Puneeth Rajkumar: ಗಣೇಶನ ಹಬ್ಬದಲ್ಲೂ ಅಪ್ಪು ಹವಾ; ಟ್ವಿಟರ್​ನಲ್ಲಿ ಪುನೀತ್ ಚತುರ್ಥಿ ಟ್ರೆಂಡ್

ಟ್ವಿಟರ್‌ನಲ್ಲಿ ಪುನೀತ್ ಚತುರ್ಥಿ ಆಚರಣೆ ಮಾಡಲು ಅಭಿಮಾನಿಗಳು ಅಪ್ಪು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇಂದು (ಆಗಸ್ಟ್ 30) ಮಧ್ಯಾಹ್ನ 12.30ರಿಂದ ಪುನೀತ್ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ.

ಪುನೀತ್​ ಚತುರ್ಥಿ ಟ್ರೆಂಡ್

ಪುನೀತ್​ ಚತುರ್ಥಿ ಟ್ರೆಂಡ್

  • Share this:
ನಾಡಿನಲ್ಲಿ ಗಣೇಶ ಚತುರ್ಥಿ (Ganesh chaturthi) ಸಂಭ್ರಮ ಮನೆ ಮಾಡಿದ್ದು, ಎಲ್ಲೆಲ್ಲೂ ಗಣೇಶನ ಮೂರ್ತಿಗಳನ್ನು ಇಟ್ಟು ಪೂಜೆ ಮಾಡೋದು ಸಾಮಾನ್ಯ, ಈ ವರ್ಷ ಪುನೀತ್​ ರಾಜ್​ ಕುಮಾರ್ (Puneeth Rajkumar)​​ ಅವರನ್ನು ಕಳೆದುಕೊಂಡ ದುಃಖದಲ್ಲಿರೋ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪವರ್​​ ಸ್ಟಾರ್​ರನ್ನು (Power Star) ನೆನಪು ಮಾಡಿಕೊಳ್ತಿದ್ದಾರೆ. ಅಪ್ಪು ಪ್ರತಿಮೆ ಇರೋ ಗಣೇಶನ ಮೂರ್ತಿಗಳನ್ನು ತಂದು ಪೂಜೆ ಮಾಡಿ ಗೌರವ ಸಲ್ಲಿಸುತ್ತಾರೆ. ಮತ್ತೊಂದೆಡೆ ಟ್ವಿಟರ್​ನಲ್ಲಿ (Twitter)  ಗಣೇಶ ಚತುರ್ಥಿ ಹಿನ್ನೆಲೆ ಪುನೀತ್ ಚತುರ್ಥಿ (Puneeth Chaturthi) ಟ್ರೆಂಡ್​ ಶುರುವಾಗಿದೆ. 

ಅಭಿಮಾನಿಗಳ ಮನದಲ್ಲಿ ಅಪ್ಪು ಅಮರ

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ‌ನಮ್ಮನ್ನು ಅಗಲಿ ಇಂದಿಗೆ 10 ತಿಂಗಳಾಯ್ತು. ಆದರೆ ಅಪ್ಪು ಕನ್ನಡಿಗರ ಮನೆ, ಮನಗಳಲ್ಲಿ ಎಂದೆಂದಿಗೂ ಅಮರರಾಗಿ ಇರುತ್ತಾರೆ. ಪುನೀತ್​ ರಾಜ್​ ಕುಮಾರ್​ ಮೇಲಿನ ಪ್ರೀತಿಯನ್ನು ಅಭಿಮಾನಿಗಳು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಲೇ ಇದ್ದಾರೆ. ಅದೆಷ್ಟೋ ಅಭಿಮಾನಿಗಳು ಪುನೀತ್​ ಹೆಸರಲ್ಲಿ ಅನೇಕ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ವ್ಯಾಪಾರ, ವಹಿವಾಟು ಹಾಗೂ ಅಂಗಡಿಗಳಿಗೆ ಪುನೀತ್​ ಹೆಸರಿಟ್ಟು ಅವರ ಮೇಲಿರೋ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಟ್ವಿಟರ್‌ನಲ್ಲಿ ಪುನೀತ್ ಚತುರ್ಥಿ ಟ್ರೆಂಡ್​

ಈ ಬಾರಿ ಕೂಡ ಗಣೇಶ ಚತುರ್ಥಿಯನ್ನು ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ಸಂಭ್ರಮಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ. ಹೀಗಾಗಿಯೇ ಟ್ವಿಟರ್‌ನಲ್ಲಿ ಪುನೀತ್ ಚತುರ್ಥಿ ಆಚರಣೆ ಮಾಡಲು ಅಭಿಮಾನಿಗಳು ಅಪ್ಪು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇಂದು (ಆಗಸ್ಟ್ 30) ಮಧ್ಯಾಹ್ನ 12.30ರಿಂದ ಪುನೀತ್ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ.



ಟ್ವಿಟ್ಟರ್‌ನಲ್ಲಿ ಪುನೀತ್ ಚತುರ್ಥಿ ಟ್ರೆಂಡಿಂಗ್ ಅಭಿಮಾನಿಗಳು ಕರೆ ನೀಡುತ್ತಿದ್ದಂತೆ ಟ್ವಿಟರ್‌ನಲ್ಲಿ ಪುನೀತ್ ಚತುರ್ಥಿ ಟ್ರೆಂಡಿಂಗ್ ಶುರುವಾಗಿದೆ. ಅಪ್ಪು ಅಭಿಮಾನಿಗಳು ಟ್ರೆಂಡಿಂಗ್ ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್‌ಕುಮಾರ್ ಇರುವ ಫೋಟೊಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Puneeth Rajkumar: ಆಕಾಶದಲ್ಲೂ ಮಿನುಗಲಿದೆ ಪವರ್ 'ಸ್ಟಾರ್; ಈ ವರ್ಷವೇ ನಭಕ್ಕೆ ಹಾರಲಿದೆ ಪುನೀತ್ ಉಪಗ್ರಹ

"ಬನ್ನಿ ಸ್ನೇಹಿತರೆ ನಮ್ಮ ಅಪ್ಪು ಅವರನ್ನು ಗಣೇಶ ಹಬ್ಬದಂದು ವಿಜೃಂಭಣೆಯಿಂದ ನೆನಪಿಸಿಕೊಳ್ಳೋಣ. ಈ ವರ್ಷದ ಗಣೇಶ ಹಬ್ಬವನ್ನು ನಮ್ಮ ಹೆಮ್ಮೆಯ ಅಪ್ಪು ಅವರ ನೆನಪಿನಲ್ಲಿ ಹ್ಯಾಶ್‌ಟ್ಯಾಗ್ ಬಳಸುವುದರ ಮೂಲಕ ಹಾಗೂ ಅವರ ಫೋಟೊವನ್ನು ಗಣೇಶ ಪೆಂಡಾಲ್‌ಗಳಲ್ಲಿ ಹಾಕುವುದರ ಮೂಲಕ ಆಚರಿಸೋಣ." ಎಂದು ಅಭಿಮಾನಿಗಳು ಕರೆ ನೀಡಿದ್ದರು.

ಗಣೇಶನ ಹಬ್ಬದಲ್ಲು ಅಪ್ಪು ಅಬ್ಬರ ಜೋರು

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನೆನಪು ಸದಾ ಒಂದಿಲ್ಲೊಂದು ಕಾರಣದಿಂದ ಮರುಕಳಿಸುತ್ತಲೆ ಇದೆ. ತಮ್ಮ ಮನೋಜ್ಞ ಅಭಿನಯದಿಂದ ಕರುನಾಡ ಮನೆ ಮನೆಗಳಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದ್ದಾರೆ. ಅವರ ವಿಶಿಷ್ಟ ಅಭಿನಯ ಕುಟುಂಬ ಸಮೇತ ನೋಡುವ ಚಿತ್ರಗಳು ಈಗಲೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಪ್ರತಿ ಹಬ್ಬ, ಜಾತ್ರೆ ಸಮಾರಂಭಗಳಲ್ಲಿ ಪುನೀತ್ ರಾಜ್‍ಕುಮಾರ್ ಈಗಲೂ ರಾರಾಜಿಸುತ್ತಿದ್ದಾರೆ. ಇದೀಗ ಗಣೇಶೋತ್ಸವದಲ್ಲಿಯೂ ಅಪ್ಪು ಅಬ್ಬರ ಜೋರಾಗಿದೆ.

ಇದನ್ನೂ ಓದಿ: Puneeth Rajkumar: ಮನೆಗೆ ಬಂದ ಅಭಿಮಾನಿಯ ಮಗುವನ್ನು ಮುದ್ದಾಡಿ ಅಪ್ಪು ಎಂದು ಹೆಸರಿಟ್ಟ ಶಿವಣ್ಣ

ಕಲಾವಿದರು ಅಪ್ಪು ಜೊತೆ ಗಣೇಶನ ಮೂರ್ತಿ ತಯಾರಿಸಿದ್ದಾರೆ. ಅಪ್ಪು ಕೆನ್ನೆ ಹಿಡಿದು ವಿಚಾರಿಸ್ತಿರೋ ಗಣೇಶ ಮೂರ್ತಿಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಬೊಮ್ಮಾಪುರ ಓಣಿಯ ಕಲಾವಿದ ವಿಜಯ್ ಕುಮಾರ್ ಕಾಂಬಳೆ ಅವರಿಂದ ಈ ಬಗೆಯ ಗಣೇಶ ಮೂರ್ತಿಗಳು ಮೂಡಿ ಬಂದಿವೆ. ಗಣೇಶ ಜೊತೆಗಿನ ಪುನೀತ್ ರಾಜಕುಮಾರ್ ನ ಹತ್ತಾರು ವಿಗ್ರಹಗಳ ತಯಾರಿಕೆ ಮಾಡಲಾಗಿದೆ. ಆ ಮೂಲಕ ಕಲಾವಿದರು ಪುನೀತ್ ರಾಜಕುಮಾರ್ ಗೆ ಗೂ ಗೌರವ ಸಲ್ಲಿಸುತ್ತಿದ್ದಾರೆ. ಕರುನಾಡು ಪ್ರೀತಿಸೋ ಕಲಾವಿದ ಪುನೀತ್ ರಾಜಕುಮಾರ್ ಆಗಿದ್ದರು. ಹೀಗಾಗಿ ಅವರನ್ನು ಸ್ಮರಿಸುವ ಜೊತೆಗೆ, ಗೌರವಿಸಲು ಈ ಮೂರ್ತಿಗಳನ್ನು ಹಬ್ಬದ ದಿನ ಪೂಜಿಸಲಾಗ್ತಿದೆ.
Published by:Pavana HS
First published: