ಒಂದು ಸಿನಿಮಾ (Film) ಎಂದರೆ ಅದಕ್ಕೆ ಹಲವಾರು ಜನರು ಸಾಥ್ ಕೊಡುತ್ತಾರೆ. ಅದರಲ್ಲೂ ಗಣ್ಯರು ವಿವಿಧ ರೀತಿಯಲ್ಲಿ ಸಿನಿಮಾಗಳಿಗೆ ಕೈ ಜೋಡಿಸುತ್ತಾರೆ. ಇನ್ನ ಸಿನಿಮಾ ಕೇತ್ರ ಮತ್ತು ಕ್ರೀಡೆಗೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಪ್ರಚಾರ ಕಾರ್ಯದಿಂದ ಹಿಡಿದು ಬಿಡುಗಡೆಗೆ ಸಹ ಜೊತೆಯಾಗುತ್ತಾರೆ. ಇದೀಗ ಮತ್ತೊಂದು ಬಹು ನಿರೀಕ್ಷಿತ ಸಿನಿಮಾಗೆ ಕ್ರೀಡಾ ತಾರೆ ಒಬ್ಬರು ಸಾಥ್ ಕೊಟ್ಟಿದ್ದಾರೆ. ಮಣಿರತ್ನಂ ಅವರ ಕನಸಿನ ಯೋಜನೆ ಪೊನ್ನಿಯಿನ್ ಸೆಲ್ವನ್ (ponniyin selvan 1) ಸಿನಿಮಾ ಪೋಸ್ಟ್ ಪ್ರೊಡಕ್ಷನ್ (Post Production) ಹಂತದಲ್ಲಿದೆ ಮತ್ತು ಸೆಪ್ಟೆಂಬರ್ 30 ರಂದು ವಿವಿಧ ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದ ಮೊದಲ ಹಾಡು (Song) ಜುಲೈ 31 ರಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಸಿನಿಮಾ ತಂಡ ಈಗ ಹೊಸ ಹೆಜ್ಜೆಯೊಂದಿಗೆ ಸಿನಿಮಾ ಪ್ರಮೋಷನ್ ಮಾಡಲು ಹೊರಟಿದ್ದಾರೆ.
ಪಿ ವಿ ಸಿಂಧು ಸಾಥ್
ಖ್ಯಾತ ಕ್ರೀಡಾ ಸೆಲೆಬ್ರಿಟಿಗಳು ಮೊದಲ ಹಾಡನ್ನು ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ತೆಲುಗು ಹಾಡು ಪೊಂಗೆ ನಾಧಿಯನ್ನು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಬಿಡುಗಡೆ ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ಕ್ರಿಕೆಟಿಗರಾದ ಸಂಜು ಸ್ಯಾಮ್ಸನ್ ಮತ್ತು ರವಿ ಅಶ್ವಿನ್ ಕೂಡ ಮಲಯಾಳಂ ಮತ್ತು ತಮಿಳು ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ. ಆದರೆ, ಹಿಂದಿ ಮತ್ತು ಕನ್ನಡ ಆವೃತ್ತಿಯನ್ನು ಯಾರು ಬಿಡುಗಡೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.
ಇನ್ನು ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಲೈಕಾ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಮದ್ರಾಸ್ ಟಾಕೀಸ್ ಈ ಹೈ-ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಅಕಾಡೆಮಿ ಪ್ರಶಸ್ತಿ ವಿಜೇತ ಎಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಅದ್ಧೂರಿ ಆದ ಮೇಕಿಂಗ್ ಮತ್ತು ವಿಶ್ಯೂವಲ್ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಟೀಸರ್ ಉದ್ದಕ್ಕೂ 11ನೇ ಶತಮಾನದ ವೈಭವು ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ. ಪ್ರತಿಯೊಂದು ಪಾತ್ರಗಳೂ ಸಹ ಅಳೆದು ತೂಗಿದಂತೆ ಭಾಸವಾಗಿದೆ. ಒಟ್ಟಿನಲ್ಲಿ ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ಮಣಿರತ್ನಂ ಅವರ ಈ ಚಿತ್ರ ಹೊಸ ಮೈಲುಗಲ್ಲಾಗಲಿದೆ ಎಂಬ ಅಭಿಪ್ರಾಯ ಮೂಡಿದೆ
Thank you, @Pvsindhu1! #PS1FirstSingle out tomorrow at 6pm! ⚔️🎶
Music & Vocal: @arrahman
Lyricist: @IananthaSriram#ManiRatnam #ARRahman #PS1 #PonniyinSelvan @LycaProductions @tipsofficial @tipsmusicsouth @primevideoin pic.twitter.com/kwTMFGPXA8
— Madras Talkies (@MadrasTalkies_) July 30, 2022
.ಸಿನಿಮಾಗಾಗಿ ಕಾಯುತ್ತಿದ್ದಾರೆ ಫ್ಯಾನ್ಸ್
ಚಿತ್ರವು ತಮಿಳು, ತೆಲುಗು, ಮಲೆಯಾಳಂ, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರದ ಟೀಸರ್ ನಲ್ಲಿ ಐಶ್ವರ್ಯಾ ಲುಕ್ ನೋಡಿ ಐಶ್ವರ್ಯಾ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಚಿತ್ರದ ಮೊದಲ ಭಾಗವು 30 ಸೆಪ್ಟೆಂಬರ್ 2022 ರಂದು ಬಿಡುಗಡೆಯಾಗಲಿದೆ. ಕೆಲ ವರದಿಗಳ ಪ್ರಕಾರ ನಿರ್ದೇಶಕ ಮಣಿರತ್ನಂ ಅವರ ಈ ಚಿತ್ರವನ್ನು ಸುಮಾರು 500 ಕೋಟಿ ಬಜೆಟ್ನಲ್ಲಿ ನಿರ್ಮಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶೂಟಿಂಗ್ನಲ್ಲಿ ಚಿನ್ನದ ಪದಕ ಬಾಚಿಕೊಂಡ ನಟ ಅಜಿತ್, ರಿಯಲ್ ಲೈಫ್ನಲ್ಲೂ ಹೀರೋ ಆದ 'ತಲಾ'
ಇದನ್ನೂ ಓದಿ: ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ದೀಪಿಕಾ - ರಣವೀರ್, ಮನೀಶ್ ಮಲ್ಹೋತ್ರ ಫ್ಯಾಷನ್ ಶೋನಲ್ಲಿ ತಾರೆಯರ ಝಲಕ್
ತಮಿಳು ಮಾತ್ರವಲ್ಲದೆ ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ. ಅಲ್ಲದೇ ಐಶ್ವರ್ಯ ರೈ, ಸೌತ್ ಸೂಪರ್ ಸ್ಟಾರ್ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ