ಕಳೆದ ಬಾರಿ ಕೋವಿಡ್ ಬಂದಾಗ ಬೇರೆ ಬೇರೆ ರಾಜ್ಯದ ಜನರಿಗೆ ತಮ್ಮ ಸೋನು ಸೂದ್ ಫೌಂಡೇಶನ್ ಮೂಲಕ ಈ ಬಹುಭಾಷಾ ನಟ ಸಹಾಯ ಹಸ್ತ ಚಾಚಿದ್ದರು. ಯಾರೇ ಕಷ್ಟ ಅಂತ ಸಹಾಯ ಕೇಳಿದ್ರೂ ಅವರನ್ನುಸಂಪರ್ಕಿಸಿ, ಸೋನು ಸೂದ್ ಸಹಾಯ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಇದೇ ಕಾರಣಕ್ಕೆ ಸೋನು ಸೂದ್ ಬಳಿಯಲ್ಲಿ ಅವರ ಅಭಿಮಾನಿಗಳು ಚಿತ್ರ, ವಿಚಿತ್ರ, ತರಹೇವಾರಿ ಬೇಡಿಕೆ ಇಡುತ್ತಿದ್ದಾರಂತೆ!
ನಟ (Actor) ಸೋನು ಸೂದ್ (Sonu Sood) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಬರೀ ಚಿತ್ರ ಪ್ರೇಮಿಗಳಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ಅವರ ಬಗ್ಗೆ ಗೊತ್ತು. ಕಾರಣ ಅವರು ಮಾಡುತ್ತಿರುವ ಸಮಾಜ ಸೇವೆ (Social Service). ಕಳೆದ ಬಾರಿ ಕೋವಿಡ್ (Covid) ಬಂದಾಗ ಬೇರೆ ಬೇರೆ ರಾಜ್ಯದ ಜನರಿಗೆ ತಮ್ಮ ಸೋನು ಸೂದ್ ಫೌಂಡೇಶನ್ (Sonu Sood Foundation) ಮೂಲಕ ಈ ಬಹುಭಾಷಾ ನಟ ಸಹಾಯ (Help) ಹಸ್ತ ಚಾಚಿದ್ದರು. ಯಾರೇ ಕಷ್ಟ ಅಂತ ಸಹಾಯ ಕೇಳಿದ್ರೂ ಅವರನ್ನುಸಂಪರ್ಕಿಸಿ, ಸೋನು ಸೂದ್ ಸಹಾಯ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಇದೇ ಕಾರಣಕ್ಕೆ ಸೋನು ಸೂದ್ ಬಳಿಯಲ್ಲಿ ಅವರ ಅಭಿಮಾನಿಗಳು (Fans) ಚಿತ್ರ, ವಿಚಿತ್ರ, ತರಹೇವಾರಿ ಬೇಡಿಕೆ ಇಡುತ್ತಿದ್ದಾರಂತೆ!
ಬಿಯರ್ ದಾನ ಮಾಡಿ ಎಂದ ಅಭಿಮಾನಿಗಳು
ಸೋನು ಸೂದ್ ಅವರಿಗೆ ಸಂಬಂಧಿಸಿದಂತೆ ಅನೇಕ ಮೀಮ್ಸ್ ಹರಿದಾಡುತ್ತಿವೆ. ಆ ಪೈಕಿ ಒಂದು ಮೀಮ್ ಬಹಳ ಗಮನ ಸೆಳೆದಿದೆ. ಅದು ಅವರ ಅಭಿಮಾನಿಗಳು ಮಾಡಿರುವ ವಿಚಿತ್ರ ರಿಕ್ವೆಸ್ಟ್. ‘ಚಳಿಗಾಲದಲ್ಲಿ ಕಂಬಳಿ ವಿತರಿಸುವ ನೀವು, ಈ ಬೇಸಿಗೆಯಲ್ಲಿ ನಮಗೆ ತಂಪಾದ ಬಿಯರ್ ದಾನ ಮಾಡುವುದಿಲ್ಲವೇ’ ಎಂದು ಬರೆದಿರುವ ಮೀಮ್ ಅನ್ನು ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ಕಂಡು ಸೋನು ಸೂದ್ ಉತ್ತರ ನೀಡಿದ್ದಾರೆ. ‘ಬೀಯರ್ ಜೊತೆ ತಿನ್ನಲು ಖಾರ ನೀಡಿದರೆ ನಡೆಯುತ್ತಾ’ ಎಂದು ಅವರು ಫನ್ನಿಯಾಗಿ ಪ್ರಶ್ನಿಸಿದ್ದಾರೆ. ‘ಖಾರ ಪಡೆಯಲು ಬಿಯರ್ ಕುಡಿಯುವುದು ಅನಿವಾರ್ಯವೇ?’ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಬಿಯರ್ ಜೊತೆ ತಿನ್ನಲು ಖಾರ ಕೊಡಲಾ?
ಅದನ್ನು ಕಂಡು ಸೋನು ಸೂದ್ ಉತ್ತರ ನೀಡಿದ್ದಾರೆ. ‘ಬೀಯರ್ ಜೊತೆ ತಿನ್ನಲು ಖಾರ ನೀಡಿದರೆ ನಡೆಯುತ್ತಾ’ ಎಂದು ಅವರು ಫನ್ನಿಯಾಗಿ ಪ್ರಶ್ನಿಸಿದ್ದಾರೆ. ‘ಖಾರ ಪಡೆಯಲು ಬಿಯರ್ ಕುಡಿಯುವುದು ಅನಿವಾರ್ಯವೇ?’ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇನ್ನು ಈ ಮೆಸೇಜ್ಗೆ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಪ್ರಶ್ನೆ ಕೇಳಿದವರ ಕಾಲೆಳೆದರೆ, ಇನ್ನು ಕೆಲವರು ಸೋನು ಸೂದ್ ಕಾಲೆಳೆದಿದ್ದಾರೆ. ‘ಖಾರ ಪಡೆಯಲು ಬಿಯರ್ ಕುಡಿಯುವುದು ಅನಿವಾರ್ಯವೇ?’ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಯುವಕನ ಪ್ರಾಣ ಕಾಪಾಡಿದ್ದ ಸೋನು ಸೂದ್
ಈ ಹಿಂದೆ ಕಳೆದ ಫೆಬ್ರವರಿಯಲ್ಲಿ ನಟ ಸೋನು ಸೂದ್ ಪಂಜಾಬ್ ನಲ್ಲಿ (Punjab) ಯುವಕನೊಬ್ಬನ ಪ್ರಾಣ ಉಳಿಸಿದ್ದರು. ಕಾರು ಅಪಘಾತದ ನಂತರ ಈ ಯುವಕ ಕಾರಿನೊಳಗೆ ಸಿಲುಕಿಕೊಂಡಿದ್ದ. ಅಷ್ಟರಲ್ಲಿ ಅಲ್ಲಿಂದಲೇ ಹಾದು ಹೋಗುತ್ತಿದ್ದ ಸೋನು ಸೂದ್ ತನ್ನ ಬೆಂಗಾವಲು ವಾಹನವನ್ನು ನಿಲ್ಲಿಸಿ ಯುವಕನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸೋನು ಅವರೇ ಯುವಕನನ್ನು ಹೊರಗೆ ಕರೆದುಕೊಂಡು ಹೋಗಿ ತನ್ನ ಕಾರಿನಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕ ಪರಿಣಾಮ ಯುವಕನನ ಪ್ರಾಣ ಉಳಿದಿದೆ.
ಈ ಹಿಂದೆ ಅವರ ಮನೆ ಮೇಲೆ ಐಟಿ ರೇಡ್ ನಡೆದಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್, ’ಕೋವಿಡ್ ಲಾಕ್ಡೌನ್ ಬಳಿಕ ಎರಡು ಬಾರಿ ರಾಜ್ಯಸಭಾ ಸ್ಥಾನಕ್ಕಾಗಿ ಆಫರ್ ಬಂದಿತ್ತು. ಆದರೆ ನಾನು ಅದನ್ನು ಒಪ್ಪಿಕೊಳ್ಳಲಿಲ್ಲ ಎಂದಿದ್ದರು. ಸದ್ಯಕ್ಕೆ ರಾಜಕೀಯಕ್ಕೆ ಧುಮುಕಲು ನನಗೆ ಆಸಕ್ತಿ ಇಲ್ಲ. ಈಗಾಗಲೇ ಅನೇಕ ಒಳ್ಳೆಯ ರಾಜಕಾರಣಿಗಳಿದ್ದಾರೆ. ಜನರಿಗಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಒಂದುವೇಳೆ ರಾಜಕೀಯಕ್ಕೆ ಬರಬೇಕು ಅಂದ್ರೆ ಅದಕ್ಕೂ ಮುನ್ನ ಹೋಮ್ವರ್ಕ್ ಮಾಡಿಕೊಳ್ಳುತ್ತೇನೆ’’ ಎಂದು ನಟ ಸೋನು ಸೂದ್ ತಿಳಿಸಿದ್ದರು.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ