ಟಿಕ್​ಟಾಕ್ ಗಿಂತ ದೇಶ ಮುಖ್ಯ! ಮೇಡ್ ಇನ್ ಇಂಡಿಯಾ ಆ್ಯಪ್​​ನಲ್ಲಿ ಸಿಗೋಣ!

ಟಿಕ್​​ಟಾಕ್ ಬ್ಯಾನ್ ಬಗ್ಗೆ ಆ್ಯಪ್​​​ಗಿಂತ ದೇಶ ಮುಖ್ಯ ಎಂದು ಹೇಳುವ ವಿನೋದ್ ಆನಂದ್, ಸದ್ಯ ಮೇಡ್ ಇನ್ ಇಂಡಿಯಾ ಆಪ್​​ಗಳನ್ನು ಉಪಯೋಗಿಸುತ್ತಿದ್ದಾರೆ. ಚಿಂಗಾರಿ ಹಾಗೂ ರೊಪೋಸೋಗಳಲ್ಲಿ ಹೊಸದಾಗಿ ಅಕೌಂಟ್​​ಗಳನ್ನು ಮಾಡಿ, ಆ ಮೂಲಕ ಮತ್ತೆ ಜನರನ್ನು ರಂಜಿಸುತ್ತಿದ್ದಾರೆ.

news18-kannada
Updated:July 3, 2020, 7:50 PM IST
ಟಿಕ್​ಟಾಕ್ ಗಿಂತ ದೇಶ ಮುಖ್ಯ! ಮೇಡ್ ಇನ್ ಇಂಡಿಯಾ ಆ್ಯಪ್​​ನಲ್ಲಿ ಸಿಗೋಣ!
ವಿನೋದ್ ಆನಂದ್
  • Share this:
ಭಾರತದಲ್ಲಿ ಟಿಕ್​​ಟಾಕ್ ಸೇರಿದಂತೆ ಚೀನಾ ನಿರ್ಮಿತ 59 ಆಪ್​ಗಳನ್ನು ಬ್ಯಾನ್ ಮಾಡಿ ಹಲವು ದಿನಗಳೇ ಕಳೆದಿದೆ. ಇದು ಕೆಲವರಲ್ಲಿ ಬೇಸರ ಉಂಟು ಮಾಡಿದ್ದರೂ, ಹಲವರಲ್ಲಿ ಸಂತಸ ಮೂಡಿಸಿದೆ. ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಚೀನಾಗೆ ಇದು ಮೊದಲ ಪಾಠವಾಗಿರಲಿ ಎಂಬ ಅಭಿಪ್ರಾಯ ಹಲವರದು. ಆದರೆ ಟಿಕ್​ಟಾಕ್ ಮೂಲಕವೇ ಸೆಲೆಬ್ರಿಟಿ ಸ್ಟೇಟಸ್ ಪಡೆದಿದ್ದ, ಅದರಿಂದ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದ ವಿನೋದ್ ಆನಂದ್ ಟಿಕ್​ಟಾಕ್ ಬ್ಯಾನ್ ಬಗ್ಗೆ ಮಾತನಾಡಿದ್ದಾರೆ.

ವಿನೋದ್ ಆನಂದ್. ಟಿಕ್​​ಟಾಕ್​​​ನಲ್ಲಿ ಬರೋಬ್ಬರಿ 9,41,700 ಫಾಲೋವರ್ಸ್ ಹೊಂದಿದ್ದ ಕನ್ನಡದ ಟಿಕ್​​​​ಟಾಕ್ ಸ್ಟಾರ್. ಕಳೆದ ವರ್ಷ ಅರ್ಥಾತ್ 2019ರ ಜೂನ್​​ನಲ್ಲಿ ಟಿಕ್​​ಟಾಕ್ ಸೇರಿ, ಕೇವಲ ಒಂದು ವರ್ಷದಲ್ಲೇ ಲಕ್ಷಾಂತರ ಫಾಲೋವರ್ಸ್, ಕೋಟ್ಯಂತರ ಲೈಕ್ಸ್ ಪಡೆದಿದ್ದ ಪ್ರತಿಭೆ. ತಮ್ಮ ಗಡ್ಡಧಾರಿ ಮತ್ತು ಸೀರಿಯಸ್ ಲುಕ್​​ನಲ್ಲಿ ಕಾಮಿಡಿ ಕಚಗುಳಿ ಇಡುವ ಝಲಕ್​​ನಿಂದಲೇ ರಾಜ್ಯಾದ್ಯಂತ ಮನೆಮಾತಾಗಿದ್ದರು ವಿನೋದ್ ಆನಂದ್.

ಹೆಸರೇ ಹೇಳುವಂತೆ ತಮ್ಮ ಟಿಕ್​​ಟಾಕ್ ಹಾಸ್ಯದ ವಿಡಿಯೋಗಳಲ್ಲಿ ವಿನೋದದ ಮೂಲಕ ಆನಂದ ನೀಡುತ್ತಿದ್ದರು ಅಂದರೂ ತಪ್ಪಾಗಲಾರದು. ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿನೋದ್, ಬೆಂಗಳೂರಿನಲ್ಲಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದರು. ಕೆಲಸದ ಮಧ್ಯೆ ಟೈಂಪಾಸಿಗೆ ಆಗಾಗ ಟಿಕ್​ಟಾಕ್ ವಿಡಿಯೋ ಮಾಡತೊಡಗಿದರು. ತಾವೇ ಡೈಲಾಗ್​​ಗಳನ್ನು ಬರೆದು, ಪರ್ಫಾರ್ಮ್ ಮಾಡುತ್ತಿದ್ದ ಕಾರಣ, ಜನರಿಗೆ ಬೇಗನೇ ಇಷ್ಟವಾದರು. ಅದರಲ್ಲಂತೂ ಅವರ ವಿಡಿಯೋಗಳಿಗೆ ಯುವತಿಯರು ಹಾಗೂ ಮಹಿಳೆಯರೇ ಹೆಚ್ಚಾಗಿ ಡೂಯೆಟ್ ಮಾಡುತ್ತಿದ್ದರು. ಮಾತ್ರವಲ್ಲದೆ ಅವರ ಹಲವು ವಿಡಿಯೋಗಳು ಟ್ರೋಲ್ ಪೇಜ್​​ಗಳಲ್ಲಿ ವೈರಲ್ ಆಗಿದ್ದೂ ಇದೆ. ಹೀಗಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಾರೆ ವಿನೋದ್ ಆನಂದ್.

ವಿನೋದ್ ಆನಂದ್


 

ಟಿಕ್​​ಟಾಕ್ ಬ್ಯಾನ್ ಬಗ್ಗೆ ಆ್ಯಪ್​​​ಗಿಂತ ದೇಶ ಮುಖ್ಯ ಎಂದು ಹೇಳುವ ವಿನೋದ್ ಆನಂದ್, ಸದ್ಯ ಮೇಡ್ ಇನ್ ಇಂಡಿಯಾ ಆಪ್​​ಗಳನ್ನು ಉಪಯೋಗಿಸುತ್ತಿದ್ದಾರೆ. ಚಿಂಗಾರಿ ಹಾಗೂ ರೊಪೋಸೋಗಳಲ್ಲಿ ಹೊಸದಾಗಿ ಅಕೌಂಟ್​​ಗಳನ್ನು ಮಾಡಿ, ಆ ಮೂಲಕ ಮತ್ತೆ ಜನರನ್ನು ರಂಜಿಸುತ್ತಿದ್ದಾರೆ. ಜತೆಗೆ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಂಗಳಲ್ಲೂ ಕಾಮಿಡಿ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ ವಿನೋದ್.

ವಿನೋದ್ ಆನಂದ್
 

ವಿನೋದ್ ಆನಂದ್


 

ವಿಶೇಷ ಅಂದರೆ ಟಿಕ್​​ಟಾಕ್ ವಿಡಿಯೋಗಳಲ್ಲಿ ಮಿಂಚುತ್ತಿದ್ದ ವಿನೋದ್ ಆನಂದ್ ಈಗಾಗಲೇ ಸ್ಯಾಂಡಲ್​​ವುಡ್ ಡೆಬ್ಯೂ ಕೂಡ ಮಾಡಿದ್ದಾರೆ. ಈಗಾಗಲೇ ‘ತ್ರಿವಿಕ್ರಮ’ ಹಾಗೂ ‘ರೆಬೆಲ್ ಹುಡುಗರು’ ಚಿತ್ರಗಳ ಶೂಟಿಂಗ್ ಹಾಗೂ ಡಬ್ಬಿಂಗ್  ಅನ್ನೂ ಕಂಪ್ಲೀಟ್ ಮಾಡಿದ್ದಾರೆ ವಿನೋದ್ ಆನಂದ್. ‘ರೆಬೆಲ್ ಹುಡುಗರು’ ಚಿತ್ರದಲ್ಲಿ ಮೇನ್ ಕಾಮಿಡಿಯನ್ ಪಾತ್ರದಲ್ಲಿ ನಟಿಸಿರುವ ಖುಷಿ ಅವರದು. ಮಾತ್ರವಲ್ಲ ರಿಷಭ್ ಶೆಟ್ಟಿ ಅವರ ಹೊಸ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡೈಲಾಗ್ಸ್ ಕೂಡ ಬರೆಯುತ್ತಿದ್ದಾರಂತೆ. ಹಾಗೇ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಎಂಬ ಮತ್ತೊಂದು ಚಿತ್ರದಲ್ಲಿ ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಪಾತ್ರದಲ್ಲಿ ಮಿಂಚಲಿದ್ದಾರೆ. ಅದರ ಜತೆಜತೆಗೆ ಇನ್ನೂ ಕೆಲ ಸಿನಿಮಾಗಳಲ್ಲಿ ಅವರಿಗೆ ನಟಿಸುವ ಅವಕಾಶ ಸಿಕ್ಕಿದ್ದು, ಲಾಕ್​​ಡೌನ್​​ ಬಳಿಕ ಆ ಸಿನಿಮಾಗಳು ಪ್ರಾರಂಭವಾಗಲಿವೆಯಂತೆ.ವಿನೋದ್ ಆನಂದ್ ಅವರಿಗೆ ಹಾಸ್ಯ ನಟ ಚಿಕ್ಕಣ್ಣ ಅಂದರೆ ಅಚ್ಚುಮೆಚ್ಚು. ‘ತ್ರಿವಿಕ್ರಮ’ ಚಿತ್ರದಲ್ಲಿ ಅವರ ಜತೆ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕ ಬಗ್ಗೆ ಸಂತಸಪಡುತ್ತಾರೆ. ಒಟ್ಟಾರೆ ಟಿಕ್​ಟಾಕ್ ಸ್ಟಾರ್ ವಿನೋದ್ ಆನಂದ್, ಸ್ಯಾಂಡಲ್​ವುಡ್​ನ ಭವಿಷ್ಯದ ಕಾಮಿಡಿ ಸ್ಟಾರ್ ಆಗುವ ಎಲ್ಲ ಲಕ್ಷಣಗಳೂ ಇವೆ.
Published by: Harshith AS
First published: July 3, 2020, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading