18 ವರ್ಷಗಳ ನಂತರ ಒಂದಾದ ಐಶ್​- ಅನಿಲ್​ ಕಪೂರ್​ ಜೋಡಿ: ಇಂದು 'ಫೆನ್ನಿ ಖಾನ್​' ಟೀಸರ್​ ಬಿಡುಗಡೆ

news18
Updated:June 26, 2018, 1:52 PM IST
18 ವರ್ಷಗಳ ನಂತರ ಒಂದಾದ ಐಶ್​- ಅನಿಲ್​ ಕಪೂರ್​ ಜೋಡಿ: ಇಂದು 'ಫೆನ್ನಿ ಖಾನ್​' ಟೀಸರ್​ ಬಿಡುಗಡೆ
news18
Updated: June 26, 2018, 1:52 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಜೂನ್​ 26):  'ತಾಲ್'​​ ಸಿನಿಮಾದಲ್ಲಿ ರೊಮ್ಯಾಂಟಿಕ್​ ಜೋಡಿಯಾಗಿ ಕಾಣಿಸಿಕೊಂಡಿದ್ದ ಅನಿಲ್​ ಕಪೂರ್​- ಐಶ್ವರ್ಯಾ ರೈ ಬಚ್ಚನ್​ 18 ವರ್ಷಗಳ ನಂತರ 'ಫೆನ್ನಿ ಖಾನ್​' ಸಿನಿಮಾದ ಮೂಲಕ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಈ ಮೊದಲ 'ಹಮಾರ ದಿಲ್​ ಆಪ್​ ಕೆ ಪಾಸ್​ ಹೈ' ಮತ್ತು 'ತಾಲ್​' ಸಿನಿಮಾದಲ್ಲಿ  ನಟಿಸಿದ್ದ ಈ ಜೋಡಿ 3ನೇ ಬಾರಿಗೆ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್​ ಲುಕ್​ನಿಂದಲೇ ಗಮನಸೆಳೆದಿದ್ದ ನಟ ಅನಿಲ್​ ಕಪೂರ್​​ ಅವರ ಬಹುನಿರೀಕ್ಷಿತ ಸಿನಿಮಾ 'ಫೆನ್ನಿ ಖಾನ್​' ಟೀಸರ್​ ಇಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಸ್ವತಃ ಅನಿಲ್​ ಕಪೂರ್​ ಟ್ವೀಟ್​ ಮಾಡಿದ್ದು, ಚಿತ್ರದ ಮತ್ತೊಂದು ಪೋಸ್ಟರ್​ ಅನ್ನು ಅಪ್​ಲೋಡ್​ ಮಾಡಿದ್ದಾರೆ.


Loading...

ಬೆಲ್ಜಿಯಂನ 'ಎವೆರಿಬಡಿ ಈಸ್​ ಫೇಮಸ್'​ ಸಿನಿಮಾದ ರೀಮೇಕ್​  ಆಗಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಹಲವು ವಿಶೇಷತೆಗಳಿಂದ ನಿರೀಕ್ಷೆ ಹುಟ್ಟುಹಾಕಿರುವ 'ಫೆನ್ನಿ ಖಾನ್'​ ಸಿನಿಮಾವನ್ನು ಅತುಲ್​ ಮಂಜ್ರೇಕರ್​ ನಿರ್ದೇಶಿಸಿದ್ದಾರೆ. ಕಳೆದ ವರ್ಷ 'ಮುಬಾರಕಾ' ಮತ್ತು 'ರೇಸ್​ 3' ಸಿನಿಮಾದಲ್ಲಿ ಕಳೆದ ವರ್ಷ ಕಾಣಿಸಿಕೊಂಡಿದ್ದ ಅನಿಲ್​ ಕಪೂರ್​ ನಟನೆಯ 'ಫೆನ್ನಿ ಖಾನ್'​  ಸಿನಿಮಾ ಆಗಸ್ಟ್​ ಮೊದಲ ವಾರದಲ್ಲಿ ತೆರೆಕಾಣಲಿದೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ