Yogaraj Bhat: ಯೋಗರಾಜ್ ಭಟ್ರಿಗೆ ಲಿಪ್ ಕಿಸ್ ಕೊಟ್ಟ ಅಭಿಮಾನಿ; ಅಯ್ಯೋ ಇದೇನಪ್ಪಾ ಅಂತ ಭಟ್ರೇ ಫುಲ್ ಕನ್ಫ್ಯೂಸ್

ಅಭಿಮಾನಿ ಗಾಳಿಪಟ2 ಚಿತ್ರ ನೋಡಿ ಬಂದು ಪ್ರೀತಿ ಹೆಚ್ಚಾಗಿ ನಿರ್ದೇಶಕ ಯೋಗರಾಜ್​ ಭಟ್ರಿಗೆ ಮುತ್ತಿನ ಶಾಕ್​ ಕೊಟ್ಟಿದ್ದಾನೆ. ಜನರ ಮಧ್ಯೆ ನುಗ್ಗಿ ಬಂದು ಭಟ್ರನ್ನು ತಬ್ಬಿಕೊಂಡು ಮಾತಾಡಿಸಿದ ಅಭಿಮಾನಿ, ಸಡನ್​ ಆಗಿ ತುಟಿಗೆ ಮುತ್ತು ಕೊಟ್ಟುಬಿಟ್ಟಿದ್ದಾರೆ.

ನಿರ್ದೇಶಕ ಯೋಗರಾಜ್​ ಭಟ್​

ನಿರ್ದೇಶಕ ಯೋಗರಾಜ್​ ಭಟ್​

  • Share this:
ಎಂತೆಂಥಾ ಅಭಿಮಾನಿಗಳು ಇರ್ತಾರೆ ನೋಡಿ. ನಿರ್ದೇಶಕ ಯೋಗರಾಜ್ (Director Yogaraj Bhat)​ ಭಟ್ರಿಗೆ ಇಲ್ಲೊಬ್ಬ ಅಭಿಮಾನಿ  ತುಟಿಗೆ ಮುತ್ತು (Lip Kiss) ಕೊಟ್ಟು, ಭಟ್ರನ್ನು ಎಲ್ಲರ ಮುಂದೆ ಮುಜುಗರಕ್ಕೀಡು ಮಾಡಿದ್ದಾನೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 (Gaalipata 2) ಚಿತ್ರ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಗಣಿ ಮತ್ತು ಭಟ್ಟರ ಕಾಂಬಿನೇಷನ್​ನ ಮತ್ತೊಂದು ಚಿತ್ರ ಸೂಪರ್​ ಸಕ್ಸಸ್ (Super Success) ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಹ ಚಿತ್ರ ಸೂಪರ್​ ಎಂದು ಕೊಂಡಾಡಿದ್ದಾರೆ.

ಆದ್ರೆ ಇಲ್ಲೊಬ್ಬ ಅಭಿಮಾನಿ ಗಾಳಿಪಟ2 ಚಿತ್ರ ನೋಡಿ ಬಂದು ಪ್ರೀತಿ ಹೆಚ್ಚಾಗಿ ನಿರ್ದೇಶಕ ಯೋಗರಾಜ್​ ಭಟ್ರಿಗೆ ಮುತ್ತಿನ ಶಾಕ್​ ಕೊಟ್ಟಿದ್ದಾನೆ. ಜನರ ಮಧ್ಯೆ ನುಗ್ಗಿ ಬಂದು ಭಟ್ರನ್ನು ತಬ್ಬಿಕೊಂಡು ಮಾತಾಡಿಸಿದ ಅಭಿಮಾನಿ, ಸಡನ್​ ಆಗಿ ತುಟಿಗೆ ಮುತ್ತು ಕೊಟ್ಟುಬಿಟ್ಟಿದ್ದಾರೆ.

ಮುತ್ತು ಕೊಟ್ಟ ಅಭಿಮಾನಿ


ಗಾಳಿಪಟ 2 ಭರ್ಜರಿ ಪ್ರದರ್ಶನ

ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್​​ ಸ್ಟಾರ್ ಗಣೇಶ್ (Golden Star Ganesh) ಕಾಂಬಿನೇಷನ್​ ​ ತೆರೆ ಮೇಲೆ ಮತ್ತೆ ಮೋಡಿ ಮಾಡಿದೆ. ಆಗಸ್ಟ್​ 12 ರಂದು ಕರ್ನಾಟಕ ಸೇರಿದಂತೆ, ಹೊರ ರಾಜ್ಯ ಹಾಗೂ ದೇಶ ವಿದೇಶಗಳಲ್ಲೂ ಗಾಳಿಪಟ-2 ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ. ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಗಾಳಿಪಟ-2 ಚಿತ್ರದ ಕಲೆಕ್ಷನ್​ ಸಖತ್ ಆಗಿಯೇ ಸದ್ದು ಮಾಡಿತ್ತು, ಇದೀಗ ಸಾಲು ಸಾಲು ರಜೆ ಹಿನ್ನೆಲೆ ಗಾಳಿಪಟ 2 ಸಿನಿಮಾ ಕಲೆಕ್ಷನ್ (Collection) ಡಬಲ್ ಆಗಿದೆ.

ಇದನ್ನೂ ಓದಿ: KGF Chapter 2: ನಿಮ್ಮನೆ ಟಿವಿಯಲ್ಲಿ ಬರಲಿದೆ ಕೆಜಿಎಫ್ ಚಾಪ್ಟರ್-2!

ಬಾಕ್ಸ್​ ಆಫೀಸ್​ನಲ್ಲಿ ಸಖತ್ ಸೌಂಡ್​

ರಾಜ್ಯದಲ್ಲಿ 700 ಶೋ, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ 'ಗಾಳಿಪಟ'-2 ಪ್ರದರ್ಶನ ಕಂಡಿದೆ. ಪ್ರೀಮಿಯರ್‌ ಶೋಗಳ ಕಲೆಕ್ಷನ್ ಕೂಡ ಸೇರಿ ಮೊದಲ ದಿನ ಅಂದಾಜು 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಗಾಳಿಪಾಟ ಎರಡನೇ ದಿನವೂ  10 ಕೋಟಿ ಕಲೆಕ್ಷನ್​ ಮಾಡಿದ್ದು, ಒಟ್ಟು ಚಿತ್ರದ ಕಲೆಕ್ಷನ್​  25 ಕೋಟಿಯಾಗಿದೆ ಎಂದು ಮೂಲಗಳು ತಿಳಿಸಿದೆ.  ಗೋಲ್ಡನ್ ಸ್ಟಾರ್ ಗಣೇಶ್‌ ಸಿನಿಕರಿಯರ್‌ನಲ್ಲಿ ಇದು ಭಾರೀ ಓಪನಿಂಗ್ ಎನ್ನಬಹುದಾಗಿದೆ.

 ಭಟ್ರು ಹಾಗೂ ಗೋಲ್ಡನ್​ ಸ್ಟಾರ್​ ಗ್ಯಾಂಗ್​

ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ.

ಇದನ್ನೂ ಓದಿ; Gaalipata 2 Review: ಕಾಮಿಡಿಯೂ, ಎಮೋಷನ್​​ಗಳೂ - ಭಾವನೆಗಳ ಬಣ್ಣ ತುಂಬಿ ಹಾರಿದ ಗಾಳಿಪಟ!

ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಅವರು ಕನ್ನಡ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದಾರೆ. ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿಯಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್‌, ಸುಧಾ​ ಬೆ​ಳ​ವಾಡಿ, ರಂಗಾ​ಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ.  ರಮೇಶ್‌ ರೆಡ್ಡಿ ಚಿತ್ರದ ನಿರ್ಮಾಪಕರು. 'ಗಾಳಿಪಟ 2' ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ. ಮಾತ್ರವಲ್ಲದೇ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ.
Published by:Pavana HS
First published: