Video: ದಶಕಗಳ ನಂತರ ಐಶ್ವರ್ಯಾ ಹೆಸರು ಕೇಳಿದ ಸಲ್ಲು ಮಾಡಿದ್ದೇನು ಗೊತ್ತಾ?

news18
Updated:July 26, 2018, 1:43 PM IST
Video: ದಶಕಗಳ ನಂತರ ಐಶ್ವರ್ಯಾ ಹೆಸರು ಕೇಳಿದ ಸಲ್ಲು ಮಾಡಿದ್ದೇನು ಗೊತ್ತಾ?
news18
Updated: July 26, 2018, 1:43 PM IST
ನ್ಯೂಸ್​ 18 ಕನ್ನಡ 

ಐಶ್ವರ್ಯಾ ರೈ ಹಾಗೂ ಸಲ್ಮಾನ್​ ಖಾನ್​ ಅವರ ಪ್ರೀತಿಯ ಸಂಬಂಧ ಮುರಿದು ದಶಕ ಕಳೆದಿದೆ. ಆದರೂ ಇಂದಿಗೂ ಐಶ್ವರ್ಯಾ ಹೆಸರು ಕೇಳಿದ ಕೂಡಲೇ ಸಲ್ಮಾನ್​ ಮುಖದಲ್ಲಿ ಏನೊ ಒಂದು ರೀತಿಯ ಕಳೆ ಮೂಡುತ್ತದೆ.

ಹೌದು ಖಾಸಗಿ ವಾಹಿನಿಯಲ್ಲಿ ಸಲ್ಮಾನ್​ ಖಾನ್​ ನಡೆಸಿಕೊಡುತ್ತಿರುವ 'ದಸ್​ ಕಾ ಧಮ್​' ಕಾರ್ಯಕ್ರಮಕ್ಕೆ ಇತ್ತೀಚೆಗೆ ಅನಿಲ್ ಕಪೂರ್​ ಎಂಟ್ರಿ ಕೊಟ್ಟಿದ್ದರು. ಅದು ಸಹ ಅವರ 'ಫೆನ್ನಿ ಸಿಂಗ್​' ಸಿನಿಮಾದ ಪ್ರಚಾರಕ್ಕಾಗಿ ಬಂದಿದ್ದ ಅನಿಲ್​ ಸಲ್ಮಾನ್​ ಜತೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು.

ಇದಾದ ನಂತರ ಸಲ್ಲು ಅನಿಲ್​ ಅವರ ಹೊಸ ಸಿನಿಮಾದ ಕುರಿತು ಕೊಂಚ ಮಾಹಿತಿ ನೀಡುವಂತೆ ಕೇಳಿದ್ದರು. ಆಗ 'ಫೆನ್ನಿಸಿಂಗ್​' ಸಿನಿಮಾದಲ್ಲಿನ ಪಾತ್ರಗಳ ಪರಿಚಯ ಮಾಡುವಾಗ 'ಬೇಬಿ ಸಿಂಗ್'​ ಎನ್ನುವ ಪಾತ್ರದ ಕುರಿತು ಅನಿಲ್​ ಹೇಳುತ್ತಾರೆ. ಅದಕ್ಕೆ ಬೇಬಿ ಸಿಂಗ್​ ಯಾರು ಎಂದು ಸಲ್ಲು ಕೇಳಿದೊಡನೆ ಅನಿಲ್​ ಅದು ಐಶ್ವರ್ಯಾ ರೈ ಬಚ್ಚನ್​ ಮಾಡಿರುವ ಪಾತ್ರ ಎನ್ನುತ್ತಾರೆ. ಐಶ್ವರ್ಯಾ ಅವರ ಹೆಸರು ಕೇಳಿದೊಡಣೆ ಸಲ್ಲು ಮುಖದ ಮೇಲೆ ಮಂದಹಾಸ ತುಂಬಿ ತುಳುಕುತ್ತದೆ. ಈ ವಿಡಿಯೋ ಈಗ ವೈರಲ್​ ಆಗಿದೆ.

 


Loading...


@BeingSalmanKhan @being_salman_khan1_ @anilskapoor #beingsalmankhan #beinghuman#salman #duskadum #being_Salman_Khan1_ #being_surbi_queen


A post shared by Sallu ki Fan surbi Queen 👑 (@being_surbi_queen) on






'ಹಮಾರಾ ದಿಲ್​ ಆಪ್​ಕೆ ಪಾಸ್​ ಹೈ' ಸಿನಿಮಾದ ನಂತರ ಬರೋಬ್ಬರಿ 18 ವರ್ಷಗಳ ನಂತರ ಅನಿಲ್​ ಕಪೂರ್ ಹಾಗೂ ಐಶ್ವರ್ಯಾ ರೈ ಮತ್ತೆ 'ಫೆನ್ನಿ ಸಿಂಗ್​' ಮೂಲಕ ತೆರೆ ಹಂಚಿಕೊಂಡಿದ್ದಾರೆ. ಆತುಲ್​ ಮಂಜ್ರೇಕರ್​ ನಿರ್ದೇಶನದ ಈ ಸಿನಿಮಾ ಆಗಸ್ಟ್​ 3ಕ್ಕೆ ತೆರೆಗಪ್ಪಳಿಸಲಿದೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ