Yash-Sudeep Fans War: ಪ್ರಶಾಂತ್​ ಇಲ್ಲದ ಯಶ್​ ಝೀರೋ! ರಾಕಿ ಭಾಯ್, ಕಿಚ್ಚ ಸುದೀಪ್ ಫ್ಯಾನ್ಸ್ ವಾರ್!

ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ರಾಕಿಂಗ್ ಸ್ಟಾರ್​ ಯಶ್​ ಅವರು ವಿಶ್​ ಮಾಡಿಲ್ಲ ಎನ್ನುವ ಕಾರಣಕ್ಕೆ ಯಶ್ ಅವರನ್ನು ಸುದೀಪ್​ ಅಭಿಮಾನಿಗಳು ಮನಸಿಗೆ ಬಂದಂತೆ ಟ್ರೋಲ್ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.

ಯಶ್​, ಸುದೀಪ್​

ಯಶ್​, ಸುದೀಪ್​

  • Share this:
ಸೋಶಿಯಲ್​ ಮೀಡಿಯಾದಲ್ಲಿ (Social Media) ಇದ್ದಕ್ಕಿದ್ದಂತೆ ನಟ ಯಶ್ (Yash)​ ಹಾಗೂ ಸುದೀಪ್ (Sudeep)​ ಫ್ಯಾನ್​​ಗಳು ಬಿಗ್​ ವಾರ್​ ಶುರು ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ (Sandalwood) ಅನೇಕ ಹ್ಯಾಶ್‌ಟ್ಯಾಗ್‌ಗಳು (Hashtag) ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಕೆಜಿಎಫ್​​ (KGF) ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್ ಆಗಿರೋ ಯಶ್​, ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ. ಆದ್ರೆ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಫ್ಯಾನ್​ ವಾರ್​ ಶುರುವಾಗಿದ್ದು, ಟ್ವೀಟ್​ ವಾರ್ (Twitter War)​​ ತಾರಕಕ್ಕೇರಿದೆ. ಸುದೀಪ್​ ಅಭಿಮಾನಿಗಳು ಯಶ್​​ ಬಗ್ಗೆ ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಯಶ್​ ಅಭಿಮಾನಿಗಳು (Yash Fans) ಸುದೀಪ್​ ಬಗ್ಗೆ ಬ್ಯಾಡ್​ ಕಾಮೆಂಟ್ ಮಾಡ್ತಿದ್ದಾರೆ. ಇದ್ದಕ್ಕಿದ್ದಂತೆ ಫ್ಯಾನ್​ ವಾರ್​ ಶುರುವಾಗಲು ಕಾರಣ ಏನು ಅನ್ನೋ ಪ್ರಶ್ನೆ ಎದ್ದಿದೆ.

ಸುದೀಪ್​ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ಯಶ್​

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ರಾಕಿಂಗ್ ಸ್ಟಾರ್​ ಯಶ್​ ಅವರು ವಿಶ್​ ಮಾಡಿಲ್ಲ ಎನ್ನುವ ಕಾರಣಕ್ಕೆ ಯಶ್ ಅವರನ್ನು ಸುದೀಪ್​ ಅಭಿಮಾನಿಗಳು ಮನಸಿಗೆ ಬಂದಂತೆ ಟ್ರೋಲ್ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಯಶ್ ಬಗ್ಗೆ​ ಟ್ರೋಲ್​ ಮಾಡ್ತಿದ್ದಂತೆ. ಇತ್ತ ಯಶ್​ನ ಅಭಿಮಾನಿಗಳು ಸುಮ್ಮನಿರ್ತಾರಾ? ಅವರು ಕೂಡ ಕಿಚ್ಚ ಸುದೀಪ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾಡ್​ ಕಾಮೆಂಟ್​ ಮಾಡಿದ್ದಾರೆ.





ಟ್ರೆಂಡಿಂಗ್ ಆಗಿದೆ ಅನೇಕ ಹ್ಯಾಶ್‌ಟ್ಯಾಗ್‌ಗಳು

#FanbaselessDogGayYash, #CEOofLotteryYash, #FakeMafiaSideActorSudeep, #CharacterlessBalegaraSudeep ಎಂಬ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳು ಎಲ್ಲೆಡೆ ಹರಿದಾಡ್ತಿದೆ.





ಸುದೀಪ್​ ಚಿತ್ರಗಳ ಬಗ್ಗೆ ನೆಗಟಿವ್​ ಕಾಮೆಂಟ್​

ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ 200+ ಕೋಟಿ ಗಳಿಕೆ ಮಾಡಿದೆ ಎಂದು ಅಭಿಮಾನಿಗಳು ಪೋಸ್ಟ್​ ಮಾಡಿದ್ದಾರೆ. ಜೊತೆಗೆ ಈ ಚಿತ್ರಕ್ಕಾಗಿ Zee5 ಕನ್ನಡದ ಪ್ರೋಮೋ ಈ ಬಾಕ್ಸ್ ಆಫೀಸ್ ಅಂಕಿಅಂಶಗಳೊಂದಿಗೆ ಹೊರಬಂದಾಗಿನಿಂದ, ಸಾಮಾಜಿಕ ಮಾಧ್ಯಮದಲ್ಲಿ ಯಶ್​​ ಅಭಿಮಾನಿಗಳು ಇದಕ್ಕೆ ನೆಗೆಟಿವ್​ ಕಾಮೆಂಟ್​ ಮಾಡ್ತಿದ್ದಾರೆ.

ಸುದೀಪ್​ ಭವಿಷ್ಯದ ಬಗ್ಗೆ ಗೇಲಿ

ವೈಯಕ್ತಿಕ ವಿಚಾರಗಳ ಬಗ್ಗೆಯೂ ಟೀಕೆ ಮಾಡಿ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದೆ. ಸುದೀಪ್ ಅವರೊಂದಿಗೆ ಚಿತ್ರ ಮಾಡಿದ ನಿರ್ಮಾಪಕರ ಭವಿಷ್ಯದ ಬಗ್ಗೆ ಗೇಲಿಗಳು, ಸ್ವಜನಪಕ್ಷಪಾತದ ಟೀಕೆ ಹಾಗೂ ಜಾತಿವಾದಿಯಾಗಿದ್ದಾನೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿದೆ.

ಇದನ್ನೂ ಓದಿ: Kantara Trailer: ರಿಷಬ್ ಶೆಟ್ಟಿ​ ಅಭಿನಯದ ಕಾಂತಾರ ಟ್ರೈಲರ್ ರಿಲೀಸ್​; ಇದು ಕೇವಲ ಸಿನಿಮಾ ಅಲ್ಲ ಒಂದು ದಂತಕಥೆ!

ಪ್ರಶಾಂತ್​ ನೀಲ್​ ಇಲ್ಲದೆ ಯಶ್​ 0

ಕೆಜಿಎಫ್ ಅಥವಾ ಪ್ರಶಾಂತ್ ನೀಲ್ ಎಂಬ ಲಾಟರಿ ಇಲ್ಲದೆ ಯಶ್ ಕೈಯಲ್ಲಿ ಏನೂ ಆಗುವುದಿಲ್ಲ ಮತ್ತು ಅವರು ‘ಬಸ್ ಚಾಲಕನ ಮಗನ' ಎಂದೆಲ್ಲಾ ಯಶ್ ವಿರುದ್ಧ ಪ್ರತಿದಾಳಿ ನಡೆಸಲಾಗಿದೆ. ಈ ಹಿಂದೆ ಯಶ್​​ ಹಾಗೂ ಅವರ ತಾಯಿ ಚಿಟ್ ಫಂಡ್ ವಂಚನೆ ಹಗರಣದಲ್ಲಿ ಸಿಲುಕಿಕೊಂಡಿದ್ದವರು ಎಂದು ನೆಟಿಜನ್‌ಗಳು ಪೋಸ್ಟ್ ಮಾಡಿದ್ದಾರೆ.





ನೆಟಿಜನ್‌ಗಳು ಈ ಅಭಿಮಾನಿಗಳ ಸಮರಕ್ಕೆ ಪ್ರತಿಕ್ರಿಯಿಸಿದ್ದು, ನಕಾರಾತ್ಮಕ ಪ್ರವೃತ್ತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇದು ಕನ್ನಡ ಚಲನಚಿತ್ರೋದ್ಯಮಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ವಿಕ್ರಾಂತ್ ರೋಣದ ಪ್ರಚಾರದ ಸಮಯದಲ್ಲಿ ಹಾಗೂ ಹಲವಾರು ಸಂದರ್ಶನಗಳಲ್ಲಿ, ಸುದೀಪ್ ಪದೇ ಪದೇ ಅಭಿಮಾನಿಗಳ ಯುದ್ಧ ನಟರಿಂದ ನಡೆಸಲಾಗುವುದಿಲ್ಲ ಎಂದಿದ್ದರು.
Published by:Pavana HS
First published: