ಬಾಹುಬಲಿ ಪ್ರಭಾಸ್ ಕೈಯಲ್ಲಿ ಸದ್ಯ ಮೂರು ಸಿನಿಮಾಗಳಿವೆ. ಅದರಲ್ಲಿ ರಾಧೆ ಶ್ಯಾಮಾ ರಿಲೀಸ್ ಗೆ ಸಜ್ಜಾಗುತ್ತಿದೆ. ಜೊತೆಗೆ ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಜೊತೆ ಒಂದು ಸಿನಿಮಾ ಸಹ ಪ್ರಭಾಸ್ ನಟನೆಯಲ್ಲಿ ಅನೌನ್ಸ್ ಆಗಿದೆ. ಸೈನ್ಸ್ ಫಿಕ್ಷನ್ ಆಗಿರೋ ಈ ಸಿನಿಮಾ ಪ್ರಭಾಸ್ ಕೆರಿಯರ್ ನಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಅಂತಲೇ ಹೇಳಲಾಗುತ್ತಿದೆ. ಆದರೆ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಎಕ್ಸೈಟ್ ಆಗಿರೋದು, ನಿರೀಕ್ಷೆ ಇಟ್ಕೊಂಡಿರೋದು, ಯಾವಾಗ ನೋಡ್ತಿವಪ್ಪ ಅಂತ ಕಾಯ್ತಿರೋದು ಮಾತ್ರ ಆದಿಪುರುಷ್ ಸಿನಿಮಾಗಾಗಿ.
ಹೌದು, ಬಾಹುಬಲಿ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಜಸ್ಟ್ ಅನೌನ್ಸ್ ಆದಾಗಿನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಬಾಹುಬಲಿ ಸಿರೀಸ್ ನಲ್ಲಿ ಸಿಕ್ಕ ಯಶಸ್ಸು ಆದಿಪುರುಷ್ ಮೂಲಕ ದುಪ್ಪಟ್ಟಾಗಲಿದೆ ಅಂತಲೇ ನೇಷನ್ ವೈಡ್ ಪ್ರಭಾಸ್ ಫ್ಯಾನ್ಸ್ ನಿರೀಕ್ಷೆ ಇಟ್ಕೊಂಡು ಕಾಯುತ್ತಿದ್ದಾರೆ.
ಪರಿಣಾಮ ಸ್ವತಃ ಅಭಿಮಾನಿಗಳೇ ಪ್ರಭಾಸ್ ಲುಕ್ ಗೆಟಪ್ ಇಮ್ಯಾಜಿನ್ ಮಾಡ್ಕೊಂಡು, ತಾವೇ ಪೋಸ್ಟರ್ ತಯಾರಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಸದ್ಯ ಆದಿಪುರುಷ್ ಫ್ಯಾನ್ ಮೇಡ್ ಪೋಸ್ಟರ್ ಔಟ್ ಆಗಿದೆ. ಅಷ್ಟೇ ಅಲ್ಲದೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
![]()
ಆದಿಪುರುಷ್ ಫ್ಯಾನ್ ಮೇಡ್ ಪೋಸ್ಟರ್
ಥಾಣಾಜಿ ಖ್ಯಾತಿಯ ಓಂ ರಾವತ್ ಆಕ್ಷನ್ ಕಟ್ ನಲ್ಲಿ ದೊಡ್ಡ ಮಟ್ಟದಲ್ಲಿ ಆದಿಪುರುಷ್ ದೃಶ್ಯರೂಪ ಪಡೆದುಕೊಳ್ಳೋಕೆ ಸಜ್ಜಾಗಿದೆ. ರಾಮಾಯಣದಿಂದ ಸ್ಪೂರ್ತಿಗೊಂಡು ಈ ಸಿನಿಮಾ ರೂಪುಗೊಳ್ಳಲಿದೆ ಎಂಬ ಟಾಕ್ ಇದ್ದು, ಚಿತ್ರತಂಡ ಮಾತ್ರ ಈ ವಿಚಾರವಾಗಿ ಗೌಪ್ಯತೆಯನ್ನ ಕಾಯ್ದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಳನ್ನ ಹೊರ ಬಿಡ್ತಿಲ್ಲ. ಆ ಮಟ್ಟಿಗೆ ಕುತೂಹಲವನ್ನ ಹೆಚ್ಚಿಸಿಕೊಂಡು ಹೋಗಲಾಗ್ತಿದೆ.
ಇದರ ನಡುವೆ ಆದಿಪುರುಷ್ ಚಿತ್ರದಲ್ಲಿನ ಪ್ರಭಾಸ್ ಗೆಟಪ್ ಹೀಗಿರಬಹುದು ಎಂಬ ಅಭಿಮಾನಿಯ ಕಲ್ಪನೆಯಲ್ಲಿ ಪೋಸ್ಟರ್ ಒಂದು ಮೂಡಿಬಂದಿದ್ದು, ಇದು ಟಾಲಿವುಡ್ ರೆಬೆಲ್ ಸ್ಟಾರ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಟ್ಟಾರೆ ಫ್ಯಾನ್ ಪೋಸ್ಟರ್ ಸಖತ್ ರೇಂಜಿಗೆ ರೂಪಿಸಲಾಗಿದ್ದು, ಹೀಗಾಗಿ ಆದಿಪುರುಷ್ ಚಿತ್ರತಂಡ ಅದ್ಭುತ ಪೋಸ್ಟರ್ ರಿಲೀಸ್ ಮಾಡಲು ಸಕಲ ತಯಾರಿ ಆರಂಭಿಸಿದೆ ಎಂಬುದು ಸದ್ಯದ ಟಾಲಿವುಡ್ ಟಾಕು.
ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ