ಸನ್ನಿ ಲಿಯೋನ್(Sunny Leone).. ಈ ಹೆಸರು ಕೇಳಿದರೆ ಸಾಕು ಪಡ್ಡೆ ಹೈಕ್ಳು ಕಿವಿ ಅಲರ್ಟ್ ಆಗುತ್ತೆ. ಹೌದು, ಪಡ್ಡೆ ಹೈಕ್ಳ ಪಾಲಿನ ದೇವತೆ(Angel) ಸನ್ನಿ ಲಿಯೋನ್. ಹೊಟ್ಟೆ ಪಾಡಿಗೆ ಈ ಹಿಂದೆ ನೀಲಿ ಚಿತ್ರ(Blue Film)ದಲ್ಲಿ ನಟಿಸುತ್ತಿದ್ದರು. ಅದನ್ನೆಲ್ಲ ಬಿಟ್ಟು ಭಾರತ(India)ಕ್ಕೆ ಬಂದು ಇಲ್ಲೆ ನೆಲೆಸಿದ್ದಾರೆ. ಬಾಲಿವುಡ್(Bollywood) ಚಿತರರಂಗದಲ್ಲಿ ಸನ್ನಿ ಲಿಯೋನ್ಗೆ ಸಖತ್ ಡಿಮ್ಯಾಂಡ್(Demand) ಇದೆ. ನೀಲಿ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದ ಅವರು, ನಂತರ ಅದನ್ನು ತೊರೆದು ಬಾಲಿವುಡ್ಗೆ ಕಾಲಿಟ್ಟರು. ದಕ್ಷಿಣ ಭಾರತ(South India)ದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ತಮ್ಮ ಪಾಸ್ಟ್ ಹೇಗಿದ್ದರೆ ಏನು, ನಮ್ಮ ಭವಿಷ್ಯ(Future) ಚೆನ್ನಾಗಿರಬೇಕೆಂದು ನಂಬುವವರು ಈ ಸನ್ನಿ ಲಿಯೋನ್.
ಸನ್ನಿ ಲಿಯೋನ್ಗೆ ಇದ್ದಾರೆ ಸಾಕಷ್ಟು ಅಭಿಮಾನಿಗಳು!
ಈಗಲೂ ತಮ್ಮ ಸಿನಿಮಾಗಳ ಮೂಲಕ ಜನರನ್ನು ರಂಜಿಸುವ ಕೆಲಸವನ್ನು ಸನ್ನಿ ಲಿಯೋನ್ಮಾಡುತ್ತಿದ್ದಾರೆ. ಈಕೆ ಕೇವಲ ನೀಲಿ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಮಾತ್ರ ಫೇಮಸ್(Famous) ಆಗಲಿಲ್ಲ. ಆ ವೃತ್ತಿಯನ್ನು ಬೇರೆ ವೃತ್ತಿಯಲ್ಲಿ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು ಈ ಸನ್ನಿ ಲಿಯೋನ್. ಹೀಗಾಗಿ ಸನ್ನಿ ಲೊಯೋನ್ಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಸನ್ನಿ ಲಿಯೋನ್ ಎಲ್ಲೆ ಇದ್ದರೂ ಅಲ್ಲಿ ಜನ ಸೇರುತ್ತಾರೆ. ಅಷ್ಟರ ಮಟ್ಟಿಗೆ ಭಾರತೀ ಅಭಿಮಾನಿಗಳ ಮನಸ್ಸಿನಲ್ಲಿ ಕೂತು ಬಿಟ್ಟಿದ್ದಾರೆ ಸನ್ನಿ ಲಿಯೋನ್.
ಸನ್ನಿ ಲಿಯೋನ್ ಹೆಸರು ಹಚ್ಚೆ ಹಾಕಿಸಿಕೊಂಡ ಅಭಿಮಾನಿ!
ಸನ್ನಿ ಲಿಯೋನ್ ಕೈಯಲ್ಲಿ ಹಲವಾರು ಸಿನಿಮಾಗಳಿವೆ. 2019ರಿಂದ ಸನ್ನಿ ಲಿಯೋನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ, ಹಿಂದಿ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಐಟಂ ಹಾಡಿನಲ್ಲಿ ಅವರು ಹೆಜ್ಜೆ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಸನ್ನಿ ಲಿಯೋನ್ ಅಭಿಮಾನಿಯೊನ್ನ ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಬಳಿಕ ಸನ್ನಿ ಲಿಯೋನ್ ಅವರನ್ನು ಭೇಟಿ ಮಾಡಿ ಆ ಹಚ್ಚೆ ತೋರಿಸಿದ್ದಾರೆ. ಅಭಿಮಾನ ಕಂಡ ಸನ್ನಿ ಮಾತೇ ಬರದೇ ಮೂಕವಿಸ್ಮಿತರಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: Sunny Leone ಹೆಸರಲ್ಲಿ ಲೋನ್ ಪಡೆದ ಖತರ್ನಾಕ್ ಕಿಲಾಡಿ, ಮನಸ್ಸಾದ್ರೂ ಹೆಂಗ್ ಬಂತೋ ಅಂತ ಪಡ್ಡೆ ಹೈಕ್ಳು ಗರಂ!
ಸನ್ನಿ ಹೆಸರು ಬಳಸಿ ಲೋನ್ ಪಡೆದ ಖತರ್ನಾಕ್ ಕಿಲಾಡಿ!
ಹೌದು, ಸನ್ನಿ ಲಿಯೋನ್ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್ ಪಡೆಯಲಾಗಿದೆ. ಈ ವಿಚಾರವನ್ನು ಕೇಳಿ ಸನ್ನಿ ಲಿಯೋನ್ ನಿಜಕ್ಕೂ ಶಾಕ್ ಆಗಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಬೇಸರ ತೋಡಿಕೊಂಡಿದ್ದಾರೆ. ಸನ್ನಿ ಈ ರೀತಿ ಟ್ವೀಟ್ ಮಾಡಿದ ಬೆನ್ನಲ್ಲೇ ಅನೇಕರು ಇದೇ ಮಾದರಿಯ ಟ್ವೀಟ್ ಮಾಡಿದ್ದು, ತಮಗೂ ಮೋಸ ಆಗಿದೆ ಎಂದಿದ್ದಾರೆ. ಇದೊಂದು ದೊಡ್ಡ ಸ್ಕ್ಯಾಮ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನೂ ಸನ್ನಿ ಲಿಯೋನ್ ಹೆಸರಲ್ಲಿ ಮೋಸ ಮಾಡಿರುವವನ ವಿರುದ್ಧ ಪಡ್ಡೆ ಹೈಕ್ಳು ಕ್ಲಾಸ್ ತೆಗೆದುಕೊಂಡಿದ್ದಾರೆ. ‘ನಿನಗೆ ಮನಸ್ಸಾದ್ರೂ ಹೇಗೆ ಬಂತು, ನಮ್ಮಲ್ಲರ ಪಾಲಿನ ಏಜೆಂಲ್ ಅವರು, ಅವರಿಗೆ ಮೋಸ ಮಾಡಲು ನಾಚಿಕೆ ಆಗಲ್ವಾ’ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಿರಣ್ ರಾವ್ ಜೊತೆಗಿನ ವಿಚ್ಛೇದನದ ಹಿಂದೆ ಮೂರನೆಯಾಕೆ ಇದ್ದಾಳಾ? ಮೌನ ಮುರಿದ ಆಮೀರ್!
ಸನ್ನಿ ನಕಲಿ ಪಾನ್ ಕಾರ್ಡ್ ಬಳಸಿ ಲೋನ್!
ಸನ್ನಿ ಲಿಯೋನ್ ಅವರ ನಕಲಿ ಪಾನ್ ಕಾರ್ಡ್ ಬಳಕೆ ಮಾಡಿಕೊಂಡು ಖತರ್ನಾಕ್ ಕಿಲಾಡಿ ಈ ಲೋನ್ ಪಡೆದಿದ್ದಾನೆ. ಧಾನಿ ಸ್ಟಾಕ್ ಲಿಮಿಟೆಡ್ ಪ್ಲಾಟ್ಫಾರ್ಮ್ನಲ್ಲಿ ಈ ಮೊಸ ನಡೆದಿದೆ. ‘ಯಾವುದೋ ಮೂರ್ಖ ನನ್ನ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್ ಪಡೆದಿದ್ದಾನೆ. ಸಿಬಿಲ್ ಸ್ಕೋರ್ಗೆ ತೊಂದರೆ ಆಗಿದೆ. ಇಂಡಿಯಾಬುಲ್ ಸೆಕ್ಯೂರಿಟಿ ಲಿಮಿಟೆಡ್ನಲ್ಲಿ (ಧಾನಿ ಸ್ಟಾಕ್ ಈ ಮೊದಲು ಇಂಡಿಯನ್ ಬುಲ್ ಸೆಕ್ಯೂರಿಟಿ ಆಗಿತ್ತು)ಈ ಫ್ರಾಡ್ ನಡೆದಿದೆ’ ಎಂದಿದ್ದಾರೆ ಟ್ವೀಟ್ ಮಾಡಿ ಗರಂ ಆಗಿದ್ದಾರೆ ಸನ್ನಿ ಲಿಯೋನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ