Kapil Sharma Show: ಶಾರುಖ್‌ ಖಾನ್‌ಗೆ ಕರೆ ಮಾಡಿ ಕೊಡಿ: ಅಭಿಮಾನಿ ಕೋರಿಕೆಗೆ ನಟ ಅಕ್ಷಯ್ ಕುಮಾರ್‌ ಪ್ರತಿಕ್ರಿಯೆ ಹೀಗಿದೆ..

Akshay Kumar Bell Bottom Release: ಅಭಿಮಾನಿಯ ಕೋರಿಕೆಗೆ ಮರು ಮಾತಾಡದೆ ಅಕ್ಷಯ್ ತಮ್ಮ ಮೊಬೈಲ್ ಫೋನ್‌ನಿಂದ ಶಾರುಖ್‌ರಿಗೆ ಕರೆ ಮಾಡಿಯೇ ಬಿಟ್ಟರು. ಆದರೆ ಶಾರುಖ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ತಮ್ಮ ಚಿತ್ರದ ಪ್ರಚಾರಕ್ಕಾಗಿ ಯಾವುದೋ ಕಾರ್ಯಕ್ರಮದಲ್ಲಿ ಬಂದಂತಹ ನಟ ನಟಿಯರಿಗೆ ಅಭಿಮಾನಿಗಳು ಎಂತಹ ಕೋರಿಕೆ ಮುಂದೆ ಇಡುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಹೀಗೆ ಒಂದು ಘಟನೆ ಇತ್ತೀಚೆಗೆ ‘ದಿ ಕಪಿಲ್ ಶರ್ಮಾ ಶೋ’ ದಲ್ಲಿ (The Kapil Sharma Show) ನಡೆದಿರುವುದು ವಿಶೇಷ.ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ತಮ್ಮ ಮುಂಬರುವ ಚಿತ್ರವಾದ ‘ಬೆಲ್ ಬಾಟಮ್’ (Bell Bottom Hindi) ಪ್ರಚಾರಕ್ಕಾಗಿ ತಮ್ಮ ಸಹ ನಟರಾದ ವಾಣಿ ಕಪೂರ್ (Vani Kapoor), ಹುಮಾ ಖುರೇಷಿ (Huma Qureshi) ಮತ್ತು ಚಿತ್ರದ ನಿರ್ಮಾಪಕರಾದ ಜಾಕಿ ಭಗ್ನಾನಿರೊಂದಿಗೆ ಸೇರಿ ‘ದಿ ಕಪಿಲ್ ಶರ್ಮಾ ಶೋ’ ಗೆ ಬಂದಿದ್ದರು.ಇದು ಈ ಹೊಸ ಸೀಸನ್‌ನ ಮೊದಲನೆಯ ಎಪಿಸೋಡ್ ಆಗಿತ್ತು. ಅಲ್ಲಿ ಬಂದಂತಹ ಅಭಿಮಾನಿಯೊಬ್ಬರು “ನಾನು ಶಾರುಖ್ ಖಾನ್ (Shah Rukh Khan) ಅಭಿಮಾನಿ, ದಯವಿಟ್ಟು ಶಾರುಖ್‌ರಿಗೆ ಕರೆ ಮಾಡಿ ಕೊಡುತ್ತೀರಾ?” ಎಂದು ಅಕ್ಷಯ್‌ ಕುಮಾರ್‌ರನ್ನು ಕೇಳಿಯೇ ಬಿಟ್ಟರು.


ಅಭಿಮಾನಿಯ ಕೋರಿಕೆಗೆ ಮರು ಮಾತಾಡದೆ ಅಕ್ಷಯ್ ತಮ್ಮ ಮೊಬೈಲ್ ಫೋನ್‌ನಿಂದ ಶಾರುಖ್‌ರಿಗೆ ಕರೆ ಮಾಡಿಯೇ ಬಿಟ್ಟರು. ಆದರೆ ಶಾರುಖ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಗ ಆಕೆ ಅಕ್ಷಯ್‌ಗೆ ಮತ್ತೊಂದು ಸಂಖ್ಯೆಗೆ ಪ್ರಯತ್ನಿಸಿ ಎಂದು ವಿನಂತಿಸಿಕೊಂಡರು.


ಆಕೆಯ ಮಾತಿಗೆ ಕಪಿಲ್ “ಶಾರುಖ್ ಏನು ಪಿಸಿಓದಲ್ಲಿ ಕೆಲಸ ಮಾಡುತ್ತಾರೆಯೇ” ಎಂದು ಹಾಸ್ಯ ಮಾಡಿ ಅಲ್ಲಿದ್ದವರನ್ನು ನಗಿಸಿದರು. ಮತ್ತೆ ಅಕ್ಷಯ್ ಶಾರುಖ್ ಅವರ ಇನ್ನೊಂದು ಸಂಖ್ಯೆಗೆ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮತ್ತೆ ಅಭಿಮಾನಿ ಶಾರುಖ್ ಹೆಂಡತಿ ಗೌರಿಗೆ ಕರೆ ಮಾಡಿ ಎಂದು ವಿನಂತಿಸಿಕೊಂಡರು, ಆಗ ಸಹ ನಟರಾದ ವಾಣಿ ಮತ್ತು ಹುಮಾ ಇಬ್ಬರು ತುಂಬಾ ನಕ್ಕರು.


ಇದಕ್ಕೆ ಕಪಿಲ್ ಗೌರಿ ಅತ್ತಿಗೆಗೆ ಕರೆ ಮಾಡಿದರೆ “ಅಕ್ಷಯ್ ನೀವು ನನ್ನ ಗಂಡನನ್ನು ಹಾಳು ಮಾಡುತ್ತಿರುವಿರಿ” ಎಂದು ಆಪಾದನೆ ಮಾಡುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.


ಹಿಂದೆ ಒಂದು ಇದೇ ರೀತಿಯ ಟಿವಿ ಶೋನಲ್ಲಿ ಶಾರುಖ್ ಮಾತನಾಡುತ್ತಾ “ಒಬ್ಬ ಮಹಿಳೆ ಲಂಡನ್ ವಿಮಾನ ನಿಲ್ದಾಣದಲ್ಲಿ ನನ್ನನ್ನು ಬೆನ್ನಟ್ಟಿ ಬಂದು ನಾನು ನಿಮ್ಮ ತುಂಬಾ ದೊಡ್ಡ ಅಭಿಮಾನಿ. ನಿಮ್ಮದು ಒಂದು ಆಟೋಗ್ರಾಫ್ ನೀಡಿ ಎಂದು ಕೇಳಿದರು. ನಂತರ ಐ ಲವ್ ಯೂ ಅಕ್ಷಯ್ ಎಂದರು. ನಾನು ಅವರ ಮನಸ್ಸು ನೋಯಿಸದೆ ಅಕ್ಷಯ್ ಆಟೋಗ್ರಾಫ್ ನೀಡಿದೆ” ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.


ಅಕ್ಷಯ್ ಮತ್ತು ಶಾರುಖ್ ಇಬ್ಬರೂ ನಟರು ‘ದಿಲ್ ತೋ ಪಾಗಲ್ ಹೈ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಬಿಟ್ಟರೆ, ‘ಓಂ ಶಾಂತಿ ಓಂ’ ಮತ್ತು ‘ಹೇ ಬೇಬಿ’ ಪರಸ್ಪರರ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶಾರುಖ್ ಅಕ್ಷಯ್ ಜೊತೆ ಕೆಲಸ ಮಾಡಲು ಏಕೆ ಸಾಧ್ಯವಾಗಿಲ್ಲ ಎಂಬುದಕ್ಕೆ “ಅಕ್ಷಯ್ ಬೆಳಗ್ಗೆ ಎದ್ದಾಗ ನಾನು ನಿದ್ದೆ ಮಾಡುತ್ತೇನೆ ಮತ್ತು ನಾನು ಕೆಲಸ ಪ್ರಾರಂಭಿಸುವ ವೇಳೆಗೆ ಅಕ್ಷಯ್ ಕೆಲಸ ಮುಗಿಸಿ ಮನೆಗೆ ಹೋಗ್ತಾ ಇರ್ತಾರೆ” ಎಂದು ಹೇಳಿದ್ದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: