ಟ್ರೆಂಡಿಂಗ್​ನಲ್ಲಿದೆ ಫೆನ್ನಿ ಖಾನ್​ ಟೀಸರ್: ಬಿಡುಗಡೆಯಾಗಿ ಒಂದು ದಿನದೊಳಗೆ 40 ಲಕ್ಷ ವೀಕ್ಷಣೆ

news18
Updated:June 27, 2018, 2:03 PM IST
ಟ್ರೆಂಡಿಂಗ್​ನಲ್ಲಿದೆ ಫೆನ್ನಿ ಖಾನ್​ ಟೀಸರ್: ಬಿಡುಗಡೆಯಾಗಿ ಒಂದು ದಿನದೊಳಗೆ 40 ಲಕ್ಷ ವೀಕ್ಷಣೆ
news18
Updated: June 27, 2018, 2:03 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಜೂನ್​ 27):  ಅನಿಲ್​ ಕಪೂರ್​- ಐಶ್ವರ್ಯಾ ರೈ ಬಚ್ಚನ್​ನ ಬಹುನಿರೀಕ್ಷಿತ ಫೆನ್ನಿ ಖಾನ್​ ಸಿನಿಮಾದ ಟೀಸರ್​ ನಿನ್ನೆ ಸಂಜೆ ಬಿಡುಗಡೆಯಾಗಿದ್ದು, ಒಂದು ದಿನದೊಳಗೆ 40 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ.57 ಸೆಕೆಂಡ್​ಗಳ ಈ ಟೀಸರ್​ನಲ್ಲಿ ಅನಿಲ್​ ಕಪೂರ್​- ಐಶ್ವರ್ಯಾ- ರಾಜ್​ಕುಮಾರ್​ ರಾವ್​ ನಟಿಸಿರುವ ಕೆಲ ಸೀನ್​ಗಳನ್ನು ನೋಡಬಹುದು. ಟ್ಯಾಕ್ಸಿ ಡ್ರೈವರ್​ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅನಿಲ್​ ಕಪೂರ್​, ರಾಕ್​ಸ್ಟಾರ್​ ಅವತಾರದಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯಾ ರೈ ಸಿನಿಮಾದ ಬಗ್ಗೆ ಕುತೂಹಲ ಉಂಟುಮಾಡಿದ್ದಾರೆ.

'ತಾಲ್'​​ ಸಿನಿಮಾದಲ್ಲಿ ರೊಮ್ಯಾಂಟಿಕ್​ ಜೋಡಿಯಾಗಿ ಕಾಣಿಸಿಕೊಂಡಿದ್ದ ಅನಿಲ್​ ಕಪೂರ್​- ಐಶ್ವರ್ಯಾ ರೈ ಬಚ್ಚನ್​ 18 ವರ್ಷಗಳ ನಂತರ 'ಫೆನ್ನಿ ಖಾನ್​' ಸಿನಿಮಾದ ಮೂಲಕ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಫೆನ್ನಿ ಖಾನ್'​ ಸಿನಿಮಾವನ್ನು ಅತುಲ್​ ಮಂಜ್ರೇಕರ್​ ನಿರ್ದೇಶಿಸಿದ್ದಾರೆ. ಈ  ಸಿನಿಮಾ ಆಗಸ್ಟ್​ ಮೊದಲ ವಾರದಲ್ಲಿ ತೆರೆಕಾಣಲಿದೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ