Dhanush Divorce: ಧನುಷ್, ಐಶ್ವರ್ಯಾ ಡಿವೋರ್ಸ್ ಬಗ್ಗೆ ಕಿಂಡಲ್ ಮಾಡಿದ ಫ್ಯಾನ್ಸ್, ಇಲ್ಲಿ ಸಮಂತಾ ಹೆಸ್ರು ಬಂದಿದ್ದಾದ್ರೂ ಯಾಕೆ?
ಅಭಿಮಾನಿಯೊಬ್ಬರು ತಮ್ಮ ಟ್ವಿಟ್ಟರ್ನಲ್ಲಿ "ಅಮ್ಮಾ ಲಕ್ಷ್ಮೀ ರಾಮ್ಕಿ ನಿಮ್ಮ ಕಣ್ಣುಗಳು ಇದನ್ನು ನೋಡುತ್ತಿಲ್ಲವೇ. ದಯವಿಟ್ಟು ಧನುಷ್ ಮತ್ತು ಐಶ್ವರ್ಯಾ ಅವರನ್ನು ಮತ್ತೆ ಒಟ್ಟಾಗಿ ಸೇರಿಸಿ” ಎಂದು ಬರೆದಿದ್ದರು.
ಇತ್ತೀಚೆಗೆ ತಮಿಳು ನಟ ಧನುಷ್ (Tamil actor Dhanush) ಮತ್ತು ಹಿರಿಯ ನಟ ರಜನಿಕಾಂತ್ ಅವರ ಮಗಳು ಐಶ್ವರ್ಯಾ ರಜನೀಕಾಂತ್ (Aishwarya Rajinikanth's Divorce) ಅವರ ವಿಚ್ಛೇದನದ ಸುದ್ದಿ ಅವರ ಅಭಿಮಾನಿಗಳಿಗೆ ತುಂಬಾನೇ ಒಂದು ಆಘಾತವನ್ನುಂಟು ಮಾಡಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಧನುಷ್ ಅವರ ಪತ್ನಿಯಿಂದ ಏಕೆ ದೂರವಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕೆಲ ಅಭಿಮಾನಿಗಳು ಇವರಿಬ್ಬರು ಮತ್ತೆ ಒಂದಾಗಿ ಜೀವನವನ್ನು ನಡೆಸುವಂತೆ ಕೇಳಿಕೊಂಡರೆ, ಇನ್ನೂ ಕೆಲ ಅಭಿಮಾನಿಗಳು ಉರಿಯುವ ಬೆಂಕಿಗೆ ತುಪ್ಪ(Burning Fire) ಸುರಿದಂತೆ ಮಾತನಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ನಾವು ನೋಡಬಹುದಾಗಿದೆ.
ಇತ್ತೀಚೆಗೆ, ಅಭಿಮಾನಿಯೊಬ್ಬರು ನಿರ್ದೇಶಕರಾದ ಲಕ್ಷ್ಮಿ ರಾಮಕೃಷ್ಣನ್ ಅವರನ್ನು ನಟ ಧನುಷ್ ಮತ್ತು ಐಶ್ವರ್ಯಾ ಅವರನ್ನು ಮತ್ತೆ ಒಟ್ಟಿಗೆ ಸೇರಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ವಿನಂತಿಸಿದ್ದಾರೆ ಮತ್ತು ಅವರು ನಟ ಧನುಷ್ ಮತ್ತು ಐಶ್ವರ್ಯಾ ಅವರು ತಮ್ಮ ವಿಚ್ಛೇದನದ ಬಗ್ಗೆ ಜಾಹೀರಾತು ನೀಡುತ್ತಿದ್ದಂತಿದೆ ಎಂದು ಹೇಳಿದ್ದಾರೆ. ಚಲನಚಿತ್ರ ನಿರ್ದೇಶಕರಾದ ಲಕ್ಷ್ಮೀ ರಾಮಕೃಷ್ಣನ್ ಅವರು ಈ ಅಭಿಮಾನಿಯ ಟ್ವೀಟ್ ನೋಡಿ ಸುಮ್ಮನೆ ಕೂರಲಿಲ್ಲ, ನಿರ್ದೇಶಕರು ಟ್ವೀಟ್ಗೆ ಪ್ರತಿಕ್ರಿಯಿಸಿ ನಟಿ ಸಮಂತಾ ರುತ್ ಪ್ರಭು ಅವರು ನಟ ನಾಗ ಚೈತನ್ಯ ಅವರೊಂದಿಗೆ ಬೇರ್ಪಡಲು ನಿರ್ಧರಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಹೇಗೆ ಟ್ರೋಲ್ ಮಾಡಲಾಯಿತು ಎಂಬುದನ್ನು ನೆನಪಿಸಿದರು.
ಅವರಿಬ್ಬರನ್ನು ಅವರವರ ಪಾಡಿಗೆ ಬಿಟ್ಟು ಬಿಡಿ
ಅಭಿಮಾನಿಯೊಬ್ಬರು ತಮ್ಮ ಟ್ವಿಟ್ಟರ್ನಲ್ಲಿ "ಅಮ್ಮಾ ಲಕ್ಷ್ಮೀ ರಾಮ್ಕಿ ನಿಮ್ಮ ಕಣ್ಣುಗಳು ಇದನ್ನು ನೋಡುತ್ತಿಲ್ಲವೇ. ದಯವಿಟ್ಟು ಧನುಷ್ ಮತ್ತು ಐಶ್ವರ್ಯಾ ಅವರನ್ನು ಮತ್ತೆ ಒಟ್ಟಾಗಿ ಸೇರಿಸಿ” ಎಂದು ಬರೆದಿದ್ದರು. ಅಭಿಮಾನಿಗೆ ಪ್ರತಿಕ್ರಿಯಿಸಿರುವ ಲಕ್ಷ್ಮೀ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ "ಅವರಿಬ್ಬರು ಗೌರವಯುತವಾಗಿ ಬೇರ್ಪಡಲು ನಿರ್ಧರಿಸಿದ್ದಾರೆ, ಸಾರ್ವಜನಿಕವಾಗಿ ಒಬ್ಬರ ಬಗ್ಗೆ ಇನ್ನೊಬ್ಬರು ಪರಸ್ಪರ ಕೆಟ್ಟದಾಗಿ ಮಾತನಾಡುವುದರ ಮೂಲಕ ಅಥವಾ ಕಾನೂನು ಬದ್ಧವಾಗಿ ವಿಚ್ಛೇದನ ಪಡೆಯುವ ಮೊದಲು ಒಬ್ಬರ ಮೇಲೆ ಒಬ್ಬರು ಮಾತಾಡಿ ಅವರಿಗೆ ಮನಸ್ಸಿಗೆ ನೋವುಂಟು ಮಾಡಿಲ್ಲ. ತುಂಬಾನೇ ಗೌರವಯುತವಾಗಿ ಬೇರ್ಪಡಲು ನಿರ್ಧರಿಸಿದ್ದಾರೆ, ದಯವಿಟ್ಟು ಅವರನ್ನು ಅವರವರ ಪಾಡಿಗೆ ಇರಲು ಬಿಟ್ಟು ಬಿಡಿ” ಎಂದು ಬರೆದಿದ್ದಾರೆ.
Amma @LakshmyRamki ithellam unga kannukku theriyatha .. rendu perayaum kootittu poi serthu vainga
ಜಾಹೀರಾತು' ಮಾಡಿಕೊಳ್ಳುತ್ತಿದ್ದಾರೆ
ಲಕ್ಷ್ಮೀ ಅವರ ಪ್ರತಿಕ್ರಿಯೆಯ ನಂತರ, ಧನುಷ್ ಮತ್ತು ಐಶ್ವರ್ಯಾ ಅವರ ಅಭಿಮಾನಿ ಇವರಿಬ್ಬರ ವೈಯಕ್ತಿಕ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಉಲ್ಲೇಖಿಸಿದರು, ಆದರೆ ಅವರು ತಮ್ಮ ಪ್ರತ್ಯೇಕತೆಯನ್ನು 'ಜಾಹೀರಾತು' ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಭಾವಿಸಿದರು. ಸೆಲೆಬ್ರಿಟಿಗಳಿಗೆ ವಿಚ್ಛೇದನಗಳು ಸಾಮಾನ್ಯವಾಗಿವೆ ಎಂದು ಅಭಿಮಾನಿ ಹೇಳಿದರು. ಇದಕ್ಕೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಅವರು ''ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರ ವಿಚ್ಛೇದನದ ಉದಾಹರಣೆಯನ್ನು ನೀಡಿ, ನಟಿ ವಿಚ್ಛೇದನವನ್ನು ಘೋಷಿಸಿದ ನಂತರ ಅವರ ಬಗ್ಗೆ ವದಂತಿಗಳು ಹೇಗೆ ಹರಡಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ನಟಿ ಸಮಂತಾ ತನ್ನ ಬಗ್ಗೆ ತುಂಬಾ ಕ್ರೂರವಾಗಿ ಆಡಿದ ಮಾತುಗಳನ್ನು ಸಹಿಸಿಕೊಳ್ಳಬೇಕಾಯಿತು” ಎಂದು ತಮ್ಮ ಟ್ವೀಟ್ನಲ್ಲಿ ಹೇಳಿದರು.
ವಿಕೃತ ಸುದ್ದಿಗಳು
ಇಲ್ಲಿ ಸಮಸ್ಯೆಯೆಂದರೆ ಅವರು ವಿಚ್ಛೇದನೆಯನ್ನು ಘೋಷಿಸದಿದ್ದರೆ, ಅವರ ಅನುಮತಿಯಿಲ್ಲದೆ ವಿಕೃತ ಸುದ್ದಿಗಳು ಹೊರ ಬರುತ್ತಿದ್ದವು ಮತ್ತು ಅಭಿಮಾನಿಗಳಿಗೆ ತಪ್ಪು ಮಾಹಿತಿ ರವಾನೆ ಆಗುತ್ತಿತ್ತು" ಎಂದು ಅವರು ಟ್ವೀಟ್ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಮದುವೆಯಾಗಿ 4 ವರ್ಷಗಳಾಗಿದ್ದವು. ಇವರಿಬ್ಬರು ತಮ್ಮ ನಾಲ್ಕನೆಯ ವಿವಾಹ ವಾರ್ಷಿಕೋತ್ಸವಕ್ಕೆ ಕೆಲವು ದಿನಗಳ ಮುಂಚಿತವಾಗಿ ಅಕ್ಟೋಬರ್ 2, 2021 ರಂದು ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದರು. ರಜನೀಕಾಂತ್ ಅವರ ಇನ್ನೊಬ್ಬ ಮಗಳು ಸೌಂದರ್ಯ ಚೆನ್ನೈ ಮೂಲದ ಕೈಗಾರಿಕೋದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಏಳು ವರ್ಷಗಳ ನಂತರ ಇವರಿಬ್ಬರು ಬೇರ್ಪಟ್ಟರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ