• Home
  • »
  • News
  • »
  • entertainment
  • »
  • Kantara-Puneeth Rajkumar: ಕಾಂತಾರದ ಶಿವನ ಪಾತ್ರದಲ್ಲಿ ಅಪ್ಪು! ಅಭಿಮಾನಿ ಕಲ್ಪನೆಯ ಚಿತ್ರ ವೈರಲ್

Kantara-Puneeth Rajkumar: ಕಾಂತಾರದ ಶಿವನ ಪಾತ್ರದಲ್ಲಿ ಅಪ್ಪು! ಅಭಿಮಾನಿ ಕಲ್ಪನೆಯ ಚಿತ್ರ ವೈರಲ್

ಅಭಿಮಾನಿ ಕಲ್ಪನೆಯಲ್ಲಿ ಮೂಡಿದ ಚಿತ್ರ

ಅಭಿಮಾನಿ ಕಲ್ಪನೆಯಲ್ಲಿ ಮೂಡಿದ ಚಿತ್ರ

ಕಾಂತಾರ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಅವರನ್ನು ನಟಿಸುವಂತೆ ಕೇಳಲಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅಪ್ಪು ಈ ಪಾತ್ರದಲ್ಲಿ ನಟಿಸಿದ್ದರೆ ಹೇಗಿರುತ್ತಿತ್ತು ಅವರ ಲುಕ್?

  • News18 Kannada
  • Last Updated :
  • Bangalore, India
  • Share this:

ಕಾಂತಾರ (Kantara) ಸಿನಿಮಾ (Cinema) ಸೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ (Rishab Shetty) ಕಥೆ ಬರೆದು ನಿರ್ದೇಶಿಸಿ ನಟಿಸಿದ ಸಿನಿಮಾ ದೇಶಾದ್ಯಂತ ಭಾರೀ ಪ್ರಶಂಸೆ ಪಡೆಯುತ್ತಿದ್ದು ಈ ಸಿನಿಮಾದಲ್ಲಿ ನಟಿಸಿರುವ ಕಲಾವಿದರು ಕೂಡಾ ಸಖತ್ ಫೇಮಸ್ ಆಗಿದ್ದಾರೆ. ಕಾಂತಾರ ಸಿನಿಮಾ ಎಲ್ಲೆಡೆ ಜನಪ್ರಿಯವಾಗಿದ್ದು ಈ ಸಿನಿಮಾ ಮಾಡಲು ಆರಂಭದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಅವರನ್ನು ಸಂಪರ್ಕಿಸಲಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಆ ಸಂದರ್ಭದಲ್ಲಿ ಪುನೀತ್ ಅವರು ಬೇರೆ ಪ್ರಾಜೆಕ್ಟ್​​ನಲ್ಲಿ ಬ್ಯುಸಿ ಇದ್ದ ಕಾರಣ ಅವರು ಈ ಸಿನಿಮಾ  (Cinema) ಮಾಡಲು ಸಾಧ್ಯವಾಗಲಿಲ್ಲ. ಅದಲ್ಲದೆ ಅಪ್ಪು ಅವರೇ ಈ ಸಿನಿಮಾದಲ್ಲಿ ರಿಷಬ್ ನಟಿಸಿದರೆ ಸೂಕ್ತ ಎಂದು ಹೇಳಿದ್ದರು.


ರಿಷಬ್ ತಮ್ಮ ಸಿನಿಮಾದಲ್ಲಿ ತಾವೇ ನಟಿಸಿ ಸೂಪರ್ ಹಿಟ್ ಆಗಿದ್ದಾರೆ. ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾದಂತ ಸಿನಿಮಾ ಕೊಟ್ಟು ಕನ್ನಡ ಚಿತ್ರರಂಗ ಈಗ ಎಲ್ಲೆಡೆ ಹೈಲೈಟ್ ಆಗಿದೆ.


ಈ ಸಿನಿಮಾದಲ್ಲಿ ನಟಿಸಲು ಪುನೀತ್ ರಾಜ್​ಕುಮಾರ್ ಅವರು ಒಪ್ಪಿದ್ದರೆ ಹೇಗಿರುತ್ತಿತ್ತು? ಕಾಂತಾರದ ಶಿವನ ಪಾತ್ರದಲ್ಲಿ ಅಪ್ಪು ಹೇಗಿರುತ್ತಿದ್ದರು? ದೈವದ ರೂಪದಲ್ಲಿ ನಟ ನಟಿಸಿದರೆ ಹೇಗಿರುತ್ತಿತ್ತು ಅವರ ಲುಕ್? ಇಂಥದ್ದೊಂದು ಕುತೂಹಲ ನಿಮ್ಮಲ್ಲೂ ಇದೆಯಾ? ಹಾಗಿದ್ದರೆ ಅದಕ್ಕೆ ಒಂದು ಉತ್ತರ ಸಿಕ್ಕಿದೆ. ಅಪ್ಪು ಅಭಿಮಾನಿಯೊಬ್ಬರು ತಮ್ಮ ಕಲ್ಪನೆ ಮೂಲಕ ಅಪ್ಪು ಅವರನ್ನು ಶಿವನ ಪಾತ್ರದಲ್ಲಿ ತೋರಿಸಿದ್ದಾರೆ.


ಅಭಿಮಾನಿ ಕಲ್ಪನೆಯಲ್ಲಿ ಮೂಡಿದ ಚಿತ್ರ


ಅಭಿಮಾನಿ ತಮ್ಮ ಕಲ್ಪನೆಯಲ್ಲಿ ಮೂಡಿದ ಚಿತ್ರವನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಪುನೀತ್ ರಾಜ್​ಕುಮಾರ್ ಅವರು ಇಲ್ಲಿ ಕಾಂತಾರದ ಶಿವನಾಗಿ ಕಾಣಿಸಿಕೊಂಡಿದ್ದಾರೆ. ಈ ಫೊಟೋ ಹಾಗೂ ಇದರ ಮೇಕಿಂಗ್ ವಿಡಿಯೋ ಸಖತ್ ವೈರಲ್ ಆಗಿದೆ.




ಫೋಟೋ ಮೆಚ್ಚಿಕೊಂಡ ಫ್ಯಾನ್ಸ್


ಈ ಫೋಟೋ ಹಾಗೂ ವಿಡಿಯೋ ಈಗ ವೈರಲ್ ಆಗಿದ್ದು 246 ಲೈಕ್ಸ್ ಪಡೆದಿದೆ. ಅದೇ ರೀತಿ ನೆಟ್ಟಿಗರು ಕಮೆಂಟ್ ಮಾಡಿ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕಾಂತಾರ ಸಿನಿಮಾ ಸೂಪರ್ ಹಿಟ್


ಕಾಂತಾರ ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಬೇರೆ ಭಾಷೆಗಳಲ್ಲಿಯೂ  ಸಖತ್ ಹಿಟ್ ಆಗಿದೆ. ಹಿಂದಿ ಬಾಕ್ಸ್ ಆಫೀಸ್​​ನಲ್ಲಿ ಕಾಂತಾರ ಸುಮಾರು 70 ಕೋಟಿ ಕಲೆಕ್ಷನ್ ಮಾಡಿದ್ದು, ಒಟ್ಟು ಕಲೆಕ್ಷನ್ ಕೂಡಾ ಹೆಚ್ಚುತ್ತಲೇ ಇದೆ. ತೆಲುಗಿನಲ್ಲಿಯೂ ಕಾಂತಾರ ಭಾರೀ ಮೆಚ್ಚುಗೆ ಪಡೆದಿದೆ.


1 ಕೋಟಿ ಟಿಕೆಟ್ ಸೇಲ್


ಕಾಂತಾರ ಮೋಡಿಗೆ ದಾಖಲೆಗಳೆಲ್ಲ ಉಡೀಸ್ ಆಗಿವೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾ ಹೊಸ ದಾಖಲೆಯನ್ನೇ ಬರೆದಿದೆ. ಕರ್ನಾಟಕ ರಾಜ್ಯ ಒಂದರಲ್ಲೇ ಕಾಂತಾರ ಚಿತ್ರದ ಒಂದು ಕೋಟಿ ಟಿಕೆಟ್ ಸೇಲ್ ಆಗಿದೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾದ ಒಂದು ಕೋಟಿ ಟಿಕೆಟ್ ಮಾರಾಟವಾಗಿರುವ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಆಫೀಶಿಯಲ್ ಆಗಿ ಹೇಳಿದೆ. ರಿಲೀಸ್ ಆಗಿ ಇಷ್ಟು ದಿನಗಳಾದ್ರೂ ಇನ್ನು ಕಾಂತಾರದ ಅಬ್ಬರ ನಿಂತಿಲ್ಲ.


ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ `ಕೆಜಿಎಫ್ 2′ ಮತ್ತು `ಕಾಂತಾರ’ ಸಕ್ಸಸ್‌ಗೆ ಬಾಲಿವುಡ್ ಬೆಚ್ಚಿ ಬಿದ್ದಿದೆ. ವರ್ಲ್ಡ್ ವೈಡ್ ಒಟ್ಟು `ಕೆಜಿಎಫ್ 2′ 1000 ಕೋಟಿ ರೂ. ಬಾಚಿದ್ರೆ, `ಕಾಂತಾರ’ 350 ಕೋಟಿ ರೂ. ಕಲೆಕ್ಷನ್ ಮಾಡಿದೆ. ದೇಶ-ವಿದೇಶದಲ್ಲೂ ಕಾಂತಾರ ರಾರಾಜಿಸುತ್ತಲೇ ಇದೆ. ಜನ ನಾಲ್ಕು ನಾಲ್ಕು ಬಾರಿ ಕಾಂತಾರ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಕಾಂತಾರ ರಿಲೀಸ್​ ಆಗಿ ಒಂದು ತಿಂಗಳೇ ಆಗಿ ಹೋಗಿದೆ. ದಿನಗಳದಂತೆ ಕಾಂತಾರ ಕ್ರೇಜ್ ಏರುತ್ತಲೇ ಇದೆ.

Published by:Divya D
First published: