ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್​ ಎಂದು ಕರೆಯಲಾಗುತ್ತದೆ. ಆದರೆ ಈಗ ಹೊಸದೊಂದು ಸುದ್ದಿ ಬಂದಿದೆ. ಅದು ಸಾಯಿ ಪಲ್ಲವಿ ಅಂತೆ ನ್ಯಾಷನಲ್ ಕ್ರಶ್​. ಹೌದು, ಸಾಯಿ ಪಲ್ಲವಿ ವಿರಾಟ ಪರ್ವಂ ಪಾತ್ರಕ್ಕೆ ಎರಡು ದಿನ ಉಪವಾಸವಿದ್ದು ಅಭಿನಯಿಸಿದ್ದರು. ಒಬ್ಬ ನಟಿಯಾಗಿ ಒಂದು ಸಿನಿಮಾಗಾಗಿ ಇಷ್ಟೆಲ್ಲಾ ಮಾಡಿರುವುದು ಅವರ ಅಭಿಮಾನಿಗಳಿಗೆ ಸಂತೋಷವಾಗಿದೆ. ಅಲ್ಲದೇ, ಈ ವಿಚಾರ ತಿಳಿದ ನಂತರ ಅಭಿಮಾನಿಗಳು ಅವರಿಗೆ ನ್ಯಾಷನಲ್ ಕ್ರಶ್​ ಎಂದು ಕರೆಯುತ್ತಿದ್ದಾರೆ.

ಇದನ್ನೂ ಓದಿ: ಹೆಚ್ಚಾಗುತ್ತಿದೆ ಚಾರ್ಲಿ ಕಲೆಕ್ಷನ್, ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಬಾಲಿವುಡ್​ ನಿರ್ಮಾಪಕ

ರಾಣಾ ದಗ್ಗುಬಾಟಿ ಜೊತೆ ನಟಿಸುತ್ತಿರುವ ಈ ವಿರಾಟ ಪರ್ವಂ ಸಿನಿಮಾದಲ್ಲಿ ನಕ್ಸಲ್​ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ಎರಡು ದಿನ ಉಪವಾಸ ಇದ್ದರಂತೆ. ಪಾತ್ರವಾಗಿ ನೈಜವಾಗಿ ಬರಲಿ ಎಂದು ಅವರು ಉಪವಾಸ ಇದ್ದರಂತೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಈ ಕೆಲಸವನ್ನು ಹೊಗಳುತ್ತಿರುವ ಅಭಿಮಾನಿಗಳು ರಶ್ಮಿಕಾ ಅವರಿಗೆ ಹೋಲಿಸಿ, ನೀವೇ ನ್ಯಾಷನಲ್ ಕ್ರಶ್​ ಎಂದು ಹೇಳುತ್ತಿದ್ದಾರೆ. ಇನ್ನು ಜೂನ್ 17ಕ್ಕೆ ವಿರಾಟ ಪರ್ವಂ  ಸಿನಿಮಾ ರಿಲೀಸ್​ ಆಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡದಲ್ಲಿ ಡಬ್ ಮಾಡಿದ್ದ ಸಾಯಿ ಪಲ್ಲವಿ

ಇನ್ನು ಇತ್ತೀಚೆಗಷ್ಟೇ ಕನ್ನಡದಲ್ಲಿ ಡಬ್​ ಮಾಡಲು ಕನ್ನಡ ಕಲಿತು ಕನ್ನಡಿಗರ ಮನ ಗೆದ್ದಿದ್ದರು. ಹೌದು, ಸಾಯಿ ಪಲ್ಲವಿ ಅವರೇ ಕನ್ನಡ ಕಲಿತಿದ್ದಾರೆ, ಕನ್ನಡ ಪದ ಉಚ್ಛಾರ ಮಾಡುವುದು ಸಾಯಿ ಪಲ್ಲವಿಗೆ ಸುಲಭ ಇರಲಿಲ್ಲ. ಎಡೆಬಿಡದೆ ಪ್ರಯತ್ನ ಹಾಕಿ ಸಾಯಿ ಪಲ್ಲವಿ ಅವರು ಪದೇ ಪದೇ ಉಚ್ಛಾರ ಮಾಡಿ ಕನ್ನಡ ಮಾತನಾಡಿದ್ದಾರೆ. ಸಾಯಿ ಪಲ್ಲವಿ ಅವರು ಹೇಗೆ ಕನ್ನಡ ಕಲಿತರು ಎಂಬ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಿನಿಮಾಕ್ಕಾಗಿ ಕನ್ನಡ ಕಲಿತು ಮಾತನಾಡುವ ಶ್ರಮ ಹಾಕಿದ ಸಾಯಿ ಪಲ್ಲವಿ ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಗಿಟಾರ್ ಬಿಟ್ಟು ಡೈರೆಕ್ಟರ್ ಕ್ಯಾಪ್ ಹಾಕೋಕೆ ಸಜ್ಜಾದ ಅರ್ಜುನ್ ಜನ್ಯ, ಮ್ಯೂಸಿಕ್ ಮಾಂತ್ರಿಕನಿಗೆ ಶಿವಣ್ಣ ಸಾಥ್

2015ರಲ್ಲಿ ಮೊದಲ ಬಾರಿಗೆ ಸಾಯಿ ಪಲ್ಲವಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಮಲಯಾಳಂನ ಫೇಮಸ್‌ ಸಿನಿಮಾ ʼಪ್ರೇಮಂʼ ಮೂಲಕ ಚಿತ್ರರಂಗಕ್ಕೆ ಸಾಯಿ ಪಲ್ಲವಿ ಎಂಟ್ರಿಯಾಗಿದ್ದರು.  ಈ ಚಿತ್ರದಲ್ಲಿ ಮಲರ್‌ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ ಇವರು ಆ ಬಳಿಕ ದಕ್ಷಿಣ ಭಾರತದ ಪ್ರಖ್ಯಾತ ನಟಿಯರಲ್ಲಿ ಒಬ್ಬರಾದರು. ಬಳಿಕ ದುಲ್ಕರ್‌ ಸಲ್ಮಾನ್‌ ಅಭಿನಯದ ಕಾಳಿ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇನ್ನು 2018ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪಲ್ಲವಿ, ದಿಯಾ ಸಿನಿಮಾದಲ್ಲಿ ಅಭಿನಯಿಸಿದರು. ನಟಿಸಿದ ಎಲ್ಲಾ ಸಿನಿಮಾಗಳು ಭರ್ಜರಿ ಹಿಟ್‌ ಸಾಧಿಸಿದೆ.
Published by:Sandhya M
First published: