ಯಶ್​ ಹುಟ್ಟುಹಬ್ಬ: ನೆಚ್ಚಿನ ನಟನ ಮನೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ಸ್ಥಿತಿ ಚಿಂತಾಜನಕ

ಯಶ್​ಗೆ ಒಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಇಂದೇ ಅವರ ಅಭಿಮಾನಿಯೊಬ್ಬರು ಅವರ ಮನೆ ಎದುರೇ ಪೆಟ್ರೋಲ್​ ಸುರಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯಶ್​ರನ್ನು ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

Anitha E | news18
Updated:January 8, 2019, 6:00 PM IST
ಯಶ್​ ಹುಟ್ಟುಹಬ್ಬ: ನೆಚ್ಚಿನ ನಟನ ಮನೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ಸ್ಥಿತಿ ಚಿಂತಾಜನಕ
ಯಶ್​ ಹುಟ್ಟುಹಬ್ಬದಂದು, ನೆಚ್ಚಿನ ನಟನ ಮನೆ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ
Anitha E | news18
Updated: January 8, 2019, 6:00 PM IST
ನೆಚ್ಚಿನ ನಟರ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅದರಲ್ಲೂ ಅಂದು ಅಭಿಮಾನಿಗಳನ್ನು ಖುದ್ದು ನಟರೇ ಬಂದು ಮಾತನಾಡಿಸಿ, ಶುಭಾಷಯಗಳನ್ನು ಸ್ವೀಕರಿಸುತ್ತಾರೆ. ಇದರಿಂದಾಗಿಯೇ ಅಭಿಮಾನಿಗಳು ಇಡೀ ವರ್ಷ ಕಾಯುತ್ತಿರುತ್ತಾರೆ.

ಇದನ್ನೂ ಓದಿ: ಜೂನಿಯರ್​ ರೆಬೆಲ್ ಸ್ಟಾರ್ ಜತೆ ಸ್ಟೆಪ್​ ಹಾಕಿದ ಚಾಲೆಂಜಿಂಗ್ ಸ್ಟಾರ್ ! 'ಅಮರ್' ಚಿತ್ರದ ಸೆಟ್‍ನಲ್ಲಿ ದಾಸನ ದರ್ಶನ!

ಇಲ್ಲಿ ನಡೆದದ್ದೂ ಅದೆ. ಇಂದು ರಾಕಿಂಗ್​ ಸ್ಟಾರ್​ ಯಶ್​ರ ಹುಟ್ಟುಹಬ್ಬ. 33ನೇ ವಷಸಂತಕ್ಕೆ ಕಾಲಿಟ್ಟಿರುವ ಯಶ್​ ಮೊನ್ನೆಯೇ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ಮನವಿ ಮಾಡಿದ್ದರು. ಅದರಲ್ಲೂ ಮನೆಯ ಹಿರಿಯ ಸದಸ್ಯ ಅಂಬಿ ಅವರ ಅಗಲಿಕೆಯಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ, ಅದಕ್ಕೆ ಅಭಿಮಾನಿಗಳು ಸಹಕರಿಸಬೇಕೆಂದು ಮನವಿ ಮಾಡಿದ್ದರು.

ಇದನ್ನೂ ಓದಿ: ರಾಜ್ಯದಾದ್ಯಂತ ರಾಕಿಂಗ್​ ಸ್ಟಾರ್​ 'ಯಶೋಯಾತ್ರೆ': ಹುಟ್ಟುಹಬ್ಬ ಆಚರಣೆ ಬೇಡ ಎಂದ ಯಶ್​..!

ಆದರೂ ಇಂದು ಬೆಳಗ್ಗಿನಿಂದಲೇ ಯಶ್​ ನಿವಾಸದ ಬಳಿ ಅಭಿಮಾನಿಗಳ ದಂಡೇ ಸೇರಿತ್ತು. ಯಶ್​ರನ್ನು ಕಂಡು ಅವರಿಗೆ ಶುಭಕೋರುವ ಸಲುವಾಗಿ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಒಬ್ಬರು ಯಶ್​ರನ್ನು ನೋಡಲು ಬಿಡದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಯಶ್ ಅವರ ಮನೆ ಮುಂಭಾಗ ಈ ಘಟನೆ ನಡೆದಿದೆ. ನೆಲಮಂಗಲದ ನಿವಾಸಿ ರವಿ (29) ಆತ್ಮಹತ್ಯೆಗೆ ಯತ್ನಿಸಿದ ಯಶ್ ಅಭಿಮಾನಿ. ಕಾಮಾಕ್ಷಿಪಾಳ್ಯದಲ್ಲಿರುವ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ರವಿ ಪರಿಸ್ಥಿತಿ ಚಿಂತಾಜನಕವಾಗಿದೆ. ಬೆಂಕಿ ಹಚ್ಚಿಕೊಳ್ಳುವ ಮುನ್ನ ಯಶ್​ ಮನೆ ಬಳಿಗೆ ರವಿ ಕುಡಿದು ಬಂದಿದ್ದ ಎನ್ನಲಾಗುತ್ತಿದೆ.
Loading...

ರವಿ ಯಶ್​ ಮನೆ ಮುಂದೆ ಬೆಂಕಿ ಹಚ್ಚಿಕೊಂಡರೂ ಯಶ್​ ಮನೆಯ ಸೆಕ್ಯೂರಿಟಿ ಸಿಬ್ಬಂದಿ ಏನೂ ಮಾಡದೇ ಇದ್ದರಂತೆ. ಯಶ್​ ಮನೆಯ ಪಕ್ಕದಲ್ಲೇ ಇರುವ ಹೋಟರಲ್​ ನವರು ರವಿ ಮೇಲೆ ನೀರು ಸುರಿದು ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಥಮ ಚಿಕಿತ್ಸೆ ನಂತರ ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶೇ.40ರಷ್ಟು ಸುಟ್ಟಗಾಯಗಳಾಗಿವೆ ಎನ್ನಲಾಗುತ್ತಿದೆ.

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ